ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂ ಜೆರ್ಸಿಯಲ್ಲಿ ನೃತ್ತ-ನೃತ್ಯ-ನಾಟ್ಯ ಸಂಭ್ರಮ

By Staff
|
Google Oneindia Kannada News

Naga Aithal congratulating the dancers
ಅಮೇರಿಕಾದ ನ್ಯೂ ಜೆರ್ಸಿಯಲ್ಲಿರುವ ಬ್ರಿಡ್ಜ್‌ವಾಟರ್ ಶ್ರೀ ವೆಂಕಟೇಶ್ವರ ಸನ್ನಿಧಿಯ ಸಭಾಂಗಣದಲ್ಲಿ ವಿದುಷಿ ಭ್ರಮರಿ ಶಿವಪ್ರಕಾಶ್ ಮತ್ತು ಶಿಷ್ಯ ವೃಂದದಿಂದ ನಾದ ನೃತ್ಯ ದಿನ ಜೂನ್ 7ರಂದು ನಡೆಯಿತು.

ಶಾಸ್ತ್ರೀಯ ನೃತ್ಯಪದ್ಧತಿಯಲ್ಲಿ ಕಾಣಸಿಗುವ ನೃತ್ತ ನೃತ್ಯ ನಾಟ್ಯ ವೈವಿಧ್ಯವನ್ನು "Dances and a Dance Drama" ಎಂಬ ಶೀರ್ಷಿಕೆಯೊಂದಿಗೆ ಭ್ರಮರಿ ಶಿವಪ್ರಕಾಶ್ ಅವರ ನೃತ್ಯ ತಂಡ ಸಾದರಪಡಿಸಿತು.

ಭರತನಾಟ್ಯದ ಶಾಸ್ತ್ರೀಯ ನೃತ್ಯ ಬಂಧಗಳಾದ ಪುಷ್ಪಾಂಜಲಿ, ಜತಿಸ್ವರ, ಪದಂ, ದೇವರನಾಮ, ಜಾವಳಿ ಕಾರ್ಯಕ್ರಮದ ಮೊದಲ ಅಂಗವಾದರೆ, ಎರಡನೆಯ ಅಂಗದಲ್ಲಿ ಶ್ರೀ ವಾದಿರಾಜರ ಸಂಸ್ಕೃತ ಕಾವ್ಯ ಶ್ರೀ ರುಗ್ಮಿಣೀಶ ವಿಜಯದ ರಂಗ ರೂಪಕ "ಭಾವ ನೃತ್ಯ ನಮನ" ಪ್ರದರ್ಶನಗೊಂಡಿತು. ಶ್ರೀ ಕೃಷ್ಣ ರುಕ್ಮಿಣಿಯರ ವಿವಾಹ ಸಂದರ್ಭದ ಚಿತ್ರಣವನ್ನು ಮಾತ್ರ ಇಲ್ಲಿ ತೋರಿಸಲಾಯಿತು.

ಸುಮಾರು ಎರಡು ತಾಸು ನಡೆದ ಈ ಕಾರ್ಯಕ್ರಮಕ್ಕೆ ಮೈಸೂರಿನ ನೃತ್ಯ ಗುರು ಡಾ| ವಸುಂಧರಾ ದೊರೆಸ್ವಾಮಿ ಅವರ "Dancing to Dieties" ಧ್ವನಿಸುರುಳಿ ಹಾಗೂ ಉಡುಪಿಯ ಸಮೂಹ ಲಾಂಛನದ ಪ್ರೊ| ಉದ್ಯಾವರ ಮಾಧವ ಆಚಾರ್ಯರ ನಿರ್ದೇಶನದಲ್ಲಿ ಎಚ್ ಚಂದ್ರಶೇಖರ ಕೆದ್ಲಾಯರು ಒದಗಿಸಿದ ಧ್ವನಿಮುದ್ರಿತ ಹಿನ್ನೆಲೆ ಸಂಗೀತವನ್ನು ಬಳಸಲಾಯಿತು.

ಅಮೇರಿಕಾ ಕನ್ನಡ ಸಾಹಿತ್ಯ ಬಳಗದ ಡಾ| ಎಚ್ ಕೆ ಚಂದ್ರಶೇಖರ್, ಡಾ| ನಾಗ ಐತಾಳ್, ಹೆಮ್ಮಿಗೆ ರಂಗಾಚಾರ್ ಮೊದಲಾದ ಹಿರಿಯರು ಮತ್ತು ಅನೇಕ ನೃತ್ಯಾಸಕ್ತರು ಕಲಾವಿದರನ್ನು ಅಭಿನಂದಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X