• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಲ್ಟಿಮೋರ್ ಅನುಭವಗಳನ್ನು ದಾಖಲಿಸಲು ಕಾವೇರಿ ಕರೆ

By Staff
|

Were you there at AKKA Conference, Baltimore-2006?ಸ್ನೇಹಿತರೆ,

ಅಮೆರಿಕದ ವಾಷಿಂಗ್ಟನ್ ಡಿ. ಸಿ.ಯಲ್ಲಿನ ಕಾವೇರಿ ಕನ್ನಡ ಸಂಘದ ಆಶ್ರಯದಲ್ಲಿ ನಡೆದ 4ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನವು ಮುಗಿದು ಒಂದು ವರ್ಷ ಕಳೆದಿದೆ. ಆದರೂ ಸಮ್ಮೇಳನದ ಸವಿನೆನಪುಗಳನ್ನು ಮೆಲುಕುಹಾಕುವ ಕನ್ನಡಿಗರು ಇನ್ನೂ ಇದ್ದಾರೆ ಎಂದೇ ನಮ್ಮ ಭಾವನೆ. ಆ ಮಧುರ ಕ್ಷಣಗಳನ್ನು ಮತ್ತೊಮ್ಮೆ ನೆನಪಿಸಲು ಸಮ್ಮೇಳನದ ಛಾಯಾಚಿತ್ರಗಳ ತಾಣಕ್ಕೆ ಭೇಟಿ ಕೊಡಿ : http://www.AkkaOnline.org/2006

ಕಾವೇರಿ ಕನ್ನಡ ಸಂಘವು 2007ನೇ ಸಾಲಿನ ವಾರ್ಷಿಕ ಸಂಚಿಕೆ "ಭಾವನದಿ"ಗಾಗಿ ಸಮ್ಮೇಳನದಲ್ಲಿ ಭಾಗವಹಿಸಿದ ಎಲ್ಲರಿಂದ ಬರಹಗಳನ್ನು ಆಹ್ವಾನಿಸಲಾಗಿದೆ. ನಿಮ್ಮ ಉತ್ತಮ ಬರಹಗಳನ್ನು, ಸವಿನೆನಪುಗಳ ಲೇಖನಗಳನ್ನು ಈ ಸಾಲಿನ ಭಾವನದಿಯಲ್ಲಿ ಪ್ರಕಟಿಸಲಾಗುವುದು. ಸಮ್ಮೇಳನದಲ್ಲಿ ನಿಮ್ಮ ಮನಸ್ಸಿಗೆ ತಟ್ಟಿದ ಅನುಭವಗಳಿದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ. ಕನ್ನಡಿಗರ ಈ ಮೇಳದಲ್ಲಿ ನಿಮಗಾದ ವಿಶೇಷ ಅನುಭವಗಳು ಮರೆತು ಹೋಗುವ ಮುನ್ನವೇ ಅದನ್ನು ದಾಖಲಿಸಲು ನಿಮಗೊಂದು ಸುವರ್ಣ ಅವಕಾಶ.

1. ಬರಹಗಳು ಕನ್ನಡದಲ್ಲಿರಬೇಕು, ಕನ್ನಡ ತಂತ್ರಲಿಪಿ 'ಬರಹ"ದಲ್ಲಿರಬೇಕು.

2. ಒಂದು ಪುಟವನ್ನು ಮೀರಬಾರದು.

3. ಅನಿಸಿಕೆಗಳು ವಸ್ತುನಿಷ್ಠವಾಗಿರಲಿ.

4. ವ್ಯಕ್ತಿ ನಿಂದನೆ, ಅತಿಯಾದ ಹೊಗಳುವಿಕೆಗೆ ಮಿತಿ ಇರಲಿ.

5. ಸಮ್ಮೇಳನದ ಕುತೂಹಲಕರ, ಸವಿಯಾದ ಸಾದೃಶ ಅನುಭವಗಳನ್ನು ವಿವರಿಸಿ.

6. ನಿಮ್ಮ ಬರಹಗಳು ವಿಶ್ವಕನ್ನಡ ಸಮ್ಮೇಳನಗಳನ್ನು ಹೇಗೆ ನಡೆಸಿದರೆ ಉತ್ತಮ ಎನ್ನುವುದರ ಬಗ್ಗೆ ಮಾತ್ರವೇ ಆಗಿರದೇ ಇತರ ಆಯಾಮಗಳನ್ನೊಳಗೊಂಡಿರಲಿ.

ಲೇಖನಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ : ಅಕ್ಟೋಬರ್ 31, 2007.

ಬರಹಗಳನ್ನು ಕಳುಹಿಸಬೇಕಾದ ವಿಳಾಸ : bhavanadi@gmail.com

ಲೇಖನದ ಜೊತೆಗೆ ನಿಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಬರೆಯಲು ಮರೆಯದಿರಿ. ದಯವಿಟ್ಟು ಗಮನಿಸಿ: ಕಾವೇರಿ ಭಾವನದಿ ಸಂಪಾದಕ ಮಂಡಳಿಯ ತೀರ್ಮಾನವೇ ಅಂತಿಮ.

ಕಾವೇರಿ ಕನ್ನಡ ಸಂಘದ ಮಾಹಿತಿ ತಾಣ: http://www.KaveriOnline.org

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more