ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ ಚುನಾವಣೆ ಒಂದು ಅವಲೋಕನ

By Staff
|
Google Oneindia Kannada News

ಸುಪ್ರಸಿದ್ಧ ಸಂಸ್ಥೆ ಅಕ್ಕ ಬಳಗಕ್ಕೆ ಇತ್ತೀಚೆಗೆ ಚುನಾವಣೆಗಳು ನಡೆದವು. ಚುನಾವಣೆಯಲ್ಲಿ ಕೆಲವು ನೀತಿ ನಿಯಮಗಳನ್ನು ಗಾಳಿಗೆ ತೂರಲಾಯಿತೆಂದೂ ಆರೋಪ. ಜತೆಗೆ ಕೆಲವರು ವ್ಯವಸ್ಥಿತವಾಗಿ ಮಾಡಿಕೊಂಡ ಗುಂಪುಗಾರಿಕೆ ಒಪ್ಪಂದದಿಂದಾಗಿ ಇಡೀ ಚುನಾವಣಾ ಪ್ರಕ್ರಿಯೆ ಮತ್ತು ಫಲಿತಾಂಶ ಜನತಾಂತ್ರಿಕ ವ್ಯವಸ್ಥೆಯ ಕ್ರೂರ ಅಣಕವಾಗಿದೆ ಎಂದು ಲೇಖಕರು ಅಂಕಿ ಅಂಶ ಸಮೇತ ತಮ್ಮ ವಾದವನ್ನು ಮಂಡಿಸುತ್ತಿದ್ದಾರೆ.

* ಅನಂತ್, ನ್ಯೂಜೆರ್ಸಿ

ಅಕ್ಕ ಸಮ್ಮೇಳನ ಅಮೆರಿಕೆಯಲ್ಲಿರುವ ಕನ್ನಡಿಗರಿಗಿಂತ ಕರ್ನಾಟಕದ ಕಲಾವಿದರಿಗೆ ಒಂದು ಗರ್ವ ಸಂಕೇತವಾಗಿದೆ. ಅಕ್ಕ ಸಮ್ಮೇಳದಲ್ಲಿ ಭಾಗವಹಿಸಿ ಬಂತು ಅಂದರೆ ಕಾಶಿಗೆ ಹೋಗಿ ಬಂದಷ್ಟು ಪುಣ್ಯ. ಅದರಲ್ಲೂ ಸರಕಾರದ ಖರ್ಚಿನಿಂದ ಹೋಗಿ ಬಂದರೆ ಕಾಶಿಗೆ ಹೋಗಿ ಸ್ನಾನ ಮಾಡಿದಷ್ಟು ಪುಣ್ಯ ಎಂದು ತಿಳಿದುಕೊಂಡಿರುವ ಕಲಾವಿದರೂ ಇದ್ದಾರೆ. ಇಂತಹ ಬಹು ಜನಪ್ರಿಯ ಸಂಸ್ಥೆಯಲ್ಲಿ ಪದಾಧಿಕಾರಿಗಳಾಗುವುದು ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಸಮ್ಮೇಳನವನ್ನು ಬಿಟ್ಟರೆ, ಹೇಳಿಕೊಳ್ಳುವಂಥಹ ಯಾವುದೇ ಉದ್ಧೇಶವಿಲ್ಲದ, ಯಾವುದೇ ಕನ್ನಡ ಪರ ಕೆಲಸದ ಪ್ರಣಾಳಿಕಗಳಿಲ್ಲದ ಅಕ್ಕ ಪದಾಧಿಕಾರಿಗಳಿಗೋಸ್ಕರ ಪ್ರತಿ ಎರಡು ವರ್ಷಕೂಮ್ಮೆ ಚುನಾವಣೆ ನಡೆಯುತ್ತದೆ. ಇತ್ತೀಚೆಗೆ ಮತ್ತೆ ಅಕ್ಕ ಅಂಗಳದಲ್ಲಿ ನಿರ್ದೇಶಕ ಹುದ್ದಗಳಿಗೆ ಚುನಾವಣೆ ನಡೆಯಿತು. ಈ ಚುನಾವಣೆ ಒಂದು ದೊಡ್ಡ ಪ್ರಹಸನವಾಗಿ ಪರಿಣಮಿಸಿದೆ.

ಇತ್ತೀಚಿನ ಅಕ್ಕ ಈ ಬಾರಿಯ ಚುನಾವಣೆ ಎಲ್ಲರಿಗೂ ತಿಳಿದ ವಿಚಾರವೇ. ಕಳೆದ ಬಾರಿ ಚುನಾವಣೆ ವ್ಯವಸ್ಥೆಯನ್ನು ಪದಾಧಿಕಾರಿಗಳು ತಾವೇ ವಹಿಸಿಕೊಂಡಿದ್ದರು. ಆಗ ಅವ್ಯವಹಾರಗಳು ನಡೆದಿವೆ ಎಂಬ ಆರೋಪ ಬಂದದ್ದರಿಂದ ಈ ಬಾರಿ ಅಂಥ ಆರೋಪಕ್ಕೆ ಎಡೆ ಕೊಡದೆ ಕನ್ನಡೇತರರಿಂದ ಚುನಾವಣೆ ನಡೆಸಿದ್ದೇವೆ ಎಂದು ಹೇಳಿ, ಕಳೆದ ಚುನಾವಣೆಯಲ್ಲಿ ಅವ್ಯವಹಾರವಾಗಿದೆ ಎಂದು ಪ್ರಸಕ್ತ ಅಕ್ಕ ಅಧಿಕಾರಿಗಳು ಪರೋಕ್ಷವಾಗಿ ಒಪ್ಪಿಕೊಂಡರು. ನಿಮಗೆ ಗೊತ್ತಿಲ್ಲ. ಅಕ್ಕ ಒಂದು ಮಧುಲೇಪಿತ ಸೇಬು. ಹೊರಗೆ ನೋಡಿದರೆ ದುಂಡು ಸೇಬಿನ ಹಣ್ಣು.

ಅಕ್ಕ ಸಮ್ಮೇಳನಕ್ಕೆ ಬರುವ ಕನ್ನಡಿಗರಿಗೆ ಸಿಗುವ ಸಮ್ಮೇಳನದ ಖುಷಿ ಇನ್ನೆಲ್ಲೂ ಇಲ್ಲ. ಜನ ಮರುಳೋ ಜಾತ್ರೆ ಮರುಳೋ ಅಂತ, ನಿಸ್ವಾರ್ಥ ಸೇವೆ ಮಾಡಲು ಮುಂದಾಗಿ, ಅದನ್ನೇನಾದರು ಕಚ್ಚಿ ರುಚಿ ನೋಡಿದರೆ, ಆಗಲೇ ತಿಳಿಯುವುದು ಒಳಗೆ ಎಷ್ಟು ಕೊಳೆತಿದೆಯೆಂದು. ನಿಸ್ವಾರ್ಥ ಸೇವೆ ಮಾಡಲು ಹಾತೊರೆಯುತ್ತಿರುವವರೂ, ಹೆಸರಿಗೆ ಪದಾಧಿಕಾರಿಗಳಾಗಿ ಮೆರೆಯಲು ಬರುವವರೂ, ಅಕ್ಕ ಪದಾಧಿಕಾರದ ದುರುಪಯೋಗ ಪಡಿಸಿಕೊಂಡು ಕರ್ನಾಟಕದ ರಾಜಕಾರಣಿಗಳ ಬಳಿ ಸ್ಕೋರ್ ಮಾಡಲು ಬಯಸುವವರೂ ಚುನಾವಣೆಗೆ ನಿಲ್ಲುತ್ತಾರೆ. ಎರಡು ಹಾಗೂ ಮೂರನೇ ಗುಂಪಿಗೆ ಸೇರಿದ ಹುರಿಯಾಳುಗಳು ಗುಂಪು ಮಾಡಿಕೊಳ್ಳುತ್ತಾರೆ. ಕಳೆದ ಬಾರಿಯೂ ಹಾಗೂ ಈ ಬಾರಿಯೂ ಸ್ಲೇಟ್ ಅಂತ ಹೇಳಿಕೊಂಡು ಒಂದೇ ಗುಂಪಿನ 11 ಮಂದಿ ಆಯ್ಕೆಯಾಗಿದ್ದಾರೆ. ಇಂಥ ಗುಂಪುಗಾರಿಕೆಗೆ ಎಮೆರಿಕಾದಲ್ಲಿ ಸ್ಲೇಟ್ ಎನ್ನುತ್ತಾರೆ. ಸ್ಲೇಟ್ ಅಂದರೆ ಏನು?

ಜನಸಾಮಾನ್ಯರಿಗೆ ತಿಳಿಯುವಷ್ಟು ಸುಲಭವಾಗಿ ಅರ್ಥವಾಗುವ ಶಬ್ಧವಲ್ಲವಿದು. ಮೊದಲು ಅಕ್ಕ ಸದಸ್ಯರ ಪಟ್ಟಿಯನ್ನು ಪರಿಶೀಲಿಸೋಣ. ಇದರಲ್ಲಿ ಎರಡು ತರಹದ ಸದಸ್ಯರಿರುತ್ತಾರೆ. ಒಂದು ಅಜೀವ ಸದಸ್ಯತ್ವ. ಇನ್ನೊಂದು ವಾರ್ಷಿಕ ಸದಸ್ಯತ್ವ. ಅಜೀವ ಒಂಟಿ ಸದಸ್ಯತ್ವಕ್ಕೆ $200. ವಾರ್ಷಿಕ ಒಂಟಿ ಸದಸ್ಯತ್ವಕ್ಕೆ $25 ಚಂದಾ. ಅಕ್ಕ ಸಮ್ಮೇಳನದ ಸಮಯದಲ್ಲಿ ಸದಸ್ಯತ್ವಕ್ಕಾಗಿ ಅಹ್ವಾನಿಸಿದ್ದನ್ನು ನೋಡಿದ್ದೇನೆ. ಮತ್ತೆ ಇನ್ಯಾವಾಗಲೂ, ಯಾವುದೇ ಕನ್ನಡ ಸಂಘದ ಮೂಲಕವಾಗಲೀ ಸದಸ್ಯತ್ವಕ್ಕೆ ಯಾವ ಪ್ರಕಟಣೆಯನ್ನೂ ಹೊರಡಿಸಿಲ್ಲ. ಅಕ್ಕ ಸಮ್ಮೇಳನದ ಸಮಯದಲ್ಲಿ ಸ್ವಇಚ್ಚೆಯಿಂದ ಸದಸ್ಯರಾಗುವವರ ಸಂಖ್ಯೆ ಕಡಿಮೆ. ಇಲ್ಲೇ ಬರುವುದು ಸ್ಲೇಟ್. ಗುಂಪುಗಾರಿಕೆ ಹುಟ್ಟಿಕೊಳ್ಳುವುದೂ ಆಗಲೇ.

ಅಕ್ಕ ಸಮ್ಮೇಳನದ ಸಮಯದಲ್ಲಿ ಹೆಸರಿಗಾಗಿ ಪದವಿ ಪಡೆಯಲ್ಲಿಚ್ಚಿಸುವ ಹಲವಾರು ಮಂದಿ ಸಿಗುತ್ತಾರೆ. ಸಮ್ಮೇಳನದ ಹುಮ್ಮಸ್ಸಿನಲ್ಲಿದ್ದಾಗ, ಪದವಿಯಾಸೆಗಾಗಿ ಹಣ ಖರ್ಚುಮಾಡಲೂ ತಯಾರಿರುತ್ತಾರೆ. ಇಲ್ಲಿ ಹುಟ್ಟಿಕೊಳ್ಳುವುದು ಸ್ಲೇಟ್. ಅಕ್ಕ ಕೆಲವು ಹಳೇ ಹುಲಿಗಳು ಈ ವೇಳೆಯಲ್ಲಿ ತಾವು ಹೇಳಿದ್ದಕ್ಕೆಲ್ಲಾ ಹ್ನೂಂ ಹುಜೂರ್ ಅನ್ನುವ ಬಕರಾಗಳನ್ನು ಹುಡುಕುತ್ತಾರೆ. ಅವರಿಗೆ ಬೇಕಾಗಿರುವುದು 11 ಬಕರಾಗಳು. ಅಂತಹ ಬಕರಾಗಳ ಹತ್ತಿರ ಒಂದು ಒಪ್ಪಂದ ಮಾಡಿಕೊಳ್ಳುತ್ತಾರೆ. ನಾವೊಂದು ಗುಟ್ಟಾದ ಸ್ಲೇಟ್ ಮಾಡಿಕೊಳ್ಳೋಣ ಎಂದು. ಅದರಂತೆ ಪ್ರತಿಯೊಬ್ಬ ಬಕರಾನೂ ತಾನು ಹೇಳಿದವರಿಗೆ ಓಟು ಹಾಕುವಂತ 25 ಮರಿ ಬಕರಾಗಳನ್ನು ಹುಡುಕಿ ತರಬೇಕು. ಅದು ಕಷ್ಟವಾಗುವುದಿಲ್ಲ. ಕೆಲವು ಆಪ್ತಸ್ನೇಹಿತರೂ, ಕೆಲವು ಸುಳ್ಳು ಸದಸ್ಯತ್ವಗಳು, ಕೆಲವು ಕನ್ನೇಡತರ ಆಪ್ತಸ್ನೇಹಿತರುಗಳು. ಯಾರು ಹಣ ಕೊಟ್ಟು ಸದಸ್ಯತ್ವರಾಗುವುದಿಲ್ಲವೋ ಅವರಿಗೆಲ್ಲಾ ಈ ಬಕರಾನೇ ಹಣಕೊಟ್ಟು ವಾರ್ಷಿಕ ಸದಸ್ಯರನ್ನಾಗಿ ಮಾಡಿಸುತ್ತಾನೆ. ಇವರು ಹೆಚ್ಚಾಗಿ ಮಾಡಿಸುವುದೇ ಒಂಟಿ ಸದಸ್ಯರನ್ನು. (ಈ ವರ್ಷದ ಒಂಟಿ ಸದಸ್ಯತ್ವದ ಸಂಖ್ಯೆ 362).

ಇದರಲ್ಲೇ ಇರುವುದು ಟ್ರಿಕ್. ಈ 'ಹೇಳಿಮಾಡಿಸಿದ' ಸದಸ್ಯರಿಗೆಲ್ಲಾ ಮೊದಲೇ ಒಪ್ಪಂದ ಏನೆಂದರೆ, ಚುನಾವಣೆ ಸಮಯದಲ್ಲಿ ಮತಪತ್ರ ಮಾತ್ರ ತಮಗೆ ಕೊಡಬೇಕು ಅಥವಾ ನಾವು ಹೇಳಿದ ಉಮೇದುವಾರರಿಗೇ ಓಟು ಹಾಕಬೇಕು ಎಂಬುದು. ಇದು ಮೊದಲನೆ ಹಂತ. ಮೊದಲೇ ತಿಳಿಸಿದಂತೆ ಸುಳ್ಳು ಸದಸ್ಯರ ಹಾಗೂ ಹಣಕೊಟ್ಟು ಮಾಡಿಸಿದ ಸದಸ್ಯರ ವಿಳಾಸಗಳನ್ನೆಲ್ಲಾ ಒಂದು ಅಥವಾ ಎರಡು ವಿಳಾಸಗಳಲ್ಲೇ ನೊಂದಾಯಿಸುತ್ತಾರೆ. ನಾನು ಮಾಡುತ್ತಿರುವ ಆಪಾದನೆ ಬಹುದೊಡ್ಡ ಆಪಾದನೆ. ನಾನೂ ಹೇಳುವುದಕ್ಕೆ ಪುರಾವೆ ಇರಬೇಕಲ್ಲವೇ? ಇದಕ್ಕೆ ಪುರಾವೆ ಆ ಮೇಲೆ ಕೊಡುತ್ತೇನೆ. ಒಂದೇ ವಿಳಾಸದಲ್ಲಿ ನೊಂದಾಯಿಸುವುದರಿಂದ ಉಪಯೋಗವೇನು? ಸದಸ್ಯರಿಗೆ ಚುನಾವಣೆಯ ವೇಳೆಯಲ್ಲಿ ಮತಪತ್ರವನ್ನು ಪೋಸ್ಟ್‌ನಲ್ಲಿ ಈ ವಿಳಾಸಕ್ಕೆ ಕಳುಹಿಸಿಕೊಡುತ್ತಾರೆ. (ಕಳೆದ ಬಾರಿ ಚುನಾವಣೆಗೂ ಈ ಬಾರಿ ಚುನಾವಣೆಗೂ ಇದೇ ವ್ಯತ್ಯಾಸ. ಕಳೆದ ಬಾರಿ ಚುನಾವಣೆಯಲ್ಲಿ ಇಂತಹ ಸುಳ್ಳು ಸದಸ್ಯರ ಮತಪಟ್ಟಿಯನ್ನು ಪೋಸ್ಟ್ ಮಾಡಲೇ ಇಲ್ಲ. ಅವರುಗಳೇ ಮತಪತ್ರ ತೆಗೆದುಕೊಂಡು ಸ್ಲೇಟ್‌ನಲ್ಲಿದ್ದ ಉಮೇದುವಾರರಿಗೆ ಹಾಕಿಕೊಂಡರು. ಕಳೆದ ಬಾರಿಯೂ ಗೆದ್ದ ಗುಂಪಿಗೂ ಸೋತ ಅಭ್ಯರ್ಥಿಗಳಿಗೂ ಸರಿಯಾಗಿ 20 ರಿಂದ 80 ಮತಗಳು. ಆಗ ಅಕ್ಕ ಸದಸ್ಯರ ಸಂಖ್ಯೆಯೂ ಕಮ್ಮಿ ಇತ್ತು.)

ವಿಳಾಸ ಇವರ ಸ್ನೇಹಿತರೊಬ್ಬರದ್ದೇ ಇರುವುದರಿಂದ ಅವರೇ ಎಲ್ಲಾ ಮತ ಪತ್ರಗಳನ್ನು ತುಂಬಿಸಿ ಕಳುಹಿಸಿಕೊಡುತ್ತಾರೆ. ಹೀಗೆ ಒಳಗೊಳಗೇ ನಡೆದ ಸ್ಲೇಟ್ ಹೊರಗಿನವರಿಗೆ ಹೇಗೆ ಗೊತ್ತಾಗುತ್ತದೆ ಹೇಳಿ? ಇದಕ್ಕೆಲ್ಲಾ ಪುರಾವೆ ಏನು? ಈಗ ಹಾಲಿ ಸದಸ್ಯರ ಪಟ್ಟಿಗೆ ಬರೋಣ. ಅದನ್ನು ಕೂಲಂಕಷವಾಗಿ ವಿಶ್ಲೇಷಿಸೋಣ.

ಒಟ್ಟು ಸದಸ್ಯರ ಸಂಖ್ಯೆ:
ಸದಸ್ಯರು ಮತಗಳು
ಅಜೀವ ಸಾಂಸಾರಿಕ ಸದಸ್ಯರು 261 522
ಅಜೀವ ಒಂಟಿ ಸದಸ್ಯರು 14 14
ವಾರ್ಷಿಕ ಸಾಂಸಾರಿಕ ಸದಸ್ಯರು 243 486
ವಾರ್ಷಿಕ ಒಂಟಿ ಸದಸ್ಯರು 160 160
ಒಟ್ಟು ಸದಸ್ಯರು 678 1182
ಒಟ್ಟು ಮತ ಚಲಾವಣೆ (ಸುಮಾರು) 550

ಒಬ್ಬರು 11 ಉಮೇದುವಾರರಿಗೆ ಮತ ಹಾಕಬಹುದಿತ್ತು.

ಮತದಾರರ ಪಟ್ಟಿ:
ವಿಳಾಸವಿಲ್ಲದ ಸದಸ್ಯರು : 8
ಈ-ಮೈಲ್‌ಗಳಿಲ್ಲದ ಸದಸ್ಯರು : 94
ಅದರಲ್ಲಿ

ಸದಸ್ಯರು ಮತಗಳು
ಅಜೀವ ವಾರ್ಷಿಕ ಸದಸ್ಯರು 22 44
ಅಜೀವ ಒಂಟಿ ಸದಸ್ಯರು 3 3
ವಾರ್ಷಿಕ ಸಾಂಸಾರಿಕ ಸದಸ್ಯರು 46 92
(NJ/NY 36)
ವಾರ್ಷಿಕ ಒಂಟಿ ಸದಸ್ಯರು 23 23
(NJ/NY 9)
ಒಟ್ಟು ಈ-ಮೈಲ್‌ಗಳಿಲ್ಲದ ಸದಸ್ಯರು 94

162

ಇನ್ನು ಒಂದೇ ವಿಳಾಸದಲ್ಲಿ ಬೇರೆ ಬೇರೆ last names ಇರುವ ಸದಸ್ಯರ ವಿಶ್ಲೇಷಣೆ:

ರಾಜ್ಯ ವಿಳಾಸ ವಾರ್ಷಿಕ ಸಾಂಸಾರಿಕ ಸದಸ್ಯರು ವಾರ್ಷಿಕ ಒಂಟಿ ಸದಸ್ಯರು
PL ವಿಳಾಸ-1 3
ವಿಳಾಸ-2 3
IL ವಿಳಾಸ-1 5 1
MD ವಿಳಾಸ-1 3
MI ವಿಳಾಸ-1 2
ವಿಳಾಸ-2 2
NJ ವಿಳಾಸ-1 4
ವಿಳಾಸ-2 2 1
NY ವಿಳಾಸ-3 2 1
ವಿಳಾಸ-4 4
ವಿಳಾಸ-5 5
PA ವಿಳಾಸ-1 2
ಒಟ್ಟು 26 18
ಒಟ್ಟು ಮತಗಳು 54 18


ಈಗ ಬರುವ ಪ್ರಶ್ನೆ ಇಷ್ಟೆ? ಒಂದೇ ವಿಳಾಸದಲ್ಲಿ ಬೇರೆ ಬೇರೆ Last Names ಇರೋದಕ್ಕೇ ಹೇಗೆ ಸಾಧ್ಯ. ಒಂದೋ ಎರಡೋ ಅಂದರೆ ಇರಬಹುದೇನೋ ಅನ್ನಿಸುತ್ತದೆಯಲ್ಲವೇ? ಇಷ್ಟೊಂದು ಹೇಗೆ ಸಾಧ್ಯ? ಅದೂ ಹೋಗಲಿ ಬಿಡಿ. ಕೆಲವು ಉಮೇದುವಾರರು ಒಂದು ಪ್ರಶ್ನೆಯನ್ನು ಅಕ್ಕ ಅಧ್ಯಕ್ಷರ ಗಮನಕ್ಕೆ ತಂದಿದ್ದಾರಂತೆ. ಅದರ ಸಾರಾಂಶ ಹೀಗಿದೆ: ಮತದಾರರ ಪಟ್ಟಿಯಲ್ಲಿ ಎಷ್ಟೋ ಕನ್ನಡೇತರ ಸದಸ್ಯರಿದ್ದಾರೆ. ಅವರಿಗೆ ಫೋನಿನಲ್ಲಿ ಕೇಳಿದಾಗ ಅವರು ಹೇಳಿದ್ದು 'ಅವರ ಆಪ್ತ ಸ್ನೇಹಿತರೊಬ್ಬರು ಅಕ್ಕ ಚುನಾವಣೆಗೆ ನಿಂತಿದ್ದಾರೆ, ಅದಕ್ಕಾಗಿ ನಮ್ಮನ್ನು ಸದಸ್ಯರನ್ನಾಗಿ ಮಾಡಿದ್ದಾರೆ. ನಮಗೆ ಕನ್ನಡ ಬರುವುದಿಲ್ಲ'. ಈ ಪ್ರಶ್ನೆಗೆ ಅಧ್ಯಕ್ಷರಿಂದ ಉತ್ತರವಿಲ್ಲ.

ಇನ್ನೂ ಒಂದು ಆಪಾದನೆಯಿದೆ. ಕೆಲ ಉಮೇದುವಾರರು ತಮ್ಮ ಕೆಲವು ಮೂರ್ಖ ಸದಸ್ಯರುಗಳಿಂದ (ಮರಿ ಬಕರಾಗಳು) ಮತ ಪತ್ರ ಗಳನ್ನು ತಾವೇ ತೆಗೆದುಕೊಂಡು ಮತ ಚಲಾಯಿಸಿದ್ದಾರೆ ಎಂಬ ಸುದ್ಧಿ ಉತ್ತರ ಅಮೆರಿಕದಾದ್ಯಂತ ಹರಡಿದೆ. ಅಂತೂ ಈ ಚುನಾವಣ ಫಲಿತಾಂಶ ಮಾತ್ರ ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್ನ್ ಗೆ ಹೋಗಬೇಕು. ಏಕೆ ಗೊತ್ತೆ? ಅಕ್ಕ ವೆಬ್ ಸೈಟ್‌ನಲ್ಲಿ ಹೋಗಿ ನೋಡಿ. ಸ್ಲೇಟ್ ಅಂತ ಹೇಳಿದೆನಲ್ಲ ಆ 11 ಮಂದಿಗೂ 550ರ ಆಸುಪಾಸಿನಲ್ಲಿ ಓಟುಗಳು ಬಂದಿವೆ. ಸೋತ 8 ಮಂದಿಗೆ 250ರ ಆಸುಪಾಸಿನಲ್ಲಿ ಬಂದಿವೆ. ಅಂದರೆ, ಸೋತ ಅಭ್ಯರ್ಥಿಗಳಿಗೂ ಗೆದ್ದ ಅಭ್ಯರ್ಥಿಗಳಿಗೂ ಇರುವ ವ್ಯತ್ಯಾಸ ಸುಮಾರು 300. ಗುಂಪಿನಲ್ಲಿ ಗೆದ್ದ ಎಲ್ಲ ಅಭ್ಯರ್ಥಿಗಳೂ ಸುಮಾರು ಒಂದೇ ಅಂತರದಲ್ಲಿ ಗೆದ್ದಿರುವುದು ದಾಖಲೆಯಲ್ಲವೇ? ಭಲೇ ಅಕ್ಕ, ಇನ್ನು ನಿನ್ನನ್ನು ಅಬ್ಭಾ ಎಂದು ಕರೆಯಲೇ ನಾನು!

ಪೂರಕ ಓದಿಗೆ

ಭಿನ್ನಮತೀಯರಿಗೆ ಸೊಪ್ಪು ಹಾಕದ ಅಕ್ಕ</a><br><a href=ಅಕ್ಕ ಇಬ್ಭಾಗ, ಓ ಅಮೆರಿಕನ್ನಡಿಗ!
'ಅಕ್ಕ' ನಿರ್ದೇಶಕ ಚುನಾವಣೆ ಫಲಿತಾಂಶ
ರವಿ ಡಂಕಣಿಕೋಟೆ ಅಕ್ಕಗೆ ಅಧ್ಯಕ್ಷ" title="ಭಿನ್ನಮತೀಯರಿಗೆ ಸೊಪ್ಪು ಹಾಕದ ಅಕ್ಕ
ಅಕ್ಕ ಇಬ್ಭಾಗ, ಓ ಅಮೆರಿಕನ್ನಡಿಗ!
'ಅಕ್ಕ' ನಿರ್ದೇಶಕ ಚುನಾವಣೆ ಫಲಿತಾಂಶ
ರವಿ ಡಂಕಣಿಕೋಟೆ ಅಕ್ಕಗೆ ಅಧ್ಯಕ್ಷ" />ಭಿನ್ನಮತೀಯರಿಗೆ ಸೊಪ್ಪು ಹಾಕದ ಅಕ್ಕ
ಅಕ್ಕ ಇಬ್ಭಾಗ, ಓ ಅಮೆರಿಕನ್ನಡಿಗ!
'ಅಕ್ಕ' ನಿರ್ದೇಶಕ ಚುನಾವಣೆ ಫಲಿತಾಂಶ
ರವಿ ಡಂಕಣಿಕೋಟೆ ಅಕ್ಕಗೆ ಅಧ್ಯಕ್ಷ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X