• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಕ್ಷ್ಮೀ ಚಂದ್ರಶೇಖರ್‌ರ ‘ಸಿಂಗಾರೆವ್ವ’ ಅಂತಿಂಥ ಏಕಪಾತ್ರಾಭಿನಯವಲ್ಲ ; ಅದು ಏಕವ್ಯಕ್ತಿ ನಾಟಕ!

By Staff
|
  • ಅಕ್ಷರ: ಶ್ರೀವತ್ಸ ಜೋಶಿ

ಚಿತ್ರ: ಪುರುಶೋತ್ತಮ್‌ ರಾವ್‌, ಮೇರಿಲ್ಯಾಂಡ್‌

Lakshmi Chandrashekhar performing a Solo Play Singarevva Matthu Aramaneಏಕಪಾತ್ರಾಭಿನಯ ಮಾಡಿ ತೋರಿಸುವವರು ಅಬ್ಬಬ್ಬಾ ಎಂದರೆ ಮೂರು ಪಾತ್ರಗಳ ಅಭಿನಯ ಮಾಡಿತೋರಿಸಬಹುದೇ ವಿನಹ ಹೆಚ್ಚಾಗಿ‘ಇಲ್ಲಿ ನಿಂತರೆ ಅರ್ಜುನ... ಇಲ್ಲಿ ನಿಂತು ಮಾತಾಡಿದರೆ ಬಬ್ರುವಾಹನ...’ - ಎರಡೇ ಪಾತ್ರಗಳ ಸಂಭಾಷಣೆ ಅವರ ಜೀವಾಳ. ಇದು ಟಿಪಿಕಲ್‌ ಏಕಪಾತ್ರಾಭಿನಯದ ಕಲ್ಪನೆ. ಆದರೆ ಮೊನ್ನೆ (ಭಾನುವಾರ 25 ಮೇ, 2003) ಸಂಜೆ ವಾಷಿಂಗ್ಟನ್‌ ಪ್ರದೇಶದ ಶಿವವಿಷ್ಣು ದೇವಾಲಯದ ಸಭಾಂಗಣದ ವೇದಿಕೆಯ ಮೇಲೆ ನಾವು ನೋಡಿದ್ದು ಅಂತಿಂಥ ಏಕಪಾತ್ರಾಭಿನಯವಲ್ಲ! ಅದು ಏಕವ್ಯಕ್ತಿ ನಾಟಕ!

ಸುಮಾರು ಹತ್ತು-ಹನ್ನೆರಡು ಪಾತ್ರಗಳು, ತೊಂಬತ್ತು ನಿಮಿಷಗಳ ಕಾಲ ಅವಿರತ ಮಾತು. ಕೆಲಸದಾಕೆ ಶಿವಲಿಂಗಿ, ಶುದ್ಧಹೃದಯದ ಹೆಣ್ಣು ಸಿಂಗಾರೆವ್ವ, ಕ್ಷಣಾರ್ಧದಲ್ಲಿ ಮುಂಡಾಸು ಧರಿಸಿದ ದರ್ಪದ ಮಾತಿನ ಆಸೆಬುರುಕ ತಂದೆ, ಮತ್ತೆ ಅರೆಕ್ಷಣದಲ್ಲಿ ಹಲ್ಲಿಲ್ಲದೆ ತೊದಲುನುಡಿಯುವ ಹಣ್ಣುಹಣ್ಣು ಮುದುಕಿ, ಒಡನೆಯೇ ಬಯಲಾಟ ವೇಷಧಾರಿ ದೇಸಾಯಿ...

ಲಕ್ಷ್ಮೀ ಚಂದ್ರಶೇಖರ್‌ ಅಭಿನಯಿಸಿದ ‘ಸಿಂಗಾರೆವ್ವ ಮತ್ತು ಅರಮನೆ’ ಏಕವ್ಯಕ್ತಿ ನಾಟಕವನ್ನು ನೀವು ನೋಡಲೇಬೇಕು. ಪ್ರಾಮಾಣಿಕವಾಗಿ ಹೇಳುತ್ತೇನೆ, ಉತ್ತರ ಕರ್ನಾಟಕದ ಕನ್ನಡದ ಕೆಲವು ಸಂಭಾಷಣೆ ನನಗೆ ಅರ್ಥವಾಗಲಿಲ್ಲ , ಹಾದರಗಿತ್ತಿ , ಸೂಳೆ, ಅನೈತಿಕ ಸಂಬಂಧಗಳ ಸನ್ನಿವೇಶಗಳು ಬರುವ ಕಥೆ ಕೆಲವೆಡೆ ನನ್ನ ‘ತಲೆಯ ಮೇಲಿಂದ’ ಹಾದುಹೋಗುತ್ತಿತ್ತು. ನಿಮಗೂ ಹೀಗಾಗಬಹುದು, ಆದರೂ ನೋಡಬೇಕು ನೀವು ಈ ಅನನ್ಯ ಕಲಾಪ್ರಕಾರವನ್ನು.

ನೋಡ-ಲೇ-ಬೇ-ಕೆಂ-ದು ಏಕೆ ಹೇಳುತ್ತಿದ್ದೇನೆಂದರೆ ಲಕ್ಷ್ಮಿಯವರು ಒಂದು ಪಾತ್ರದಿಂದ ಇನ್ನೊಂದು ಪಾತ್ರಕ್ಕೆ ನಾಜೂಕಾಗಿ ವರ್ಗಾವಣೆಯಾಗುವುದನ್ನು ಬೆರಗುಗಣ್ಣಿಂದ ನೋಡುತ್ತೀರಿ. ಪಾತ್ರಗಳ ಧ್ವನಿಬದಲಾವಣೆ ಅದೆಷ್ಟು ಸರಳವಾಗಿ ಮಾರ್ಪಾಡಾಗುವುದನ್ನು (ಠಛಿಚಞ್ಝಛಿಠಠ ಠ್ಟಿಚ್ಞಠಜಿಠಿಜಿಟ್ಞ) ಮನಸಾರೆ ಮೆಚ್ಚುತ್ತೀರಿ. ಕೊನೆಗೆ ಸೋಲೊ-ಪ್ಲೇ ಮುಗಿದಾಗ ನಿಮಗರಿವಿಲ್ಲದಂತೆಯೇ ಎದ್ದು ನಿಂತು ಲಕ್ಷ್ಮಿಯವರಿಗೆ ಗೌರವ (ಸ್ಟಾಂಡಿಂಗ್‌ ಒವೇಶನ್‌) ಸೂಚಿಸುತ್ತೀರಿ. ನಿಮ್ಮ ಗೌರವಕ್ಕೆ ಲಕ್ಷ್ಮಿಯವರಷ್ಟೇ ಪಾತ್ರರಾಗುತ್ತಾರೆ ನಿರ್ದೇಶಕಿ ಸೌಮ್ಯಾ ವರ್ಮಾ ಮತ್ತು ಸಂಗೀತ ಸಂಯೋಜನೆ, ರಂಗಪರಿಕರಗಳ ವ್ಯವಸ್ಥೆ ಇತ್ಯಾದಿಯಿಂದ ನಾಟಕಕ್ಕೆ ಇನ್ನಷ್ಟು ಮೆರುಗು ನೀಡಿದ ತೆರೆಮರೆಯ ಕಲಾವಿದ-ತಂತ್ರಜ್ಞರು ಕೂಡ.

Lakshmi Chandrashekhar performing a Solo Play Singarevva Matthu Aramaneಮೊನ್ನೆಯ ಕಾರ್ಯಕ್ರಮದಲ್ಲಿ ಶಿವವಿಷ್ಣು ದೇವಾಲಯದೊಂದಿಗೆ ಸಹಪ್ರಾಯೋಜಕತ್ವ ವಹಿಸಿದ್ದ ಕಾವೇರಿ ಕನ್ನಡ ಸಂಘದ ಕಾರ್ಯಕರ್ತರನ್ನು ಹೊರತು ಪಡಿಸಿದರೆ ಉಳಿದಂತೆ ಒಟ್ಟು ಪ್ರೇಕ್ಷಕರು ಸುಮಾರು ಎಪ್ಪತ್ತಾಗಬಹುದು. (ಮೆಮೋರಿಯಲ್‌ ಡೇ ದೀರ್ಘ ವಾರಾಂತ್ಯದಿಂದಾಗಿ ಕಡಿಮೆ ಹಾಜರಾತಿ ಇರಬಹುದು). ಆದರೆ ಈ ಇಷ್ಟೂ ಜನ ಸಹೃದಯ ಪ್ರೇಕ್ಷಕರು. ತುಂಬ ಮಂದಿ ನನಗೆ ಗೊತ್ತಿದ್ದಂತೆ ನಾಟಕ-ರಂಗಭೂಮಿಯ ಗೀಳುಳ್ಳವರು. ಇಂಥ ಒಂದು ಪ್ರಯೋಗವನ್ನು ನೋಡುವ ಕುತೂಹಲದಿಂದಲೇ ಬಂದವರು. ಬಂದದ್ದು ಸಾರ್ಥಕವಾಯಿತು ಎಂದುಕೊಂಡೇ ಮನೆಗೆ ಹಿಂದಿರುಗಿದವರು.

ಕೆಲದಿನಗಳ ಹಿಂದೆಯಷ್ಟೇ ಯುಗಾದಿಯ ಕಾರ್ಯಕ್ರಮದಲ್ಲಿ ಬೆಲ್ಲಕ್ಕಿಂತ ಬೇವು ಹೆಚ್ಚಾಗಿ ಭ್ರಮನಿರಸನವಾಗಿದ್ದ ಕಲಾಭಿಮಾನಿ ಕನ್ನಡಿಗರ ಮನಸೂರೆಗೊಂಡಿತು ಈ ನಾಟಕ. ಅದಕ್ಕೆಂದೇ ಹೇಳಿದ್ದು , ಸೋಲೊ-ಪ್ಲೇ ಸೋಲಲಿಲ್ಲ ; ಗೆದ್ದಿತು!

ಪೂರಕ ಓದಿಗೆ-

ಲಕ್ಷ್ಮಿ ಮೇಡಂರಿಂದ ‘ಸಿಂಗಾರೆವ್ವ’ ಸೋಲೋ ನಾಟಕ

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more