• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಲಿಬು ದೇಗುಲದಲ್ಲಿ ಯುಗಾದಿ ರಸಮಂಜರಿ

By Staff
|
  • ಮವಾಸು, ಲಾಸ್‌ ಏಂಜಲೀಸ್‌

Email : vshastry@yahoo.com

ಯುಗಾದಿ ಹಬ್ಬ ಮುಗಿದು ಎರಡು ವಾರವಾಗಿದ್ದರೂ ದಕ್ಷಿಣ ಕ್ಯಾಲಿಫೋರ್ನಿಯಾದ ಕನ್ನಡ ಪ್ರೇಮಿಗಳಿಗೆ ಏಪ್ರಿಲ್‌ 19 ರಂದು ಮಾಲಿಬು ದೇವಸ್ಥಾನದಲ್ಲಿ ಇದ್ದ ಸಡಗರ ಹಬ್ಬವನ್ನು ಮತ್ತೆ ಕರೆತಂದಂತಿತ್ತು. ದೇವಸ್ಥಾನದ ರಂಗಮಂದಿರದ ಬಾಗಿಲಲ್ಲೇ ಕುಳಿತು ಸ್ವಾಗತಿಸಿ ಮುಂದಿನ ವರ್ಷದ ಸದಸ್ಯತ್ವವನ್ನು ಸಂಘದ ಪದಾಧಿಕಾರಿಗಳು ನವೀಕರಿಸುತ್ತಿದ್ದರು. ಎಲ್ಲರೂ ಕಾತುರದಿಂದ ಕಾಯುತ್ತಿದ್ದಿದ್ದು ಸಂಘದ ಸದಸ್ಯರಿಂದ ಸಂಗೀತೋತ್ಸವ ರಸಸುಧೆಗೆ.
ಪ್ರಕಟಿಸಿದ ವೇಳೆಗೆ ಆಸುಪಾಸಿನಲ್ಲೇ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸರಸ್ವತಿ ಬ್ರಹ್ಮಾಂಡಂ ಅವರ ನಿರ್ವಹಣೆಯಲ್ಲಿ ತರಬೇತಿಗೊಂಡ ಗುಂಪು ಮೊದಲು ಹಾಡಿತು. ಜೀವನದ ಆದಿಯಿಂದ ಕೊನೆಯವರೆಗೂ ವಿವಿಧ ಮೈಲಿಗಲ್ಲುಗಳನ್ನು ಚಿತ್ರಿಸುವ ಹಾಡುಗಳು ಎಲ್ಲರನ್ನೂ ರಂಜಿಸಿತ್ತು. KCA-SC Ugadi celebration
ನಂತರದ ಸಮೂಹಗಾನ ಶ್ರೀಮತಿ. ಈಶ್ವರೀ ರಾವ್‌ ಅವರ ನಿರ್ವಹಣೆಯ ಗುಂಪಿನಿಂದ. 14 ಜನರ ಗುಂಪನ್ನು ಕಲೆ ಹಾಕಿ ಜನಪ್ರಿಯ ಗೀತೆಗಳನ್ನು ಹಾಡಿ ಎಲ್ಲರನ್ನೂ ರಂಜಿಸಿದ ಗೌರವ ಈಶ್ವರಿಯವರಿಗೆ ಸಲ್ಲುತ್ತದೆ. ಎಲ್ಲರೂ ಹಾಡುಗಾರಿಕೆಯಲ್ಲಿ ಪ್ರವೀಣರಲ್ಲದಿದ್ದರೂ ಅವರ ಹಾಡುಗಳೂ ಎಲ್ಲರನ್ನೂ ಮುಗ್ಧರನ್ನಾಗಿಸಿತ್ತು. KCA-SC Ugadi celebration
ಹಾಡುಗಳಿಂದ ರಂಜಿತರಾದ ಸದಸ್ಯರಿಗೆ ವಿರಾಮ ಸಿಕ್ಕಿದ್ದು ಸಂಘದ ವಾರ್ಷಿಕ ಸರ್ವಸದಸ್ಯರ ಸಭೆಯ ಮೂಲಕ. ವಾರ್ಷಿಕ ಪತ್ರಿಕೆ ‘ಸಂಗಮ’ದ ಸಂಪಾದಕ ಸಮಿತಿಯ ಪರಿಚಯದೊಂದಿಗೆ ಪತ್ರಿಕೆಯ ಬಿಡುಗಡೆಯಾಯಿತು. ಸಂಘದ ಖಜಾಂಚಿ ವಾರ್ಷಿಕ ಹಣಕಾಸಿನ ವರದಿ ಓದಿದರು. ಸಂಘದ ಕೆಲವು ಕಾನೂನುಗಳ ಬದಲಾವಣೆಯಾಂದಿಗೆ ವಾರ್ಷಿಕ ಸಭೆ ಮುಗಿಯಿತು. KCA-SC Ugadi celebration
ಶ್ರೀನಿವಾಸ ಭಟ್ಟರ ನಿರ್ವಹಣೆಯ ಸುಮ ಭಟ್‌ ಮತ್ತು ಸುದು ಚಲನ್‌ರ ತಂಡ ಎಲ್ಲರ ಗಮನ ಸೆಳೆದಿತ್ತು . ಈ ತಂಡದ ವಿಶೇಷವೆಂದರೆ ಕನ್ನಡದ ‘ಕ್ಯಾರಿಯೋಕೆ’. ಇದನ್ನು ಸಂಗ್ರಹಿಸಿದವರು ವಲ್ಲೀಶ ಶಾಸ್ತ್ರಿ. ಕನ್ನಡದ ಜನಪ್ರಿಯ ಚಿತ್ರಗೀತೆಗಳೊಂದಿಗೆ ಕೂಡಿದ್ದ ಹಾಡುಗಳು ಸದಸ್ಯರಿಗೆ ಹೊಸ ಅನುಭವವನ್ನೇ ನೀಡಿದವು. ತಾಂತ್ರಿಕ ತೊಂದರೆಗಳಿಂದ ಮೈಕಾಸುರನ ಹಾವಳಿ ಇದ್ದರೂ ಗಾಯಕರಲ್ಲಿನ ಉತ್ಸಾಹ ಕಮ್ಮಿ ಏನೂ ಇರಲಿಲ್ಲ. KCA-SC Ugadi celebration
ಡಾ।। ರಾಜ್‌ಕುಮಾರ್‌ರವರ ಮೊದಲ ಚಲನಚಿತ್ರ ‘ಬೇಡರ ಕಣ್ಣಪ್ಪ’ದ ‘ಶಿವಪ್ಪ ಕಾಯೋ ತಂದೆ .....’ ಹಾಡನ್ನು ಹಾಡಿದಾಗ ಕೆಲವು ಪ್ರೇಕ್ಷಕರು ಊಟದ ಪಾತ್ರೆಯನ್ನು ರಂಗದ ಮೇಲೆ ತಂದಿದ್ದು ಮನರಂಜನೆಯ ಪ್ರತೀಕವಾಗಿತ್ತು. ಯುಗಾದಿ ಹಬ್ಬ ಮುಗಿದು ಎರಡು ವಾರವಾಗಿದ್ದರೂ ದಕ್ಷಿಣ ಕ್ಯಾಲಿಫೋರ್ನಿಯಾದ ಕನ್ನಡ ಪ್ರೇಮಿಗಳಿಗೆ ಏಪ್ರಿಲ್‌ 19 ರಂದು ಮಾಲಿಬು ದೇವಸ್ಥಾನದಲ್ಲಿ ಇದ್ದ ಸಡಗರ ಹಬ್ಬವನ್ನು ಮತ್ತೆ ಕರೆತಂದಂತಿತ್ತು. ದೇವಸ್ಥಾನದ ರಂಗಮಂದಿರದ ಬಾಗಿಲಲ್ಲೇ ಕುಳಿತು ಸ್ವಾಗತಿಸಿ ಮುಂದಿನ ವರ್ಷದ ಸದಸ್ಯತ್ವವನ್ನು ಸಂಘದ ಪದಾಧಿಕಾರಿಗಳು ನವೀಕರಿಸುತ್ತಿದ್ದರು.
ಎಲ್ಲರೂ ಕಾತುರದಿಂದ ಕಾಯುತ್ತಿದ್ದಿದ್ದು ಸಂಘದ ಸದಸ್ಯರಿಂದ ಸಂಗೀತೋತ್ಸವ ರಸಸುಧೆಗೆ. ರಸಮಂಜರಿಯ ನಂತರದ ಸರದಿ ರಾಜೇಶ್ವರಿ ಕಡೂರ್‌ ಅವರ ನಿರ್ವಹಣೆಯ ಬಳಗದ್ದು. ಎಲ್ಲರಿಗಿಂತ ದೊಡ್ಡ ಗುಂಪನ್ನೇ ನಿರ್ವಹಿಸಿದ್ದ ಇವರ ಕಾರ್ಯ ಸ್ತುತ್ಯಾರ್ಹ. ಗುಂಪಿನ ಉತ್ಸಾಹ ಎಲ್ಲರ ಮೆಚ್ಚುಗೆಗಳಿಸಿತ್ತು. KCA-SC Ugadi celebration
ರಸಮಂಜರಿಯ ನಂತರದ ರುಚಿಕರ ಭೋಜನ ಎಲ್ಲರನ್ನೂ ಸಂತೃಪ್ತಿಗೊಳಿಸಿತ್ತು.
Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more