ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ವಧಾರಿ ಸಂವತ್ಸರಕ್ಕೊಂದು ಪದ್ಯ,ಗದ್ಯ

By Staff
|
Google Oneindia Kannada News

ಪದ್ಯ: ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ,
ಗದ್ಯ: ಡಾ. ಲಕ್ಷ್ಮಿನಾರಾಯಣ, ಬೆಂಗಳೂರು.

ಚೈತ್ರದ ಚಿಗುರಿನ ಹಸುರಿನಲಿ
ಹೂವುಗಳ ಸುಗಂಧ ಸೌರಭದಲಿ
ದುಂಬಿಗಳ ದುಂದುಬಿ ನಾದದಲಿ
ಹಕ್ಕಿಗಳ ಚಿಲಿ-ಪಿಲಿ ಇಂಚರದಲಿ
ಪಚ್ಚೆಗರಿಗಳ ನಡುವಿನ ನವಿಲ ನರ್ತನದಲಿ
ಮುಗಿಲಿನ ಮಮಕಾರದ ಮುಗುಳ್ನಗೆಯಲಿ
ಮಾಮರದ ಕೋಗಿಲೆಯ ಕುಹು-ಕುಹು ಕೂಗಿನಲಿ
ಬಾಳೆಗಳ ಬಳುಕಿದ ಬಾಗಿನಲಿ
ತಾಳೆಗಳು ಪಸರಿಸಿದ ಕಂಪಿನಲಿ
ಬಂದಿದೆ ಬಂದಿದೆ ಹೊಸ ಯುಗಾದಿ.

ಬಂದಿದೆ ಬಂದಿದೆ ಹೊಸ ಯುಗಾದಿ
ತಂದಿದೆ ತಂದಿದೆ ಹೊಸ ವರುಷಕೆ ನಾಂದಿ
ಬರಲಿ ಬರಲಿ ಹೊಸ ಕಳೆಯ ಕಾಂತಿ
ತರಲಿ ತರಲಿ ಹೊಸ ವರುಷಕೆ ಶಾಂತಿ.

ಸಹೃದಯ ಕನ್ನಡ ಬಂಧು ಮಿತ್ರರಿಗೆಲ್ಲಾ "ಸರ್ವಧಾರಿ ಸಂವತ್ಸರ" ದ ಯುಗಾದಿಯ ಹಾರ್ಧಿಕ ಶುಭಾಶಯಗಳು.

About Hindu new year- yugadi ಭೂಮಿಯು ತನ್ನ ಸುತ್ತ ಬುಗುರಿಯ ರೀತಿಯಲ್ಲಿ ಸುತ್ತುವುದರಿಂದ ಹಗಲು, ರಾತ್ರಿಗಳು ಉಂಟಾಗುತ್ತವೆ. ಇದನ್ನು ಒಂದು ದಿನ ಎಂದು ಗುರುತಿಸಿದ್ದು, 24 ಗಂಟೆಗಳನ್ನಾಗಿ ವಿಭಾಗಿಸಲಾಗಿದೆ. ಭೂಮಿಯು ತನ್ನ ಸುತ್ತ ತಾನೇ ತಿರುಗುವುದರ ಜೊತೆಗೆ ತನ್ನ ಅಕ್ಷದಲ್ಲಿ ಸೂರ್ಯನ ಸುತ್ತ ಸುತ್ತುತ್ತದೆ. 365.25 ದಿನಗಳಿಗೆ ಒಮ್ಮೆ ಭೂಮಿಯು ಸೂರ್ಯನ ಸುತ್ತ ಒಂದು ಸುತ್ತು ಬರುತ್ತದೆ. ಇದು ವೈಜ್ಞಾನಿಕ ಸತ್ಯ. ಭೂಮಿಯು ಸೂರ್ಯನ ಸುತ್ತ ಒಂದು ಸುತ್ತು ಬರಲು ತೆಗೆದುಕೊಳ್ಳುವ ಅವಧಿಯನ್ನು ಒಂದು ವರ್ಷ ಎಂದು ಕರೆಯಲಾಗಿದೆ.

ಈ ಅವಧಿಯಲ್ಲಿ ಭೂಮಿಯ ಮೇಲೆ ಕಾಲಕಾಲಕ್ಕೆ ನಿರ್ಧಿಷ್ಟವಾದ ನೈಸರ್ಗಿಕ ಕ್ರಿಯೆಗಳು ಜರುಗುತ್ತವೆ. ಈ ಕ್ರಿಯೆಗಳ ಗುಣಲಕ್ಷಣಗಳಿಗನುಸಾರವಾಗಿ ಒಂದು ವರ್ಷವನ್ನು ತಲಾ 2ತಿಂಗಳುಗಳ 6 ಋತುಗಳನ್ನಾಗಿ ವಿಂಗಡಿಸಲಾಗಿದೆ. ವಸಂತಋತು, ಶರದೃತು, ಹೇಮಂತಋತು, ಗ್ರೀಷ್ಮಋತು. ಆಯಾ ಕಾಲದ ಪ್ರಕೃತಿಯಲ್ಲಿ ತೋರಿಬರುವ ಲಕ್ಷಣಗಳಿಗನುಸಾರವಾಗಿ ಆಯಾ ಋತುಗಳನ್ನು ಹೆಸರಿಸಲಾಗಿದೆ. ಋತುಚಕ್ರದ ಬದಲಾವಣೆ ವರ್ಷ ಪೂರ್ತಿಯಾದ ಮೇಲೆ ಮುಂದಿನ ವರ್ಷ ಅದೇ ಕ್ರಮದಲ್ಲಿ ಅದೇ ಋತುಚಕ್ರ ಮುಂದುವರಿಯುತ್ತದೆ.

ಈ ರೀತಿ ಋತುಚಕ್ರಗಳು ಜರುಗುವ ಒಂದು ವರ್ಷದ ಅವಧಿಯನ್ನು "ಒಂದು ಯುಗ" ಎಂದು ಕರೆಯಲಾಗುತ್ತದೆ. ಈ ರೀತಿ "ವರ್ಷ" ಅಥವಾ "ಯುಗ" ದ ಮೊದಲನೆಯ ದಿನವೇ "ಚೈತ್ರ ಶುದ್ಧ ಪಾಡ್ಯ". ಯುಗದ ಮೊದಲನೆಯ ದಿನವಾದುದರಿಂದ ಇದನ್ನು "ಯುಗಾದಿ" ಎಂದು ಕರೆಯಲಾಗುತ್ತದೆ.

"ಯುಗಾದಿ" ಒಂದು ವೈಜ್ಞಾನಿಕ ಸತ್ಯ ಮತ್ತು ಅದು ವರ್ಷದ ಮೊದಲ ದಿನ. ಬ್ರಹ್ಮನು ವಿಶ್ವವನ್ನು ಸೃಷ್ಟಿಸಿ "ಚೈತ್ರ ಶುದ್ಧ ಪಾಡ್ಯಮಿ" ಯ ಸೂರ್ಯೋದಯದಿಂದ ಸಮಯವನ್ನು ಗಣಿಸಲು ಪ್ರಾರಂಭಿಸಿದನಂತೆ. ತಿಥಿಗಳಲ್ಲಿ ಅತ್ಯಂತ ಶ್ರೇಷ್ಠ ಎಂದು ಕರೆದಿದ್ದರಿಂದ ಇದಕ್ಕೆ "ಪ್ರತಿಪದೆ" ಎಂಬ ಹೆಸರೂ ಇದೆ. ಹೀಗಾಗಿ ಇದು ವೈಜ್ಞಾನಿಕವಾಗಿ ಮತ್ತು ಧಾರ್ಮಿಕವಾಗಿ ಪರಮಪವಿತ್ರ ದಿನವಾಗಿದೆ. ಪರಮಪವಿತ್ರ ಎಂದು ಭಾವಿಸಲಾಗಿರುವ ಈ ಯುಗಾದಿಯನ್ನು ಬಡವ ಬಲ್ಲಿದ ಭೇದವಿಲ್ಲದೆ ಎಲ್ಲರೂ ಸಂಭ್ರಮೋಲ್ಲಾಸಗಳಿಂದ ಆಚರಿಸುತ್ತಾರೆ.

ಆದಿನ ಅಭ್ಯಂಜನ ಸ್ನಾನ ಮಾಡುವುದು, ಯುಗಪುರುಷನ ಪೂಜೆ ಮಾಡುವುದು, ನೆಂಟರಿಷ್ಟರೊಂದಿಗೆ ಬೇವು ಬೆಲ್ಲ ಸವಿಯುವುದು, ಹೊಸ ಉಡಿಗೆ ತೊಡಿಗೆಗಳನ್ನು ತೊಡುವುದು, ವರ್ಷದಲ್ಲಿ ಜರುಗಬಹುದಾದ ಪ್ರತಿಕ್ರಿಯೆಗಳ ಮುನ್ನೋಟವಾಗಿ "ಪಂಚಾಂಗ ಶ್ರವಣ", ಹಬ್ಬದೂಟ ಮುಂತಾದ ಸಂಭ್ರಮಗಳು ಈ ದಿನ ಪ್ರತಿ ಕುಟುಂಬದಲ್ಲಿಯೂ ಜರುಗುತ್ತವೆ. ವರ್ಷವಿಡೀ ಹಿಂದೂ ಸಂಸ್ಕೃತಿಯಲ್ಲಿ ಯಾವುದಾದರೊಂದು ಹಬ್ಬ ಆಚರಿಸುತ್ತಲೇ ಇರುತ್ತಾರೆ. ಅಂತಹ ಹಬ್ಬಗಳ ಸಾಲಿನ ಸರಮಾಲೆಯ ಮೊದಲನೆಯ ಹಬ್ಬವೇ "ಯುಗಾದಿ".

ವರ್ಷದುದ್ದಕ್ಕೂ ಬರುವ ಕಷ್ಟ-ಸುಖಗಳನ್ನು ಸಮಾನಭಾವದಿಂದ ಸ್ವೀಕರಿಸುವ ಮನೋಭಾವದ ಸಂಕೇತವಾಗಿ ಈ ದಿನ ಬೇವು ಬೆಲ್ಲ ಸ್ವೀಕರಿಸಲಾಗುತ್ತದೆ. ಈ ಎರಡೂ ವಸ್ತುಗಳಲ್ಲಿರುವ ಔಷಧೀಯ ಗುಣಗಳಿಂದ ದೇಹದ ಆರೋಗ್ಯ ಸಂರಕ್ಷಣೆಯ ವೈಜ್ಞಾನಿಕ ಹಿನ್ನೆಲೆಯನ್ನೂ ಸಹ ನಾವಿಲ್ಲಿ ನೋಡಬಹುದು.

60 ವರ್ಷಗಳ ಆವರ್ತಗಳನ್ನು ಭಾರತೀಯರು ಬಹಳ ಹಿಂದಿನಿಂದಲೂ ಗುರುತಿಸಿಕೊಂಡು ಬಂದಿದ್ದಾರೆ. ಪ್ರಭವ, ವಿಭವ, ಪ್ರಮೋಧೂತ, ಪ್ರಜೋತ್ಪತ್ತಿ ಮುಂತಾಗಿ ಒಂದೊಂದಕ್ಕೆ ಒಂದೊಂದರಂತೆ ಒಟ್ಟು 60 ಹೆಸರುಗಳನ್ನು ನೀಡಿದ್ದಾರೆ. 60 ವರ್ಷಗಳ ಒಂದು ಆವರ್ತ ಮುಗಿದನಂತರ ಮತ್ತೊಂದು ಆವರ್ತ ಪ್ರಾರಂಭವಾಗುತ್ತದೆ. ಬರುವ ಏಪ್ರಲ್-6-ರಂದು ಮುಕ್ತಾಯವಾಗಲಿರುವ ಈ ಸಂವತ್ಸರದ ಹೆಸರು "ಸರ್ವಜಿತು". ಏಪ್ರಲ್-7-ರಂದು "ಸರ್ವಧಾರಿ" ಸಂವತ್ಸರ ಪ್ರಾರಂಭವಾಗಲಿದ್ದು, ಅಂದು ಆ ಸಂವತ್ಸರದ ಅರ್ಥಾತ್ "ಸರ್ವಧಾರಿ" ಸಂವತ್ಸರದ ಯುಗಾದಿ ಹಬ್ಬ ಆಚರಣೆ ಆಗಲಿದೆ. 60 ವರ್ಷಗಳ ಆವರ್ತದಲ್ಲಿ "ಸರ್ವಜಿತು" ಮತ್ತು "ಸರ್ವಧಾರಿ" ಸಂವತ್ಸರಗಳು ಕ್ರಮವಾಗಿ 21 ಮತ್ತು 22 ನೆಯ ಸಂವತ್ಸರಗಳಾಗಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X