‘ಕಾವೇರಿ’ ಕೊಡುಗೆ- ದೊಡ್ಡ ಪರದೆ ಮೇಲೆ ಕ್ರಿಕೆಟ್ಟು

Watch Cricket On Big Screenವಿಶ್ವ ಕಪ್‌ ಕ್ರಿಕೆಟ್ಟಿನ ಹೊರೆ ಹೊತ್ತುಕೊಂಡ ಕಾರಣಕ್ಕೇ ನಮ್ಮ ವೆಬ್‌ ಪುಟಗಳು ಆಮೆ ವೇಗದಲ್ಲಿ ತೆರೆ ಮೇಲೆ ಮೂಡುತ್ತಿರುವುದು ಪತ್ತೆಯಾಯಿತು. ಆ ಕಾರಣಕ್ಕೇ ಕ್ರಿಕೆಟ್ಟಿಗೆ ಕೊಟ್ಟಿದ್ದ ಪ್ರಾಮುಖ್ಯತೆಯನ್ನು ಕೊಂಚ ತಗ್ಗಿಸಿ, ಹೊರೆಯನ್ನು ಸ್ವಲ್ಪ ಮಟ್ಟಿಗೆ ಇಳಿಸಿಕೊಂಡೆವು. ಅಮೆರಿಕೆಯ ಮಟ್ಟಿಗೆ ಹೇಳುವುದಾದರೆ, ಅಲ್ಲಿ ಬ್ಯಾಸ್ಕೆಟ್‌ ಬಾಲಿನಂಥಾ ಜನಪ್ರಿಯ ಆಟದ ಮುಂದೆ ಕ್ರಿಕೆಟ್ಟು ಮಂಕೇ. ಆದರೆ, ತವರಿನಲ್ಲಿದ್ದಾಗ ಕಟ್ಟಿಕೊಂಡು ಬಂದ ಕ್ರಿಕೆಟ್ಟಿನ ಬುತ್ತಿಯನ್ನು ಅಮೆರಿಕದಲ್ಲಿ ಕನ್ನಡಿಗರು ಬಿಚ್ಚದೆ ಇದ್ದಾರೇ?

ಕ್ರಿಕೆಟ್‌ ಜ್ವರ ಈಗ ಕಾವೇರಿ ಕನ್ನಡ ಸಂಘದಲ್ಲಿ ಕಾವೇರಿದೆ. ಉಳಿದಿರುವುದು ಎರಡೇ ಪಂದ್ಯಗಳು : ಭಾರತ- ಕೀನ್ಯಾ ಸೆಮಿಫೈನಲ್ಸ್‌ ಹಾಗೂ ಆಸ್ಟ್ರೇಲಿಯಾ- ಭಾರತ (?) ಫೈನಲ್ಸ್‌. ಕಾವೇರಿಗರೆಲ್ಲ ಒಂದೆಡೆ ಕೂತು ದೊಡ್ಡ ಪರದೆ ಮೇಲೆ ಕ್ರಿಕೆಟ್ಟಿನ ಮಧುರ ಕ್ಷಣಗಳನ್ನು ಮೊಗೆದುಕೊಂಡರೆ ಎಷ್ಟು ಚೆನ್ನ ? ಅದನ್ನು ಹಕೀಕತ್ತಾಗಿಸಲು Loehmanns Twin Cinema ದಲ್ಲಿ ದೊಡ್ಡ ಪರದೆ ಮೇಲೆ ಕ್ರಿಕೆಟ್ಟಿನಾಟದ ಪ್ರದರ್ಶನವಿದೆ. ಒಂದು ಟಿಕೆಟ್ಟಿಗೆ 15 ಡಾಲರ್‌. ಟಿಕೇಟನ್ನು ಚಿತ್ರಮಂದಿರದಲ್ಲಿ ಪಡೆಯಬಹುದು. ಅಥವಾ Dana Bazaar, 12215 Nebel St, Rockville, MD 20852, (301) 231-7546 ನಲ್ಲಿ ಖರೀದಿಸಬಹುದು.

ಕ್ರಿಕೆಟ್ಟಿನಾಟದ ಸಮಯ (ಅಮೆರಿಕೆ ಕಾಲಮಾನ) ನೋಟ್‌ ಮಾಡಿಕೊಳ್ಳಿ-
March 20, 2003 India Vs Kenya starts at 7.10 AM
March 23, 2003 Finals starts at 2.40 AM

ಚಿತ್ರಮಂದಿರದ ವಿಳಾಸ- Loehmanns Twin Cinema, Falls Church, VA

ಭಾರತ ಕ್ರಿಕೆಟ್‌ ತಂಡ ವಿಶ್ವ ಕಪ್‌ ಗೆಲ್ಲಲೆಂದು ಹಾರೈಸುತ್ತಾ ಕಾವೇರಿಗರು ಒಂದೆಡೆ ಸೇರುತ್ತಿದ್ದಾರೆ? ನೀವೂ ಅವರಲ್ಲಿ ಒಬ್ಬರಾಗುವಿರಿ ತಾನೆ?

(ಇನ್ಫೋ ವಾರ್ತೆ)


Click here to go to top
ಮುಖಪುಟ / ಸಾಹಿತ್ಯ ಸೊಗಡು


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+