ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಪ್ರಬಂಧ ಸ್ಪರ್ಧೆಯ ಕರೆಯೋಲೆ

By Staff
|
Google Oneindia Kannada News

Ravi Krishna Reddy
ಭಾರತದ ನೇಗಿಲಯೋಗಿಗಳ ಕಳವಳ ಮತ್ತು ಅವರಿಗೆ ಪರಿಹಾರ; ಐಟಿ ಬಿಟಿ ಬಿಪಿಒ ವಲಯ ಹಾಗೂ ಅಲ್ಲಿಂದ ಉದ್ಭವಿಸಿರುವ ಸಾಮಾಜಿಕ ಸಮಸ್ಯೆಗಳು. ಈ ಎರಡು ವಿಚಾರಗಳನ್ನು ಕುರಿತು ಬೆಳಕು ಚೆಲ್ಲುವ, ನಗದು ಬಹುಮಾನ ಪ್ರಬಂಧ ಸ್ಪರ್ಧೆಗೆ ಆಹ್ವಾನ.

ಗೆಳೆಯರೆ,

ಎಲ್ಲರಿಗೂ 2009, ಹೊಸ ವರ್ಷದ ಶುಭಾಶಯಗಳು.

ವಿಚಾರ ಮಂಟಪದ ವತಿಯಿಂದ ನಮ್ಮೆಲ್ಲರಿಗೂ ಸಂಬಂಧಿಸಿದ ಕನಿಷ್ಠ ಎರಡು ವಿಷಯಗಳ ಮೇಲೆ ಲೇಖನಗಳನ್ನು ಆಹ್ವಾನಿಸೋಣ ಎಂದು ಮನಸ್ಸಿಗೆ ಬಂದ ತಕ್ಷಣ ಈ ಆಹ್ವಾನ ಬರೆಯುತ್ತಿದ್ದೇನೆ. ಕನ್ನಡ ಬರೆಯಬಲ್ಲ ಯಾರು ಬೇಕಾದರೂ ಇದರಲ್ಲಿ ಪಾಲ್ಗೊಳ್ಳಬಹುದು. ಇಂಗ್ಲಿಷಿನಲ್ಲಿ ಬರೆದು ಕನ್ನಡಕ್ಕೆ ಭಾಷಾಂತರಿಸಿ ಬೇಕಾದರೂ ಸಲ್ಲಿಸಬಹುದು.

ದೇಶದ ಗ್ರಾಮೀಣ ಸ್ಥಿತಿ ಮತ್ತು ಕೃಷಿಯ ಬಗ್ಗೆ ಅನುಭವ ಅಥವ ಒಳನೋಟ ಇರುವ ಯಾರು ಬೇಕಾದರೂ ಯೋಚಿಸಿ ಬರೆಯಬಹುದಾದ "ಗ್ರಾಮೀಣ/ಕೃಷಿ/ರೈತ ಭಾರತದ ಸವಾಲುಗಳು ಮತ್ತು ಪರಿಹಾರಗಳು; ಸರ್ಕಾರಗಳು ಕೈಗೊಳ್ಳಬೇಕಾದ ನೀತಿಗಳು; ಗ್ರಾಮೀಣ ಭಾರತದ ಪ್ರಜಾಆಡಳಿತದ ಸವಾಲುಗಳು; ಜನರ ಪಾತ್ರ ಮತ್ತು ಅವರ ಮಿತಿಗಳು; ಗ್ರಾಮೀಣ ಉದ್ದಿಮೆಗಳು; ಇತ್ಯಾದಿ...", ಮೊದಲ ವಿಷಯ.

ಎರಡನೆಯದು : "ಭಾರತದ ಐಟಿ/ಬಿಪಿಒ ಉದ್ದಿಮೆ, ಅದರಿಂದಾದ/ಆಗುತ್ತಿರುವ ಒಳ್ಳೆಯ/ಕೆಟ್ಟ ಪರಿಣಾಮಗಳು; ನೌಕರರ ಮತ್ತು ಕಂಪನಿಗಳ ಸವಾಲುಗಳು, ಪರಿಹಾರಗಳು; ಮುಂದೆ ಸವೆಸಬೇಕಾದ ದಾರಿ; ಸರ್ಕಾರ ಮತ್ತು ಉದ್ಯಮ ತೆಗೆದುಕೊಳ್ಳಬಹುದಾದ ನಿರ್ಣಯಗಳು, ಇತ್ಯಾದಿ..."

ಪ್ರತಿ ವಿಷಯಕ್ಕೂ ಮೊದಲ ಬಹುಮಾನ ರೂ.2500
ಸಮಾಧಾನಕರ ಬಹುಮಾನಗಳು 5 - ತಲಾ ರೂ.1000
(ಒಂದು ವಿಷಯಕ್ಕೆ ಒಟ್ಟು ಬಹುಮಾನದ ಮೊತ್ತ ರೂ.7500)

ನಿಯಮಗಳು

* ಲೇಖನವನ್ನು ಸಬ್ಮಿಟ್ ಮಾಡಲು ಕೊನೆಯ ದಿನಾಂಕ ಜನವರಿ 25, 2009
* ಎಲ್ಲಾ ಲೇಖನಗಳ ಪೂರ್ಣಪಾಠವನ್ನು ಜನವರಿ 26, 2009 (ಭಾರತದ ಗಣರಾಜ್ಯೋತ್ಸವ) ರಂದು ವಿಚಾರಮಂಟಪ.ನೆಟ್‌ನಲ್ಲಿ ಪ್ರಕಟಿಸಲಾಗುತ್ತದೆ.
* ಫೆಬ್ರವರಿ 15, 2009ಕ್ಕೆ ಫಲಿತಾಂಶ ಪ್ರಕಟ.
* ಭಾರತದಲ್ಲಿರುವವರಿಗೆ ಬಹುಮಾನದ ಮೊತ್ತಕ್ಕೆ ಡಿ.ಡಿ. ಮಾಡಲಾಗುವುದು. ಬೇರೆ ಕಡೆ ಇರುವವರಿಗೆ ಡಾಲರ್ ಲೆಕ್ಕದಲ್ಲಿ ಚೆಕ್ ಕಳುಹಿಸಲಾಗುವುದು.
* ಇಂತಹವರು ಪಾಲ್ಗೊಳ್ಳಬಾರದೆಂಬ ನಿಬಂಧನೆಗಳೇನೂ ಇಲ್ಲ.
* ಲೇಖನ ಕನಿಷ್ಠ 1000 ಪದಗಳಿರಬೇಕು. ಗರಿಷ್ಠ ಮಿತಿ ಇಲ್ಲ. (ಪುಸ್ತಕಕ್ಕಾಗುವಷ್ಟು ಬರೆದರೂ ಸಮಸ್ಯೆಯಿಲ್ಲ).
* ಈ ಮುಂಚೆ ಬೇರೆಲ್ಲೂ ಪ್ರಕಟವಾಗಿರಬಾರದು.
* ಒಬ್ಬರು ಎರಡೂ ವಿಷಯಗಳ ಮೇಲೆ ಬರೆಯಬಹುದು.
* ಲೇಖಕರು ವಿಚಾರಮಂಟಪ.ನೆಟ್‌ಗೆ ಲಾಗಿನ್ ಆಗಿ ತಮ್ಮ ಲೇಖನವನ್ನು ಅಪ್‍ಲೋಡ್ ಮಾಡಬಹುದು. ಅಂದು ಅಪ್‍ಲೋಡ್ ಆದ ಲೇಖನದ ಮೊದಲ ಪ್ಯಾರಾವನ್ನು ಅಂದೇ ಪ್ರಕಟಿಸಲಾಗುತ್ತದೆ (ಪೂರ್ಣಪಾಠವಲ್ಲ). ಒಂದು ಸಲ ಅಪ್‌ಲೋಡ್ ಆದಮೇಲೆ ಕಾಗುಣಿತ ತಪ್ಪುಗಳನ್ನು ಹೊರತುಪಡಿಸಿ ಬೇರೆ ತರಹದ ತಿದ್ದುಪಡಿಗಳಿಗೆ ಅವಕಾಶವಿಲ್ಲ. ಹಾಗಾಗಿ ಪೂರ್ಣವಾಗಿ ಸಿದ್ದವಾದ ಲೇಖನವನ್ನೆ ಕಾಪಿ-ಪೇಸ್ಟ್ ಮಾಡಿ, ಒಂದೇ ಬಾರಿಗೆ ಅಪ್‌ಲೋಡ್ ಮಾಡಿ.

ಪ್ರೀತಿಯಲ್ಲಿ,
ರವಿ ಕೃಷ್ಣಾರೆಡ್ಡಿ, ಉತ್ತರ ಕ್ಯಾಲಿಫೋರ್ನಿಯ
ಜನವರಿ 1, 2009
ಇಮೇಲ್ : [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X