• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯೋಗ : ಹಾಗೆಂದರೇನು ? ಏಕೆ ಮಾಡಬೇಕು ?

By Staff
|
 • ಆರ್‌. ಎಂ. ರಾವ್‌
 • Practice and Control are the keywords of yogaಯೋಗವೆಂದರೆ ಚಿತ್ತ ವೃತ್ತಿ ನಿರೋಧ. ಅಂದರೆ, ಮನಸ್ಸಿನಲ್ಲಿ ಆಲೋಚನಾ ತರಂಗಗಳು ಏಳದಂತೆ ನಿಗ್ರಹಿಸುವುದೇ ಯೋಗದ ಗುರಿ. ಅಭ್ಯಾಸ ಮತ್ತು ವೈರಾಗ್ಯಗಳಿಂದ ಇದನ್ನು ಸಾಧಿಸಬೇಕು. ಇದರಲ್ಲಿ ಇನ್ನೊಂದು ಮುಖ್ಯ ಅಂಶವಿದೆ. ಅದೇನೆಂದರೆ ಈ ಎಲ್ಲ ನಿಯಂತ್ರಣವೂ ನಮ್ಮ ಹತೋಟಿಯಲ್ಲಿದ್ದಾಗ ಮಾತ್ರ ಉಪಯೋಗವಾಗುತ್ತದೆ.

  ಚಿತ್ತ ವೃತ್ತಿ ನಿರೋಧ ತಾನೇ ಆದಲ್ಲಿ ಅಥವಾ ಅಪ್ರಯತ್ನಪೂರ್ವಕವಾಗಿ ಆದಲ್ಲಿ ಅದು ಯೋಗವಲ್ಲ , ಆ ಸ್ಥಿತಿಯಲ್ಲಿರುವ ಮನುಷ್ಯ ಯೋಗಿಯಲ್ಲ. ಈ ರೀತಿಯ ಚಿತ್ತ ವೃತ್ತಿ ನಿರೋಧ ಸಾಧ್ಯವೆ ಎಂಬ ಪ್ರಶ್ನೆ ನಮ್ಮ ಮುಂದೆ ಬರುತ್ತದೆ. ಇದು ಖಂಡಿತಾ ಸಾಧ್ಯ. ದಿನವೂ ನಾವು ನಿದ್ರೆ ಮಾಡುತ್ತೇವೆ. ಅದರಲ್ಲಿ ಪ್ರತ್ಯಯವಿಲ್ಲದಿರುವ(ವೃತ್ತಿಯ ಜ್ಞಾನರಹಿತ) ಸ್ಥಿತಿ ಇರುತ್ತದೆ. ಅಪ್ರಯತ್ನಪೂರ್ವಕವಾಗಿ ದಿನವೂ ನಡೆಯುತ್ತಿರುವ ಕ್ರಿಯೆಯನ್ನು ನಾವು ಪ್ರಯತ್ನಪೂರ್ವಕವಾಗಿ ನಿಯಂತ್ರಿಸಲು ಸಾಧ್ಯ ಮಾಡಿಕೊಳ್ಳಬೇಕು. ಇದೇ ಯೋಗದ ದಾರಿ.

  ಯೋಗದ ದಾರಿಯಲ್ಲಿ ನಡೆಯಲು ಯಾರಿಗೆ ಸಾಧ್ಯ ಅಥವಾ ಯೋಗದಲ್ಲಿ ಮುಂದೆ ಹೋಗಲು ಬೇಕಾದ ಅರ್ಹತೆಗಳೇನು ಎನ್ನುವ ಅಂಶಗಳನ್ನು ಪರಿಶೀಲಿಸೋಣ :

  ಮೊದಲನೆಯದಾಗಿ ಯೋಗದಲ್ಲಿ ತೊಡಗಿಕೊಳ್ಳಲು ಬೇಕಾದುದು ಯೋಗದಲ್ಲಿನ ನಂಬಿಕೆ. ಎರಡನೆಯದಾಗಿ ಚಂಚಲತೆ ಕಡಿಮೆ ಇರುವ ಮನಸ್ಸು (ಇಂಟ್ರೊವರ್ಟೆಡ್‌ ವ್ಯಕ್ತಿತ್ವ).ಮೂರನೆಯದಾಗಿ ಅಪಾರ ತಾಳ್ಮೆ ಹಾಗೂ ಛಲ.

  ಪತಂಜಲಿಯ ಮಾತಿನಲ್ಲಿ ಹೇಳುವುದಾದರೆ- ದೀರ್ಘ ಕಾಲ ಎಡಬಿಡದೆ ಒಳ್ಳೆಯ ಮನಸ್ಸಿನಿಂದ ಮಾಡಿದರೆ ಯೋಗವು ಧೃಡವಾಗುತ್ತದೆ.

  ಯೋಗ ಏಕೆ ಮಾಡಬೇಕು?

  ಯೋಗದ ಹಿಂದಿರುವ ತತ್ವಜ್ಞಾನ ಏನು?

  ಪತಂಜಲಿಯ ಯೋಗ ಸೂತ್ರಗಳು ಜನ್ಮ ಜೀವನ ಮತ್ತು ಪುನರ್ಜನ್ಮಗಳ ಚಕ್ರದಲ್ಲಿ ಸಿಕ್ಕಿಕೊಂಡಿರುವ ಜೀವಕ್ಕೆ ಮುಕ್ತಿ ಪಥವನ್ನು ತೋರಿಸುತ್ತದೆ.

  ಜನ್ಮ ಜೀವನ ಮತ್ತು ಪುನರ್ಜನ್ಮಗಳ ಬಂಧನದಲ್ಲಿರುವ ತನಕ ಈ ಚಕ್ರದಲ್ಲೇ ಇರಬೇಕು. ಇದು ಅತ್ಯಂತ ಸಂಕೀರ್ಣವಾದುದೆಂದು ಪತಂಜಲಿಯೇ ಹೇಳಿದ್ದಾನೆ. ಆದರೆ ಈ ಬಲೆಯನ್ನು ಹರಿದು ಆಚೆ ಬರಲು ಯಶಸ್ವಿಯಾದರೆ ಜೀವ ಅಥವ ಪುರುಷ ನಿತ್ಯ ಮುಕ್ತನಾಗುತ್ತಾನೆ. ಅವನಿಗೆ ಬಂಧನವಿಲ್ಲ . ಇದೇ ಕೈವಲ್ಯ.

  ನನಗೆ ಕೈವಲ್ಯದಲ್ಲಿ ನಂಬುಗೆ ಇಲ್ಲ . ಸತ್ತಮೇಲೆ ಆತ್ಮ ಇದೆ ಎಂದು ನಾನು ನಂಬುವುದಿಲ್ಲ . ಹೀಗಿರುವಲ್ಲಿ ನಾನು ಯೋಗ ಮಾಡಬಹುದೆ ? ಎನ್ನುವ ಪ್ರಶ್ನೆಗಳು ಕೆಲವರಲ್ಲಿ ಉದ್ಭವಿಸುವುದು ಸಾಮಾನ್ಯ. ಇದಕ್ಕೆ ಉತ್ತರ- ಖಂಡಿತವಾಗಿಯೂ ಹೌದು.

  ಯೋಗವೆಂದರೆ ಮನಸ್ಸಿನ ಆಚೆ ಹೋಗುವ ಪ್ರಯತ್ನ. ಮನಸ್ಸನ್ನು ಉಪಯಾಗಿಸಿಕೊಂಡು ಮನಸ್ಸನ್ನು ಶಾಂತಿಗೊಳಿಸಿದಾಗ ಮನಸ್ಸಿನ ಹಿಂದಿರುವ ಶಕ್ತಿಯ ಅನುಭವ ನಮಗೆ ಆಗುತ್ತದೆ. ಬದುಕಿದ್ದಾಗಲೇ ಈ ಅನುಭವವನ್ನು ಪಡೆಯಬಹುದು.ಆದರೆ ಅದಕ್ಕೆ ಕಠಿಣ ಪರಿಶ್ರಮ ಅಗತ್ಯ.

  ನೀವು ಅನುಭವಿಸಲಾರದ್ದನ್ನು ನಂಬಿ ಎಂದು ಯೋಗ ಹೇಳುವುದಿಲ್ಲ . ಪೂರ್ಣ ದಾರಿಯ ಮೈಲಿಗಲ್ಲುಗಳನ್ನು ಯೋಗದಲ್ಲಿ ಕಾಣಬಹುದು. ನೀವೆಷ್ಟು ದಾರಿ ಕ್ರಮಿಸುತ್ತೀರೆಂಬುದು ನಿಮಗೆ, ನಿಮ್ಮ ಪರಿಶ್ರಮಕ್ಕೆ ಬಿಟ್ಟ ಮಾತು.

  ಯೋಗದ ಬಗ್ಗೆ ಹೆಚ್ಚಿನ ಮಾಹಿತಿಗೆ- ಮೈಸೂರಿನ ರಾಮಕೃಷ್ಣ ಆಶ್ರಮ ಪ್ರಕಟಿಸಿರುವ ‘ಯೋಗ ಮತ್ತು ಆಧ್ಯಾತ್ಮಿಕ ಸಾಧನೆ’ ಪುಸ್ತಕ ಓದಬಹುದು.

  ಪೂರಕ ಓದಿಗೆ-

  ಐಡಿಆರ್‌ಎಫ್‌ ಯೋಗಭಾರತಿ

  Click here to go to topಮುಖಪುಟ / ಸಾಹಿತ್ಯ ಸೊಗಡು

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more