ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದಿನ ಕನ್ನಡ ಬರಹಗಾರರು : ಕಾಗಿನೆಲೆ ವಿಚಾರ ಲಹರಿ

By Staff
|
Google Oneindia Kannada News


"ತೆರೆದ ಮನೆ- ತೆರೆದ ಭೂಮಿಕೆ " : ಕನ್ನಡ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದಂತೆ ತಜ್ಞರ ಉಪನ್ಯಾಸಗಳನ್ನು ತಿಂಗಳಿಗೊಮ್ಮೆ ಏರ್ಪಡಿಸುವ ಸಂಸ್ಥೆ ಭೂಮಿಕಾ. ವಾಷಿಂಗ್ ಟನ್ ಡಿಸಿ ಪ್ರದೇಶದ ಮೇರಿಲ್ಯಾಂಡ್ ರಾಜ್ಯದಲ್ಲಿ ನೆಲೆಗೊಂಡಿದೆ. ಸುವಿಖ್ಯಾತ ಕಾವೇರಿ ಕನ್ನಡ ಸಂಘದ ತೀರದಲ್ಲಿರುವ ಈ ಕನ್ನಡ ಕುಟೀರಕ್ಕೆ 13ವರ್ಷ ತುಂಬಿಬರುತ್ತಿರುವ ಸಮಯವಿದು. ಅಂತೆಯೇ, ಇದೇ ಭಾನುವಾರ, ಡಿಸೆಂಬರ್ 9ರಂದು ಮಧ್ಯಾನ್ಹ 1.45 ಗಂಟೆಗೆ ಸರಿಯಾಗಿ 2007ನೇ ಸಾಲಿನ ಕಟ್ಟಕಡೆಯ ಕಾರ್ಯಕ್ರಮ ವ್ಯವಸ್ಥೆಯಾಗಿದೆ. ಯಾವ ಕಾರಣಕ್ಕೂ ಮಿಸ್ ಮಾಡಿಕೊಳ್ಳದೆ ನೀವು ಈ ಬಾರಿ ಬಾವರ್ ಕಮ್ಯುನಿಟಿ ಸೆಂಟರ್ ಸಭಾಂಗಣಕ್ಕೆ ಕಾರು ಬೆಳೆಸಲೇಬೇಕು!

ಕಾರ್ಯಕ್ರಮ ಸೂಚಿ :

*1.45ಕ್ಕೆ ಸ್ವಾಗತ, ಪರಿಚಯ
*ಮುಕ್ತ ವೇದಿಕೆ : ನಿಮ್ಮ ಅನಿಸಿಕೆ , ಸಲಹೆ, ಪ್ರಶ್ನೋತ್ತರ
*ವಿಶೇಷ ಉಪನ್ಯಾಸ : ಡಾ.ಗುರುಪ್ರಸಾದ್ ಕಾಗಿನೆಲೆ, ರಾಚೆಸ್ಟರ್, ಮಿನಿಸೋಟ.
ವಿಷಯ : 'ಇಂದಿನ ಕನ್ನಡ ಬರಹಗಾರರು"
*ಮುಕ್ತ ಚರ್ಚೆ
*4.30ಕ್ಕೆ ಉಭಯಕುಶಲೋಪರಿ, ಲಘು ಉಪಹಾರ
*ಸ್ಥಳ : ಬಾವರ್ ಕಮ್ಯುನಿಟಿ ಸೆಂಟರ್,14625 ಬಾವರ್ ಡ್ರೈವ್, ರಾಕ್ ವಿಲ್, ಎಮ್. ಡಿ. 20853

****

"ನನ್ನ ಉಪನ್ಯಾಸದ ತಳಹದಿ" : ಗುರುಪ್ರಸಾದ್ ಕಾಗಿನೆಲೆ

ಇಂದಿನ ಕನ್ನಡ ಬರಹಗಾರರು : ಕಾಗಿನೆಲೆ ವಿಚಾರ ಲಹರಿಕನ್ನಡ ಸಾಹಿತ್ಯದಲ್ಲಿ ತುಂಬ ಕ್ರಿಯಾಶೀಲವಾಗಿರುವ ಒಂದು ಕ್ಷೇತ್ರವೆಂದರೆ ಸಣ್ಣಕಥೆಗಳದ್ದು. ಹಲವಾರು ಬಗೆಯ ಪ್ರಯೋಗಗಳನ್ನು ಈ ಕಥಾಪ್ರಕಾರ ಈಗಾಗಲೇ ಕಂಡಿವೆ. ಹಲವು ಹತ್ತು ಬಗೆಯ ಕಥೆಗಾರರು ಈ ಕ್ಷೇತ್ರದಲ್ಲೀಗ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಬೇರೆ ಬೇರೆ ಕ್ಷೇತ್ರದಲ್ಲಿ ಪೂರ್‍ಣ ಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡ ಹಲವಾರು ಮಂದಿ ಬರಹಗಾರರು, ಈ ಕ್ಷೇತ್ರದಲ್ಲಿಯೂ ಕ್ರಿಯಾಶೀಲವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೊಸ ವಸ್ತುಗಳೂ ಹೊಸ ಕಥನಕ್ರಮಗಳೂ ಈ ಕ್ಷೇತ್ರದಲ್ಲೀಗ ಗಣನೀಯವಾಗಿ ಕಾಣತೊಡಗಿದ್ದಾವೆ.

ವೃತ್ತಿಯಿಂದ ವೈದ್ಯನಾದ ನಾನು ನನ್ನ ಕಾರ್ಯಾಕ್ಷೇತ್ರದ ಅನುಭವಗಳನ್ನು ರೂಪಕಗಳಾನ್ನಾಗಿಟ್ಟುಕೊಂಡು ಕೆಲವಾದರೂ ಕತೆಗಳನ್ನು ಬರೆದಿದ್ದೇನೆ. ಒಂದು ಕಾದಂಬರಿಯನ್ನು ಬರೆದಿದ್ದೇನೆ. ಅಮೆರಿಕಾದಲ್ಲಿದ್ದುಗೊಂಡು ಬರೆಯುವ ನಮ್ಮಂತವರಿಗಿರುವ ಇನ್ನೊಂದು ಹಣೆಪಟ್ಟಿ ಹೊರನಾಡ ಬರಹಗಾರರು. ಸಾಹಿತ್ಯದ ಅಕೆಡೆಮಿಕ್ ವಿವರಣೆಗಳಿಗೆ ಸಿಗದ ಹಲವು ಸಂವೇದನೆಗಳು ಇಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ನನ್ನ ಅನಿಸಿಕೆ.

ವೈದ್ಯವೃತ್ತಿ ಮತ್ತು ಸಾಹಿತ್ಯ ನನ್ನ ಮಟ್ಟಿಗೆ ಮೂರು ನೆಲೆಯಲ್ಲಿ ಕೆಲಸ ಮಾಡುತ್ತವೆ

1.ತಜ್ಞರು ಸಂಶೋಧನಾತ್ಮಕ ಲೇಖನಗಳನ್ನು ತನ್ನಂತ ವೈದ್ಯರೇ ಓದುವ ಇತರೇ ಜರ್ನಲುಗಲ್ಲಿ ಬರೆಯುವ ಬರಹಗಳು- Peer reviewd literature. ಇದಕ್ಕೆ ಓದುಗರೂ ವೈದ್ಯರೇ ಅಥವಾ ಈ ಕ್ಷೇತ್ರದಲ್ಲಿ ಪರಿಣಿತರೇ.

2.ವೈದ್ಯರುಗಳು ಜನಸಾಮಾನ್ಯರಿಗೆ ಅರ್ಥವಾಗುವಂತೆ ದೇಶಭಾಶೆಯಲ್ಲಿ ಬರೆಯುವ, ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟವಾಗುವಂತ ಬರಹಗಳು. ಜನಸಾಮಾನ್ಯರಿಗೆ ತಮ್ಮ ಪರಿಣಿತ ಕ್ಷೇತ್ರದ ಬಗ್ಗೆ ಅರಿವು ಮೂಡಿಸುವುದು ಈ ರೀತಿಯ ಬರಹಗಳ ಉದ್ದೇಶ.

3.ವೈದ್ಯರುಗಳು ಸೃಜನಶೀಲ ಸಾಹಿತ್ಯಪ್ರಕಾರಗಳಾದ ಕತೆ, ಕಾದಂಬರಿ, ಕಾವ್ಯ ಇಂತಹ ಇತರೇ ಪ್ರಕಾರಗಳಲ್ಲಿ ತಮ್ಮನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುವುದು. ಇದು ಕೇವಲ ಆಸಕ್ತಿಯಿಂದ ಹುಡುಕಿಕೊಂಡ ಜಗತ್ತು.

ವೃತ್ತಿ, ಖಂಡಾಂತರ, ಈ ಕಾಲದ ತಲ್ಲಣಗಳಾದ ಜಾಗತೀಕರಣ, ನಗರೀಕರಣ ಇಂತಹ ಅಂಶಗಳು ಈ ಕಾಲದ ಕನ್ನಡ ಬರವಣಿಗೆಯನ್ನು ಹೇಗೆ ಪ್ರಭಾವಿಸಿವೆ ಎನ್ನುವುದನ್ನು ಈ ಮೇಲಿನ ಪ್ರಕಾರಗಳ ಮೂಲಕ ನೋಡುವ ಹಂಬಲ. ಇದೇ ನಿಟ್ಟಿನಲ್ಲಿ ಅಮೆರಿಕಾದಲ್ಲಿ ಅತಿ ಕ್ರಿಯಾಶೀಲವಾಗಿ ಕನ್ನಡಪರ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುತ್ತಿರುವ ಭೂಮಿಕಾದಲ್ಲಿ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X