• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಟರಾಜರ ‘ಮಧುಚಂದ್ರ ಸಿರಿಕೇಂದ್ರ’ ಕ್ಕೆ ಗೊರೂರು ಪ್ರಶಸ್ತಿ

By Staff
|

My.Sri.Natarajಬೆಂಗಳೂರು : ವರ್ತಮಾನಕ್ಕೆ ಥಟ್ಟನೆ ಸ್ಪಂದಿಸುವ ಕವಿ ಹೃದಯಿ, ಕಾವೇರಿ ಕನ್ನಡ ಸಂಘದ ಮಾಜಿ ಅಧ್ಯಕ್ಷ ಮೈ.ಶ್ರೀ.ನಟರಾಜ್‌ ಅವರು ಬೆಂಗಳೂರಿನ ಗೊರೂರು ಪ್ರತಿಷ್ಠಾನದ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಳೆದ ವರ್ಷ (2002) ಪ್ರಕಟವಾದ ವಿವಿಧ ಪ್ರಕಾರಗಳ ಅತ್ಯುತ್ತಮ ಕೃತಿಗಳಿಗೆ ಗೊರೂರು ಪ್ರಶಸ್ತಿ ನೀಡಲಾಗುತ್ತಿದ್ದು- ಕವನ ಸಂಕಲನಗಳ ವಿಭಾಗದಲ್ಲಿ ನಟರಾಜ್‌ ಅವರ ‘ಮಧುಚಂದ್ರ ಸಿರಿಕೇಂದ್ರ’ ಪ್ರಶಸ್ತಿಗೆ ಆಯ್ಕೆಯಾಗಿದೆ.

ಶುಕ್ರವಾರ (ಮಾ.21) ‘ಮಧುಚಂದ್ರ ಸಿರಿಕೇಂದ್ರ’ ಕೃತಿಗೆ ಪ್ರಶಸ್ತಿ ದೊರೆತ ವಿಷಯ ತಿಳಿಯುತ್ತಿದ್ದಂತೆ, ಕಾವೇರಿ ಕನ್ನಡ ಸಂಘದವರಿಂದ ನಟರಾಜ್‌ ಅವರಿಗೆ ಅಭಿನಂದನೆಯ ಮಹಾಪೂರ ಹರಿದು ಬರುತ್ತಿದೆ.

ಏಪ್ರಿಲ್‌ 13ನೇ ತಾರೀಕು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಗೊರೂರು ಪ್ರತಿಷ್ಠಾನ : ಸು.ರಂಗಸ್ವಾಮಿ ಅವರ ನೇತೃತ್ವದಲ್ಲಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಗೊರೂರು ಪ್ರತಿಷ್ಠಾನ ನಿರತವಾಗಿದೆ. ಜಾನಪದ ಹಾಗೂ ವಿವಿಧ ಸಾಹಿತ್ಯ ಪ್ರಕಾರಗಳ ಕುರಿತು ಕಮ್ಮಟ ನಡೆಸಿರುವ ಗೊರೂರು ಪ್ರತಿಷ್ಠಾನ ಲೇಖಕರು ಹಾಗೂ ಓದುಗರನ್ನು ಬೆಸೆಯುವ ಕಾರ್ಯದಲ್ಲಿ ತೊಡಗಿದೆ.

ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಅವರ ಆಶೋತ್ತರಗಳನ್ನು ನನಸಾಗಿಸುವ ಉದ್ದೇಶದಿಂದ ಸ್ಥಾಪನೆಯಾದ ಗೊರೂರು ಪ್ರತಿಷ್ಠಾನ ಆಯಾ ವರ್ಷ ಪ್ರಕಟವಾದ ಅತ್ಯುತ್ತಮ ಪುಸ್ತಕಗಳನ್ನು ಗುರ್ತಿಸಿ ಲೇಖಕರನ್ನು ಗೌರವಿಸುತ್ತದೆ.

(ಇನ್ಫೋ ವಾರ್ತೆ)

ನಟರಾಜರ ಇತ್ತೀಚೆಗೆ ಪ್ರಕಟವಾದ ಕವನ

ಸದ್ದಾಮನ ನಿಶ್ಶಸ್ತ್ರೀಕರಣ

ಮಧುಚಂದ್ರ ಸಿರಿಕೇಂದ್ರದೊಳಗಿನ ಕೆಲವು ಕವಿತೆಗಳು...

ಸಬರಮತಿಯ ರೈಲು

ತ್ರಿವೇಣಿ- ಮೂರು ಜಡೆಗಳ ಸಿಕ್ಕು

ಅಯ್ಯೋ ಕುಸಿಯಿತೆ ಸಿರಿ-ಕೇಂದ್ರ

ಅಯ್ಯೋ ಮುಗಿಯಿತೇ ಮಧುಚಂದ್ರ?

ಯಾವ ಸೀಮೆಯ ವೀರಪ್ಪ ?

ಮಾಜಿ ಕವಿಯ ಪ್ರಲಾಪ

ಸಂಕಲನ ಬಿಡುಗಡೆಯಾದಾಗ..

ವಿಶ್ವಕನ್ನಡ ಸಮ್ಮೇಳನದಲ್ಲಿ ನಟರಾಜ್‌ರ ‘ಮಧುಚಂದ್ರ, ಸಿರಿಕೇಂದ್ರ’

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more