ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಣ್ಣು ಮತ್ತು ಭ್ರೂಣ ಹತ್ಯೆ

By Staff
|
Google Oneindia Kannada News

ಸುಬ್ಬಮ್ಮ ಮತ್ತೆ ಗುಂಡಮ್ಮ ಇಬ್ರು ಚೈಲ್ಡ್‌ ಹುಡ್‌ ಫ್ರೆಂಡ್ಸು. ಅವರ ಅದೃಷ್ಟಕ್ಕೆ ಎದ್ರು ಬದ್ರು ಮನೇಲೇ ಇರೊಹಂಗೆ ಆಗ್ಬೇಕೆ ಮದ್ವೆ. ಸಂಸಾರಸ್ಥೆಯರು ಆದ್ಮೇಲೂ... ಅದಿರ್ಲಿ ಮಕ್ಕಳು ಮೊಮ್ಮಕ್ಕಳು ಹುಟ್ಟಿದ್ಮೇಲೂ ಹೀಗೆ ಜೊತೆ ಜೊತೆಯಾಗಿ ಹರಟೆ ಹೊಡ್ಕೊಂಡು ಇರೋ ಭಾಗ್ಯ ಎಷ್ಟು ಲಂಗ ಸ್ನೇಹಿತೆಯರಿಗೆ ಸಿಕ್ಕೀತು ನೀವೆ ಹೇಳಿ? ಆಗಾಗ ಪಾಲಿಟಿಕ್ಸು, ಸೋಷಿಯಲ್‌ ಸಮಸ್ಯೆಗ್ಳು, ಅದೂ ಇದೂ ಅಂತ ಡಿಸ್ಕಸ್‌ ಮಾಡ್ತ, ಅವ್ರಿಬ್ರ ಮಟ್ಟಿಗೆ ಚೆನ್ನಾಗಿ ಕಾಲ ಕಳೀತಿದ್ದ ಇವ್ರಿಗೆ ಮೊನ್ನೆ ಸಿಕ್ಕ ವಿಷ್ಯ ಬಾಲಿವುಡ್‌ ‘ಬೂಮ್‌’. ಬನ್ನಿ ಅವರಿಬ್ರ ಮಾತುಕತೇನ ಕದ್ದಾಲಿಸೋಣ. ಅಂದ್‌ ಹಾಗೆ ಅವರಿಬ್ರು ಒಬ್ರನ್ನೊಬ್ರು ಕರ್ಕೊಳೊದು ಸುಬ್ಬಿ (ಸು) ಗುಂಡಿ (ಗು) ಅಂತ.

Boom girls lying like anything !ಸು: ಲೇ ಗುಂಡಿ ಒಂದ್‌ ಹಾಳು ಪಿಚ್ಚರ್‌ ನೋಡ್ದೆ ಕಣೆ ಮೊನ್ನೆ. ಯಾವ್ದೊ ‘ಬೂಮ್‌’ ಅಂತೆ. ನನ್‌ ಮಗ ಕ್ಯಾಸೆಟ್‌ ತಂದಿದ್ದ. ಕ್ಯಾಸೆಟ್‌ ಮೇಲೆ ಲೇಬಲ್‌ ನೋಡಿದ್ರೆ ಖೇಲ್‌ ಅಂತ ಇತ್ತು, ಶುರು ಮಾಡಿದ್ರೆ ಬೂಮು.

ಗು: ಥು ಥು... ಅದೇನೆ ಹೆಸ್ರು ಅದು ಬೂಮ್‌ ಅಂತ, ಒಳ್ಳೆ ಭೀಮ ರಾಮ ಅಂತ ಹೆಸ್ರುಗ್ಳು ಇಡ್ದೆ.. ಈಗಂತು ಬಿಡಮ್ಮ ಬರೀ ಇಂಗ್ಲೀಷ್‌ ಹೆಸ್ರುಗ್ಳೆ ಇಡ್ತಾರೆ.

ಸು: ಅಯ್ಯೋ... ‘ಮದರ್‌ ಇಂಡಿಯ’ ಥರ ಬರಿ ಹೆಸ್ರು ಇಂಗ್ಲೀಷ್‌ ಆದ್ರೆ ಪರ್ವಾಗಿಲ್ಲ ನೋಡು. ಹಾಳ್‌ ಜನ ಅಲ್ಲಿ ಇರೊ ಕೆಟ್‌ ವಿಷ್ಯ ಎಲ್ಲ ಇಲ್ಲಿ ತೋರ್ಸಕ್ಕೆ ಶುರು ಮಾಡ್ಕೊಂಡ್ಬಿಟ್ಟಿದಾರೆ. ಜೊತೆಗೆ ಫೇಮಸ್‌ ಆಕ್ಟರ್ಸ್‌ ಬೇರೆ. ಅದೇನ್‌ ಬಂದಿದ್ಯೊ ನಾ ಕಾಣೆ ಎಲ್ರಿಗು. ಈ ತರ ಆಕ್ಟ್‌ ಮಾಡಕ್ಕೆ ಒಪ್ಕೊಂಡಿದಾರಲ್ಲ...

ಗು: ಯಾರ್‌ ಯಾರೆ ಮಾಡಿದಾರೆ ಆ ಪಿಚ್ಚರ್ನಲ್ಲಿ? ಡೈರೆಕ್ಟ್‌ ಮಾಡ್ದವ್ನು ಯಾವನು?

ಸು: ಇದ್ದಾನೆ ಆ ಬಚ್ಚನ್ನು - ದೊಡ್‌ ಕಮಂಗಿ ಇದ್ರಲ್‌ ಅವ್ನು. ಜಾಕಿ - ದೊಡ್‌ ಮಂಕಿ. ಆ ಗುಲ್ಶನ್‌ ಗ್ರೋವರ್ರು - ದೊಡ್‌ ಗೋಬರ್ರು. ಜಾವೇದ್‌ ಜಾಫಿರಿ - ದೊಡ್‌ ಭಿಕಾರಿ. ಜೀನತ್‌ ಅಮಾನ - ಅವ್ಳಿಗಿಲ್ಲ ಮಾನ. ಮಧು ಸಪ್ರೆ - ಬಲ್‌ ಸಪ್ಪೆ . ಹೀಗೆ ಹೋಗುತ್ತೆ ನೋಡು ತಾರಾ ಗಣ. ನೀನೆ ಅರ್ಥ ಮಾಡ್ಕೊ ನಾನು ಒಬ್ಬೊಬ್ರಿಗು ಕೊಟ್ಟಿರೊ ಅಡ್ಡ ಹೆಸ್ರಲ್ಲಿ ಅವ್ರ ಪಾತ್ರ ಏನು ಅಂತ. ಕೈಗಜ್‌ ಗುಸ್ತಾದ್‌ ಅನ್ನೊವ್ನು ಡೈರೆಕ್ಟರ್ರು. ಕೈಗ್‌ ಸಿಕ್ಕಿದ್ರೆ ನಾಲ್ಕು ಹಾಕೋಣ ಅನ್ಸುತ್ತೆ ನೋಡು.

ಗು: ನೀನ್ಯಾಕೆ ನೋಡಕ್ಕೆ ಹೋದೆ ಮತ್ತೆ ಆ ಥರ ಪಿಚ್ಚರ್ನ....

ಸು: ಅಯ್ಯಾ... ನಾನೆಲ್‌ ಫುಲ್‌ ನೋಡ್ದೆ ಆ ದರಿದ್ರಾನ... ಸದ್ಯಕ್ಕೆ ನನ್‌ ಮಗ, ಸೊಸೆ ಇರ್ಲಿಲ್ಲ ಜೊತೇನಲ್ಲಿ. ಅವ್ನು ದುಡ್‌ ಸುರ್ದಿದಾನಲ್ಲ ಆ ಕ್ಯಾಸೆಟ್ಗೆ ಅನ್ನೊ ಸಂಕ್ಟಕ್ಕೆ ಅರ್ಧ ನೋಡಿದ್ನಮ್ಮ...

ಗು: ಓ.. ಹಾಗ.....ಯಾವುದ್ರ ಬಗ್ಗೆ ಕಥೆ ಅದು?

ಸು: ಮಾಡೆಲಿಂಗು, ಅಂಡರ್‌ ವರ್ಳ್ಡು, ಡ್ರಗ್ಸು ಹಾಳು ಮೂಳು ಅಂತ.... ನಾ ಅಮೇರಿಕದಲ್ಲಿ ನೋಡಿರೊ ಪ್ರಕಾರ (ಸುಬ್ಬಮ್ನೋರ್ಗೆ ಅಮೇರಿಕ ಯಾತ್ರೆ ಒಂದೆರಡು ಸಲ ಆಗಿದೆ ನೋಡಿ) ಅಲ್ಲಿ ಕೂಡ ಒಂದೊಂದು ಸಲ ಬಂದ್‌ ಮಾಡೊ ಫೋರ್‌ ಲೆಟರ್‌ ವರ್ಡ್ನ (****) ಧಾರಾಳ್ವಾಗಿ ಉಪ್ಯೋಗ್ಸಿದಾರೆ ಈ ಚಿತ್ರದಲ್ಲಿ. (ಯಾರಿಗೆ ಗೊತ್ತಿದ್ಯೋ ಇಲ್ವೊ ಆದ್ರೆ ಸುಬ್ಬಿ ಸ್ನೇಹದಿಂದ ಗುಂಡಿಗೆ ಅಮೇರಿಕನ್‌ ಕಲ್ಚರ್‌ ಪರಿಚಯ ಸುಮಾರು ಇದೆ). ಜೊತೆಗೆ ಏನೇನೋ ಸೀನ್ಸು. ಒಬ್ಳೇ ಇದ್ರು ನೋಡಕ್ಕೆ ಬೇಜಾರಾಗಿ ಆಫ್‌ ಮಾಡ್ದೆ ನೋಡು.

ಗು: ಥು... ಥು... ಥು.. ಹಿ.....ಹಿ.... (ಜೊತೆಗೊಂದು ತುಂಟ ನಗು ಬೇರೆ).

ಸು: ಈಗೀಗಂತು ಫ್ಯಾಮಿಲಿ ಪೂರ್ತಿ ಒಟ್ಟ್ಗೆ ಕೂತ್ಕೊಂಡು ನೋಡೊ ಅಂತ ಸಿನೆಮಾಗ್ಳೆ ತುಂಬ ಕಮ್ಮಿ ಅಲ್ವಾ. ನೋಡು ಈ ಥರಹ ಪಿಚ್ಚರ್ಸ್‌ ಬಂದ್ರೆ ನಮ್ಮ ಯೂತು ಇನ್ನೂ ಕೆಟ್ಟು ಹೋಗುತ್ವೆ ಅಷ್ಟೆ.

ಗು: ಇನ್ನೇನ್‌ ಮತ್ತೆ ಆಚೆ ಮನೆ ಕಮಲಮ್ನೋರ್‌ ಮೊಮ್ಮಗ್ಳು ಅದ್ಯಾವ್ದೋ ‘ದೌಡ್‌’ ಅನ್ನೊ ಸಿನೆಮ ನೋಡಿ ಯಾವಂದೋ ಜೊತೇಲಿ ದೌಡಾಯ್ಸಿದ್ದು ನೆನ್ಪಿದೆ ತಾನೆ... ಹಿ... ... (ಇಬ್ರು ನಗು)

ಸು: ಬೇಜಾರ್‌ ವಿಷ್ಯ ಅಂದ್ರೆ ಅಮಿತಾಭ್‌ ಅಂತ ಒಳ್ಳೊಳ್ಳೆ ಆಕ್ಟರ್ಸು ಈ ರೀತಿ ಪಾರ್ಟ್‌ ಮಾಡಕ್ಕೆ ಶುರು ಮಾಡಿರೋದು.

ಗು: ಅಲ್ವೆ.. ಈ ಸೆನ್ಸಾರ್ನವ್ರು ಇರೋದು ಏನಕ್ಕೆ?

ಸು: ಅಯ್ಯಾ ಅವ್ರುಗ್ಳ ಕೈಲಿ ಇರೋ ಕತ್ತರಿಗ್ಳೆಲ್ಲ ತುಂಬ ಜಾಣ ಕತ್ತರಿಗ್ಳು. ಕೆಟ್ಟ ಕೆಟ್ಟ ಸೀನ್ಸ್‌ ಬಂದಾಗ ಮಾತ್ರ ಮೊಂಡಾಗಿ ಬಿಡುತ್ವೆ.. ಹ... ..... (ಇಬ್ಬರ ನಗು). ಏನೊ, ಅಂತೂ ಇನ್ನಾದ್ರು ಸೊಸೈಟಿ ಮೇಲೆ ಒಳ್ಳೆ ಪಾಸಿಟಿವ್‌ ಎಫೆಕ್ಟ್‌ ಬೀರೊ ಅಂತ ಸಿನೆಮಾಗ್ಳು ಬಂದ್ರೆ ಚೆನ್ನ ಅಷ್ಟೆ.

ಹೀಗೆ ಬೂಮಾಯಣದ ರಾಮಾಯಣದ ಬಗ್ಗೆ ಚರ್ಚೆ ಮುಗಿಸಿದ ಸುಬ್ಬಿ-ಗುಂಡೀರು ಟಿ.ವಿ. ಯಲ್ಲಿ ಬರೋ ಪ್ರೇಮಾಯಣ ಸೀರಿಯಲ್‌ ನೋಡಲು ಅವರವರ ಮನೆಗೆ ಹೊರಟಾಗ ಘಂಟೆ ಒಂಭತ್ತು.

ಗಮನಿಸಿ: ಆಧುನಿಕತೆಯ ಹೆಸರಿನಲ್ಲಿ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಬಹುದಾಥ ‘ಬೂಮ್‌’ನಂಥ ಚಿತ್ರವನ್ನು ನೋಡದಿದ್ದರೆ ನಾವೇನೂ ಕಳೆದುಕೊಳ್ಳುವುದಿಲ್ಲ ಎಂಬುದು ನನ್ನ ಅನಿಸಿಕೆ.

*

ನೊಡ್ಬೇಡ್ರಪ್ಪ ಬೂಮು
ಇದಕ್ಕಿಲ್ಲ ಲಂಗು-ಲಗಾಮು
ಇದ್ರ ಸೂತ್ರಧಾರ ಕೈಗಜ್‌ ಗುಸ್ತಾದು
ನಂಗೊತ್ತು ಜನ ಅವ್ನಿಗೆ ಗುದ್ದಿದ್ದು
ಏನಪ್ಪ ಅಮಿತಾಬ್‌ ಬಚ್ಚನ್ನು
ತಲೆ ಕೆಟ್‌ ಹೋಯ್ತೆ ನಿಂಗಿನ್ನು
ಮಾಡಿದ್ಮೇಲೆ ಚಿತ್ರ ಚಿತ್ರದಂಥಾ ‘ಶೋಲೆ’
ತಲೆಗ್‌ ಯಾಕ್‌ ತಂದ್ಕೊಂಡೆ ಈ ಶೂಲೆ
ಒಳ್ಳೆ ಚಿತ್ರ ನೋಡಕ್‌ ಹಣ ಕೋಡೋದು ನಾವು
ಪರದೇಶದ್‌ ಕಸಾನೆಲ್ಲ ತೋರಿಸ್ತೀರಲ್ರಿ ನೀವು
ಆಗುತ್ತೆ ನೋಡಿ ಯೂತ್‌ ಮೇಲೆ ಕೆಟ್‌ ಇನ್‌ಪ್ಲುಯೆನ್ಸು
ಇಲ್ದೆ ಹೋಯ್ತೆ ನಿಮ್ಗೆ ಅಷ್ಟೂ ಕಾಮನ್‌ ಸೆನ್ಸು
ಇನ್ನಾದ್ರು ಒಳ್ಳೊಳ್ಳೆ ಚಿತ್ರ ತೆಗೀರಿಪ್ಪ
ಬುದ್ಧಿ ಮಾತ್ಗೆ ತಿಳೀಬೇಡಿ ತಪ್ಪ !

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X