ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಲ್ಲಿ ‘ಅಮೆರಿಕಾಯಣ’ ಕೃತಿ ಲಭ್ಯ

By Staff
|
Google Oneindia Kannada News

Coverpage of Americayana, a novel by Prof. Y.R.Mohanಅಮೆರಿಕದ ಸಮಗ್ರ ಇತಿಹಾಸ ಹಾಗೂ ಸಂಸ್ಕೃತಿಯ ಕುರಿತು ಕನ್ನಡದಲ್ಲಿ ಪ್ರಕಟವಾಗಿರುವ ಅಪರೂಪದ ಕೃತಿ- ಪ್ರೊ.ವೈ.ಆರ್‌.ಮೋಹನ್‌ ಅವರ ಅಮೆರಿಕಾಯಣ. ಅಮೆರಿಕದ ಭೌಗೋಳಿಕ ಪರಿಸರದ ಪರಿಚಯದಿಂದ ಆರಂಭವಾಗಿ, ವಸಾಹತುಗಳ ಸ್ಥಾಪನೆಯಿಂದ ಹಿಡಿದು, ಇತ್ತೀಚೆಗೆ ಅಧಿಕಾರದಿಂದ ನಿವೃತ್ತಿಯಾದ ಅಧ್ಯಕ್ಷ ಬಿಲ್‌ ಕ್ಲಿಂಟನ್‌ವರೆಗೆ ಯಾವ ಮುಖ್ಯಾಂಶವನ್ನೂ ಬಿಡದೆ ಪ್ರೊ. ಮೋಹನ್‌ ಈ ಕೃತಿಯಲ್ಲಿ ಪರಿಚಯಿಸಿದ್ದಾರೆ. ಇಂಥ ಅಪರೂಪದ ಕೃತಿಯೀಗ ಅಮೆರಿಕದಲ್ಲಿ ಲಭ್ಯ.

850 ಪುಟಗಳ ಬೃಹತ್‌ ಪುಸ್ತಕವನ್ನು ತಮ್ಮ ಪಾರ್ಕಿನ್‌ಸನ್‌ ಕಾಯಿಲೆ ಸ್ಥಿತಿಯಲ್ಲಿ ರಚಿಸಿದ್ದಾರೆ. ಇದೊಂದು ಸಾಹಸವೇ ಸರಿ. ಒಂದು ದೇಶದ ಇತಿಹಾಸವು, ಮೋಹನ್‌ರವರಿಗೆ ದೊರೆತಿರುವ ಆಕರ್ಷಣೀಯ ಶೈಲಿಯಿಂದಾಗಿ ಸೊಗಸಾದ ಕಾದಂಬರಿಯಂತೆ ಓದಿಸಿಕೊಳ್ಳುತ್ತದೆ.

ಪುಸ್ತಕದ ಬೆಲೆ 25, ಅಂಚೆವೆಚ್ಚ 2, ಒಟ್ಟು 27 ಡಾಲರ್‌ಗಳು.

ಪುಸ್ತಕ ಮಾರಾಟದಿಂದ ಸಂಗ್ರಹವಾಗುವ ಹಣವನ್ನು ಒಟ್ಟಾಗಿ ಶೇಖರಿಸಿ ಪ್ರೊ. ಮೋಹನ್‌ ಅವರಿಗೆ ಕಳಿಸಿಕೊಡಲಾಗುವುದು. ದಯವಿಟ್ಟು 27 ಚೆಕ್ಕನ್ನು ಕೆಳಗಿನ ವಿಳಾಸಕ್ಕೆ ಕಳಿಸಿಕೊಡಿ :

(pay to the order of Krishna Sastry)
Krishna Sastry, 726 Maucker road, Cedar Falls, Iowa-50613
ph# 319-268-0903 (Home); 319-292-4923
[email protected]

(ಇನ್ಫೋ ವಾರ್ತೆ)


ಪುಸ್ತಕ ವಿಮರ್ಶೆ-
ಸರಳಗನ್ನಡದಲ್ಲಿ ಅಮೆರಿಕ ಕಥನ
‘ಅಮೆರಿಕಾಯಣ’ವೆಂಬ ಅನುಭವಾಮೃತ


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X