• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಅಕ್ಕ’(ಅಮರನಾಥ ಗೌಡ) ಸಹಯೋಗದಲ್ಲಿ ಶ್ರೀಗಂಧ ಕನ್ನಡ ಕೂಟ ಆಯೋಜಿಸಿರುವ ವಿಶ್ವ ಕನ್ನಡ ಸಮ್ಮೇಳನ- 2004 ನಡೆಯೋದು ಗ್ಯಾರಂಟಿ ಗ್ಯಾರಂಟಿ ಗ್ಯಾರಂಟಿ- ಬೆಂಗಳೂರಿನಲ್ಲಿ ರೇಣುಕಾ ರಾಮಪ್ಪ ಘೋಷಣೆ.

By Staff
|

*ವಿಶಾ-ಖ ಎನ್‌.

Dr.Renuka Ramappa , Chairperson WKC-2004 (Photo by K.M.Veeresh)ಆರ್ಲಾಂಡೋದ ಗೇಲಾರ್ಡ್‌ ಪಾಮ್ಸ್‌ ರೆಸಾರ್ಟ್‌ಗೆ ಬನ್ನಿ. ಹತ್ತಿರದಲ್ಲೇ ಡಿಸ್ನಿಲ್ಯಾಂಡಿನ ಪ್ರವಾಸಿ ಸೊಬಗಿದೆ. ಬರಲು ವಿಶ್ವ ಕನ್ನಡ ಸಮ್ಮೇಳನದ ಸೆಳಕಿದೆ. ಸಾಗರದಾಚಿನ ಕನ್ನಡ ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳುವುದರ ಜತೆಗೆ ಅದ್ಭುತ ವಿಹಾರ ಧಾಮದ ಆಹ್ಲಾದ ಅನುಭವಿಸುವ ಅವಕಾಶವಿದೆ...

‘ಅಕ್ಕ’ (ಅಮರನಾಥ ಗೌಡ) ಸಾರಥ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ‘ವಿಶ್ವ ಕನ್ನಡ ಸಮ್ಮೇಳನ’ಕ್ಕೆ ಸಮ್ಮೇಳನ ಸಮಿತಿಯ ಅಧ್ಯಕ್ಷೆ ಡಾ. ರೇಣುಕಾ ರಾಮಪ್ಪ ಅಧಿಕೃತ ಆಮಂತ್ರಣ ಕೊಟ್ಟದ್ದು ಹೀಗೆ.

ಮೇ. 29ರ ಗುರುವಾರ ಬೆಂಗಳೂರಿನ ಮಲ್ಲೇಶ್ವರಂ ಕ್ಲಬ್‌ನ ಈಜುಕೊಳದಲ್ಲಿ ಬೇಸಿಗೆ ಬಿಸಿ ಮೈಯ ತಂಪಾಗಿಸುತ್ತಿದ್ದ ಚಿಣ್ಣರು ಕೂಡ ರೇಣುಕಾ ರಾಮಪ್ಪನವರು ಪಾರ್ಟಿ ಹಾಲ್‌ನಲ್ಲಿ ಆಡುತ್ತಿದ್ದ ಮಾತುಗಳನ್ನು ಕಿಟಕಿಯಿಂದ ಇಣುಕಿ ಕೇಳುತ್ತಿದ್ದರು.

ಅಮೆರಿಕನ್ನಡಿಗರ ಬಹು ನಿರೀಕ್ಷೆಯ ಸಮ್ಮೇಳನಕ್ಕೆ ರೇಣುಕಾ ರಾಮಪ್ಪ ಮೊದಲ ಅಧಿಕೃತ ಕರೆ ಗಂಟೆ ಬಾರಿಸಿದ್ದು ಬೆಂಗಳೂರಿನ ಈ ಸುದ್ದಿಗೋಷ್ಠಿಯ ಮೂಲಕ. 2004ರ ಸೆಪ್ಟೆಂಬರ್‌ 3, 4 ಮತ್ತು 5ನೇ ತಾರೀಕು ವಿಶ್ವ ಕನ್ನಡ ಸಮ್ಮೇಳನ ನಡೆಯೋದು ಗ್ಯಾರಂಟಿ ಅಂತ ರೇಣುಕಾ ಪದೇಪದೇ ಹೇಳಿದರು.

ಈ ಬಾರಿಯ ಸಮ್ಮೇಳನದ ಸೆಳಕುಗಳು-

 • ಫ್ಲೋರಿಡಾದ ಶ್ರೀಗಂಧ ಕನ್ನಡ ಕೂಟ ‘ಅಕ್ಕ’ (ಅಮರನಾಥ ಗೌಡ) ಸಹಯೋಗದಲ್ಲಿ ಈ ಸಮ್ಮೇಳನವನ್ನು ಇಡೀ ಅಮೆರಿಕಾದಲ್ಲೇ ಅದ್ಭುತ ವಿಹಾರ ಧಾಮ ಎನಿಸಿರುವ ಗೇಲಾರ್ಡ್‌ ಪಾಮ್ಸ್‌ ರೆಸಾರ್ಟ್‌ನಲ್ಲಿ ನಡೆಸಲಿದೆ. ದಿನವೊಂದಕ್ಕೆ 200 ಡಾಲರ್‌ ಬಾಡಿಗೆಯ ರೆಸಾರ್ಟ್‌ನ ಸೇವೆಯನ್ನು ಕೇವಲ 85 ಡಾಲರ್‌ಗೆ ಗಿಟ್ಟಿಸಿಕೊಳ್ಳಲಾಗಿದೆ. ಸಮ್ಮೇಳನ ನಡೆಯಲಿರುವ ಈ ರೆಸಾರ್ಟ್‌, ವೈಭವದಲ್ಲಿ ಮೈಸೂರು ಅರಮನೆಗೆ ಸರಿಸಾಟಿಯಾದುದು.
 • ಈ ರೆಸಾರ್ಟ್‌ನಲ್ಲಿ ಒಂದೇ ಬಾರಿಗೆ 6 ಸಾವಿರ ಸಹೃದಯರು ಕೂತುಕೊಳ್ಳುವಂಥಾ ಸಭಾಂಗಣವಿದೆ. ಸೊಗಸಾದ ರಂಗಮಂಚವಿದೆ. 1200 ಕೋಣೆಗಳಿದ್ದು, ಕನ್ನಡಿಗರು ತಂಗಲು ಸಕಲ ಸೌಕರ್ಯಗಳೂ ಇವೆ.
 • ಈ ಸಲದ ಸಮ್ಮೇಳನದಲ್ಲಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಯುವಜನರಿಗೆ ಸಂಸ್ಕೃತಿಯ ಬೇರುಗಳ ಸೊಗಡು ಪರಿಚಯಿಸುವಂಥಾ ಕಾರ್ಯಕ್ರಮವಿದೆ. ಅಮೆರಿಕೆಯಲ್ಲಿ ಬೆಳೆಯುತ್ತಿರುವ ಹುಡುಗ- ಹುಡುಗಿಯರು ತಮ್ಮ ಸಂಸ್ಕೃತಿಯನ್ನು ಮರೆಯದೆ ಇರಲಿ ಎಂಬ ಉಮೇದಿ ಈ ಕಾರ್ಯಕ್ರಮದ್ದು.
 • ಇದೇ ಮೊದಲ ಬಾರಿಗೆ ಆಯೋಜಕರು ಸಮ್ಮೇಳನಕ್ಕೆ ಮುಂಚೆ ಎರಡು ದಿನಗಳನ್ನು ಸಹೃದಯರ ವಿಹಾರಕ್ಕಾಗಿ ಮೀಸಲಿರಿಸಿದ್ದಾರೆ. 2004ನೇ ಇಸವಿ ಸೆಪ್ಟೆಂಬರ್‌ 1 ಮತ್ತು 2ನೇ ತಾರೀಕು ಫ್ಲೋರಿಡಾಗೆ ಹೋಗುವವರಿಗೆ ವಸತಿ ವ್ಯವಸ್ಥೆ ಮಾಡಿಕೊಟ್ಟು, ರಿಯಾಯಿತಿ ದರದಲ್ಲಿ ಡಿಸ್ನಿಲ್ಯಾಂಡ್‌ ನೋಡುವ ಅವಕಾಶ ಮಾಡಿಕೊಡಲಾಗುತ್ತದೆ. ಅಂದಹಾಗೆ, ಕೋಣೆಗಳ ಬಾಡಿಗೆಯನ್ನು ಸಹೃದಯರೇ ಭರಿಸಿಕೊಳ್ಳಬೇಕು.
 • ದೋಸೆ ಹೊರತುಪಡಿಸಿ, ಕರ್ನಾಟಕದ ಮಿಕ್ಕೆಲ್ಲಾ ತಿಂಡಿ- ಊಟೋಪಚಾರ ಮಾಡುವ ಕೆಲಸಕ್ಕೆ ಈಗಾಗಲೇ ಚಾಲನೆ ಸಿಕ್ಕಿದೆ.
 • ಸ್ಥಳೀಯ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿಯಾಗದಿರಲು ಸಣ್ಣ ಸಣ್ಣ ಕೋಣೆಗಳಲ್ಲಿ ಪರ್ಯಾಯ ವೇದಿಕೆಗಳನ್ನು ಕಲ್ಪಿಸಲಾಗುವುದು.
 • ಸಮ್ಮೇಳನಕ್ಕೆ ಕರ್ನಾಟಕದಿಂದ ಅಮೆರಿಕೆಗೆ ಹೋಗುವ ಕಲಾವಿದರ ವಿಷಯದಲ್ಲಿ ಆಸ್ಥೆ ವಹಿಸಲು ಹಾಗೂ ಆಮಂತ್ರಣದ ವಿಷಯದಲ್ಲಿ ಯಾವುದೇ ಕಿರಿಕ್ಕು ಆಗದಂತೆ ನೋಡಿಕೊಳ್ಳಲು ಬೆಂಗಳೂರಲ್ಲಿ ಮೂವರು ಸದಸ್ಯರನ್ನು ಗೊತ್ತು ಮಾಡಲಾಗುತ್ತದೆ. ಇವರು ಸ್ಥಳೀಯರೇ ಆಗಿರುತ್ತಾರೆ.

ಜನ- ಖರ್ಚು- ಕಾರ್ಯಕ್ರಮ

ಸಮ್ಮೇಳನಕ್ಕೆ 5000 ಕನ್ನಡಿಗರ ನಿರೀಕ್ಷೆಯಿದ್ದು, ಒಟ್ಟು 800 ಸಾವಿರ ಡಾಲರ್‌ ಹಣ ಖರ್ಚಾಗುವ ನಿರೀಕ್ಷೆಯಿದೆ. ನೋಂದಣಿ ಶುಲ್ಕ ಎಷ್ಟೆಂಬುದು ಇನ್ನೂ ತೀರ್ಮಾನವಾಗಿಲ್ಲ. ಖರ್ಚನ್ನು ತೂಗಿಸಿಕೊಂಡು ಹೋಗುವ ಸಲುವಾಗಿ ಸಮ್ಮೇಳನದಲ್ಲಿ ‘Continuing Medical Education’ನ ಪ್ರದರ್ಶನ ಬೂತುಗಳನ್ನು ಹಾಕಲು ನಿರ್ಧರಿಸಲಾಗಿದೆ. ಇಲ್ಲಿ ಔಷಧಿ ವಿಜ್ಞಾನ ಕುರಿತ ಸಂಕಿರಣದ ಪರಿಯ ವಾತಾವರಣ ನಿರ್ಮಾಣವಾಗಲಿದ್ದು, ಇದನ್ನು ನೋಡಲು ಕೂಡ ಅನೇಕ ಜನ ಜಮಾಯಿಸಲಿದ್ದಾರೆ. ಈ ಮಾರ್ಕೆಟಿಂಗ್‌ ತಂತ್ರದಿಂದ ಸಮ್ಮೇಳನಕ್ಕೆ ಸಾಕಷ್ಟು ಹಣ ಹರಿದು ಬರಲಿದೆ ಎಂದು ರೇಣುಕಾ ರಾಮಪ್ಪ ಬಿಡಿಸಿ ಹೇಳಿದರು.

ಯಕ್ಷಗಾನ, ಸಂಗೀತ, ನೃತ್ಯ, ಹಾಡು, ಕವಿಗೋಷ್ಠಿ, ವಿವಿಧ ಚರ್ಚಾಗೋಷ್ಠಿಗಳನ್ನು ಸಮ್ಮೇಳನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಕಾರ್ಯಕ್ರಮ ಪಟ್ಟಿ, ಅತಿಥಿಗಳ ಹಾಗೂ ಆಹ್ವಾನಿತರ ಪಟ್ಟಿ ಇನ್ನೂ ಸಿದ್ಧವಾಗಬೇಕಿದೆ.

‘ಅಕ್ಕ ಇಬ್ಭಾಗ’ ಆಗಿದೆಯಾ? ರೇಣುಕಾ ರಾಮಪ್ಪ ಹೇಳ್ತಾರೆ-

 • ‘ಅಕ್ಕ’ ಇಬ್ಭಾಗವಾಗಿರುವುದು ನಿಜ. ಸುಮಾರು 9 ಅನ್ಯ ಮನಸ್ಕ ಸಂಘಗಳು ತಾವೇ ಒರಿಜಿನಲ್‌ ಅಕ್ಕ ಎಂದು ಹೇಳಿಕೊಂಡು ತಿರುಗುತ್ತಿರುವುದು ವಿಷಾದ.
 • ದಿನಗಳೆದಂತೆ ಜನರಿಗೇ ಯಾವುದು ನಿಜವಾದ ಅಕ್ಕ ಅಂತ ಗೊತ್ತಾಗುತ್ತದೆ.
 • ತಮ್ಮ ಪ್ರತ್ಯೇಕ ಬಣವನ್ನೇ ಒರಿಜಿನಲ್‌ ಅಕ್ಕ ಅಂತ ಹೇಳಿಕೊಳ್ಳುತ್ತಿರುವವರು ಸಮ್ಮೇಳನಕ್ಕೆ ಅಡ್ಡಿ ಮಾಡದಂತೆ ಈಗಿನಿಂದಲೇ ಎಚ್ಚರ ವಹಿಸುತ್ತಿದ್ದೇವೆ. ‘ಅಕ್ಕ’ನಿಗೆ ಮಸಿ ಬಳಿಯುವ ಇಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಪ್ರಕ್ರಿಯೆಯೂ ಜಾರಿಯಲ್ಲಿದೆ.

ಸೈಡ್‌ಲೈಟ್ಸ್‌ -

 • ಭಿನ್ನಮತೀಯರು ಸೇರಿ ಹುಟ್ಟುಹಾಕಿರುವ ‘ಅಕ್ಕ’ (ಕುಮಾರ ಸ್ವಾಮಿ) ದ ಅಧಿಕಾರಿಗಳು ಮುಂದಿನವಾರ ಬೆಂಗಳೂರಿಗೆ ಬಂದು ಸುದ್ದಿಗೋಷ್ಠಿ ನಡೆಸಲಿದ್ದಾರೆ. ಅವರು ಅಮೆರಿಕಾದಲ್ಲಿ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸಜ್ಜಾಗುತ್ತಿದ್ದಾರೆ ಎಂದು ಪತ್ರಕರ್ತರೊಬ್ಬರು ಹೇಳಿದರು.
 • ಸಮ್ಮೇಳನದ ಸ್ಮರಣ ಸಂಚಿಕೆಯ ಕೆಲಸಗಳು ಈಗಾಗಲೇ ಶುರುವಾಗಿವೆ. ಡಾ.ಯು.ಬಿ.ವಾಸುದೇವ್‌ ನೇತೃತ್ವದ ಸಂಪಾದಕೀಯ ಮಂಡಳಿ ಲೇಖನ ಸಂಗ್ರಹಣೆಯ ಕೆಲಸಕ್ಕೆ ಈಗಾಗಲೇ ಮುಂದಾಗಿದೆ. ಎಂದು ರೇಣುಕಾ ರಾಮಪ್ಪ ಪ್ರಶ್ನೆಯಾಂದಕ್ಕೆ ಉತ್ತರಿಸಿದರು.

ಸಮ್ಮೇಳನವನ್ನು ಹಸನಾಗಿಸಲು ಸರ್ವರ ಸಲಹೆಗೂ ರೇಣುಕಾ ರಾಮಪ್ಪ ತೆರೆದುಕೊಂಡಿದ್ದಾರೆ. ಸಮ್ಮೇಳನದಲ್ಲಿ ಏನಿರಬೇಕು, ಏನಿರಬಾರದು ಅಂತ ನೀವೇ ಬರೆಯಿರಿ.

ನೋಡಿ- http://akkaonline.com/

ಇದನ್ನೂ ಓದಿ

ಅಗೋ ನೋಡು, ಆರ್‌ಲ್ಯಾಂಡೋ ...!

*Since two groups claim that they are real AKKA www.thatskannada.com will address these groups separately as AKKA (A- Amarnath Gowda) and AKKA (B- V.M. Kumara Swamy) in all its future postings. This nomenclature is for identification purposes only.

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more