ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆರಿಟೋಸ್‌ನ ದಾಸರ ದಿನಾಚರಣೇಲಿ ಮಕ್ಕಳ ಚಿಲಿಪಿಲಿ

By Staff
|
Google Oneindia Kannada News
Purandara Dasara Poojeಮಾರ್ಚ್‌ 8 ರ ಬೆಳಿಗ್ಗೆ 8 ರಿಂದಲೇ ಚಿಕ್ಕ ಮಕ್ಕಳಲ್ಲಿ ಉತ್ಸಾಹ. ಬಣ್ಣ ಬಣ್ಣದ ಬಟ್ಟೆಗಳನ್ನುಟ್ಟ ಚಿಕ್ಕಮಕ್ಕಳ ಓಡಾಟ. ದಾಸರ ಪದಗಳನ್ನು ಹೇಳಲು ಕಾತುರ. ಪ್ರೇಕ್ಷಕರಿಗೆ ಕೇಳುವ ಕಾತುರ.ಬೆಳಿಗ್ಗೆ 8.30 ಕ್ಕೆ ಪುರಂದರ ದಾಸರ ಪೂಜೆಯಾಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕಿರಿಯ ಮತ್ತು ಹಿರಿಯ ಮಕ್ಕಳ ಸುಶ್ರಾವ್ಯವಾದ ಸಂಗೀತ ಎಲ್ಲರನ್ನೂ ಸ್ತಬ್ಧರನ್ನಾಗಿಸಿತ್ತು. ದಾಸರ ದಿನಾಚರಣೆಯಂದು ಪುರಂದರ ದಾಸ, ಕನಕದಾಸ, ಕಮಲೇಶದಾಸ, ವ್ಯಾಸರಾಯ, ವಿಜಯದಾಸ, ಗೋಪಾಲ ದಾಸ ಹಾಗೂ ಜಗನ್ನಾಥ ದಾಸರ ಕೃತಿಗಳನ್ನು ಹಾಡಿದ ಮಕ್ಕಳು ಶ್ರೋತೃಗಳನ್ನು ರಂಜಿಸಿದರು.

ಈ ಕಾರ್ಯಕ್ರಮದ ವಿಶೇಷವೆಂದರೆ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿರುವ ಎಲ್ಲ ಸಂಗೀತಗುರುಗಳ ಶಿಷ್ಯವೃಂದಕ್ಕೆ ಹಾಡುವ ಅವಕಾಶ ದೊರೆತುದು. ಇದು ಗುರು ಶಿಷ್ಯರಿಬ್ಬರಿಗೂ ತಮ್ಮ ತಮ್ಮ ಪ್ರತಿಭೆ ಪ್ರದರ್ಶಿಸಲು ಒಂದು ವೇದಿಕೆ. ಅಪರೂಪದ ವೇದಿಕೆ ಎನ್ನುವುದೇ ಸರಿ. ಇದು ಒಂದೆರಡು ದಿನಗಳಲ್ಲಿ ರೂಪುಗೊಂಡ ಕಾರ್ಯಕ್ರಮವಲ್ಲ . ಈ ಕಾರ್ಯಕ್ರಮಕ್ಕೆ ವರ್ಷದಿಂದಲೇ ತರಬೇತಿ ನಡೆದಿತ್ತು . ಈ ಕಾರ್ಯಕ್ರಮದಲ್ಲಿ ಹಾಡುವುದೆಂದರೆ ಚಿಕ್ಕ ಮಕ್ಕಳಿಗೆ ಒಂದು ಪ್ರತಿಷ್ಠಿತ ವಿಚಾರ. ತಮ್ಮ ಶಿಷ್ಯರು ಹಾಡುವುದು ಗುರುಗಳಿಗೆ ಗೌರವದ ವಿಚಾರ. ಈ ಕಾರ್ಯಕ್ರಮದ ಎಲ್ಲ ಕೆಲಸವೂ ಸ್ವಯಂ ಸೇವಕರಿಂದ ನಡೆಯಿತು. ಯಾವುದೇ ಸಂಘಗಳಿಗೆ ಹೊಂದಿಕೊಳ್ಳದಿರುವುದೇ ಈ ಕಾರ್ಯಕ್ರಮದ ವಿಶೇಷ.

Singing talents performingಹಾಡುವುದರಲ್ಲಿ, ತಬಲ, ವೀಣೆ, Key Board ನುಡಿಸುವುದರಲ್ಲಿ ಭಾಗವಹಿಸಿದ ನೂರಕ್ಕೂ ಹೆಚ್ಚು ಮಕ್ಕಳು ಅಪಾರ ಜಾಣ್ಮೆ ಮೆರೆದರು. ಈ ಯಶಸ್ಸಿನಲ್ಲಿ ಕಾರ್ಯಕಮವನ್ನು ನಿರ್ವಹಿಸಿದ ಉಷಾ ಮತ್ತು ಅವರ ಸ್ನೇಹಿತರ ಸೇವೆ ಪ್ರಶಂಸಾರ್ಹ.

ನಿರಂತರ ಕಾಫಿಯ ಸೇವೆಯಿಂದ ಹಿಡಿದು ಮಧ್ಯಾಹ್ನದ ಭೋಜನದ ವ್ಯವಸ್ಥಾಪಕರು ಸೂರ್ಯಪ್ರಕಾಶ್‌ ಮತ್ತು ರಮಾ. ಭೋಜನದ ವೇಳೆಯಲ್ಲಿ ಸೊಂಟ ಕಟ್ಟಿನಿಂತ ಸ್ವಯಂ ಸೇವಕರನ್ನು ನೋಡಿದಾಗ ಎಲ್ಲರ ಪೂರ್ಣ ಸಹಕಾರ ಎದ್ದು ತೋರುತಿತ್ತು.

ಬೆಳಿಗ್ಗೆ 8.30 ಕ್ಕೆ ಪ್ರಾರಂಭವಾದ ಕಾರ್ಯಕ್ರಮ ರಾತ್ರಿ 9 ಕ್ಕೆ ಮುಗಿಯಿತು. ಕಾರ್ಯಕ್ರಮದ ಕೊನೆಯಲ್ಲಿ ನಡೆದ ಗುರುಗಳ ದಾಸರಪದಗಳು ಕೇಳಲು ಇಂಪಾಗಿದ್ದವು.

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X