• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಯ್ಕಾಂತಾನಾದ್ರೂ ನೆನೆಸ್ಕೊಂತೀರಲ್ಲ ಶರ್ಮ ಸಾರ್‌, ಅದೇ ಸಂತೋಷ

By Super
|

ಲಕ್ಷ್ಮೀನಾರಾಯಣ ಗಣಪತಿ

E-mail : lganapathi@nc.rr.com

70 ಮತ್ತು 80ರ ದಶಕದಲ್ಲಿ ನಡೆದ ಲಂಕೇಶ್‌ ಮತ್ತು ಅನಂತಮೂರ್ತಿ ನಡುವಣ ಚಕಮಕಿ ನೆನಪಿದೆಯಾ ?

ಅನಂತಮೂರ್ತಿಯವರು ಅಡಿಗರ ಕಾವ್ಯದ ಬಗ್ಗೆಯೇ ಆಗಲಿ ಅಥವಾ ‘ಮಧ್ಯಮ ವರ್ಗದ ಸಣ್ಣ ಸಣ್ಣ ಆಸೆಗಳ ..' ಬಗ್ಗೆಯೇ ಆಗಲಿ ಏನಾದರೂ ಹೇಳಿದರೆ, ಅದಕ್ಕೆ ಲಂಕೇಶರ ಕುಹಕವೆನ್ನಿ, ಕಟಕಿಯೆನ್ನಿ, ಏನೋ ಒಂದು ರೂಪದ ವಿಮರ್ಶೆ, ಆಕ್ಷೇಪ ಸಿದ್ಧವಾಗಿರುತ್ತಿತ್ತು. ಜಾಣ ಮಾತುಗಾರರೆಂದು ಪ್ರಖ್ಯಾತರಾಗಿದ್ದ ಅನಂತಮೂರ್ತಿ, ಒಂದೇ ಮಾತಿನಲ್ಲಿ ಲಂಕೇಶ್‌ ಬಗ್ಗೆ ಹೇಳಿದ್ದು- ‘..ಲಂಕೇಶ್‌ ತಮ್ಮ ಮಾತುಗಳಿಂದ ನನ್ನನ್ನು ಜೀವಂತವಾಗಿಟ್ಟಿದ್ದಾರೆ...'!

ಈಗ ನೆನಪಾಗುವಂತೆ ಕಾಲೇಜು ವಿದ್ಯಾರ್ಥಿಗಳಾಗಿದ್ದ ನಾವಂತೂ ಅನಂತಮೂರ್ತಿಯವರ ‘ಭಾರತೀಪುರ'ದಲ್ಲಿನ ಗಣೇಶನನ್ನು ಮೆಚ್ಚಿಕೊಳ್ಳುತ್ತಾ ಅದನ್ನು ಬರೆದ ಅನಂತ ಮೂರ್ತಿಯವರು ಎಸ್ತರನ್ನ ಪ್ರೀತಿಸಿ ಮದುವೆಯಾಗಿ ಸಮಾಜದೆದುರು ಗಂಡಾಗಿ ನಿಂತದ್ದನ್ನ ಮೆಚ್ಚಿಕೊಂಡಿದ್ದೆವು. ಹಾಗೆಯೇ ಲಂಕೇಶರ ಬರಹದ ಧೈರ್ಯ, ತಾಜಾತನ ಹಾಗೂ ಶೈಲಿಯ ವೈಶಿಷ್ಟ್ಯಗಳನ್ನ ಮೆಚ್ಚಿದ್ದೆವು.

ಲಂಕೇಶ್‌ ತಮ್ಮ ಬದುಕಿಗೊಂದು ಹೊಸ ಆಯಾಮ ಕಂಡುಕೊಂಡು, ಮಧ್ಯಮ ವರ್ಗದ ಬದುಕಿನ ಮೂಲವಾಗಿದ್ದ ತಮ್ಮ ಪ್ರೊಫೆಸರ್‌ ಕೆಲಸದ ಹಂಗನ್ನು ಬಿಟ್ಟು, ಜಾಹೀರಾತುಗಳ ಗುಂಗಿಗೇ ಹೋಗದೆ, ಕನ್ನಡಿಗನ ಕನ್ನಡ ಪ್ರೇಮವನ್ನಷ್ಟೆ ನಂಬಿ ‘ಲಂಕೇಶ್‌ ಪತ್ರಿಕೆ' ಆರಂಭಿಸಿದ್ದರು. ಈ ಪತ್ರಿಕೆಯ ಮೂಲಕ ತಮ್ಮ ಸಾಹಸಿ ಪ್ರವೃತ್ತಿಯನ್ನು ಸಾಬೀತು ಪಡಿಸಿದ್ದಷ್ಟೇ ಅಲ್ಲದೆ, ಕನ್ನಡಿಗನನ್ನೂ ದುಡ್ಡು ಕೊಟ್ಟು ಓದುವಂತೆ ಮಾಡಿಯೇನೆಂದು ತೋರಿಸಿದರು. ಅಷ್ಟೇ ಅಲ್ಲದೆ, ಸಿನಿಮಾ ನಿರ್ದೇಶಿಸುವುದರ ಮೂಲಕವೂ ತಮ್ಮನ್ನ ಅಭಿವ್ಯಕ್ತಿಗೊಳಿಸಿಕೊಳ್ಳುತ್ತಾ ಹೋದ ಲಂಕೇಶ್‌ ತಮ್ಮದೇ ಆದ ಛಾಪನ್ನ ಕನ್ನಡಿಗರಲ್ಲಿ ಬಿಟ್ಟು ಹೋಗಿದ್ದಾರೆ. 90 ರ ಬಳಿಕ ನಡೆದ ಬೆಳವಣಿಗೆಗಳ ಬಗ್ಗೆ ಜಾಸ್ತಿ ಹೇಳಲಾರೆನಾದರೂ ಸದ್ಯದ ಪರಿಸ್ಥಿತಿಗೆ ಅದರ ಅಗತ್ಯವೂ ಇಲ್ಲವೆನ್ನಿ.

ಒಟ್ಟಿನಲ್ಲಿ ಸೃಷ್ಟಿಶೀಲ ವ್ಯಕ್ತಿಗಳಿಬ್ಬರು ವಸ್ತುನಿಷ್ಠವಾಗಿ ಇನ್ನೊಬ್ಬರನ್ನ ವಿಮರ್ಶಿಸುತ್ತ, ಉಳಿದವರ ವ್ಯಾಖ್ಯೆ ವಿಮರ್ಶೆಗಳಿಗೆ ತಮ್ಮನ್ನ ಸಹಜವಾಗಿಯೇ ಒಡ್ಡಿಕೊಳ್ಳುತ್ತಾ ಕಾರ್ಯನಿರತರಾದಾಗ ನಡೆಯುವ ಸೃಷ್ಟಿ ಕಾರ್ಯದಿಂದ, ಸ್ವತಃ ತಮ್ಮ ಏಳಿಗೆಯಷ್ಟೇ ಅಲ್ಲದೆ ಸಮಾಜದ ಏಳ್ಗೆಯ ಕಾರ್ಯವನ್ನೂ ಸಾಧಿಸುವರೆಂಬುದನ್ನು ನಾವು ಗಮನಿಸಬೇಕು. ಇನ್ನು ನವೋದಯ, ನವ್ಯ ಎಂದೆಲ್ಲ ವಿಂಗಡಿಸಿ ಸಾಹಿತ್ಯಾಭ್ಯಾಸದ ದೃಷ್ಟಿಯಿಂದ ತುಲನೆ ಮಾಡುವುದಕ್ಕೆ ಔಚಿತ್ಯವಿದ್ದರೂ, ಓದುಗನ ಮೇಲೆ ನಾವು ಅಂತಹ ಯಾವುದೆ ಒತ್ತಡ ಹೇರುವುದಕ್ಕೆ ಸಾಧ್ಯವಾಗುವುದಿಲ್ಲ . 70 ರಲ್ಲಿ ಬೆಳೆಯುತ್ತಿದ್ದ ವಿದ್ಯಾರ್ಥಿಗಳಿಗೆ ಅರ್ಥವತ್ತಾಗಿ ಮೂಡಿಬಂದ ಅನಂತಮೂರ್ತಿ ಮತ್ತು ಚಿತ್ತಾಲ ಮುಂತಾದವರ ಕೃತಿಗಳ ಪಾತ್ರಗಳೇ ಆಗಲಿ, ಆನಂತರದ ವಿವೇಕ್‌ ಶಾನಭಾಗ್‌ ಅವರ ಶೈಲಿಯೇ ಆಗಲಿ ಮೆಚ್ಚಿಗೆಯಾದರೆ ಅದಕ್ಕೆ ಎಲ್ಲಕ್ಕಿಂತಲೂ ಹೆಚ್ಚಾಗಿ ಬದಲಾದ ಜನಗಳ ರುಚಿ ಕಾರಣವೇ ಹೊರತು ಕೃತಿಯ ಹಿಂದಿನ ವಸ್ತುವಲ್ಲ. ಕಾರಣವಿಷ್ಟೆ , ಆ ವಸ್ತು ಮೂಲತಃ ಮಾನವ ಬದುಕಿಗೆ ಸಂಬಂಧ ಪಟ್ಟದ್ದೇ ಆಗಿರುತ್ತದೆ. ಓದುಗನ ಮೆಚ್ಚಿಕೆ ಅಥವಾ ಆಯ್ಕೆಗಳನ್ನೂ ವಿಮರ್ಶೆಗೆ ಒಳಪಡಿಸುವುದಲ್ಲದೆ ತಿರಸ್ಕಾರದಿಂದ ನೋಡುವುದರ ಉದ್ದೇಶ ಮಾತ್ರ ಅರ್ಥವಾಗುವುದಿಲ್ಲ.

ಇತ್ತೀಚೆಗೆ ಶುರುವಾದ ಕನ್ನಡಿಗ ಅಮೇರಿಕನ್ನಡಿಗರ ನಡುವಣ ಚಕಮಕಿಯ ಹಿನ್ನೆಲೆಯಲ್ಲಿ ಮೇಲಿನ ಮಾತುಗಳನ್ನು ಹೇಳಬೇಕಾಯಿತು. ಪ್ರಸ್ತುತದ ಚಕಮಕಿಯೂ ಇದೇ ರೀತಿಯ ಸೃಷ್ಟಿಶೀಲ ಕ್ರಿಯೆಗೆ ನಾಂದಿಯಾಗಲೆಂದು ಹಾರೈಸೋಣ.

ಮೂಲತಃ ಭಾವುಕ ಮನಸ್ಸಿನ ಹಲವು ತುಡಿತಗಳಿಗೆ, ಸಮಾಜದೊಡಗಿನ ಪ್ರತಿಸ್ಪಂದನಗಳಿಗೆ ಶಬ್ದದಿಂದ ರೂಪುಗೊಟ್ಟು ದಾಖಲಿಸುವ ಯಾವೊಬ್ಬ ವ್ಯಕ್ತಿಯೇ ಆಗಲಿ, ಆತ ಎಲ್ಲೇ ಇರಲಿ- ತನ್ನ ತುಡಿತಗಳ ಸ್ಪಂದನಕ್ಕಾಗಿ ಕನ್ನಡವನ್ನ ಬಳಸಿದರೆ, ಕನ್ನಡಿಗನೆಂಬ ಯಾರೇ ಆಗಲಿ ಹೆಮ್ಮೆ ಪಟ್ಟು ಕೊಳ್ಳಬೇಕು.

ಮತ್ತೆ ಇನ್ನೊಂದು ವಿಷಯ. 80 ರ ನಂತರ ಬಂದ ನನ್ನಂತ ಪಡ್ಡೆ ಹುಡುಗರಿಗೆ ಅನಂತಮೂರ್ತಿ, ಲಂಕೇಶ್‌, ಕಂಬಾರ, ಕಾರ್ನಾಡರೇ ಜಾಸ್ತಿ ಗೊತ್ತಿರೋದು ನೋಡಿ. ಇನ್ನೂ ಬೇಕಂದ್ರೆ ಚಿತ್ತಾಲರ ಕಥನ ಶೈಲಿಯ ಥ್ರಿಲ್‌ ಸಹಾ ಇಷ್ಟ ಅನ್ನಿ. ಇದರಲ್ಲೇನೂ ಮುಚ್ಚುಮರೆಯಿಲ್ಲ ; ಮುಜುಗರವೂ ಇಲ್ಲ .

ಗಂಧ ತೇದಷ್ಟೂ ಸುವಾಸನೆ ಹಬ್ಬುತ್ತದೆಯಲ್ಲ , ಅದೇರೀತಿ ತವರು ಕನ್ನಡಿಗರು ಹಾಗೂ ಅನಿವಾಸಿ ಕನ್ನಡಿಗರ ಈ ಚಕಮಕಿ ನಡೆಯಲಿ ಅಂತ ಹಾರೈಸೋಣ. ಅಂದ ಹಾಗೆ, ಈ ಚಕಮಕಿಯಿಂದ ಕವಿ ರಾಮಚಂದ್ರ ಶರ್ಮರಿಗೊಂದು ಅನುಕೂಲವಾಗಿರುವ ಸಾಧ್ಯತೆಯೂ ಇದೆ. ಶರ್ಮ ಯಾರು ಎಂದು ತಿಳಿಯದವ್ರು ಕುತೂಹಲಕ್ಕಾಗಿಯಾದ್ರೂ ಶರ್ಮರ ಪುಸ್ತಕ ಕೊಂಡಾರು. ಪುಸ್ತಕಗಳ ಮಾರಾಟಕ್ಕಾದ್ರೂ ಸರಿ, ಆಗಾಗ ಶರ್ಮ ಅವರು ಇಂಥ ಚಾಟಿಯೇಟು ನೀಡಬೇಕು. ಅಂದಹಾಗೆ, ಶರ್ಮ ಅವರೇ- ನಿಮ್ಮ ಪುಸ್ತಕಗಳ ಮಾರಾಟದಲ್ಲೇನಾದರೂ ಏರುಮುಖವಾಯಿತಾ ?

ಇನ್ನು ಭಾರತದ ಚರಂಡಿ, ರಸ್ತೆಗಳ ಅವ್ಯವಸ್ಥೆಗಳ ಬಗ್ಗೆ ಮೂಗೆಳೆಯುವವರಷ್ಟೇ ಅಮೇರಿಕಾದಲ್ಲಿ ಇದ್ದಾರೆಂದುಕೊಳ್ಳಬೇಡಿ. ಹೊರನಾಡಿಗೆ ಬಂದಾಕ್ಷಣ ಕನ್ನಡದ ಮೇಲಿನ ನಮ್ಮ ಪ್ರೀತಿ, ಹಕ್ಕು ನಿಮಗಿಂತ ಕಡಿಮೆಯಾದೀತೆಂದು ಭ್ರಮಿಸಬೇಡಿ. ರತ್ನನ ಪದಗಳು ಗೊತ್ತಿದೇ ತಾನೆ, ‘.. ನರಕಕ್ಕಿಳ್ಸಿ, ನಾಲ್ಗೆ ಸೀಳ್ಸಿದ್ರೂನು.. ಮೂಗ್ನಾಗೆ ಕನ್ನಡ ಪದಗೋಳ್‌..' ಹಾಡುವವರೂ ಇಲ್ಲಿದ್ದಾರೆ ಸ್ವಾಮಿ. ಇರಲಿ ಮೊದಲೇ ಹೇಳಿದಂತೆ, ಶ್ರೀಗಂಧ ತೇಯ್ದಂತೆ ನಾವಿಬ್ರೂ ಸವೆಯೋಣ.

ಪೂರಕ ಓದಿಗೆ-

ಜಾನಕಿ ಲೇಖನ ಇಷ್ಟಪಟ್ಟೆ -ಅನಂತಮೂರ್ತಿ

ಜೈ ಕನ್ನಡ ತಾಯೇ ಅಮೆರಿಕನ್ನಡಿಗರನ್ನೂ ಕಾಯೇ !

ಕನ್ನಡಕ್ಕೂನಮ್ಮ ಮಕ್ಕಳಿಗೂ ಅಪಾರ ನಂಟು

ಬೆನ್ನು ತಟ್ಟಬೇಕಾದವರಿಂದ ಬರೆ

ಕಡಲಾಚೆಗಿನ ಕನ್ನಡತನ ಒರೆಗೆ

ಇಗೋ ಕನ್ನಡ : ಬೆಂಗಳೂರಿನಲ್ಲಿ ಅಮೆರಿಕನ್ನಡಿಗನ ಪ್ರಾತ್ಯಕ್ಷಿಕೆ

ಎನ್ನಾರೈಗಳನ್ನೇಕೆ ಬೀಳುಗಳೆವಿರಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ

ಒಂದು ಸುಳ್ಳಿನ ಸುತ್ತ ಮುತ್ತ ...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Discussion on Dr.B.C.Ramachandra Sharmas blame towards NRIs is a healthy one : Lakshminarayana Ganapathi

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more