• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವ ಕನ್ನಡ ಸಮ್ಮೇಳನ- 2004ರ ಸ್ಮರಣ ಸಂಚಿಕೆಗೆ ಲೇಖನಗಳು ಬೇಕಾಗಿವೆ

By Staff
|

WKC 2004 Logoಪ್ರಿಯ ಕನ್ನಡಿಗರೆ, ಆರ್ಲಾಂಡೋದಲ್ಲಿ ನಡೆಯಲಿರುವ ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನ- 2004 (ಸೆಪ್ಟೆಂಬರ್‌ 3- 5, 2004) ರ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಹೊರ ತರಲು ನಿರ್ಧರಿಸಲಾಗಿದೆ. ಅಕ್ಷರ ಕೃಷಿಕರ ಬರಹ ಪ್ರೀತಿಗೆ ಇದೊಂದು ಅವಕಾಶ. ಸ್ಮರಣ ಸಂಚಿಕೆ ಸಮಿತಿ ವಿಶ್ವ ಕನ್ನಡ ಸಮ್ಮೇಳನ- 2004ರ ಸ್ಮರಣ ಸಂಚಿಕೆಗೆ ಸಾಹಿತ್ಯಿಕ ಹಾಗೂ ಸೃಜನಶೀಲ ಬರಹಗಳನ್ನು ಆಹ್ವಾನಿಸುತ್ತಿದೆ.

ಸ್ಮರಣ ಸಂಚಿಕೆ ಹೊರ ತರುವಲ್ಲಿ ಎರಡು ಮುಖ್ಯ ಉದ್ದೇಶಗಳಿವೆ. ಅವೆಂದರೆ-

  • ಕರ್ನಾಟಕ ಮತ್ತು ಕನ್ನಡದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಕನ್ನಡಿ ಹಿಡಿಯುವುದು.
  • ಅನಿವಾಸಿ ಕನ್ನಡಿಗನ ಅನುಭವಕ್ಕೆ ದಕ್ಕುವ ಪ್ರಸಕ್ತ ವಿದ್ಯಮಾನಗಳು, ಸಮಸ್ಯೆಗಳು, ಅನುಭವಗಳು ಮತ್ತು ಸವಾಲುಗಳನ್ನು ಚರ್ಚಿಸುವುದು.

ಬರಹಗಳು ಕನ್ನಡದಲ್ಲೇ ಇರಲಿ. ನಿಯಮಿತ ಇಂಗ್ಲಿಷ್‌ ಬರಹಗಳನ್ನೂ ಸ್ವೀಕರಿಸಲಾಗುತ್ತದೆ. ಕವನ, ಸಣ್ಣ ಕತೆ, ನಾಟಕ, ಜೀವನಾನುಭವ, ಪ್ರಬಂಧ, ವ್ಯಂಗ್ಯಚಿತ್ರ, ನಗೆಚಟಾಕಿ, ಸಂಶೋಧನೆ ಅಥವಾ ವಿಮರ್ಶಾತ್ಮಕ ಲೇೕಖನ, ಅಕ್ಷರ ಅವಲೋಕನ, ಟೀಕೆ ಟಿಪ್ಪಣಿ- ಈ ಎಲ್ಲ ಪ್ರಕಾರದ ಬರಹಗಳಿಗೆ ಸ್ವಾಗತ. ಕನ್ನಡ ಬರಹಗಳಿಗೇ ಆದ್ಯತೆ ಎಂಬುದು ನೆನಪಿರಲಿ. ಅಂದಹಾಗೆ, ನಿಮ್ಮ ಮಕ್ಕಳನ್ನು ಕನ್ನಡದಲ್ಲಿ ಬರೆಯಲು ಪುಸಲಾಯಿಸಿ. ಯಾಕೆಂದರೆ ಮಕ್ಕಳಿಗಾಗಿಯೇ ಸ್ಮರಣ ಸಂಚಿಕೆಯಲ್ಲಿ ವಿಶೇಷ ಪುಟಗಳನ್ನು ಮೀಸಲಿರಿಸಲಾಗಿದೆ. ಪ್ರಕಟವಾಗುವ ಮಕ್ಕಳ ಆಯ್ದ ಬರಹಗಳಿಗೆ ಪ್ರಶಸ್ತಿಗಳೂ ಉಂಟು. ಇಂಗ್ಲಿಷ್‌ನಲ್ಲೂ ಬರೆಯುವ ನಿಯಮಿತ ಅವಕಾಶವಿದೆ.

ಬರಹಗಳು ತಲುಪಲು ಕೊನೆಯ ದಿನಾಂಕ : ಮಾರ್ಚ್‌ 15, 2004.

ಅಕ್ಷರ ಕೃಷಿಗೆ ಮುನ್ನ ನಿಯಮಗಳನ್ನು ಓದಿಕೊಳ್ಳಿ-

  • ಬರಹ ಸ್ವಂತದ್ದೇ ಆಗಿರಬೇಕು. ಇತರರ ಸಾಹಿತ್ಯಿಕ ಬರಹಗಳನ್ನು ಕಳಿಸುವುದಾದರೆ, ಕರ್ತೃವಿನ ಹೆಸರನ್ನು ಬರೆಯಲು ಮರೆಯಬೇಡಿ. ಇತರರ ಪ್ರಕಟಿತ ಅಥವಾ ಅಪ್ರಕಟಿತ ಲೇಖನಗಳನ್ನು ಕಳುಹಿಸುವುದಾದರೆ, ಅವರ ಅನುಮತಿ ಪಡೆಯುವುದು ನಿಮ್ಮ ಜವಾಬ್ದಾರಿ.
  • ಕನ್ನಡ ಬರಹಗಳನ್ನು ಬರಹ 5.0 ಉಚಿತ ತಂತ್ರಾಂಶದಲ್ಲಿ ಕೀಲಿ ಮಾಡಿ. ಎಂ.ಎಸ್‌. ವರ್ಡ್‌ ಪುಟದಲ್ಲಿ ಬರಹ ಕಳಿಸಿದರೆ, ಪುಟ ವಿನ್ಯಾಸದ ಕೆಲಸ ಸುಲಭವಾಗುತ್ತದೆ. ಈ ಉಚಿತ ತಂತ್ರಾಂಶವನ್ನು Baraha.com ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು.
  • ಲೇಖನಗಳು 1500 ಪದಗಳನ್ನು ಮೀರಬಾರದು. (ಗರಿಷ್ಠ ಟೈಪಿಸಿದ 3 ಪುಟಗಳು- 8.5 " X 11.0")
  • ತೀರಾ ಕಡಿಮೆ ಸಂಖ್ಯೆಯ ಇಂಗ್ಲಿಷ್‌ ಬರಹಗಳನ್ನು ಸ್ವೀಕರಿಸಲಾಗುವುದು.
  • ಬರಹಗಳನ್ನು ಇ- ಮೇಲ್‌ ಅಟ್ಯಾಚ್‌ಮೆಂಟ್‌ ಮೂಲಕವೇ ಕಳುಹಿಸಬೇಕು.
  • ಕವನಗಳು ಟೈಪಿಸಿದ 1 ಪುಟಕ್ಕಿಂತ ಜಾಸ್ತಿ ಇರಬಾರದು.
  • ಬರಹಗಳನ್ನು publication2004@tampabay.rr.com ಇ- ವಿಳಾಸಕ್ಕೆ ಕಳಿಸಿ.
  • ಬರಹದ ಜೊತೆಗೆ ನಿಮ್ಮ ಪೂರ್ಣ ಹೆಸರು, ಇ- ಮೇಲ್‌ ವಿಳಾಸ, ದೂರವಾಣಿ ಸಂಖ್ಯೆ, ನಗರ- ದೇಶ ಬರೆಯಿರಿ. ನಿಮ್ಮ ಪರಿಚಯ ಬರಹವೂ ಇರಲಿ. ನಿಮ್ಮ ಒಂದು ವರ್ಣ ಭಾವಚಿತ್ರ (1‘ ಡಿಜಿಛಛಿ ಗಿ 1.25‘ ಜಛಿಜಿಜಜಠಿ) ಕೂಡ ಬೇಕು. ‘ಜಿಫ್‌’ ಅಥವಾ ‘ಜೆಪಿಇಜಿ’ ಸ್ವರೂಪದಲ್ಲಿ ಭಾವಚಿತ್ರ ಇರಲಿ. ಸಂಚಿಕೆಯಲ್ಲಿ ಲೇಖಕರ ಬಗ್ಗೆ ಮಾಹಿತಿಯನ್ನು ಮುದ್ರಿಸಲೂ ಪ್ರಯತ್ನಿಸಲಾಗುವುದು.
  • ನೆನಪಿರಲಿ, ಬರಹಗಳನ್ನು ಕಳುಹಿಸಲು ಕೊನೆಯ ದಿನಾಂಕ ಮಾರ್ಚ್‌ 15, 2004.

ಬರಹಗಳನ್ನು ಡಿಸ್ಕೆಟ್‌ಗಳ ಮೂಲಕ ಕಳುಹಿಸುವಿರಾದರೆ ಅಂಚೆ ವಿಳಾಸ ಬರೆದುಕೊಳ್ಳಿ-

U.B. Vasudev

Committee Chairperson

World Kannada Conference 2004 Souvenir Committee

7136 State Road 54

New Port Richey, FL 34653

ಧನ್ಯವಾದ

ಯು.ಬಿ.ವಾಸುದೇವ್‌

ವಿಶ್ವ ಕನ್ನಡ ಸಮ್ಮೇಳನ- 2004 ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷ

ವಿ.ಸೂ. : ವಿಶ್ವ ಕನ್ನಡ ಸಮ್ಮೇಳನ- 2004 ಸ್ಮರಣ ಸಂಚಿಕೆ ಸಮಿತಿ ಸ್ವೀಕರಿಸುವ ಲೇಖನಗಳನ್ನು ಕನ್ನಡ ಸಮ್ಮೇಳನ -2004 ಸ್ಮರಣ ಸಂಚಿಕೆಯ ಸಂಪಾದಕೀಯ ಮಂಡಳಿಗೆ ಕೊಡಲಾಗುತ್ತದೆ. ಬರಹಗಳ ಪ್ರಕಟಣೆಯ ಹಕ್ಕು ಸಂಪಾದಕೀಯ ಮಂಡಳಿಯದ್ದಾಗಿರುತ್ತದೆ. ಲೇಖನಗಳು ಸ್ಮರಣ ಸಂಚಿಕೆಯ ಸಮಿತಿಯ ಆಸ್ತಿ. ಬರಹಗಾರರಿಗೆ ಸಂಭಾವನೆ ಅಥವಾ ಪರಿಹಾರ ಕೊಡದೆಯೇ ಪ್ರಕಟಿಸುವ ಅಂತಿಮ ತೀರ್ಮಾನವೂ ಸಮಿತಿಯದ್ದೇ. ಪ್ರಕಟವಾಗುವ ಲೇಖನಗಳ ಅಭಿಪ್ರಾಯಗಳು ಲೇಖಕರದ್ದೇ ಆಗಿರುತ್ತವೆಯೇ ಹೊರತು ಸ್ಮರಣ ಸಂಚಿಕೆ ಸಮಿತಿಯ ಅಭಿಪ್ರಾಯವಾಗಿರುವುದಿಲ್ಲ. ಒಮ್ಮೆ ಸ್ವೀಕರಿಸುವ ಲೇಖನಗಳನ್ನು ವಾಪಸ್ಸು ಮಾಡಲಾಗುವುದಿಲ್ಲ.

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more