ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಲೋಚನಾ ಪ್ರಯೋಗಗಳಿಂದ ಪ್ರಯೋಜನವಿದೆಯಾ?

By ರಾಜಾರಾಮ್ ಕಾವಳೆ, ಸೌದಿ ಅರೇಬಿಯಾ
|
Google Oneindia Kannada News

Thought experiments by Rajaram Kavale
ಆಲೋಚನಾ ಪ್ರಯೋಗಗಳಿಂದ ಮಾನವಕುಲಕ್ಕೆ ಏನಾದರು ಉಪಯೋಗವಿದೆಯೆ? ಎಂಬ ಪ್ರಶ್ನೆ ಬರುವುದು ಸಹಜ. ಇದರಿಂದ ಮಾನವರಿಗೆ ಉಪಯೋಗವಿದೆ (ಅಲ್ಲದೆ ಹಾನಿಯೂ ಉಂಟು) ಎಂಬ ಮಾತಿಗೆ ಐನ್‌ ಸ್ಟೈನಿನ ಆಲೋಚನಾ ಪ್ರಯೋಗಗಳೇ ಸಾಕ್ಷಿ.

ಉದಾಹರಣೆಗೆ ಐನ್‌ಸ್ಟೈನಿನ ಕನ್ನಡಿ ಪ್ರಯೋಗವನ್ನು ತೆಗೆದುಕೊಳ್ಳಿ. ಒಂದು ಮುಖಕನ್ನಡಿಯನ್ನು ಹಿಡಿದು ಬೆಳಕಿನ ಕಿರಣದ ವೇಗದಲ್ಲಿ ಅಥವಾ ಅದಕ್ಕಿಂತಲೂ ಸ್ವಲ್ಪ ಅತಿ ವೇಗವಾಗಿ ನಾವೇನಾದರು ಪ್ರಯಾಣಿಸಿದರೆ, ಆ ಕನ್ನಡಿಯಲ್ಲಿ ನಮಗೆ ನಮ್ಮ ಮುಖ ಕಾಣಿಸುವುದೇ? ಇದು ಐನ್‌ ಸ್ಟೈನಿಗೆ ಬಾಲ್ಯದಿಂದ ಕಾಡಿಸುತ್ತಿದ್ದ ಪ್ರಶ್ನೆ.

ಸಾಧಾರಣವಾದ ತರ್ಕದ ಪ್ರಕಾರ, ಬೆಳಕಿನ ವೇಗದಲ್ಲಿ ಚಲಿಸುತ್ತಿರುವ ನಮಗೆ ನಮ್ಮ ಮುಖವು ಆ ಕೈಗನ್ನಡಿಯಲ್ಲಿ ಕಾಣಿಸಬಾರದು. ಏಕೆಂದರೆ ನಮ್ಮ ಮುಖದ ಬಿಂಬ ಕನ್ನಡಿಯವರೆಗೆ ತಲುಪುವ ವೇಳೆಯಲ್ಲಿ ಕನ್ನಡಿಯು ಅದೇ ಬಿಂಬದ ವೇಗದಲ್ಲಿ ಇನ್ನೂ ಮುಂದಕ್ಕೆ ಚಲಿಸಿರುತ್ತದೆ. ಇನ್ನು ಪ್ರತಿಬಿಂಬಕ್ಕೆ ಅವಕಾಶವೆಲ್ಲಿ ? ಇದು ನಮ್ಮ ಸಹಜವಾದ ಭಾವನೆ. ಆದರೆ ಐನ್‌ಸ್ಟೈನ್‌ಗೆ ಹಾಗೆ ತೋಚಲಿಲ್ಲವಂತೆ. ಆತನ ಆಲೋಚನೆಯ ಪ್ರಕಾರ, ಈ ವಿಶ್ವದಲ್ಲಿ ಯಾವ ಪದಾರ್ಥವೂ ಬೆಳಕಿನ ವೇಗದಲ್ಲಿ ಚಲಿಸುವುದಕ್ಕಾಗುವುದಿಲ್ಲ , ಹಾಗೇನಾದರು ಚಲಿಸಲು ಪ್ರಯತ್ನಿಸಿದರೆ ಅದರ ತೂಕವು ಅತಿಹೆಚ್ಚಾಗುವುದೇ ವಿನಹ ಅದರ ವೇಗವು ಹೆಚ್ಚಾಗುವುದಿಲ್ಲ ಎಂದು ಆತ ಸಿದ್ಧಪಡಿಸಿದನು. (ಈಗಿನ ವಿಜ್ಞಾನಿಗಳ ಪ್ರಕಾರ, ಟ್ಯಾಕಿಯಾನ್‌ ಎಂಬ ಕಾಲಾಣುವು ಮತ್ತು ಖಗೋಳ ಎಳೆಯು, ಬೆಳಕಿನ ವೇಗಕ್ಕಿಂತಲೂ ಅತಿವೇಗವಾಗಿ ಚಲಿಸುವುದು ಎಂಬ ವಿಷಯ ಬೇರೆ).

ಈಗ ಇನ್ನೊಂದು ಆಲೋಚನಾ ಪ್ರಯೋಗವನ್ನು ತೆಗೆದುಕೊಳ್ಳಿ. ಐನ್‌ಸ್ಟೈನಿನ ಸಮಕಾಲೀನರಾದ ಶ್ರೋಡಿಂಗರ್‌, ಹೆಯ್ಸೆನ್‌ ಬರ್ಗ್‌ ಮತ್ತು ಪಾಲ್‌ ಡಿರಾಕ್‌ ಎಂಬ ಸಹವಿಜ್ಞಾನಿಗಳ ಆಲೋಚನಾ ಪ್ರಯೋಗವೊಂದನ್ನು ಐನ್‌ಸ್ಟೈನನು ಒಪ್ಪಲಿಲ್ಲವಂತೆ! ಅದಕ್ಕೆ 'ಶ್ರೋಡಿಂಗರ್ರಿನ ಬೆಕ್ಕಿನ ಆಲೋಚನಾ ಪ್ರಯೋಗ’ ಎಂದು ಹೆಸರು. ಆ ಪ್ರಯೋಗವನ್ನು ಕೆಳಗಿನಂತೆ ವಿವರಿಸಬಹುದು :

ಒಂದು ಪೆಟ್ಟಿಗೆಯಲ್ಲಿ ಒಂದು ವಿಷದ ಡಬ್ಬಿಯನ್ನು ಅದರ ಮೂಲೆಯಲ್ಲಿಟ್ಟು, ಆ ವಿಷ ಡಬ್ಬಿಯು ಒಂದು ರೇಡಿಯೋ ಆಕ್ಟಿವ್‌ ಪದಾರ್ಥಕ್ಕೆ ವಿದ್ಯುತ್‌ ತಂತಿಗಳ ಮೂಲಕ ಸಂಪರ್ಕ ಏರ್ಪಡಿಸಿ, ಆ ಡಬ್ಬಿಯು ಆ ರೇಡಿಯೋಆಕ್ಟಿವ್‌ ಪದಾರ್ಥವು ಸರಿಯಾಗಿ ಅದರ ಅರ್ಧ ಪ್ರಮಾಣಕ್ಕೆ ಬಂದೊಡನೆಯೇ ವಿಷ ಕಾರುವ ಹಾಗೆ ಮಾಡಿರಬೇಕು. ಈ ಜೋಡಣೆಯಿರುವ ಪೆಟ್ಟಿಗೆಯಲ್ಲಿ ಒಂದು ಜೀವಿತ ಬೆಕ್ಕನ್ನು ಇಡಬೇಕು. ಪ್ರಾರಂಭದಲ್ಲಿ ಈ ಬೆಕ್ಕು ಜೀವಿತವಾಗಿರುತ್ತದೆ. ಆ ರೇಡಿಯೋ ಆಕ್ಟಿವ್‌ ಪದಾರ್ಥವು ಶೇಕಡ ಐವತ್ತರ ಪ್ರಮಾಣಕ್ಕೆ ಇಳಿದೊಡನೆಯೇ ಆ ಬೆಕ್ಕು ಸತ್ತಿರುತ್ತದೆ. ಆದರೆ ಆ ಬೆಕ್ಕು ರೇಡಿಯೋ ಆಕ್ಟಿವ್‌ ಪದಾರ್ಥವು ಶೇಕಡ ಐವತ್ತರ ಪ್ರಮಾಣ ತಲುಪುವ ಸಂದರ್ಭದಲ್ಲಿ ಯಾವ ಸ್ಥಿತಿಯಲ್ಲಿರುತ್ತದೆ?

ಶ್ರೋಡಿಂಗರ್ರಿನ ಪ್ರಕಾರ ಆ ಬೆಕ್ಕು ಜೀವ/ನಿರ್ಜೀವ ಸ್ಥಿತಿಯಲ್ಲಿರುತ್ತದೆಯೆನ್ನುವ ನಂಬಿಕೆ. ನೀವೇನೂ ವ್ಯಥೆ ಪಡಬೇಕಿಲ್ಲ, ಈ ಪ್ರಯೋಗ ಕೇವಲ ಆಲೋಚನಾ ಪ್ರಯೋಗ. ಯಾವ ಜೀವಂತ ಬೆಕ್ಕೂ ಇಲ್ಲಿಲ್ಲ.

ಅದೇಪ್ರಕಾರ ಬೆಳಕಿನ ಕಿರಣವು ಒಂದು ಸಲ ಕಿರಿಅಣು ಸ್ಥಿತಿಯಲ್ಲಿಯೂ ಮತ್ತೊಂದು ಸಲ ಅಲೆಯ ಪ್ರಕಾರವೂ ಆಗಿರುತ್ತದೆಯೆಂದು ಪ್ರತಿಪಾದಿಸಿದರು. ಅದೇ ಪ್ರಕಾರ ಒಂದು ಕಿರಿಅಣುವಿನ ಸ್ಥಿತಿಯನ್ನು ನಿರ್ಧರಿಸಿದಾಗ ಅದರ ವೇಗವನ್ನು ನಿರ್ಧರಿಸುವುದಕ್ಕಾಗುವುದಿಲ್ಲ, ಅದರ ವೇಗವನ್ನು ನಿರ್ಧರಿಸಿದರೆ ಅದರ ಸ್ಥಿತಿಯನ್ನು ನಿರ್ಧರಿಸುವುದಕ್ಕಾಗುವುದಿಲ್ಲ ಎಂಬ ಪ್ರತೀತಿಯು ಸಾಬೀತಾಗುತ್ತದೆ. ಅಂದರೆ ಆ ಕಿರಿಅಣುವು ಅಣು/ಅಲೆಯ ಪರಿಸ್ಥಿತಿಯಲ್ಲಿರುತ್ತದೆ ಅಥವಾ ಸ್ಥಿತಿ/ವೇಗದ ಪರಿಸ್ಥಿತಿಯಲ್ಲಿರುತ್ತದೆ.

ಆದುದರಿಂದ ಪರಮಾಣುವಿನ ಕಾರ್ಯಾಚರಣೆಯು (ಕ್ವಾಂಟಂ ಮೆಕ್ಯಾನಿಕ್ಸ್‌) ವಿಜ್ಞಾನದಲ್ಲಿ ಅನಿಶ್ಚಿತತೆಯನ್ನು ತರುತ್ತದೆ. ಐನ್‌ಸ್ಟೈನನು, ವಿಶ್ವವು ಅನಿಶ್ಚಯ ಅಥವ ಯದ್ವಾತದ್ವ ಆಯ್ಕೆಯಿಂದ ಆಳಿತವಾಗಿದೆ ಎಂಬುದನ್ನು ಒಪ್ಪಲಿಲ್ಲವಂತೆ. 'ದೇವರು ದಾಳಗಳನ್ನು ಆಡುವುದಿಲ್ಲ’ ಎಂಬ ಆತನ ಹೇಳಿಕೆಯು ಆತನ ಮನೋವ್ಯಥೆಯನ್ನು ತೋರಿಸುತ್ತದೆ. ಆದರೆ ಇತರ ವಿಜ್ಞಾನಿಗಳನೇಕರು ಅದನ್ನು ಒಪ್ಪಿದರಂತೆ. ಏಕೆಂದರೆ ಈ ತತ್ವವು ಪ್ರಾಯೋಗಿಕವಾಗಿ ಸಿದ್ಧಪಡಿಸಬಹುದು. ಇದು ಈಗಿನ ಆಧುನಿಕ ವೈಜ್ಞಾನಿಕ ನಿಯಂತ್ರಣಗಳ ತಳಹದಿಯಾಗಿರುತ್ತದೆ. ಆಧುನಿಕ ಟೆಲಿವಿಷನ್ನುಗಳ, ಕಂಪ್ಯೂಟರುಗಳ ಭಾಗಗಳ, ಟ್ರಾನ್ಸಿಸ್ಟರುಗಳ, ಇಂಟೆಗ್ರಟೆಡ್‌ ಸರ್ಕ್ಯುಟುಗಳ ಕಾರ್ಯಾಚರಣೆಯ ತಳಹದಿಯಾಗಿರುತ್ತದೆ.

ಈಗ ನಮ್ಮ ವಿಶ್ವದ ಸ್ಥಿತಿಯನ್ನು ಗಮನಿಸಿದರೆ, ನಾವೇಕೆ ಈ ಅನಿಶ್ಚಿತ ಕಾಯಿದೆಯನ್ನು ನಮ್ಮ ವಿಶ್ವಕ್ಕೆ ಅನ್ವಯಿಸಬಾರದು ಎಂಬ ವಿಷಯ ಗಮನಕ್ಕೆ ಬರುತ್ತದೆ. ದೇವರು ಇದ್ದಾನೆಯೇ ಅಥವಾ ಇಲ್ಲವೇ? ನಾವು ಆಸ್ತಿಕರೋ ಅಥವಾ ನಾಸ್ತಿಕರೋ? ನಮ್ಮ ಧರ್ಮವೇ ಸರಿಯೋ ಅಥವಾ ನಿಮ ್ಮ ಧರ್ಮವೇ ಸರಿಯೋ? ಎಂಬ ವಿಚಾರಗಳು ನಮ್ಮ ಪ್ರಪಂಚದಲ್ಲಿ ಈಗ ವಿಪರೀತವಾಗಿ ಹೋಗಿದೆ. ತಮ್ಮ ಧರ್ಮಕ್ಕೋಸ್ಕರ ಪ್ರಾಣತ್ಯಾಗ ಮಾಡಿಕೊಳ್ಳುವುದಲ್ಲದೇ ಇತರರ ಪ್ರಾಣಾಹಾರ ಮಾಡುವವರನ್ನು ದಿನವೂ ನೋಡುತ್ತಿದ್ದೇವೆ.

ಇದಕ್ಕೆಲ್ಲಾ ಪರಿಹಾರ ಈ ಅನಿಶ್ಚಿತ ತತ್ವವೇ (ಅನ್ಸರ್ಟಿನ್ಟಿ ಪ್ರಿನ್ಸಿಪಲ್‌) ಸರಿಯೆಂದು ನನಗೆ ತೋರಿಸುತ್ತದೆ. ಅಂದರೆ ದೇವರು ಇದ್ದಾನೆ/ಇಲ್ಲ, ನಮ್ಮ ಭಾವನೆ/ನಿಮ್ಮ ಭಾವನೆ ಸರಿ/ತಪ್ಪು, ನಮ್ಮಧರ್ಮ/ನಿಮ್ಮ ಧರ್ಮ ಸರಿ/ತಪ್ಪು ಎಂಬ ದ್ವಂದ್ವ (ಡ್ಯುಯಾಲಿಟಿ) ಅಥವಾ ನಾನಾವಾದ (ಪ್ಲುರಲಿಸಮ್‌) ಗಳನ್ನು ಎಲ್ಲರೂ ಅನುಸರಿಸಿದರೆ ಪ್ರಪಂಚಕ್ಕೆ ಸ್ವಲ್ಪ ಶಾಂತಿ ದೊರೆಯುವುದು ಎಂದು ನನ್ನ ನಂಬಿಕೆ.

English summary
Thought Experiments, without any tools ! is it really useful or we building castles in the air? An article by Rajaram Kavale in Saudi Arabia
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X