• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರಿನ ರಮಣ ಮಹರ್ಷಿ ಅಕಾಡೆಮಿಯ ದೃಷ್ಟಿ.ಯಿಲ್ಲದ ವಿದ್ಯಾರ್ಥಿಗಳು ತಮ್ಮ ನೃತ್ಯ ಪ್ರತಿಭೆ ತೋರಲಿದ್ದಾರೆ. ಅವರಿಗೆ ಕೈತುಂಬಾ ದೇಣಿಗೆ ಕೊಡುವ ಮನಸ್ಸು ನಿಮ್ಮದಾಗಲಿ.

By Prasad P Naik
|

Kaveri is hosting Kannada movie Premothsava on June 7th‘ತಮಸೋಮಾ ಜ್ಯೋತಿರ್ಗಮಯ’- ಬೆಂಗಳೂರಿನ ರಮಣ ಮಹರ್ಷಿ ಅಕಾಡೆಮಿಯಲ್ಲಿ ಓದುತ್ತಿರುವ ದೃಷ್ಟಿಯಿಲ್ಲದ ವಿದ್ಯಾರ್ಥಿಗಳು ಮೇ 31ನೇ ತಾರೀಕು ಶನಿವಾರ ಅಮೆರಿಕೆಯಲ್ಲಿ ಮನಬಿಚ್ಚಿ ಕುಣಿಯಲಿರುವ ಕಾರ್ಯಕ್ರಮದ ಹೆಸರಿದು. ಅವರ ಕಂಗಳಲ್ಲಂತೂ ಬೆಳದಿಂಗಳಿಲ್ಲ. ಮನದಂಗಳದಲ್ಲಿ ಬೆಳಕು ಚೆಲ್ಲಲು ದೇಣಿಗೆ ಕೊಡುವ ದೊಡ್ಡ ಮನಸ್ಸು ನಿಮ್ಮದಾಗಲಿ.

ಕಾವೇರಿ ಕನ್ನಡ ಸಂಘ ಈ ಸದುದ್ದೇಶದ ಕಾರ್ಯಕ್ರಮ ಆಯೋಜಿಸಿದೆ. ಎಸ್‌ಎಸ್‌ವಿಟಿ ಸಹ ಪ್ರಾಯೋಜಕತ್ವದಲ್ಲಿ ಆಯೋಜಿತವಾಗಿರುವ ಈ ಕಾರ್ಯಕ್ರಮ ಎಸ್‌ಎಸ್‌ವಿಟಿ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಪ್ರವೇಶ ಉಚಿತ.

ದಾನಿಗಳು ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ- ಸಂಜಯ್‌ ರಾವ್‌ : (703) 442- 3316 ಅಥವಾ ಹಿರೇಮಠ : (301) 360- 9951.

ವಿಷ್ಣು ಅಭಿಮಾನಿಗಳಿಗೆ ‘ಪ್ರೇಮೋತ್ಸವ’

ಜೂನ್‌ 7ನೇ ತಾರೀಕು ಮಧ್ಯಾಹ್ನ 1 ಗಂಟೆಗೆ Loehmans Twin Cinemas, Falls Church, VA ನಲ್ಲಿ ‘ಪ್ರೇಮೋತ್ಸವ’ ಸಿನಿಮಾ ಪ್ರದರ್ಶನವನ್ನು ಕಾವೇರಿ ಕನ್ನಡ ಸಂಘ ಏರ್ಪಡಿಸಿದೆ.

ದಿನೇಶ್‌ ಬಾಬು ನಿರ್ದೇಶನದ ಈ ಚಿತ್ರದಲ್ಲಿ ವಿಷ್ಣುವರ್ಧನ್‌, ರೋಜಾ, ದೇವಯಾನಿ, ಕಾಶಿ ಮೊದಲಾದವರು ಅಭಿನಯಿಸಿದ್ದಾರೆ.

ಚಿತ್ರದ ಟಿಕೇಟೊಂದಕ್ಕೆ 7 ಡಾಲರ್‌. 12 ವರ್ಷದೊಳಗಿನ ಮಕ್ಕಳಿಗೆ ಹಾಗೂ ಹಿರಿಯ ನಾಗರಿಕರಿಗೆ 5 ಡಾಲರ್‌. 5 ವರ್ಷದ ಕಾಸಿಲ್ಲದೆ ಪ್ರವೇಶ. ಯಾವುದಕ್ಕೂ, ರಾಮ್‌ ರಾವ್‌ : (301) 528 -7198, ಕೇಶವ್‌ ಪ್ರಸಾದ್‌ : (301) 527-1137, ಪುರುಷೋತ್ತಮರಾವ್‌: (240) 606 1575- ಇವರಿಗೆ ಫೋನ್‌ ಮಾಡಿ.

ಚಿತ್ರಮಂದಿರಕ್ಕೆ ಹೀಗೆ ಹೋಗಬೇಕು :

From I-495: Take the US-50/ARLINGTON BLVD exit, exit number 50A-B, towards FAIRFAX/ARLINGTON. Merge onto US-50 East / ARLINGTON BLVD towards Arlington. Make right after the second traffic light to Loehmanns plaza.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more