• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಲವು ಆಧುನಿಕ ಕನ್ನಡ ಭಗವದ್‌ಗೀತೆಗಳು

By ಸತೀಶ್ ಕುಮಾರ್, ಅರ್ಲಿಂಗ್ಟನ್
|

Dr. M. Prabhakarವಾಷಿಂಗ್ ಟನ್ ಡಿಸಿ ಪ್ರದೇಶದ ಕನ್ನಡ ಕುಟೀರ "ಭೂಮಿಕಾ" ಚಾವಡಿಯ ಫೆ. ತಿಂಗಳ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕ ಡಾ.ಪ್ರಭಾಕರ್ ಉಪನ್ಯಾಸವಿತ್ತು. ವಿಷಯ : ಕೆಲವು ಆಧುನಿಕ ಕನ್ನಡ ಭಗವದ್ಗೀತೆಗಳು. ಫೆಬ್ರುವರಿ ಹತ್ತರ ಮಧ್ಯಾಹ್ನ ಅವರು ವಿಷಯವನ್ನು ಕುರಿತು ಸವಿಸ್ತಾರವಾಗಿ ಮಾತನಾಡಿದರು.

ಮಾತಿನ ಮೊದಲು, "ಕೆಲವು" ಮತ್ತು "ಆಧುನಿಕ" ಎನ್ನುವ ಎರಡೆರಡು ವಿಶೇಷಣಗಳನ್ನು ಇಟ್ಟುಕೊಂಡು ಮಾತನಾಡುತ್ತಿರುವುದರ ಬಗ್ಗೆ ಮೊದಲೇ ಶ್ರೋತೃಗಳಿಗೆ ಸೂಚನೆ ಕೊಟ್ಟಿದ್ದರು. ಸನಾತನ ಧರ್ಮದಿಂದ ಹಿಡಿದು ಇಂದಿನ ಧಾರ್ಮಿಕ ಬೆಳವಣಿಗೆಗಳು, ಮುಸ್ಲಿಮ್, ಕ್ರಿಸ್ತ, ವೀರಶೈವ ಮೊದಲಾದ ಧರ್ಮಗಳನ್ನು ಆಧರಿಸಿಕೊಂಡು ಆರಂಭವಾದ ಪ್ರಭಾಕರ ಅವರ ಮಾತುಗಳು ಕ್ರಮೇಣ ಭಗವದ್‌ಗೀತೆಯ ತತ್ವಗಳ ಮೇಲೆ ಕೇಂದ್ರೀಕೃತವಾಯಿತು.

ಅವರು ತಮ್ಮ ಭಾಷಣದ ಮೂಲವಸ್ತುವಾಗಿ ಭಗವದ್‌ಗೀತೆಯನ್ನಿಟ್ಟುಕೊಂಡಿದ್ದರೂ, ತಾವು ಕಂಡುಕೊಂಡಂತೆ ಡಿ.ವಿ.ಗುಂಡಪ್ಪನವರ ಮಂಕುತಿಮ್ಮನ ಕಗ್ಗ, ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು, ಬಾಳ್ವೆಯೇ ಬೆಳಕು ಹಾಗೂ ನಾ.ಕಸ್ತೂರಿಯವರ ಚೆಂಗೂಲಿ ಚೆಲುವ ಕೃತಿಗಳನ್ನು ಕೇಳುಗರಿಗೆ ಪರಿಚಯಿಸಿಕೊಟ್ಟರು.

ಭಗವದ್‌ಗೀತೆಯ ಕಾರಣ ಕರ್ತೃಗಳಾದ ಕೃಷ್ಣ, ಅರ್ಜುನ, ವ್ಯಾಸ ಮೊದಲಾದವರೆಲ್ಲ ದೇವಾಂಶ ಸಂಭೂತರೇ, ಭಗವದ್‌ಗೀತೆಯನ್ನು ಒಂದು ದೇವವಾಕ್ಯದಂತೆ ನೋಡುವುದರ ಜೊತೆಗೆ ಒಂದು ಸಾಮಾನ್ಯ ಕೃತಿಯನ್ನಾಗಿಯೂ ನೋಡಬಹುದು. ಏಕೆಂದರೆ ಅದರಲ್ಲಿ ಹಲವಾರು ಪಾತ್ರಗಳು ಕರ್ತೃವಿನ ಕಲ್ಪನೆಯಲ್ಲಿ ಹುಟ್ಟಿ ಬಂದವಾಗಿರಬಹುದು. ಭಗವದ್‌ಗೀತೆಯಲ್ಲಿ ಹೇಳಿರುವ ಸಾರವನ್ನೇ ಬೇಕಾದಷ್ಟು ಕೃತಿಗಳಲ್ಲಿ ನಾವು ಕಾಣಬಹುದು, ಆ ನಿಟ್ಟಿನಲ್ಲಿ ನೋಡಿದರೆ ನನಗೆ ಅನ್ನಿಸಿದ ಹಾಗೆ ಈ ನಾಲ್ಕು ಕೃತಿಗಳು ಎಂದಿಗೂ ಚಿರಂತನವಾದವು ಎಂದು ಅಭಿಪ್ರಾಯಪಟ್ಟರು.

"ಕೆಲವು ಆಧುನಿಕ ಕನ್ನಡ ಭಗವದ್‌ಗೀತೆಗಳು..." ಎಂದು ಆರಂಭಗೊಂಡ ಮಾತು ನಮ್ಮ ಹಿರಿಯ ಬರಹಗಾರರನ್ನೆಲ್ಲ ಒಮ್ಮೆ ನಾವು ನೆನಪಿಸಿಕೊಳ್ಳುವಂತೆ ಮಾಡುವಲ್ಲಿ ಸಫಲವಾಗಿತ್ತು. ಪ್ರಭಾಕರ ಅವರು ಕಾಲದಿಂದ ಕಾಲಕ್ಕೆ ಈ ಕೃತಿಗಳನ್ನು ಮನನ ಮಾಡಿಕೊಂಡು ಹೆಚ್ಚು ಪದ್ಯ-ಗದ್ಯಗಳ ತುಣುಕನ್ನು ತಮ್ಮ ನೆನಪಿನಲ್ಲುಳಿಸಿಕೊಂಡಿರುವುದು ಎದ್ದು ಕಾಣುತ್ತಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more