ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಂತಮೂರ್ತಿ ಮಾತುಗಳನ್ನು ಭಾವದ ಮೂಲಕ ಅಳೆಯುವ ಅಗತ್ಯವಿದೆ.

By Staff
|
Google Oneindia Kannada News
Ananthamurthy is rightಅನಂತ ಮೂರ್ತಿಯವರ ವಿಶ್ವದ ದೊಡ್ಡ ಸುಳ್ಳಾಡುವ ಭಾಷೆ ಇಂಗ್ಲಿಷ್‌ ಹೇಳಿಕೆ ಕುರಿತ ಚರ್ಚೆಯನ್ನು ಅತ್ಯಂತ ಕುತೂಹಲದಿಂದ ಗಮನಿಸುತ್ತಿರುವೆ.

ಅನಂತ ಮೂರ್ತಿಯವರ ಕೃತಿಗಳನ್ನು ಕುರಿತಂತೆ ಇಲ್ಲಿ ಹೇಳುವುದೇನೂ ಇಲ್ಲ. ವಿವಾದಗಳ ಮಧ್ಯೆಯೇ ಬೆಳೆದುಬಂಟದ್ದು ಅವರ ಹೋರಾಟ ಮತ್ತು ಬರವಣಿಗೆ. ಆದರೆ ಅನಂತ ಮೂರ್ತಿಯವರ ಮಾತುಗಳನ್ನು ಅರ್ಥೈಸುವುದಕ್ಕೆ ಪೂರಕವಾಗಿ ಅವರ ಸಾಹಿತ್ಯದ ಅರಿವು ಇರಬೇಕಾದ್ದು ಅಗತ್ಯ ಎನ್ನುವುದು ನನ್ನ ಅನಿಸಿಕೆ.

ಅನಂತಮೂರ್ತಿ ಸ್ವತಃ ಒಬ್ಬ ಇಂಗ್ಲಿಷ್‌ ಪ್ರಾಧ್ಯಾಪಕರು. ಬರೆದದ್ದು ಕನ್ನಡದಲ್ಲಿ. ಅವರ ಮಾತುಗಳನ್ನು ನಿಘಂಟುಗಳಿಂದ ಅರ್ಥೈಸುವುದು ಅಪಚಾರವಾದೀತು. ‘ಸಂಸ್ಕಾರ’ದಂತಹ ಅಪರೂಪದ ಅಲೋಚನೆಗಳು ಹುಟ್ಟಿದ್ದು ಕನ್ನಡದಲ್ಲಿಯೇ ಅಲ್ಲವೇ ? ಅದನ್ನು ಬರೆದವರು ಯುಆರ್‌ಎ ಅಲ್ಲವೇ ? ಇಲ್ಲಿ ಭಾಷೆಯಾಂದು ಮಾಹಿತಿ ಮಾಹಿತಿಯ ಧ್ಯೋತಕ. ಯಾವ ಭಾಷೆಗೂ ಸತ್ಯ ಹಾಗೂ ಸುಳ್ಳುಗಳನ್ನು ಓದುಗ/ಕೇಳುಗನಿಗೆ ದಾಟಿಸುವ ಸಾಮರ್ಥ್ಯ ಇರುತ್ತದೆ. ಕನ್ನಡದಲ್ಲಿ ಸುಳ್ಳುಗಳಿಲ್ಲವೇ ? ಹಾಗೆಂದ ಮಾತ್ರಕ್ಕೆ ಇಂಗ್ಲಿಷ್‌ನಲ್ಲಿ ಸತ್ಯ ಇಲ್ಲವಾಯಿತೇ ? ಯುಆರ್‌ಎ ಮಾತುಗಳನ್ನು ಭಾಷೆಯ ಮೂಲಕವಲ್ಲದೆ ಭಾವದ ಮೂಲಕ ಅಳೆಯುವ ಅಗತ್ಯವಿದೆ. ಇದು ನನ್ನ ಅಭಿಪ್ರಾಯ. ಭಾಷೆ ಒಂದು ಆಲೋಚನೆಯನ್ನು ದಾಟಿಸಲು ಬಳಸುವ ಸಾಧನ ಮಾತ್ರ. ಸಂವೇದನೆಗಳು ಕೆಲವು ಸಾರಿ ಪ್ರತಿಮೆಗಳಾಗಿ ಭಾಷೆಯ ಹಂದರಲ್ಲಿ ಹುದುಗಿ ಹೋಗುವ ಅವಕಾಶಗಳು ಹೆಚ್ಚು. ಅಂತಹದ್ದೇ ಒಂದು ಅಚಾತುರ್ಯಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ.

ನಾನು ಈಗಾಗಲೇ ಹೇಳಿದಂತೆ ಇಂಗ್ಲಿಷ್‌ ಪರಸ್ಪರ ಸಂವಹನೆಗೆ ಅನುವು ಮಾಡಿ ಕೊಡುವ ಸಾಧನ. ಆದರೆ ಅದು ಭಾಷೆಯಾಗಿರುವ ದೇಶಗಳ ಮನಸ್ಥಿತಿ ಎಂತಹದ್ದು ಎನ್ನುವುದನ್ನು ಅದರ ಇತಿಹಾಸವೇ ಎತ್ತಿ ಹಿಡಿಯುತ್ತದೆ. ಬ್ರಿಟಿಷರು ಭಾರತವೂ ಸೇರಿದಂತೆ ಕಾಲಿಟ್ಟ ಕಡೆ ರಾಜ್ಯ ಕಟ್ಟುವ ಹುನ್ನಾರ ನಡೆಸಿದವರು. ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಜಂಭ ಕೊಚ್ಚಿಕೊಂಡವರು. ಆಪ್ಯಾಯವಾಗಿದ್ದ ನೆರೆ ರಾಜ್ಯಗಳ ನಡುವೆ ಜಗಳ ತಂದಿಟ್ಟು ತಮಾಷೆ ನೋಡುತ್ತಾ ಆ ಕಿಚ್ಚಿನಲ್ಲಿ ತಮ್ಮ ಸ್ವಾರ್ಥದ ಬೇಳೆ ಬೇಯಿಸಿಕೊಂಡವರು.

ವರ್ಣ ವ್ಯವಸ್ಥೆಯನ್ನು ಜಾತಿ ಪದ್ಧತಿಯನ್ನು ತಮ್ಮಿಷ್ಟಕ್ಕೆ ಅರ್ಥೈಸಿ ನಮ್ಮ ನಮ್ಮವರ ನಡುವೆ ಹಚ್ಚಿಟ್ಟ ಕೊಳ್ಳಿ ಇನ್ನೂ ನಂದಿಲ್ಲ. ಪ್ರಜಾಪ್ರಭುತ್ವದ ಹೆಸರಲ್ಲಿ ಅವರು ನಮಗೆ ಬಿಟ್ಟು ಹೋದದ್ದು ಒಳ ಜಗಳಜಗಳು, ಮತೀಯ ಕಲಹಗಳು, ಭ್ರಾಮಕ ಅಭಿವೃದ್ಧಿ (?) ಯೋಜನೆಗಳು, ಎಂದೂ ಸರಿ ಹೋಗಲಾರದ ಶಿಕ್ಷಣ ವ್ಯವಸ್ಥೆ ಹಾಗೂ ಭ್ರಷ್ಟತನದ ಮನಸ್ಸುಗಳನ್ನು.

ಇದು ಒಂದು ಇಂಡಿಯಾದ ಕಥೆ. ಇನ್ನು ಅವರು ಕಾಲಿಟ್ಟ ಕಡೆಯೆಲ್ಲ ಇಂಥವೇ ಅಪಸವ್ಯಗಳು ಕಣ್ಣಿಗೆ ರಾಚುತ್ತವೆ. ಅಮೆರಿಕೆಗೂ ಇಂತಹದ್ದೇ ಇತಿಹಾಸವಿದೆ.ಅದು ಕೂಡ ರಕ್ತ ಸಿಕ್ತ ಪುಟಗಳಲ್ಲಿ ಬರೆದಿರುವುದೇ. ಇಂದು ಭಾರತವೂ ಸೇರಿದಂತೆ ವಿಶ್ವದೆಲ್ಲೆಡೆ ನರ್ತಿಸುವ ಭಯೋತ್ಪಾದನೆಯ ಕೂಸು ಹುಟ್ಟಿದ್ದು ಸ್ವತಃ ಅಮೆರಿಕದಲ್ಲಿಯೇ. ಈ ಹೊತ್ತು ಅದರ ಹುಟ್ಟಡಗಿಸುವೆವು ಎಂದು ಹೊರಟಿರುವವರೂ ಅವರೆಯೇ. ಇಂತಹ ಚೋದ್ಯಗಳು ಇನ್ನೂ ಹಲವಿದ್ದಾವು. ಒಟ್ಟಿನಲ್ಲಿ ಇಂಗ್ಲಿಷ್‌ಅನ್ನು ಕೇವಲ ಭಾಷೆಯಷ್ಟಕ್ಕೇ ಸೀಮಿತಗೊಳಿಸದೆ, ಮನಸ್ಥಿತಿಯೆಂದು ಪರಿಗಣಿಸಿದರೆ ಅನಂತ ಮೂರ್ತಿಯವರ ಮಾತಿನ ಭಾವ ಹೊಳೆಯಬಹುದು.

ಬಿಸಿಆರ್‌ ಸಹಾ ಇಂಗ್ಲಿಷ್‌ ಸಾಹಿತ್ಯ ಹೇಳಿಕೊಡುತ್ತಾ ಕನ್ನಡದಲ್ಲಿ ಅದ್ಭುತ ಕಾವ್ಯ ಕೆತ್ತಿಕೊಟ್ಟವರು. ಇದು ಕೇವಲ ಮನವ ಸಂತೈಸುವ ಮಾತಲ್ಲ. ಸತ್ಯದ ಯಥಾರ್ಥ ಸ್ವರೂಪ. ಸಂವೇದನೆಗಳು ಅರ್ಥವಾಗದಿದ್ದರೆ ವೇದನೆಗಳು ಅಪಾರ ಅನ್ನುವುದರಲ್ಲಿ ಎರಡು ಮಾತಿಲ್ಲ.

ಅನಂತ ಮೂರ್ತಿಯವರ ಅಥವಾ ಅವರಂತ ಯಾರದೇ ಮಾತಿನ ಸತ್ಯದ ಹೊಳಪು ನೋಡಲು ಹೊಸ ಕನ್ನಡಕದ ಅಗತ್ಯವಿಲ್ಲ. ಇರುವ ಕನ್ನಡಕವನ್ನೇ ಒಮ್ಮೆ ಒರೆಸಿ ಹಾಕಿಕೊಂಡರೆ ಸಾಕು. ಸತ್ಯ ಸೊಗಸಾಗಿ ಕಾಣುತ್ತದೆ.


ಪೂರಕ ಓದಿಗೆ-
ಜಾನಕಿ ಲೇಖನ ಇಷ್ಟಪಟ್ಟೆ -ಅನಂತಮೂರ್ತಿ
ಜೈ ಕನ್ನಡ ತಾಯೇ ಅಮೆರಿಕನ್ನಡಿಗರನ್ನೂ ಕಾಯೇ !
ಕನ್ನಡಕ್ಕೂನಮ್ಮ ಮಕ್ಕಳಿಗೂ ಅಪಾರ ನಂಟು
ಬೆನ್ನು ತಟ್ಟಬೇಕಾದವರಿಂದ ಬರೆ
ಕಡಲಾಚೆಗಿನ ಕನ್ನಡತನ ಒರೆಗೆ
ಇಗೋ ಕನ್ನಡ : ಬೆಂಗಳೂರಿನಲ್ಲಿ ಅಮೆರಿಕನ್ನಡಿಗನ ಪ್ರಾತ್ಯಕ್ಷಿಕೆ
ಎನ್ನಾರೈಗಳನ್ನೇಕೆ ಬೀಳುಗಳೆವಿರಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ಒಂದು ಸುಳ್ಳಿನ ಸುತ್ತ ಮುತ್ತ ...

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X