ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಟ್ರಾಯಿಟ್‌ನಲ್ಲಿ ವೀಣೆ ರಾಜಾರಾಯರ ಸ್ಮರಣೆ

By Staff
|
Google Oneindia Kannada News

Veena Kinhal, daughter of Raja Rao
ವೈಣಿಕ, ಗಾಯಕ, ವಾಗ್ಗೇಯಕಾರರಾಗಿ ಖ್ಯಾತಿಯ ಮೇರುತುದಿ ಏರಿದ್ದ ಕನ್ನಡಾಭಿಮಾನಿ ವೀಣೆ ರಾಜಾರಾಯರ ಜನ್ಮ ಶತಮಾನೋತ್ಸವದ ಮೊದಲ ಆಚರಣೆ ಡೆಟ್ರಾಯಿಟ್‌ನಲ್ಲಿ ವೀಣೆ ಕಚೇರಿ ನಡೆಸುವ ಮುಖಾಂತರ ಮಾರ್ಚ್ 28ರಂದು ಸಂಭ್ರಮದಿಂದ ಆಚರಿಸಲಾಯಿತು.

ರಾಜಾರಾಯರ ಬದುಕು, ಸಾಧನೆಗಳನ್ನು ಪರಿಚಯಿಸುವ ಒಂದು ಚಿತ್ರಪ್ರದರ್ಶನವು ರಸಿಕರ ಮೆಚ್ಚುಗೆ ಗಳಿಸಿತು ಮತ್ತು ಸಮಾರಂಭಕ್ಕೆ ಕಳೆನೀಡಿತ್ತು. 1930ರ ದಶಕದಿಂದ ಸಂಗ್ರಹಿಸಿರುವ ಅನೇಕ ಅಮೂಲ್ಯವಾದ ಬರವಣಿಗೆಗಳು ಮತ್ತು ಚಿತ್ರಗಳ ಸಹಿತ ರಾಜಾರಾಯರ ಪರಂಪರೆಯ ಹಿನ್ನೆಲೆ, ಮತ್ತು ರಾಯರ ಬದುಕು, ಸಾಧನೆಗಳನ್ನು ಸ್ವಾರಸ್ಯಕರವಾಗಿ ಬಣ್ಣಿಸಲಾಯಿತು.

ರಾಜಾರಾಯರ ಪುತ್ರಿ ವೀಣಾ ಕಿನ್ಹಾಲ್ ಅವರು ಸುಮಧುರವಾದ ಮೈಸೂರು ಶೈಲಿಯಲ್ಲಿ ತಮ್ಮ ತಂದೆ ಹಾಗೂ ಗುರು ರಾಜಾರಾಯರ ನೆನಪನ್ನು ಮಾಡಿಕೊಟ್ಟರು. ಇಂದಿರೇಶ ಮಕ್ತಾಲ್ ಅವರ ಮೃದಂಗ ವಾದನ ಸಹಕಾರದೊಂದಿಗೆ ವೀಣಾ ಅವರು ರಾಜಾರಾಯರ ಸ್ವರಜತಿ, ವರ್ಣ ಹಾಗೂ ಮೂರು ಕೃತಿಗಳನ್ನು ನುಡಿಸಿದರು. ನಂತರ, ತ್ಯಾಗರಾಜರ ಆಭೇರಿ ರಾಗದ ನಗುಮೋಮು ಮತ್ತು ಮೈಸೂರು ವಾಸುದೇವಾಚಾರ್ಯರ ಮೋಹನ ರಾಗದ 'ರಾ ರಾ ರಾಜೀವ ಲೋಚನ' ಕೃತಿಗಳನ್ನು ವಿಸ್ತಾರವಾಗಿ ಕೇಳಿಸಿದರು. ರಾಜಾರಾರು ಸ್ವರ ಪ್ರಸ್ತಾರ ಮಾಡಿರುವ ಎರಡು ಪುರಂದರ ದಾಸರ ಪದಗಳನ್ನೂ ಒಳಗೊಂಡ ಕಚೇರಿ ವೀಣೆ ಶೇಷಣ್ಣನವರ ಕಾಪಿ ರಾಗದ ತಿಲ್ಲಾನ ಮತ್ತು ಮಂಗಳದೊಂದಿಗೆ ಮುಕ್ತಾಯವಾಯಿತು.

ವೀಣೆ ರಾಜಾರಾವ್ ಫೌಂಡೇಷನ್ ಆಯೋಜಿಸಿರುವ ಶತಮಾನೋತ್ಸವದ ಮುಂದಿನ ಆಚರಣೆ ಬೆಂಗಳೂರಿನಲ್ಲಿ ಜುಲೈ 4 ಮತ್ತು 5ರಂದು ನಡೆಯಲಿದೆ.

ವಿವರಗಳಿಗೆ ಸಂಪರ್ಕಿಸಿ : ಶ್ರೀನಿವಾಸ ರಾಜಾರಾವ್
ಈಮೈಲ್ : [email protected]

ಪೂರಕ ಓದಿಗೆ

ಉತ್ಕಟ ಕನ್ನಡಾಭಿಮಾನಿ ವೀಣೆ ರಾಜಾರಾಯರುಉತ್ಕಟ ಕನ್ನಡಾಭಿಮಾನಿ ವೀಣೆ ರಾಜಾರಾಯರು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X