• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಕನ್ನಡ ಕಲಿ ಶಿಬಿರ’ ವೆಂಬ ಕನ್ನಡ ಜಪ

By Staff
|

ಕನ್ನಡ ಕಲಿ ಶಿಬಿರ ; ಈ ಶಿಬಿರ ನಡೆದಿದ್ದು ಕಳೆದ ವರ್ಷ. ಅದನ್ನೂ ಇಂದಿಗೂ ಮರೆಯಲಾಗದು. ಈ ವರ್ಷವೂ ಒಂದು ಶಿಬಿರ ನಡೆಸುವ ಯೋಚನೆಯಿದೆ. ......

ನ್ಯೂಜೆರ್ಸಿಯಲ್ಲಿದ್ದಾಗಲೇ ಮಕ್ಕಳಿಗೆ ಕನ್ನಡ ಕಲಿಸಬೇಕೆಂಬ ಆಸೆ ನನಗಿತ್ತು. ಆದರೆ ನನ್ನ ಕೆಲಸದ ಭರದಲ್ಲಿ ಅದು ಕಾರ್ಯರೂಪಕ್ಕೆ ತರಲಿಕ್ಕಾಗಲಿಲ್ಲ. ನಾನು ಕನ್ನಡ ಭಕ್ತ. ಯಾವುದೇ ಚಳುವಳಿಗಾರನಲ್ಲ. ಆದರೆ ನಮ್ಮ ಮಾತೃಭಾಷೆ ಉಳಿಯಬೇಕು. ಎಲ್ಲ ತಂದೆ ತಾಯಿಗಳಿಗೆ ಇಲ್ಲಿಯ ಮಕ್ಕಳಿಂದ ಬರುವ ಮೊದಲ ಪ್ರಶ್ನೆ ‘ಕನ್ನಡ ಏಕೆ ಕಲಿಯಬೇಕು?’ ಉತ್ತರ ಸಿಗುವುದು ಸ್ವಲ್ಪ ಕಷ್ಟವೇ.

Kannada Kali Moments‘ಕನ್ನಡ ಏಕೆ ಕಲಿಯಬೇಕು?’ ಎಂದು ಪ್ರಶ್ನಿಸಿದ ನನ್ನ ಮಗಳಿಗೆ ನಾನು ಹಾಕಿದ ಮರು ಪ್ರಶ್ನೆ ಇದು. ‘ನಿನಗೆ ನಿಮ್ಮ ಅಜ್ಜ ಅಜ್ಜಿ ಜೊತೆಯಲ್ಲಿ ಮಾತನಾಡಬೇಡವೇ? ನಿನ್ನ ಹತ್ತಿರದ ಸಂಬಂಧಿಗಳ ಹತ್ತಿರ ರಜೆಯಲ್ಲಿ ಬೆಂಗಳೂರಿಗೆ ಹೋದಾಗ ನೀನು ಅವರ ಜೊತೆಯಲ್ಲಿ ಆಡಬೇಡವೆ? ನೀನು ದೊಡ್ಡವಳಾದ ಮೇಲೆ ನಿನ್ನನ್ನು ಹೇಗೆ ಗುರುತಿಸಿಕೊಳ್ಳುತ್ತೀಯಾ?’ ಈ ಮರು ಪ್ರಶ್ನೆ ನನ್ನ ಮಗಳ ಮೇಲೆ ಪ್ರಭಾವ ಬೀರಿತು.

ನಾನು ಮೊದಲ ಅಮೇರಿಕಾದ ಕನ್ನಡ ಕಲಿ ಶಾಲೆಗೆ ಹೋಗಿದ್ದು, ಡೈಮಂಡ್‌ ಬಾರ್‌ನಲ್ಲಿರುವ ಡಾ. ರಮೇಶ್‌ ಗೌಡರ ಮನೆಯಲ್ಲಿ. ಅದಕ್ಕೆ ಆಹ್ವಾನ ಕೊಟ್ಟಿದ್ದವರು ಶೈಲೇಶ್‌ ಬಾನಾಜಿ. ಶ್ರೀನಿವಾಸ ಭಟ್ಟರು ಪಾಠ ತೆಗೆದುಕೊಳ್ಳುತ್ತಿದ್ದರು. ಅಂದು ಎಲ್ಲ ಪೋಷಕರ ಸಭೆ. ಕಾರಣ: ಮುಂದಿನ ವರ್ಷದ ಕನ್ನಡ ಕಲಿಯಲ್ಲಿ ಏನು ಹೇಳುಕೊಡುವುದು ಮತ್ತು ಯಾರು ಹೇಳಿಕೊಡುವುದು? (ನನಗೆ ಕನ್ನಡ ಕಲಿ ಶಾಲೆ ಬಗ್ಗೆ ಕೇಳಿದಾಗಲೆ ಅಂದುಕೊಂಡಿದ್ದೆ. ಈ ಶಾಲೆ ನಡೆಸುತ್ತಿರುವವರನ್ನು ಕೇಳಿ ನನಗೆ ಪಾಠ ಮಾಡಲು ಅವಕಾಶ ಸಿಗುತ್ತದೆಯೇ ಅಂದುಕೊಂಡಿದ್ದೆ. ಆದರೆ ಅದು ಇಷ್ಟು ಬೇಗ ಬರುತ್ತದೆಂದು ತಿಳಿದಿರಲಿಲ್ಲ‰). ಪಾಠಗಳ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಿ ಸಲಹೆಗಳನ್ನು ಕೊಟ್ಟೆ. ನಂತರ ಹೇಳಿಕೊಡುತ್ತೀರ ಅಂದಾಗ, ನಾನು ತುಟಿಯ ಅಂಚಿನಲ್ಲಿದ್ದ ನನ್ನ ಉತ್ತರವನ್ನು ತಕ್ಷಣ ತಿಳಿಸಿದೆ. ಆಮೇಲೆ ಅನ್ನಿಸಿತು ನಾನು ತುಸು ಆತುರಪಟ್ಟೆನೇ ಎಂದು. ಇನ್ನೂ ಯಾರಾದರು ಇದ್ದರೋ ಏನೋ ಎಂದು.

Children busy in learning Kannadaತರಗತಿಗಳು ತಿಂಗಳಿಗೆ ಎರಡು ಸಲ ನಡೆಯುತ್ತವೆ. ಒಂದೊಂದು ಸಾರಿ ಒಬ್ಬೊಬ್ಬರ ಮನೆಯಲ್ಲಿ ನಡೆಯುತ್ತವೆ. ವಾರಗಳು ಕಳೆದವು. ತಲೆಯಲ್ಲಿ ಒಂದು ಯೋಚನೆ ಬಂತು. ನನ್ನ ಸ್ನೇಹಿತ ಶ್ರೀನಿವಾಸ ಭಟ್ಟರೊಡನೆ ಚರ್ಚಿಸಿದೆ. ಅದು ಒಳ್ಳೆಯ ಕಾರ್ಯಕ್ರಮವೆಂದು ಹೇಳಿ ಅದಕ್ಕೆ ಏನು ಸಹಾಯಬೇಕಾದರೂ ಹೇಳಿ ನಾನು ಮಾಡುತ್ತೇನೆ ಎಂದರು. ಇದು ನನ್ನನ್ನು ಮತ್ತಷ್ಟು ಹುರಿದುಂಬಿಸಿತು. ಅದರ ಫಲವೇ ‘ಫೋನವತಾರ’.

ಮಾ। ಹಿರಣ್ಣಯ್ಯನವರ ಹಲವಾರು ಅವತಾರಗಳಲ್ಲಿ ಇದೂ ಒಂದು. ಆದರೆ ಕಥೆ ಮಾತ್ರ ಬೇರೆ. ಇದರ ಉದ್ದೇಶ ಮಕ್ಕಳಿಗೆ ಕನ್ನಡ ಮಾತನಾಡಲು ಇರುವ ಚಳಿ ಹೋಗಿಸುವುದು. ನನ್ನ ಮಗಳು ಬೆಂಗಳೂರಿಗೆ ಫೋನ್‌ ಮಾಡಿದಾಗಲೆಲ್ಲಾ ತನ್ನ ಅಜ್ಜ ಅಜ್ಜಿಯ ಜೊತೆ ಬಲವಂತವಾಗಿ ಕಷ್ಟ ಪಟ್ಟು ಅಂತೂ ಕನ್ನಡದಲ್ಲಿ ಮಾತನಾಡುತ್ತಿದ್ದಳು. ಆದರೆ ನಮ್ಮ ಹತ್ತಿರ ಇಂಗ್ಲೀಷ್‌. ಹಾಗಾದರೆ ಅಪ್ಪ ಅಮ್ಮನನ್ನು ಬಿಟ್ಟು ಬೇರೆಯವರು ಕನ್ನಡದಲ್ಲಿ ಮಾತನಾಡಿದರೆ ಮಕ್ಕಳು ಕನ್ನಡ ಕಲಿಯುವುದಕ್ಕೆ ಸಹಾಯವಾಗಬಹುದೆಂದು ಈ ಫೋನವತಾರ ತಯಾರು ಮಾಡಿದೆ. ಇದರ ಪ್ರಕಾರ ಶಾಲೆಯ ಮಕ್ಕಳೆಲ್ಲ ತನ್ನ ತಂದೆ ತಾುಯರನ್ನು ಬಿಟ್ಟು ಬೇರೆ ಯಾರಿಗಾದರು ವಾರಕ್ಕೆ ಎರಡು ಭಾರಿ ಫೋನ್‌ ಮಾಡಿ ಯಾವುದೇ ವಿಷಯದ ಬಗ್ಗೆ ಮಾತನಾಡಬಹುದು. ಮೊದ ಮೊದಲು ಎಲ್ಲರಿಗೂ ಫೋನ್‌ ಮಾಡಿ ಮತ್ತೆ ಮತ್ತೆ ಹೇಳಬೇಕಾದ ಪ್ರಮೇಯ ಬಂದರೂ ಅದರ ಫಲಿತಾಂಶ ಪರಿಣಾಮಕಾರಿಯಾಗಿತ್ತು. ಮಕ್ಕಳಲ್ಲಿ ಕನ್ನಡ ಪದಗಳ ಉಪಯೋಗದಲ್ಲಿ ಇದ್ದ ಚಳಿ ಬಿಡುತ್ತಾ ಬಂದಿತ್ತು.

ಮತ್ತೆ ಕೆಲವು ವಾರಗಳು ಕಳೆದಂತೆ ಮಕ್ಕಳ ಈ ಹುರುಪನ್ನು ಕಾಪಾಡಿಕೊಂಡು ಬರಲು ಇನ್ನೊಂದು ಯೋಜನೆಗೆ ಕೈ ಹಾಕಿದೆ. ಅದು ಕನ್ನಡ ಕಲಿ ಶಿಬಿರ. ಮೂರು ದಿವಸದ್ದು. ಯಾವುದಾದರೂ ಊರಾಚೆ ಹೋಗಿ ಮೂರು ದಿವಸವೂ ಪ್ರಾರಂಭದಿಂದ ಕೊನೆಯವರೆಗೂ ಕನ್ನಡದ ಜಪ. ನನ್ನ ಯೋಜನೆಗೆ ಹುರುಪು ಕೊಟ್ಟವರು ಶ್ರೀನಿವಾಸಭಟ್‌, ಡಾ।ಆನಂದ್‌, ಪ್ರಸನ್ನ ಕುಮಾರ್‌ ಮತ್ತು ಇತರರು. ಯೋಜನೆಯನ್ನು ಎಲ್ಲ ಪೋಷಕರ ಮುಂದೆ ಮಂಡಿಸಿದ್ದಾಯಿತು. ಎಲ್ಲರೂ ಒಳ್ಳೆಯ ಯೋಜನೆಯೆಂದೇನೋ ತಮ್ಮ ಅನಿಸಿಕೆಗಳನ್ನು ಹೇಳಿದರು.

Kannada Kali MomentsInternetನಲ್ಲಿ ಹುಡುಕಿ ಹುಡುಕಿ ಒಂದು ಜಾಗವನ್ನು ತೀರ್ಮಾನಿಸಿದೆ. ಹತ್ತು ಜನರ ಹತ್ತಿರ ಖಾತ್ರಿ ಮೂಡಿಸಿಕೊಂಡು ಆ ಜಾಗವನ್ನು Jul 4-6 ಕಾದಿರಿಸಿದೆ. ಇದು ನಡೆದಿದ್ದು ಏಪ್ರಿಲ್‌ ತಿಂಗಳಲ್ಲಿ. ತಿಂಗಳುಗಳು ಕಳೆದಂತೆ ಜೂನ್‌ ತಿಂಗಳು ಹತ್ತಿರ ಬರುತ್ತಿದ್ದಂತೆ, ಖಾತ್ರಿ ಮಾಡಿಸಿಕೊಂಡಿದ್ದ ಎಲ್ಲರನ್ನೂ ಹಣ ಕೇಳಲು ಶುರುಮಾಡಿದೆ. ಸ್ವಲ್ಪ ಜನ ಹಿಂದೆ ಮುಂದೆ ನೋಡಿದರು. ಆದರೆ ಜಾಗದ ಬಗ್ಗೆ Internetನಲ್ಲಿ ನೋಡಿದ ಮೇಲೆ ಎಲ್ಲರಿಗೂ ಆಸಕ್ತಿ ಹೆಚ್ಚಿ , ಬರುವುದಿಲ್ಲಾ ಎಂದವರೆಲ್ಲಾ ಬರುತ್ತೇನೆ ಎನ್ನತೊಡಗಿದರು. Book ಮಾಡಿಸಿದ್ದು ಮೂವೆತ್ತೆರಡು ಜನಕ್ಕೆ ಮಾತ್ರ. ಇನ್ನು ಮಾಡಿಸಲು ಅಲ್ಲಿ ಸ್ಥಳಾವಕಾಶವಿಲ್ಲ. ಮನಸ್ಸಿನಲ್ಲೇ ಅಂದು ಕೊಂಡೆ. ಪ್ರಾರಂಭ ಚಿಹ್ನೆಗಳು ಚೆನ್ನಾಗಿವೆ ಎಂದು.

ಅಂತೂ ಮೂವತ್ತೆರಡರ ಕನ್ನಡ ಸೈನ್ಯ ಜುಲೈ ನಾಲ್ಕರಂದು ಹೊರಟಿತು ಶಿಬಿರದ ಕಡೆಗೆ. ಎಲ್ಲರಿಗೂ ಕಟ್ಟು ನಿಟ್ಟಾದ ಸೂಚನೆ ನೀಡಿದ್ದೆ, ಯಾರೂ ತಡವಾಗಿ ಬರಬಾರದು ಎಂದು.

ಶಿಬಿರ ಐದು ಕೊಠಡಿಗಳ ಒಂದು ವಿಶ್ರಾಮ ಗೃಹ. ಎಲ್ಲಾ ಮರದಿಂದಲೇ ನಿರ್ಮಾಣ. ಎಲ್ಲರಿಗೂ ಸ್ಥಳದ ಬಗ್ಗೆ ಖುಷಿ. ತಲುಪಿದ ಸ್ವಲ್ಪ ಸಮಯದಲ್ಲೇ ಕನ್ನಡ ಪಾಠ ಪ್ರಾರಂಭ. ನಂತರ ತಿಂಡಿ ತಿನಿಸುಗಳ ಸುಗ್ಗಿ. ಮೂರು ದಿನಗಳ ಕಾರ್ಯಕ್ರಮಗಳು ಹೀಗಿದ್ದವು :

ಬೆಳಗಿನ ಗುಂಪು ನಡೆ, ಬೆಳಗಿನ ತಿಂಡಿ (ಭಟ್ಟರ ದೋಸೆ ಮತ್ತು ರಮೇಶ್‌ ಕಾಶಿಯವರ ಕಾಫಿ ಮರೆಯಲಾಗದು) ,

ಮಧ್ಯಾಹ್ನದ ಈಜು, ಕನ್ನಡ ಪಾಠ, ಕನ್ನಡ ಗೀತೆಗಳು, ಕನ್ನಡದ ಪ್ರಹಸನಗಳು, ಯೋಗ ತರಬೇತಿ, ಹರಿ ಹನುಮಂತರ ಕನ್ನಡ ಮಾಂತ್ರಿಕ (Magic) ಪ್ರದರ್ಶನ, ಎಲ್ಲಕ್ಕಿಂತ ಹೆಚ್ಚಾಗಿ ಕಡೆಯ ರಾತ್ರಿ ಯುವತಿಯರಿಂದ ನಡೆದ ಕನ್ನಡ ಹಾಡಿನ ನೃತ್ಯ.

ಇಂತಹ ಕನ್ನಡದ ವಾತಾವರಣವನ್ನು ಬೆಳೆಸಲು ಸಹಾಯ ಮಾಡಿದ ಎಲ್ಲ ಕನ್ನಡ ಶಿಬಿರಾರ್ಥಿಗಳಿಗೆ ವಂದನೆಗಳು. ಪ್ರತೀ ವರ್ಷ ಇದೇ ರೀತಿಯ ಶಿಬಿರ ನಡೆಸಬೇಕೆಂಬ ಉದ್ದೇಶವಿದೆ. ಇದಕ್ಕೆಲ್ಲಾ ಕನ್ನಡ ಪ್ರೇಮಿಗಳ ಸಹಾಯ ಬೇಕು. ಒಳ್ಳೆಯ ಕೆಲಸಕ್ಕೆ ಯಾರು ಇಲ್ಲವೆನ್ನುತ್ತಾರೆ ಹೇಳಿ.

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more