ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ನಿನಲ್ಲಿ ಕನ್ನಡ ಡಿಂಡಿಮ : ಹಬ್ಬಕ್ಕೆ ಸಜ್ಜಾದ ಯುಕೆ

By Staff
|
Google Oneindia Kannada News


ಲಂಡನ್, ಅ.27 : ಯುನೈಟೆಡ್ ಕಿಂಗ್ ಡಂನ ಕನ್ನಡಿಗರು ಈ ಬಾರಿ ವಿಜೃಂಭಣೆಯ ಕನ್ನಡ ರಾಜ್ಯೋತ್ಯವ ಆಚರಿಸಲು ಸಜ್ಜಾಗಿದ್ದಾರೆ. ನವೆಂಬರ್ 3ರಂದು ಕನ್ನಡ ಬಳಗ ವತಿಯಿಂದ 'ಸುವರ್ಣ ಕರ್ನಾಟಕ : ಕನ್ನಡ ರಾಜ್ಯೊತ್ಸವ' ಜೋಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

2005ರಿಂದ 'ಕನ್ನಡಿಗರು ಯುಕೆ' ರಾಜ್ಯೋತ್ಸವ ಮತ್ತು ಯುಗಾದಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದೆ. ಅಂಗ್ಲನಾಡಿನಲ್ಲಿ ಕನ್ನಡ ಜಾಗೃತಿಯನ್ನು ಮೂಡಿಸಲು ಈ ದಿಸೆಯಲ್ಲಿ ಪ್ರಯತ್ನಗಳನ್ನು ನಡೆಸಿದೆಯೆಂದರೆ ತಪ್ಪಾಗಲಾರದು.

ಈ ವರ್ಷದ ರಾಜ್ಯೊತ್ಸವ ಹಬ್ಬ ಸ್ವಲ್ಪ ಹೆಚ್ಚಿನ ವಿಶೇಷ. ಸುವರ್ಣ ಕರ್ನಾಟಕದ ರಾಜ್ಯೊತ್ಸವ ಕಾರ್ಯಕ್ರಮಕ್ಕೆ ಮೆರಗು ಕಟ್ಟಲು ನಮ್ಮ ಕರುನಾಡಿನ ಅಂಧ ಮಕ್ಕಳ ಕನಸನ್ನು ಸಾಕಾರಗೊಳಿಸಲು ಪರಿಶ್ರಮಿಸುತ್ತಿರುವ "ಸಮರ್ಥನ ಫೌಂಡೇಶನ್" ಕಲಾವಿದರಿಂದ ವಾದ್ಯಗೋಷ್ಠಿಯನ್ನು ಆಯೋಜಿಸಲಾಗಿದೆ.

ಜೊತೆಗೆ, ಈಗಾಗಲೇ ಅಂಗ್ಲನಾಡಿನಲ್ಲಿ ಹೆಸರಾಗಿರುವ ಗಾಯಕರಾದ ವಿಜೇಂದ್ರ ದಂಪತಿಗಳು ಮತ್ತೆ ಹೊಸ ಹಾಡುಗಳೊಂದಿಗೆ ಸಭಿಕರನ್ನು ರಂಜಿಸಲಿದ್ದಾರೆ. ಇದಲ್ಲದೆ ಇನ್ನು ಅನೇಕ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ರಾಜ್ಯೊತ್ಸವದ ಮೆರುಗನ್ನು ಹೆಚ್ಚಿಸಲಿದೆ.

ನಿಮ್ಮೆಲ್ಲರಿಗೂ ಈ ಕಾರ್ಯಕ್ರಮಕ್ಕೆ ಆದರದ ಸುಸ್ವಾಗತ. ನಿಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಕರೆತರಲು ಮರೆಯದಿರಿ. ಸ್ಥಳ ಮತ್ತು ಸಮಯ ನೊಂದಣಿ ವಿವರಗಳಿಗಾಗಿ ವೆಬ್ ಸೈಟ್ ನೋಡಿ : http://www.kannadigaruuk.com/

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X