• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಲ್ವರು ಅನಿವಾಸಿ ಭಾರತೀಯರಿಗೆ ನಾಯಕತ್ವ ಪ್ರಶಸ್ತಿ

By oneindia staff
|

ವಾಷಿಂಗ್ಟನ್‌ : ನಾಲ್ವರು ಅನಿವಾಸಿ ಭಾರತೀಯರು ಹಾಗೂ ಇತರ 18 ಮಂದಿಯನ್ನು ‘ಅತ್ಯುತ್ತಮ ಹಾಗೂ ಪ್ರಭಾವಿ ನಾಯಕತ್ವ ಪ್ರಶಸ್ತಿ’ಗೆ ಚಿಕಾಗೊದಲ್ಲಿನ ಭಾರತೀಯ ರಾಯಭಾರಿ ಕಚೇರಿ ಆಯ್ಕೆಮಾಡಿದೆ. 54 ನೇ ಗಣರಾಜ್ಯ ಉತ್ಸವದ ಸ್ಮರಣಾರ್ಥ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

ಕೆಲ್ಲಾಗ್‌ ಸ್ಕೂಲ್‌ ಆಫ್‌ ಮೇನೇಜ್‌ಮೆಂಟ್‌ನ ಮೋಹನ್‌ಬಿರ್‌ ಸಹ್ವೆನಿ, ಚಿಕಾಗೊ ಯೂನಿವರ್ಸಿಟಿಯ ರಘುರಾಮ್‌ ಜಿ.ರಾಜನ್‌, ಮಾರ್ಕ್ವೆಟ್ಟೆ ಯೂನಿವರ್ಸಿಟಿಯ ರಾಜು ಜಿ.ಸಿ. ಥಾಮಸ್‌ ಹಾಗೂ ಇಲಿನಾಯ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ದರ್ಶ್‌ ವಾಸನ್‌ ಅತ್ಯುತ್ತಮ ನಾಯಕತ್ವ ಪ್ರಶಸ್ತಿಗೆ ಆಯ್ಕೆಯಾದ ಅನಿವಾಸಿ ಭಾರತೀಯರು ಎಂದು ರಾಯಭಾರಿ ಕಚೇರಿಯ ಪ್ರಕಟಣೆ ತಿಳಿಸಿದೆ.

ಅಮೆರಿಕನ್‌ ಕಾಂಗ್ರೆಸ್ಸಿಗ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಜೆಸ್ಸಿ ಜಾಕ್ಸನ್‌, ಚಿಕಾಗೊ ಮೇಯರ್‌ ರಿಚರ್ಡ್‌ ಡಲೇ ಹಾಗೂ ಕಾಂಗ್ರೆಸ್ಸಿಗ ಹೆನ್ರಿ ಹೈಡ್‌ ಪ್ರಶಸ್ತಿಗೆ ಆಯ್ಕೆಯಾದ ಪ್ರಮುಖರು.

ಫೆಬ್ರವರಿ 10 ರಂದು ಜೇಮ್ಸ್‌ ಅಲೆನ್‌ ಸೆಂಟರ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಈ ಪ್ರಶಸ್ತಿಗಳು ಭಾರತ ಹಾಗೂ ಅಮೆರಿಕ ನಡುವಣ ಸಂಬಂಧ ವೃದ್ಧಿಯ ಸಂಕೇತವಾಗಿದೆ ಎಂದು ಪ್ರಕಟಣೆ ಬಣ್ಣಿಸಿದೆ.

(ಪಿಟಿಐ)

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more