ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದಲ್ಲಿ ಇ-ಮೇಲ್‌ ಕಳುಹಿಸುವುದು ಹೇಗೆ ? ಚರ್ಚೆಯ ಚಾವಡಿ ಕಾವೇರಿದೆ !

|
Google Oneindia Kannada News

ಪ್ರತಿಕ್ರಿಯೆ-1

Sheshadri Vasuಮಾನ್ಯರೇ,

ಕನ್ನಡದಲ್ಲಿ ವಿ-ಅಂಚೆ ಲೇಖನದ ಬಗ್ಗೆ ನನ್ನ ಕೆಲವು ಅಭಿಪ್ರಾಯಗಳು.

  1. ಬರಹ 5.0 ಅನ್ನು ಕರ್ನಾಟಕ ಸರ್ಕಾರ ಅಂಗೀಕರಿಸಿದೆ ಎಂಬ ಮಾತು ಸರಿಯಲ್ಲ.
  2. ಬರಹ ತಂತ್ರಾಂಶವನ್ನು ಕುರಿತು ನನಗೆ ಸರ್ಕಾರದಿಂದ ಯಾವುದೇ ಪತ್ರವೂ ಬಂದಿಲ್ಲ.
  3. ಆದರೆ, ಬರಹ 5.0 ತಂತ್ರಾಂಶದಲ್ಲಿ ಕರ್ನಾಟಕ ಸರ್ಕಾರ ಒಪ್ಪಿರುವ ಕೆಲವು ಅಂಶಗಳನ್ನು ಅಳವಡಿಸಲಾಗಿದೆ ಎಂಬ ಮಾತು ಸರಿ. ಅವು ಯಾವುದೆಂದರೆ-
    ಅ) ಕ.ಗ.ಪ ಕೀಲಿಮಣೆಯ ಅಳವಡಿಕೆ.
    ಆ) ಪ್ರಮಾಣೀಕರಿಸಿದ ಕನ್ನಡ ಫಾಂಟುಗಳು. ಸರ್ಕಾರದ ಅನೇಕ ಕಚೇರಿಗಳಲ್ಲಿ ಬರಹವನ್ನು ಉಪಯೋಗಿಸುತ್ತಿದ್ದಾರೆ ಎಂಬ ಮಾತೂ ಸರಿ.
  4. ಮೇಲಿನ ಲೇಖನದಲ್ಲಿ ಹೇಳಿರುವಂತೆ, ಗಣಕಗಳಲ್ಲಿ ಬರಹ 5.0 ಲಿಪ್ಯಂತರಣ ಕ್ರಮದ ಮೂಲಕ ಕನ್ನಡವನ್ನು ಬರೆಯುವುದೇ ಸರಳವಾದ ಕ್ರಮವಾಗಿದೆ.
ಈಗಾಗಲೇ, ಬರಹ ತಂತ್ರಾಂಶವನ್ನು ಲಕ್ಷಾಂತರ ಮಂದಿ ಕರಗತ ಮಾಡಿಕೊಂಡು ಬಳಸುತ್ತಿದ್ದಾರೆ. ಆದ್ದರಿಂದ ಬರಹ ಲಿಪ್ಯಂತರಣ ಕ್ರಮ ಅಪಾರ ಜನಪ್ರಿಯವಾಗಿದೆ. ಮತ್ತು ಎಲ್ಲೆಡೆ ಉಪಯೋಗಿಸಲ್ಪಡುತ್ತಿದೆ. ಈ ಕ್ರಮವನ್ನು ಒಮ್ಮೆ ಕರಗತ ಮಾಡಿಕೊಂಡರೆ, ಬೇರೆ ಯಾವುದೇ ತಂತ್ರಾಂಶಗಳ ಸಹಾಯವಿಲ್ಲದೆ (ಬರಹವೂ ಸೇರಿದಂತೆ) ಕನ್ನಡದಲ್ಲಿ ಮಾಹಿತಿಯನ್ನು ಸುಲಭವಾಗಿ ಶೀಘ್ರವಾಗಿ ಟೈಪ್‌ ಮಾಡಬಹುದಾಗಿದೆ.

ಈಗಾಗಲೇ ಉಪಯೋಗಿಸುತ್ತಿರುವ ಇಂಗ್ಲಿಷ್‌ ಈ-ಮೈಲ್‌ ತಂತ್ರಾಂಶಗಳಲ್ಲಿ ಲಿಪ್ಯಂತರಣ ಕ್ರಮದಲ್ಲಿ ಕನ್ನಡ ಮಾಹಿತಿಯನ್ನು ಟೈಪ್‌ ಮಾಡಿ ಕಳಿಸಬಹುದು. ಇದೇ ಲಿಪ್ಯಂತರಣ ಕ್ರಮದಲ್ಲಿ ಲೇಖನಗಳನ್ನು ಗಣಕಗಳಲ್ಲಿ ಶೇಖರಿಸಿಡಬಹುದು. ಮಾಹಿತಿಯು ರೋಮನ್‌ ಅಕ್ಷರಗಳಲ್ಲಿರುವುದರಿಂದ ಒಂದು ಕಾರ್ಯಾಚರಣ ವ್ಯವಸ್ಥೆಯಿಂದ ಇನ್ನೊಂದಕ್ಕೆ ಕೊಂಡೊಯ್ಯುವಾಗಲೂ ಈ ಕ್ರಮ ಉಪಯೋಗಕ್ಕೆ ಬರುತ್ತದೆ. ಮಾಹಿತಿಯನ್ನು ಓದುವಾಗ ಮಾತ್ರ ಬರಹ ತಂತ್ರಾಂಶವನ್ನು ಬಳಸಿ, ಕನ್ನಡ ಆ್ಯನ್ಸಿ ಅಥವಾ ಯೂನಿಕೋಡ್‌ಗೆ ಪರಿವರ್ತಿಸಿ ಓದಿಕೊಳ್ಳಬಹುದು, ಪ್ರಿಂಟ್‌ ತೆಗೆಯಬಹುದು.

ಈಗ ನೇರಬರಹ 5.0 ಉಪಯೋಗಿಸಿಕೊಂಡು ಲಿಪ್ಯಂತರಣ ಕ್ರಮದ ಮೂಲಕ (ಇನ್‌ಸ್ಕಿೃಪ್ಟ್‌ ಕೀಲಿಮಣೆ ಅಲ್ಲ) ಇತರ ತಂತ್ರಾಂಶಗಳಲ್ಲಿ ನೇರವಾಗಿ ಯೂನಿಕೋಡ್‌ ಟೈಪ್‌ ಮಾಡಬಹುದಾಗಿದೆ. ಮುಂದೆ ಎಲ್ಲಾ ಈ-ಮೈಲ್‌ ತಂತ್ರಾಂಶಗಳು ಯೂನಿಕೋಡ್‌ ಅನ್ನು ಅಳವಡಿಸಿಕೊಂಡಾಗ ಪತ್ರ ಕಳಿಸುವಾಗ ಮತ್ತು ಪಡೆದುಕೊಂಡಾಗ ಅಲ್ಲೇ ನೇರವಾಗಿ ಕನ್ನಡದಲ್ಲೇ ಮಾಹಿತಿಯನ್ನು ನೋಡಬಹುದು. ಈ-ಮೈಲ್‌ ತಂತ್ರಾಂಶದಿಂದ ಬರಹಕ್ಕೆ ಕೊಂಡೊಯ್ಯುವ ಪ್ರಮೇಯ ಇರುವುದಿಲ್ಲ.

- ಶೇಷಾದ್ರಿವಾಸು
[email protected]

ಪ್ರತಿಕ್ರಿಯೆ-2

‘ಕನ್ನಡದಲ್ಲಿ ಇ-ಮೇಲ್‌’ ಕಳುಹಿಸುವ ಚಿಂತನೆ ಬಹಳ ಒಳ್ಳೆಯ ವಿಚಾರ. ಆದರೆ ಲಿಪ್ಯಂತರಣ (ನಮ್ಮ ಆಡು ಭಾಷೆಯಲ್ಲಿ ಕಂಗ್ಲಿಷ್‌)ವನ್ನು ಉಪಯೋಗಿಸುವಲ್ಲಿ ಕೆಲವು ತೊಡಕುಗಳಿವೆ.

ಮುಖ್ಯವಾಗಿ-
ಬಳಸಲು (ಟೈಪ್‌ ಮಾಡಲು) ಸ್ವಲ್ಪ ಅಭ್ಯಾಸ ಬೇಕು. ಓದಲು ಸಹಾ ಅಭ್ಯಾಸವಾಗಬೇಕು.

ನಾನು ಬಹಳ ಹಿಂದಿನಿಂದ ವಿ-ಅಂಚೆಗಳಲ್ಲಿ ಕಂಗ್ಲಿಷ್‌ ಉಪಯೋಗಿಸುತ್ತಿದ್ದೇನೆ. ಆದ್ದರಿಂದ ನನಗೆ ಬರೆಯಲು ತುಂಬಾ ಸುಲಭ. ಆದರೆ ಕಂಗ್ಲಿಷ್‌ ಬರಹವನ್ನು ಓದಲು ಬಹಳಷ್ಟು ಜನರು ಕಷ್ಟ ಪಡುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಅನೇಕ ಆಕ್ಷೇಪಣೆಗಳೂ ನನಗೆ ಬಂದಿವೆ. ರೋಮನ್‌ ಅಕ್ಷರಗಳನ್ನು ಉಪಯೋಗಿಸಿದಲ್ಲಿ , ಒಂದೇ ಪದದಲ್ಲಿ small-case, upper-case ಉಪಯೋಗಿಸಿದಲ್ಲಿ ಓದಲು ತುಂಬಾ ತ್ರಾಸವಾಗುವುದು. ಇದಕ್ಕೆ ಒಂದು ಸುಲಭ ಮಾರ್ಗವೆಂದರೆ ನೇರವಾಗಿ ಬರಹ ಬಳಸುವುದು.

ಈ ರೀತಿಯ ತೊಂದರೆಗಳನ್ನು ಎದುರಿಸಲೆಂದೇ ಫಾಂಟ್‌ ಎನ್ನುವುದು ಇರುವುದು. ಅದನ್ನು ಬರಹದಲ್ಲಿ ಚೆನ್ನಾಗಿ ಉಪಯೋಗಿಸಿದ್ದಾರೆ, ಅವರಿಗೆ ಹ್ಯಾಟ್ಸಾಫ್‌ ! ಈ ನಡುವೆ ಕನ್ನಡ ಮಾತಾಡುವವರು, ಉಪಯೋಗಿಸುವವರು ಹಾಗೂ ವ್ಯವಹರಿಸುವವರು ಎಲ್ಲರ ಹತ್ತಿರವೂ ಬರಹ ಇದ್ದೇ ಇರುತ್ತೆ . ಬರಹ ಫಾಂಟ್‌ಗಳೂ ಕಂಪ್ಯೂಟರ್‌ನಲ್ಲಿ ಇನ್‌ಸ್ಟಾಲ್‌ ಆಗಿರುತ್ತವೆ. ಆದ್ದರಿಂದ ಉಪಯೋಗಿಸಿ- Word, Outlook ಅಥವಾ ಇನ್ನಾವುದೇ ತಂತ್ರಾಂಶದಲ್ಲಿ ಕನ್ನಡ ಅಕ್ಷರಗಳಲ್ಲೆ ಬರೆಯಬಹುದು. ಓದಲೂ ಸುಲಭ.

ಕನ್ನಡಿಗರೇ ಕನ್ನಡ ಓದಲು ಹಾಗೂ ಬರೆಯಲು ಕಷ್ಟ ಪಡುವ ಸಂದರ್ಭ ಇತ್ತೀಚೆಗೆ ಎದುರಾಗುತ್ತಿದೆ. ಇದಕ್ಕೆ ಕಾರಣ- ಹೆಚ್ಚಾಗಿ ಕನ್ನಡ ಓದದೆ ಇರುದು. ಈ ರೀತಿ ಕನ್ನಡ ಲಿಪಿಯಲ್ಲಿ ಓದಿ ಬರೆದರೆ, ನಮ್ಮ ಲಿಪಿ ಬಳಕೆಯಲ್ಲಿರುತ್ತದೆ ಹಾಗೂ ಮರೆಯುವುದಿಲ್ಲ .

ಚೀನೀಯರು, ಜಪಾನೀಯರು ಸೇರಿದಂತೆ ಇದೇ ರೀತಿ ಜಗತ್ತಿನ ಅನೇಕ ಭಾಷೆಗಳನ್ನು ಜನರು ಉಪಯೋಗಿಸುತ್ತಿದ್ದಾರೆ. ನಾವು ಕನ್ನಡದವರು ಯಾಕೆ ಉಪಯೋಗಿಸಬಾರದು.

ಒಮ್ಮೆ ಪ್ರಯತ್ನಿಸಿ- ಬರಹ ಡೈರೆಕ್ಟ್‌ !

- ಚೈತನ್ಯ ರಾಮ್‌, ಬೆಂಗಳೂರು.

ಪ್ರತಿಕ್ರಿಯೆ-3

Sirs,

If one is interested - Kannada e-mail becomes easy.
We are using Kannada e-mail since ages.
Where there is will,there is a way. You are right.

All the best for enlightening folks who think it is difficult and never give a hand to it.

Regards,
- S. M. Pejathaya, Bangalore
[email protected]

ಬರೆಯೋಣ ಬನ್ನಿ , ಕನ್ನಡದಲ್ಲಿ ವಿ-ಅಂಚೆ

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X