• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹ್ಯೂಸ್ಟನ್‌ ವೃಂದದಲ್ಲಿ ಹಾರಿದ ಕನ್ನಡ ಧ್ವಜ

By Staff
|
  • ಇಂದ್ರಾಣಿ ಪಾರ್ಥ ಸಾರಥಿ, ಕೇಟಿ, ಟೆಕ್ಸಾಸ್‌
Navellaru onde...

Rajyothsava Celebrations in Houston Kannada vrinda

Kuniyonu bara... Dance by members of Vrinda

It is 20th anniversary for Houston Kannada Vrinda

‘ಒಂದೇ ಒಂದೇ ಒಂದೇ... ನಾವೆಲ್ಲರೂ ಒಂದೇ’- ವೇದಿಕೆಯ ಮೇಲೆ ಕನ್ನಡದ ಪುಟಾಣಿಗಳ ಹಾಡು. ಕನ್ನಡ ಬಾವುಟವನ್ನು ತೇಲಿಸುತ್ತಾ ಹಾಡುವ ಮಕ್ಕಳ ಕಂಡು ಸಭಿಕರಿಗೂ ಉಮೇದು. ಒಂದೇ ಒಂದೇ... ಎಂಬ ಹಾಡಿಗೆ ಅವರ ದನಿಯೂ ಸೇರಿ ಮೀನಾಕ್ಷಿ ದೇವಸ್ಥಾನದ ಸಭಾಂಗಣದ ತುಂಬಾ ಕನ್ನಡದ ಹಾಡು.

ಅದು ಹ್ಯೂಸ್ಟನ್‌ ಕನ್ನಡ ವೃಂದ ಆಯೋಜಿಸಿದ್ದ ರಾಜ್ಯೋತ್ಸವ ಸಮಾರಂಭ. ನವೆಂಬರ್‌ 8ರ ಶನಿವಾರ ಹ್ಯೂಸ್ಟನ್‌ ಕನ್ನಡಿಗರಲ್ಲಿ ರಾಜ್ಯೋತ್ಸವದ ಸಂಭ್ರಮ. ಹ್ಯೂಸ್ಟನ್‌ ಕನ್ನಡ ವೃಂದವು ಪ್ರತಿ ವರ್ಷ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದಲೇ ಆಚರಿಸುತ್ತದೆ. ರಾಜ್ಯೋತ್ಸವದ ಸಮಾರಂಭಕ್ಕೆ ಹ್ಯೂಸ್ಟನ್‌ನ ಎಲ್ಲ ಕನ್ನಡಿಗರೂ ಬರುವುದು ವಾಡಿಕೆ. ಕನ್ನಡ ವೃಂದದವರೂ ಎರಡುಮೂರು ತಿಂಗಳಿಗೆ ಮುಂಚೆಯೇ ಕಾರ್ಯಕ್ರಮ ತಯಾರಿ ಶುರು ಹಚ್ಚಿಕೊಂಡು ಆಸ್ಥೆಯಿಂದ ಕಾರ್ಯಕ್ರಮಕ್ಕೆ ರೆಡಿಯಾಗುತ್ತಾರೆ.

ಈ ಬಾರಿ ಕನ್ನಡ ವೃಂದಕ್ಕೆ 20 ವರ್ಷ ತುಂಬಿದ ಖುಷಿ ಬೇರೆ. ಹಾಗಾಗಿ ಕಾರ್ಯಕ್ರಮವೂ ವಿಶೇಷವಾಗಿತ್ತು. ಹಿರಿಯ ಹಾಗೂ ಕಿರಿಯ ಸದಸ್ಯರ ತಂಡದಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ‘ಕುಣಿಯೋಣು ಬಾರಾ..’ ಎಂಬ ಬೇಂದ್ರೆ ಹಾಡಿಗೆ ವೃಂದದ ಸದಸ್ಯರು ಹೆಜ್ಜೆ ಹಾಕಿದರು. ನಂತರ ಕನ್ನಡ ರಾಜ್ಯೋತ್ಸವಕ್ಕೆ ಸಂಬಂಧಿಸಿದ ಶಾಸ್ತ್ರೀಯ ನೃತ್ಯ, ದೇಶಭಕ್ತಿ ಹಾಡುಗಳ ನೃತ್ಯಗಳು ಸಕಾಲಿಕವಾಗಿತ್ತು.

ಸಾಕು ಹೋಗೇ ತಲೆ ಹರಟೆ ಎಂಬ ಪುಟ್ಟ ಮಕ್ಕಳ ನಾಟಕದಲ್ಲಿ ಮಕ್ಕಳು ಅಚ್ಚ , ಸ್ಪಷ್ಟ ಕನ್ನಡವನ್ನು ಅರಳು ಹುರಿದಂತೆ ಮಾತನಾಡಿದ್ದು ಇನ್ನೊಂದು ವಿಶೇಷ ಹಾಗೂ ಶ್ಲಾಘನಾರ್ಹ ವಿಷಯ. ಸಾನ್‌ ಅಂಟೋನಿಯೋ ಕನ್ನಡಿಗರಿಂದ ಸಮೂಹ ಗೀತೆಯೂ ಚೆನ್ನಾಗಿಮೂಡಿ ಬಂತು.

ಕನ್ನಡ ವೃಂದಕ್ಕಾಗಿ ದುಡಿದ ಕೆಲವು ಸದಸ್ಯರನ್ನು ಈ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಪುರಸ್ಕೃತರು: ಡಾ. ಆರ್‌. ಎನ್‌. ಎಸ್‌. ರಾವ್‌, ಜಯರಾಮ್‌ ನಾಡಿಗ್‌, ಸುಬ್ಬಿ ಸುಬ್ರಹ್ಮಣ್ಯಂ, ಸ್ಯಾನ್‌ ಅಂಟಾನಿಯೋದ ಡಾ. ಕುಮಾರ ಶೇಖರ್‌, ಜಮುನಾ ಮುರಲೀ, ಗೀತಾ ರಾಮ ರಾವ್‌, ಗೋವಿಂದ ಶೆಟ್ಟಿ ಮತ್ತು ಚಿಕ್ಕಮಗಳೂರಿನ ಡಾ. ಎಂ. ಡಿ. ನಾರಾಯಣ್‌.

ಊಟದ ನಂತರ ಕನ್ನಡ ವೃಂದದವರು ಪುಟ್ಟ ನಾಟಕ ‘ಯಮನ ಸಂದರ್ಶನ’ ಪ್ರದರ್ಶಿಸಿದರು. ನಂತರ ಸಭಿಕರನ್ನು ರಂಜಿಸಿದ್ದು ಶುಗರ್‌ ಲ್ಯಾಂಡ್‌ - ಉಡುಪಿ ಕೆಫೆಯ ತಿಂಡಿ ತಿನಿಸುಗಳು !

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more