ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕ್ಲೆಂಡಿನಲ್ಲಿ ಸಂಗೀತಾ ಕಟ್ಟಿ ಸಂಗೀತ ರಸದೌತಣ

By * ಪ್ರಕಾಶ್ ಬಿರಾದಾರ್, ಆಕ್ಲೆಂಡ್
|
Google Oneindia Kannada News

Sangeetha Katti music concert in Auckland
ಜುಲೈ 14ರ ಬೆಳಗಿನ ಜಾವ 10 ಗಂಟೆಗೆ ಏರ್ಪಡಿಸಿದ ಸ್ವರ ಮಾಧುರ್ಯ ಸಂಗೀತ ಕಾರ್ಯಕ್ರಮದಲ್ಲಿ ಕರ್ನಾಟಕದ ಯುವ ಪ್ರತಿಭಾವಂತೆ 'ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ' ವಿಜೇತೆ ಸಂಗೀತಾ ಕಟ್ಟಿ ಕುಲ್ಕರ್ಣಿಯವರು ನ್ಯೂಜಿಲೇಂಡ್ ದ ಸಂಗೀತ ಪ್ರೇಮಿಗಳ ಮನಸನ್ನು ತಣಿಸಿದರು.

ತಮ್ಮ ಕಾರ್ಯಕ್ರಮವನ್ನು ಬೆಳಗಿನ ರಾಗವಾದ ಗುಣಕಲಿಯಿಂದ ಪ್ರಾರಂಭಿಸಿ ಬಿಭಾಸ, ನಂದ, ಬ್ರಿಂದಾವನಿ ಸಾರಂಗ, ಮಾಲಕಂಸ ಹಾಗು ತೋಡಿ ರಾಗಗಳಲ್ಲಿ ದಾಸರ ಪದಗಳಾದ ರಾಮ ನಾಮ ಪಾಯಸಕ್ಕೆ ಕೃಶ್ಣನಾಮ ಸಕ್ಕರೆ, ಒಂದೆ ನಮನ ಸಾಲದೇ, ಆರಿಗೆ ನಮನಾದೆ, ಶರಣರ ವಚನಗಳಾದ ಮಾಡಿ ಮಾಡಿ ಕೆಟ್ಟರು, ಉಳ್ಳವರು ಶಿವಾಲಯವ ಮಾಡುವರು, ಶಿಶುನಾಳ ಶರೀಫರ ಎಲ್ಲಿ ಕಾಣೆ ಎಲ್ಲಿ ಕಾಣೆ, ಭಾವ ಗೀತೆಗಳಾದ ನಾಕು ತಂತಿ, ಶ್ರಾವಣ ಬಂತು ಶ್ರಾವಣ ಎಂದು ಕನ್ನಡ ಸಾಹಿತ್ಯವನ್ನು ಸಂಗೀತಾ ಭಾವಪೂರ್ಣವಾಗಿ ಹಾಡಿದರು.

ಯಮನ್, ಪಹಾಡಿ ಮತ್ತು ಭೈರವಿ ರಾಗಗಳನ್ನು ಪರಿಚಯಿಸುತ್ತ ಚಲನಚಿತ್ರಗಳ ಹಾಡುಗಳನ್ನು ಹಾಡಿ ಸಭಿಕರನ್ನು ತಮ್ಮ ಕಾರ್ಯಕ್ರಮದಲ್ಲಿ ತಲ್ಲೀನರಾಗುವಂತೆ ಮಾಡಿದರಲ್ಲದೇ ಕನ್ನಡ ಕೂಟದ ಸದಸ್ಯರಾದ ಆಶಿಶ್ ಮತ್ತು ಚೈತ್ರಾ ಅವರನ್ನು ತಮ್ಮೊಂದಿಗೆ ಹಾಡಲು ಪ್ರೆರೇಪಿಸಿದರು. ಕರ್ನಾಟಕದ ತಬಲಾ ನಿಪುಣರಾದ ಉದಯರಾಜ ಕರ್ಪುರ ಅವರು ಸಂಗೀತಾ ಕಟ್ಟಿಯವರಿಗೆ ಸಹಕಾರ ನೀಡಿದರು. ವಿರಾಮದ ನಂತರ ಉದಯರಾಜ್ ಕರ್ಪುರ ಅವರು ಶ್ರೋತೃಗಳ ಕೋರಿಕೆಯ ಮೇರೆಗೆ ತಬಲಾ ಸೋಲೊ ವಾದದ ತುಕಡಾ ಚಕ್ರಧಾರಗಳ ಸವಿಯನ್ನು ನೀಡಿ ರಸಿಕರನ್ನು ರಂಜಿಸಿದರು.

ಆಕ್ಲೆಂಡ್ ದ ಕಲಾ ನಿಪುಣರಾದ ಅರುಣ ಕೊತ್ಕರ ಅವರು ಹಾರ್ಮೋನಿಯಮ್, ವಿದ್ವಾನ್ ದಿವಾಕರ್ ಅವರು ವೀಣಾ ಮತ್ತು ಕೀಬೊರ್ಡ್, ಸತ್ಯಕುಮಾರ ಕಟ್ಟೆ ಅವರು ತಾಳದೊಂದಿಗೆ ಸಾಥಿ ನೀಡಿದರು. ಸಂಗೀತಾ ಕಟ್ಟಿ ಕುಲ್ಕರ್ಣಿಯವರು ತಮ್ಮ ಕಾರ್ಯಕ್ರಮವನ್ನು ಭೈರವಿ ರಾಗದ ಕಾಯೋ ಕರುಣಾನಿಧೆ ಹಾಡಿನ ಮೂಲಕ ನ್ಯೂಜಿಲೇಂಡ್ ಕನ್ನಡ ಕೂಟದ ಸಂಸ್ಥಾಪಕ ಅಧ್ಯಕ್ಷರಾಗಿದ್ದ ದಿವಂಗತ ಪ್ರಾಚಾರ್ಯ ವಾಮನಮೂರ್ತಿಯವರಿಗೆ ಭಾವಪೂರ್ಣವಾಗಿ ಅರ್ಪಿಸಿದರು.

ನ್ಯೂಜಿಲೇಂಡ್ ಕನ್ನಡ ಕೂಟದ ಅಧ್ಯಕ್ಷ ರವಿಶಂಕರ್ ಅವರು ಅತಿಥಿಗಳಾದ ಸಂಗೀತಾ ಕಟ್ಟಿ ಕುಲ್ಕರ್ಣಿ ಹಾಗು ಉದಯರಾಜ್ ಕರ್ಪುರ್ ಅವರನ್ನು ಸ್ವಾಗತಿಸಿ ಪರಿಚಯಿಸಿದರು. ರತ್ನಾ ವಾಮನಮೂರ್ತಿ ಅವರು ಸಂಗೀತಾ ಅವರಿಗೆ ಸನ್ಮಾನ ಮಾಡಿದರು. ಸಂಸ್ಥಾಪಕ ಕಾರ್ಯದರ್ಶಿ ಡಾ. ಲಿಂಗಪ್ಪ ಕಲ್ಬುರ್ಗಿ ಅವರು ಉದಯರಾಜ್ ಕರ್ಪುರ್ ಅವರನ್ನು ಸನ್ಮಾನಿಸಿದರು.

ಎಲ್ಲಮ್ಮನ ಜೋಗತಿಯ ಉಧೋ ಉಧೋ ತತ್ತ್ವದ ಮೂಲಕ ನಮ್ಮಲ್ಲಿ ಭಕ್ತಿಯ ಕಂಪನಗಳನ್ನೆಬ್ಬಿಸಿ, ನಾಕುತಂತಿಯಿಂದ ನಮ್ಮ ಭಾವನೆಗಳನ್ನು ಮೀಟಿ, ಶ್ರಾವಣದ ಹಾಡಿನ ಮೂಲಕ ನಮ್ಮ ಭಾವನೆಗಳನ್ನು ಬೆಚ್ಚಗಾಗಿಸಿ ತಮ್ಮ ಸ್ವರ ವೈವಿಧ್ಯತೆ, ಗಾನ ವೈವಿಧ್ಯತೆಯಿಂದ ರಾಗಗಳನ್ನು ಪರಿಚಯಿಸುತ್ತ ಶಾಸ್ತ್ರೀಯ ಸಂಗೀತದ ಜೊತೆಗೆ ಸುಗಮ ಸಂಗೀತ, ಜಾನಪದ ಸೊಗಡಿನೊಂದಿಗೆ ಚಲನಚಿತ್ರದ ಮೆಲುಕು ಹಾಕುವಂತಹ ಗೀತೆಗಳ ರಸದೌತಣವನ್ನು ಆಕ್ಲೆಂಡಿನ ರಸಿಕರಿಗೆ ಉಣಬಡಿಸಿದ ಸಂಗೀತಾ ಕಟ್ಟಿ ಕುಲ್ಕರ್ಣಿ ಹಾಗು ಉದಯರಾಜ್ ಕರ್ಪುರ್ ಅವರನ್ನು ಪ್ರಕಾಶ್ ವಂದಿಸಿದರು. ಈ ಕಾರ್ಯಕ್ರಮದ ವ್ಯವಸ್ಥೆ ಮಾಡಿದ ಏಸಿಯಾ ಪೆಸೆಫಿಕ್ಕನ್ನಡ ಒಕ್ಕೂಟದ ಸೂತ್ರಧಾರರಾದ ಓಂಕಾರ ಸ್ವಾಮಿ, ಮತ್ತು ಈ ಕಾರ್ಯಕ್ರಮವನ್ನು ಪ್ರಯೋಜಿಸಿದ Premier Properties Mysore ಅವರಿಗೆ ನ್ಯೂಜಿಲೇಂಡ್ ಕನ್ನಡ ಕೂಟದ ವತಿಯಿಂದ ಆಭಾರ ಮನ್ನಣೆ ಮಾಡಿಲಾಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X