ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಲ್ಲಿ ಕೊಳಗೇರಿಗಳ ಕಷ್ಟಕ್ಕೆ ಮಿಡಿದ ಯುಬಾ ಪಂಜಾಬಿಗಳು

By Staff
|
Google Oneindia Kannada News


ಯೂಬಾ ಸಿಟಿ, ಡಿ. 20 : ಕ್ಯಾಲಿಫೋರ್ನಿಯಾದ ಯುಬಾ ನಗರದಲ್ಲಿರುವ ಪಂಜಾಬಿ ಸಮುದಾಯ, ದೆಹಲಿಯ ಕೊಳಗೇರಿ ನಿವಾಸಿಗಳ ಕ್ಷೇಮಾಭ್ಯುದಯಕ್ಕಾಗಿ ಈ ವಾರ 68.000ಡಾಲರುಗಳ ನಿಧಿ ಸಂಗ್ರಹಣೆ ಮಾಡಿದೆ.

ಉತ್ತರ ಕ್ಯಾಲಿಫೋರ್ನಿಯಾದಲ್ಲಿರುವ ಯುಬಾ ಸಿಟಿಯನ್ನು ಅಮೆರಿಕಾದ ಪ್ರಥಮ ಪಂಜಾಬಿ ಹಳ್ಳಿ ಎಂದು ಕರೆಯಲಾಗುತ್ತದೆ. ನೂರು ವರ್ಷಗಳ ಹಿಂದೆ ಇಲ್ಲಿಗೆ ವಲಸೆಬಂದ ನೂರಾರು ಪಂಜಾಬಿ ಕುಟುಂಬಗಳು ಈ ಊರಲ್ಲೆ ವಾಸ ಮಾಡುತ್ತಿವೆ.

ಇಲ್ಲಿನ ಪಂಜಾಬಿ ಬಂಧುಗಳೆಲ್ಲ ಕಲೆತು ದೆಹಲಿಯಲ್ಲಿ ಕೊಳಗೇರಿ ನಿವಾಸಿಗಳ ಅಭ್ಯುದಯಕ್ಕಾಗಿ ಕೆಲಸಮಾಡುತ್ತಿರುವ "ಆಶಾ" ಸ್ವಯಂಸೇವಾ ಸಂಸ್ಥೆಗೆ ನಿಧಿಸಂಗ್ರಹಿಸಿದ್ದಾರೆ. ಹಣ ಸಂಗ್ರಹಣೆ ನಿಮಿತ್ತ ಈಚೆಗೆ ಯೂಬಾ ನಗರದಲ್ಲಿ ಒಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆಶಾ ಸಂಸ್ಥೆಯ ಕಾರ್ಯಯೋಜನೆಗಳನ್ನು ತಿಳಿಯಪಡಿಸುವ ಪ್ರಾತ್ಯಕ್ಷಿಕೆಯನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ಆಶಾ ಸಂಸ್ಥೆಯ ಕಿರಣ್ ಮಾರ್ಟಿನ್
ಕೊಳಗೇರಿ ನಿವಾಸಿಗಳ ಸ್ಥಿತಿಗತಿ ಮತ್ತು ಅವರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಆಶಾ ಹಮ್ಮಿಕೊಂಡಿರುವ ನಾನಾ ಕಾರ್ಯಕ್ರಮಗಳ ವಿವರ ನೀಡಿದರು.

ಈ ಕಾರ್ಯಕ್ರಮದಲ್ಲಿ ಸ್ಥಳೀಯ ರಾಜಕಾರಣಿ, ಕಾಂಗ್ರೆಸ್ಸಿಗ ವಾಲಿ ಹರ್ಗರ್ , ಮೇಯರ್ ರೋಮಿರೆಜ್, ಕೌನ್ಸಿಲರ್ ಕಶ್ಮೀರ್ ಸಿಂಗ್ ಗಿಲ್ ತೇಜಿಂದರ್ ಸಿಂಗ್ ಮಾನ್ ಮುಂತಾದವರು ಹಾಜರಿದ್ದರು. ಕಿರಣ್ ಮಾರ್ಟಿನ್ ಅವರು ಪ್ರತ್ಯಕ್ಷಿಕೆಯನ್ನು ಕಂಡ ಯೂಬಾದ ಪಂಜಾಬಿ ಕರಳುಗಳು ಭಾರತಕ್ಕಾಗಿ ಮಿಡಿದವು. ಕೈಗಳು ಜೇಬುಗಳಿಗಿಳಿದು ಕ್ಷಣಾರ್ಧದಲ್ಲಿ 50.000ಡಾಲರು ಹಣ ಕೂಡಿಬಂದವು. ಸಭೆ ಮುಕ್ತಾಯವಾಗುವ ವೇಳೆಗೆ ನಿಧಿ ಸಂಗ್ರಹ 68.000ಡಾಲರುಗಳಿಗೆ ಏರಿತು.

ಆಶಾ ಸಂಸ್ಥೆಯ ಜನೋಪಯೋಗಿ ಕಾರ್ಯಕ್ರಮಗಳ ಲಾಭವನ್ನು ದೆಹಲಿಯ 3ಲಕ್ಷ ಕೊಳಗೇರಿ ನಿವಾಸಿಗಳು ಪಡೆದಿದ್ದಾರೆ. ಸಂಸ್ಥೆಯ ಸೇವಾಯೋಜನೆಗಳನ್ನು ಗುರುತಿಸಿ ಕೇಂದ್ರ ಸರಕಾರ ಪದ್ಮ ಶ್ರೀ ಪುರಸ್ಕಾರ ನೀಡಿದೆ.

(ಆಧಾರ : ಅರ್ಥ್ ಟೈಮ್ಸ್ )

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X