• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭೂಮಿಕಾದಲ್ಲಿ ಕವಿ ಬಗ್ಗೆ ರವಿ ಚೆಲ್ಲಿದ ಬೆಳಕು !

By Staff
|
 • ಶ್ರೀವತ್ಸ ಜೋಶಿ, ಮೇರಿಲ್ಯಾಂಡ್‌
 • Dr.Da.Ra.Bendre‘ರವಿ ಕಾಣದ್ದನ್ನು ಕವಿ ಕಂಡ...’ ಎಂದು ಪ್ರತೀತಿ. ಅದನ್ನೇ ಸ್ವಲ್ಪ ಬದಲಿಸಿ ‘ಕವಿ ಕಂಡದ್ದನ್ನು ರವಿ ವಿವರಿಸಿದ’ ಎಂದರೆ ಹೇಗೆ ? ನಿನ್ನೆ ಏಪ್ರಿಲ್‌ 13ರ ಭಾನುವಾರ ವಾಷಿಂಗ್ಟನ್‌ ಡಿ.ಸಿ ಪ್ರದೇಶದ ಸಾಹಿತ್ಯಾಸಕ್ತರ ಚಿಂತನ ಚಾವಡಿ ‘ಭೂಮಿಕಾ’ದ ತಿಂಗಳ ಚರ್ಚೆ ಕಾರ್ಯಕ್ರಮದಲ್ಲಿ ಆದದ್ದು ಅದೇ. ಕನ್ನಡ ವರಕವಿ ಡಾ। ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಆಯ್ದ ಕೆಲವು ಕವಿತೆಗಳ ಮೇಲೆ ‘ಬೆಳಕು ಚೆಲ್ಲಿ’ದವರು ಡಾ। ರವಿ ಹರಪ್ಪನಹಳ್ಳಿ.

  ವೃತ್ತಿಯಲ್ಲಿ ರಾಸಾಯನಶಾಸ್ತ್ರಜ್ಞರಾದ ಡಾ।ರವಿಯವರು ಅಮೆರಿಕ ರಾಜಧಾನಿಯ ಪರಿಸರದ ಸಾಂಸ್ಕೃತಿಕ ವರ್ತುಲದಲ್ಲಿ ಪರಿಚಿತ ಹೆಸರು. ಸುಂದರ ಕವನಗಳನ್ನು ರವಿಯವರು (ಹಾಗೆಯೇ ಅವರ ಸಹಧರ್ಮಿಣಿ ಮಾಯಾ ಅವರೂ) ಬರೆಯುತ್ತಾರೆ; ನಾಟಕಗಳಲ್ಲಿ ಅವರು ಅಭಿನಯಿಸುತ್ತಾರೆ. ಭಾರತೀಯ ಸಾಂಸ್ಕೃತಿಕ ಸಂಘದ ಪತ್ರಿಕೆಯ ಸಂಪಾದಕರೂ ಆಗಿದ್ದಾರೆ. ಕರ್ನಾಟಕದಲ್ಲಿ ರವಿಯವರ ಒರಿಜಿನ್‌ ನೋಡಿದರೆ ಹುಬ್ಬಳ್ಳಿ-ಧಾರವಾಡದ ಪರಿಸರ; ‘ಸಣ್ಣ ಕಲ್ಲೊಂದನ್ನು ಬಿಸಾಡಿದರೆ ಅದು ಸಾಹಿತಿ/ಕವಿಯ ಮನೆಯಂಗಳದಲ್ಲೇ ಬೀಳುತ್ತದೆ...’ ಎಂಬಂಥ ಪ್ರದೇಶ. ಅಂದಮೇಲೆ ಬೇಂದ್ರೆಯವರ ಕಾವ್ಯಮಥನಕ್ಕೆ ಹೇಳಿ ಮಾಡಿಸಿದ ವ್ಯಕ್ತಿ ಡಾ। ರವಿ ಹರಪ್ಪನಹಳ್ಳಿ.

  ಸುಮಾರು ಎರಡು ಗಂಟೆಗಳ ಕಾಲ ನಡೆದ ಚರ್ಚೆ- ವಿಚಾರವಿನಿಮಯ - ವಿಶ್ಲೇಷಣೆಯಲ್ಲಿ ಬೇಂದ್ರೆಯವರ ವಿವಿಧ ಮಜಲುಗಳ ಕವಿತೆಗಳು ಪ್ರಸ್ತಾಪಿಸಲ್ಪಟ್ಟವು. ಬೇಂದ್ರೆಯವರು ಗುರುಭಕ್ತಿ, ದೈವಭಕ್ತಿಯ ಹಿನ್ನೆಲೆಯಲ್ಲಿ ಬರೆದವು (‘ಗುರುದೇವ’, ‘ಧಾರವಾಡ ತಾಯಿ’...), ಸ್ವಾತಂತ್ರ್ಯ ಸಮರದ ಆಶೋತ್ತರವುಳ್ಳವು (‘ಹೃದಯ ಸಮುದ್ರ’), ರಸಿಕತೆ ತುಂಬಿ ತುಳುಕುವ ಶೃಂಗಾರಗೀತೆಗಳು (‘ಯಾರಿಗೂ ಹೇಳೋಣು ಬ್ಯಾಡ’, ‘ರಾಗರತಿ’, ‘ಬಿಸಿಲುಗುದುರೆ’), ಜನಸಾಮಾನ್ಯನಿಗೂ ಅರ್ಥವಾಗುವಂತೆ ಬರೆದ ‘ಹುಬ್ಬಳ್ಳಿಯಾಂವ’, ‘ಪರಾಕಿ’, ‘ಬಾ ಕೈ ತಾ’ ಮೊದಲಾದ ಕವನಗಳು - ಎಲ್ಲವನ್ನೂ ಡಾ।ರವಿ ಸೊಗಸಾಗಿ ವರ್ಣಿಸಿದರು. ಶಬ್ದಗಾರುಡಿಗ ಬೇಂದ್ರೆ ಬರೆದ ಪದ್ಯಗಳು ಒಬ್ಬೊಬ್ಬರಿಗೂ ಒಂದೊದು ಅರ್ಥವನ್ನು ಕೊಡಬಲ್ಲಂಥವು.

  ‘ತುಮ್‌ ತುಮ್‌ ತುಮ್‌ ತುಮ್‌ ತುಂಬಿ ಬಂದಿತ್ತು...’ ಗೀತೆಯಲ್ಲಿ ಹೊರನೋಟಕ್ಕೆ ಒಂದೊಂದು ಚರಣವೂ ಕ್ರಮವಾಗಿ ನದಿ, ಹೂವು, ಕಾಲ/ಸಾವುಗಳ ಬಗ್ಗೆ ಹೇಳಿದ್ದೆಂದು ತೋರಿದರೆ ಕವಿತೆಯ ಒಳಹೊಕ್ಕು ನೋಡಿದರೆ, ಭಕ್ತಿಭಾಂಡಾರಿ ಬಸವಣ್ಣನವರ ಜಲಸಮಾಧಿಯ ಸನ್ನಿವೇಶವನ್ನದು ಹೇಗೆ ಚಿತ್ರಿಸಿರುವುದು ಗೋಚರಿಸುತ್ತದೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದ ರವಿಯವರು, ಉತ್ತರ ಕರ್ನಾಟಕದ ಗ್ರಾಮೀಣ ಶೈಲಿಯ ಕನ್ನಡ ಭಾಷೆಯ ಪದಗಳ ಅರ್ಥವನ್ನು ಬಿಡಿಸಿಹೇಳಿದರು.

  ಜನಜನಿತವಾದ ‘ಇಳಿದು ಬಾ ತಾಯೆ...’ (ಗಂಗಾವತರಣ) ಕವನದಲ್ಲಿ ಬೇಂದ್ರೆಯವರು ಬರೇ ನದಿಯ ಉಗಮವನ್ನು ಕಲ್ಪಿಸಿದ್ದಲ್ಲ . ಅಲ್ಲಿ ಕವಿ ಕರೆಯುತ್ತಿರುವುದು ಕಾವ್ಯಗಂಗೆಯನ್ನು, ಜೀವಗಂಗೆಯನ್ನು ಮತ್ತು ಜ್ಞಾನಗಂಗೆಯನ್ನು ಕೂಡ. ಈ ಕವಿತೆಯಲ್ಲೂ ಸ್ವಾತಂತ್ರ್ಯ ಹೋರಾಟದ ಛಾಯೆಯನ್ನು ಗುರುತಿಸಬಹುದು. ಬೇಂದ್ರೆಯವರ ಕವನಗಳ ವಿಮರ್ಶಕರನೇಕರು ಅಭಿಪ್ರಾಯ ಪಟ್ಟಿರುವಂತೆ ಮತ್ತು ಸ್ವತಃ ಡಾ।ರವಿಯವರೂ ಸಮರ್ಥಿಸುವಂತೆ ಬೇಂದ್ರೆಯವರು ನಿಸರ್ಗವರ್ಣನೆಯಲ್ಲಿ ವಿಲಿಯಂ ವರ್ಡ್ಸ್‌ವರ್ತ್‌ನನ್ನೂ ಮೀರಿಸಿದವರು.

  Dr. Ravi harapana halli addressing the audienceಡಾ।ರವಿ ತಮಗೆ ಅಚ್ಚುಮೆಚ್ಚಿನದೆಂದು ಹೇಳಿಕೊಂಡ ಬೇಂದ್ರೆಯವರ ‘ಚಳಿಯಾಕಿ’ ಕವಿತೆಯನ್ನು ತಾದಾತ್ಮ್ಯವಾಗಿ ಬಣ್ಣಿಸಿದ ರೀತಿ ಅನನ್ಯ. ಕೀರ್ತಿನಾಥ ಕುರ್ತಕೋಟಿ, ಡಾ।ಜೀ.ವಿ.ಕುಲಕರ್ಣಿ ಮತ್ತು ವಾಮನ ಬೇಂದ್ರೆಯವರು ಡಾ।ದ.ರಾ.ಬೇಂದ್ರೆಯವರ ಬಗ್ಗೆ ಬರೆದ ಗ್ರಂಥಗಳನ್ನು ಪರಾಮರ್ಶಿಸಿ ತಮ್ಮ ಭಾಷಣವನ್ನು/ವಿಷಯನಿವೇದನೆಯನ್ನು ಸಿದ್ಧಪಡಿಸಿ ಬಂದಿದ್ದ ರವಿಯವರು- ಬೇಂದ್ರೆಯವರ ವಿವಿಧ ಕವಿತೆಗಳನ್ನು ಸಂಗೀತಕ್ಕೆ ಅಳವಡಿಸಿದ ಧ್ವನಿಸುರುಳಿಗಳನ್ನೂ ಸಭಿಕರಿಗೆ ಪರಿಚಯಿಸಿದರು.

  ಸಭಿಕರಲ್ಲಿ ಡಾ।ಸಿದ್ದಲಿಂಗಯ್ಯ, ಈಶ್ವರ ರಾಜು, ಮನೋಹರ್‌ ಕುಲಕರ್ಣಿ ಮತ್ತು ವಿಜಯಾ ಮನೋಹರ್‌ ಕೂಡ ಬೇಂದ್ರೆಯವರು ಒಬ್ಬ ಸಾಮಾನ್ಯ ವ್ಯಕ್ತಿ, ಬಡ ಶಿಕ್ಷಕ, ಸಂಸಾರಿಗ, ಮಹಾನ್‌ ಕವಿಯಾಗಿ ಹೇಗೆ ತಮ್ಮದೇ ಛಾಪು ಹೊಂದಿದ್ದರು ಎಂಬ ಪೂರಕ ಮಾಹಿತಿಗಳನ್ನು ಒದಗಿಸಿ ಚರ್ಚೆಗೆ ಅರ್ಥಪೂರ್ಣತೆಯನ್ನು ಕಲ್ಪಿಸಿದರು.

  ಧಾರವಾಡ ಕನ್ನಡದಲ್ಲೇ ಹೇಳಬೇಕೆಂದರೆ, ಈ ಕಾರ್ಯಕ್ರಮ ‘ಅಗ್ದೀ ಛಲೋ ಇತ್ತ್ರೀ ಸರ....!’ ಅಷ್ಟು ಮಾತ್ರವಲ್ಲ, ಭೂಮಿಕಾದ ಮುಂದಿನ ತಿಂಗಳ ಕಾರ್ಯಕ್ರಮದಲ್ಲಿ ಡಾ।ರವಿ ಹರಪ್ಪನಹಳ್ಳಿ, ಬೇಂದ್ರೆಯವರ ಇನ್ನಷ್ಟು ಕವಿತೆಗಳನ್ನು ವಿಶ್ಲೇಷಿಸುವುದಾದರೆ, ನಾನು ಆ ಕಾರ್ಯಕ್ರಮಕ್ಕೆ ಹಾಜರಿರಲು ಈಗಲೇ ಕ್ಯಾಲೆಂಡರ್‌ ನೋಟ್‌ ಮಾಡಿಟ್ಟುಕೊಳ್ಳುತ್ತೇನೆ!

  ಇವನ್ನೂ ಓದಿ-

  ಬೇಂದ್ರೆ ನೆನಪಲ್ಲಿ ಕಾ.ವೆಂ. ಕಣ್ಣು ತೇವವಾಯ್ತು !

  ಮತ್ತೆ ಬಂತು ಶ್ರಾವಣ : ಬೇಂದ್ರೆ ಕವಿತೆ

  ಸಾಧನ ಕೇರಿಯ ಶ್ರಾವಣ ಪ್ರತಿಭೆ ಬೇಂದ್ರೆ!

  ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

  ‘ಜೀವಿ’ ಕುಲಕರ್ಣಿ ಅವರು ಮಾಡಿಸಿದ ಬೇಂದ್ರೆ ದರ್ಶನ !

  ಭೂಮಿಕಾ ಮಂಥನದಲ್ಲಿ ಬೇಂದ್ರೆ ಕವನಗಳ ವಿಮರ್ಶೆ

  Click here to go to topಮುಖಪುಟ / ಸಾಹಿತ್ಯ ಸೊಗಡು

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more