• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಎಂಎಸ್‌ ‘ಹಿರಿಯ ವಿದ್ಯಾರ್ಥಿ’ ಸಂಘ

By Staff
|

ನಾವು ಓದಿದ ಶಾಲೆ ಕಾಲೇಜುಗಳೆಂದರೆ ಮನಸ್ಸಿನಲ್ಲಿ ಸಾಲು ಸಾಲು ನೆನಪುಗಳ ಮೆರವಣಿಗೆ. ಅಲ್ಯಾವುದೋ ಒಂದು ಪಟ್ಟಾಂಗದ ಕಟ್ಟೆ, ಸ್ಪೆಷಲ್‌ ಕ್ಲಾಸಿನಿಂದ ತಪ್ಪಿಸಿಕೊಂಡು ಕೂರುತ್ತಿದ್ದ ವರಾಂಡದ ಮೂಲೆ, ಕತ್ತಲೆಯವರೆಗೂ ಆಡುತ್ತಿದ್ದ ಆಟದ ಗ್ರೌಂಡು... ಹೀಗೆ ಸೆಂಟಿಮೆಂಟುಗಳು ಕಾಲೇಜು-ಸ್ಕೂಲುಗಳ ನೆನಪಿನಜೊತೆಗೇ ಥಳುಕು ಹಾಕಿಕೊಂಡಿರುತ್ತವೆ.

ಅಂಥದ್ದೇ ಸೆಂಟಿಮೆಂಟು ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘವೊಂದನ್ನು ಹುಟ್ಟುಹಾಕುವುದು. ಶಾಲೆ ಕಾಲೇಜನ್ನು ದಾಟಿ ಜೀವನದಲ್ಲಿ ಮುಂದೆ ಸಾಗಿ ದೇಶ ವಿದೇಶಗಳಿಗೆ ಹೋದರೂ ನೆನಪುಗಳು ನೆರಳಾಗಿರುವುದು.

ಹಾಗೆ-

ಕಳೆದ 1996 ರಲ್ಲಿ ಕ್ಯಾಲಿಫೋರ್ನಿಯಾದ ಲಾಸ್‌ ಏಂಜಲೀಸ್‌ನಲ್ಲಿ ಬಿ.ಎಂ.ಎಸ್‌. ಇಂಜನಿಯರಿಂಗ್‌ ಕಾಲೇಜ್‌ ಹಿರಿಯ ವಿದ್ಯಾರ್ಥಿಗಳ ಸಂಘ (B.M.S.college of engineering, American Alumni Association, America) ಹುಟ್ಟಿಕೊಂಡಿತು.

Computers Laboratory of BMS Collegeಬಿಎಂಎಸ್‌ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಓದಿದ ಕೆಲವು ಉತ್ಸಾಹೀ ವಿದ್ಯಾರ್ಥಿಗಳು ಸಂಘದ ಬುನಾದಿ ಕಟ್ಟಿದರು. ಸಂಘಕ್ಕೆ ಸಮಾನ ಮನಸ್ಕರ ಸೇರ್ಪಡೆಯಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಹಲವಾರು ಪ್ರಗತಿ ಪರ ಯೋಜನೆಗಳನ್ನು ರೂಪಿಸುವ ಮೂಲಕ ಸಂಘವನ್ನು ಜೀವಂತಿಕೆಯಿಂದ ಇಡುವ ಪ್ರಯತ್ನವನ್ನು ಅಮೆರಿಕಾದಲ್ಲಿರುವ ಹಿರಿಯ ವಿದ್ಯಾರ್ಥಿಗಳು ಈಗಲೂ ಮಾಡುತ್ತಲೇ ಬಂದಿದ್ದಾರೆ.

ಬಡ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವುದು ಸಂಘದ ಹಲವು ಯೋಜನೆಗಳಲ್ಲಿ ಒಂದು. ಸದಸ್ಯರು ದೇಣಿಗೆ ನೀಡಿರುವ ಹಣವನ್ನು ಬ್ಯಾಂಕ್‌ನಲ್ಲಿ ಜಮಾ ಮಾಡಿ, ಬಡ್ಡಿಯಿಂದ ಬರುವ ಹಣದಲ್ಲಿ ವಿದ್ಯಾರ್ಥಿ ವೇತನ ವಿತರಿಸಲಾಗುತ್ತಿದೆ. ದಾನಿಗಳು ಅವರು ನೀಡುವ ಹಣವನ್ನು ಅಮೆರಿಕದ ತೆರಿಗೆಯ ಲೆಕ್ಕದಲ್ಲಿ ಕಳೆಯಬಹುದು.

ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯ ನಿರ್ವಹಣೆ ಮತ್ತು ಕೆಲವು ಸಾಧನೆಗಳು :

  • ಪ್ರಸ್ತುತ ಸದಸ್ಯರ ಸಂಖ್ಯೆ 100 ಕ್ಕೂ ಹೆಚ್ಚು .
  • ವಾರ್ಷಿಕ ವಿದ್ಯಾರ್ಥಿ ವೇತನದ ಸಂಖ್ಯೆ 21.
  • ಪ್ರಾರಂಭದಲ್ಲಿ 5000 ರೂಪಾಯಿಯಿದ್ದ ವಾರ್ಷಿಕ ವಿದ್ಯಾರ್ಥಿ ವೇತನ ಈಗ 8000 ರೂಗೇರಿದೆ.
  • ಸಂಘದಲ್ಲಿ 12 ಮಂದಿ ಆಜೀವ ಸದಸ್ಯರಿದ್ದಾರೆ.
  • ಬಿಎಂಎಸ್‌ ಇಂಜಿನಿಯರಿಂಗ್‌ ಕಾಲೇಜು ಲೈಬ್ರರಿಗೆ 50 ಸಾವಿರ ರೂ. ದೇಣಿಗೆ.
  • ತಾಂತ್ರಿಕ ನಿಯತಕಾಲಿಕ ಸಂಚಿಕೆಗಳಿಗೆ ಚಂದಾಹಣ ನೀಡಿಕೆ.
  • ಕಾಲೇಜಿನಲ್ಲಿ ಅತಿಥಿಗಳಿಂದ ಉಪನ್ಯಾಸ ಕಾರ್ಯಕ್ರಮ.
  • ಸಲಹೆಗಾರ ಕಾರ್ಯಕ್ರಮವನ್ನು (Mentorship program) ಅಳವಡಿಸುವ ಯೋಜನೆ.
  • ಪ್ರತಿ ಡಿಸೆಂಬರ್‌ನಲ್ಲಿ ‘ಹಿರಿಯ ವಿದ್ಯಾರ್ಥಿ ದಿನ’ದ ಆಚರಣೆ.

ಸಂಘದ ಮೂಲಕ ಸಾಮಾಜಿಕ ಸೇವೆಗೆ ಅವಕಾಶ

ಬಿ.ಎಂ.ಎಸ್‌ ಇಂಜನಿಯರಿಂಗ್‌ ಕಾಲೇಜ್‌ನಲ್ಲಿ ಓದಿದ ಎಲ್ಲ ಹಿರಿಯ ವಿದ್ಯಾರ್ಥಿಗಳೂ ಈ ಸಂಘದ ಸದಸ್ಯರಾಗಬಹುದು. ವಾರ್ಷಿಕ ಸದಸ್ಯತ್ವದ ಚಂದಾಹಣ ಕೇವಲ 25 ಡಾಲರ್‌ಗಳು.

ದಾನ ಮಾಡಲು ಆಸಕ್ತಿ ಇರುವವರು ತಂದೆ, ತಾಯಿ ಅಥವಾ ಆಪ್ತರ ಹೆಸರಿನಲ್ಲಿ ವಾರ್ಷಿಕ ವಿದ್ಯಾರ್ಥಿ ವೇತನವನ್ನು ದತ್ತಿ ಕೊಡಬಹುದು. ದಾನಗಳಲ್ಲೆಲ್ಲಾ ‘ವಿದ್ಯಾದಾನ’ ಅತಿ ಶ್ರೇಷ್ಠ’ವಂತೆ. ಅರ್ಹತೆಯುಳ್ಳ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಯಾರು ಬೇಕಿದ್ದರೂ ಚಂದಾ ಹಣ ಅಥವಾ ವಿದ್ಯಾರ್ಥಿ ವೇತನವನ್ನೂ ನೀಡಬಹುದು.

ಹಾಗೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಲ್ಲದವರೂ ಸಂಘದ ಮೂಲಕ ವಿದ್ಯಾರ್ಥಿಗಳಿಗೆ ನೆರವಾಗಿರುವ ಸಾಕಷ್ಟು ಉದಾಹರಣೆಗಳುಂಟು.

ಸಂಘದ ಸದಸ್ಯರು ಆಗಾಗ ಒಟ್ಟು ಸೇರಿ ಚರ್ಚೆ ನಡೆಸುವುದುಂಟು. 2002ರಲ್ಲಿ ಡೆಟ್ರಾಯಿಟ್‌ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಬಿ.ಎಂ.ಎಸ್‌.ಇಂಜನಿಯರಿಂಗ್‌ ಕಾಲೇಜ್‌ನ ಹಿರಿಯ ವಿದ್ಯಾರ್ಥಿಗಳ ಸಮಾಲೋಚನೆ ಕಾರ್ಯಕ್ರಮ ನಡೆಯಿತು. 2004ರಲ್ಲಿ ಆರ್ಲಾಂಡೋನಲ್ಲಿ ನಡೆಯುವ ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನದಲ್ಲಿಯೂ ಸಮಾಲೋಚನ ಕಾರ್ಯಕ್ರಮ ನಡೆಯಲಿದೆ. ಸಂಘದ ಸದಸ್ಯರು ಒಟ್ಟು ಸೇರುವುದಕ್ಕೆ ಈ ಕನ್ನಡ ಹಬ್ಬವೊಂದು ನೆಪ.

ಈ ಸಂಘದ ಹಿಂದಿರುವ ಸ್ಫೂರ್ತಿ- ಕಾಲೇಜಿನ ಆಡಳಿತ ಮಂಡಲಿ, ಪ್ರಿನ್ಸಿಪಾಲ್‌, ಅಧ್ಯಾಪಕವರ್ಗ, ಸಿಬ್ಬಂದಿಗಳು. ಸಂಘ ಅಭಿಮಾನಿಗಳನ್ನೂ ಮರೆಯುವ ಹಾಗಿಲ್ಲ.

ಡಿ.30ರಂದು ಹಿರಿಯ ವಿದ್ಯಾರ್ಥಿ ದಿನ

ಅಂದ ಹಾಗೆ ಈ ವರ್ಷದ ‘ಹಿರಿಯ ವಿದ್ಯಾರ್ಥಿ’ ದಿನವನ್ನು ಡಿಸೆಂಬರ್‌ 30, 2003, ಮಂಗಳವಾರದಂದು ಬಿ.ಎಂ.ಎಸ್‌. ಕಾಲೇಜಿನ ಸಭಾಂಗಣದಲ್ಲಿ ಆಚರಿಸಲಾಗುವುದು. ಸಂಘದ ಅಭಿಮಾನಿಗಳು, ಕಾಲೇಜಿನ ಹಿರಿಯ ವಿದ್ಯಾರ್ಥಿಗಳು, ಉತ್ಸಾಹಿಗಳೆಲ್ಲರೂ ಈ ಹಿರಿಯ ವಿದ್ಯಾರ್ಥಿ ದಿನದಂದು ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂಬುದು ಆಯೋಜಕರ ಮನವಿ.

ಮತ್ತೊಮ್ಮೆ ನೆನಪುಗಳ ಮೆಲುಕು ಹಾಕುವುದಕ್ಕೆ ಹಿರಿಯ ವಿದ್ಯಾರ್ಥಿ ದಿನ ಒಂದು ಅವಕಾಶವನ್ನು ಕಲ್ಪಿಸಲಿದೆ. ಮಿಸ್‌ ಮಾಡಿಕೊಳ್ಳದೇ ಕಾರ್ಯಕ್ರಮಕ್ಕೆ ಬನ್ನಿ ಎಂಬುದು ಸಂಘದ ಅಧ್ಯಕ್ಷ ಕೆ. ಎನ್‌. ಮೂರ್ತಿಗಳ ಕರೆ.

ಈ ಸಾಲಿನ ಕಾರ್ಯಕಾರಿ ಸಮಿತಿ ಹೀಗಿದೆ. ಸಂಘದ ಬಗೆಗೆ ಹೆಚ್ಚಿನ ಮಾಹಿತಿಗಾಗಿ ಕಾರ್ಯಕಾರಿ ಸಮಿತಿಯಲ್ಲಿರುವ ಯಾರನ್ನಾದರೂ ಸಂಪರ್ಕಿಸಬಹುದು. ಅಧ್ಯಕ್ಷರು : ಕೆ. ಎನ್‌. ಮೂರ್ತಿಉಪಾಧ್ಯಕ್ಷರು: ಸಿ.ಎಮ್‌.ಭೀಮಸಿಂಹ, ವಿಜಯ ಚಂದ್ರ, ಬಿ.ಎ.ನಂಜಪ್ಪಕಾರ್ಯದರ್ಶಿ: ಕೃಷ್ಣ ಶಾಸ್ತ್ರಿ, ದೂರವಾಣಿ : 319-268-0903ಖಜಾಂಚಿ: ಎಮ್‌.ಕೃಷ್ಣಮೂರ್ತಿ, ದೂರವಾಣಿ : 909-899-4273 ಕಾರ್ಯನಿರ್ವಾಹಕ ಸದಸ್ಯರು: ಎನ್‌.ವಿಶ್ವನಾಥ್‌, ರಾಘವೇಂದ್ರ ಕೊಂಗೋವಿ, ಮಧು ಹೆಬ್ಬಾರ್‌, ವೈ.ಎಸ್‌.ರಾಮಚಂದ್ರ.

Address: BMS college of Engineering, American Alumni Association, 6913 Basswood place, Rancho Cucamonga, CA91739.

email:BMSCEAAA@aol.com, murthyknm@aol.com; krishkm@aol.com; sastrykrishnac@johndeere.com

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more