• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ನಿಸಾರ್‌ ಅಹಮದ್‌ ಜೊತೆ ಕೆಲದಿನ ಕಳೆದೆ’

By Staff
|
  • ಕೃಷ್ಣಶಾಸ್ತ್ರಿ , ಸೀಡರ್‌ ಫಾಲ್ಸ್‌, ಅಯೋವ, ಯು.ಎಸ್‌.ಎ.
  • ಡೆಟ್ರಾಯಿಟ್‌ ವಿಶ್ವ ಕನ್ನಡ ಸಮ್ಮೇಳನದ ಕೇಂದ್ರಬಿಂದುವಾಗಿ ಮಿಂಚಿದ ನಿತ್ಯೋತ್ಸವದ ಕವಿ ಪ್ರೊ.ಕೆ.ಎಸ್‌. ನಿಸಾರ್‌ ಅಹಮದ್‌ ಅವರು, ತಮ್ಮ ಅಮೆರಿಕ ಪ್ರವಾಸದುದ್ದಕ್ಕೂ ಕನ್ನಡ ಸಾಂಸ್ಕೃತಿಕ ರಾಯಭಾರಿಯ ಪಾತ್ರ ನಿರ್ವಹಿಸಿದರು. ಅವರ ಪ್ರವಾಸ ಅಮೆರಿಕನ್ನಡಿಗರ ಪಾಲಿಗೆ ಒಂದು ಮರೆಯಲಾಗದ ಅನುಭವ.

    ನಿಸಾರ್‌ ಅವರು ಅಮೆರಿಕಾ ಪ್ರವಾಸ ಕೈಗೊಂಡದ್ದರ ಹಿಂದೆ ಹಲವರ ಪಾತ್ರವಿತ್ತು . ಅದನ್ನು ನೆನೆಯುವುದಾದರೆ-

    ಡೆಟ್ರಾಯಿಟ್‌ನಲ್ಲಿ ನಡೆದ ‘2002- ವಿಶ್ವಕನ್ನಡಸಮ್ಮೇಳನ’ದಲ್ಲಿ ಭಾಗವಹಿಸಲು ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌ ರವರಿಗೆ ಅಕ್ಕ ಅಧ್ಯಕ್ಷರಾದ ಅಮರನಾಥ ಗೌಡ ಜೂನ್‌ ನಲ್ಲಿ ಅಧಿಕೃತ ಅಹ್ವಾನ ನೀಡಿದರು. ಬಾಸ್ಟನ್‌ ನಿವಾಸಿಗಳಾದ ಡಾ.ಗೋವಿಂದರಾಜು, ಫೀನಿಕ್ಸ್‌ನ ಸೀತಾರಾಮಯ್ಯ, ಕ್ಯಾಲಿಫೋರ್ನಿಯಾದ ಎಂ.ಕೃಷ್ಣಮೂರ್ತಿ, ಮತ್ತು ಅಯೋವಾದ ಕೃಷ್ಣಶಾಸ್ತ್ರಿ ಗಳು ನಿಸಾರ್‌ರ ಆಗಮನದ ಪೂರ್ವಭಾವಿ ನಿಯೋಜಕರಾಗಿದ್ದರು.

    ಅಮೆರಿಕ ಮತ್ತು ಕೆನಡಾ ವೀಸಾ ಹಾಗೂ ಟಿಕೆಟ್‌ಗಳ ಏರ್ಪಾಡನ್ನು ಬೆಂಗಳೂರಿನ ಬನಶಂಕರಿಯ ನಿವಾಸಿ ಎಂ.ಎಸ್‌.ರವಿಶಂಕರ್‌ರವರು ಬಹಳ ಮುತುವರ್ಜಿ ವಹಿಸಿ ಅತಿ ಶೀಘ್ರವಾಗಿ ಮಾಡಿಕೊಟ್ಟಿದ್ದರು.

    Prof. K.S. Nisar Ahmedಸುಮಾರು 4000 ಮಂದಿ ಕಡಲಾಚೆಯ ಕನ್ನಡಿಗರು ಡೆಟ್ರಾಯಿಟ್‌ನಲ್ಲಿ ಸೇರಿ ಕನ್ನಡವನ್ನು ಮೆರೆಸಿ ಆನಂದಿಸಿದರು. ಬಹಳ ದಿನಗಳ ನಂತರ ಮಿತ್ರರು ಮತ್ತು ಬಂಧುಗಳು ಸೇರಿ ಕುಶಲ ಪ್ರಶ್ನೆಗಳನ್ನೂ, ವಿಚಾರ ವಿನಿಮಯ ನಡೆಸುವ ದೃಶ್ಯಗಳು ಸಮ್ಮೇಳನದಲ್ಲಿ ಎಲ್ಲೆಡೆಯಲ್ಲಿಯೂ ಕಂಡುಬರುತ್ತಿತ್ತು. ಸ್ತ್ರೀಯರಿಗೆ ಹೊಸ ಸೀರೆ ಮತ್ತು ಆಭರಣಗಳ ಅಲಂಕಾರ ಮಾಡಿಕೊಳ್ಳಲು ಒಳ್ಳೆಯ ಸದಾವಕಾಶ ಕಲ್ಪಿಸಿದಂತಾಗಿತ್ತು. ಭಾರತದ ಹಬ್ಬ ಹರಿದಿನಗಳ ವಿಜೃಂಭಣೆ ಎಲ್ಲೆಡೆಯಲ್ಲೂ ಆವರಿಸಿತ್ತು. ಇದು ಜನರ ಸಮ್ಮೇಳನ !

    ಅಮೆರಿಕದಲ್ಲಿರುವ ಕನ್ನಡ ಕೂಟಗಳು, ಅಪಾರ ಕನ್ನಡ ಬಾಂಧವರು, ಹಲವಾರು ಸಹೃದಯರು, ಹೊಸ ಮಿತ್ರರು ಈ ಯಾತ್ರೆಯನ್ನು ಚಿರಸ್ಮರಣೀಯವಾಗುವಂತೆ ಮಾಡಲು ತನುಮನಧನಗಳನ್ನು ಉದಾರವಾಗಿ ಕೊಟ್ಟರು. ಅವರೆಲ್ಲರಿಗೂ ಧನ್ಯವಾದಗಳು ಮತ್ತು ಕೃತಜ್ಞತೆಗಳು.

    ನಿಸಾರ್‌ ಅವರನ್ನು ನೆನಪಿಸಿಕೊಳ್ಳುತ್ತಾ ಮಾತು ಸಮ್ಮೇಳನದಲ್ಲೇ ಸುತ್ತುವರೆಯಿತು. ಮತ್ತೆ ನಿಸಾರ್‌ ಅವರ ಪ್ರವಾಸವನ್ನು ಅವಲೋಕಿಸೋಣ :

    ತಮ್ಮ 102 ದಿನಗಳ ಪ್ರವಾಸದಲ್ಲಿ ಕೆನಡಾದ ನಯಾಗರ ಮತ್ತು ಅಮೆರಿಕಾದ 27 ರಾಜ್ಯಗಳು, 45 ಕ್ಕೂ ಹೆಚ್ಚು ನಗರಗಳಿಗೆ ಪ್ರೊ.ಕೆ.ಎಸ್‌.ನಿಸಾರ್‌ಅಹಮದ್‌ ಭೇಟಿ ಕೊಟ್ಟಿದ್ದರು. ಅಮೆರಿಕದ ಸುತ್ತ ಒಂದು ಪ್ರದಕ್ಷಿಣೆ ಮಾಡಿದಂತಾಯ್ತು. ಸುಮಾರು ಇಪ್ಪತ್ತು ಸಾವಿರ ಮೈಲಿ ಸಂಚಾರ ಮಾಡಿ, ಹತ್ತು ಸಾವಿರಕ್ಕೂ ಹೆಚ್ಚು ಕನ್ನಡಿಗರನ್ನು ಸಂದರ್ಶಿಸಿದ್ದರು.

    ನಿಸಾರ್‌ ತಮ್ಮ ಅಮೆರಿಕ ಪ್ರವಾಸದಲ್ಲಿ ಎಲ್ಲರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿದ್ದರು. ಹೆಚ್ಚಾಗಿ ಪ್ರಯಾಣವನ್ನು ವಿಮಾನದಲ್ಲಿ ಮಾಡಿದರು. ಅಮೆರಿಕದ ಟ್ರೈನ್‌ ಮತ್ತು ಬಸ್‌ಗಳ ಪರಿಚಯವೂ ಅವರಿಗಾಯ್ತು. ಕಾರಿನಲ್ಲಿ ಕುಳಿತ ತಕ್ಷಣ ಸೀಟ್‌ ಬೆಲ್ಟ್‌ ಹಾಕಿಕೊಳ್ಳುವ ಸಂದರ್ಭದಲ್ಲಿ ನಿಸಾರ್‌- ‘ನನಗೇಕಪ್ಪ ಈ ಜನಿವಾರ ಪ್ರಯೋಗ!’ ಎಂದು ತಮಾಷೆ ಮಾಡುತ್ತಿದ್ದರು. ಅವರು ಅಕಸ್ಮಾತ್‌ ಮರೆತರೆ ‘ಸಾರ್‌ ನೀವು ಜನಿವಾರ ಹಾಕಿಕೊಳ್ಳಿ!’ ಎಂದು ನಾನು ಚುಡಾಯಿಸುತ್ತಿದ್ದೆ.

    ನಿಸಾರ್‌ ಅಹಮದ್‌ರ ಅಮೆರಿಕ ಪ್ರವಾಸದ ವಿಚಾರವನ್ನು ತಿಳಿಸಲು ವಿಶ್ವಕನ್ನಡಸಮ್ಮೇಳನದ ಒಂದು ಮಳಿಗೆಯಲ್ಲಿ ಕೆಲವು ಸ್ವಯಂಸೇವಕರು ಕುಳಿತಿದ್ದರು. ಅಲ್ಲಿಗೆ ಕನ್ನಡ ಮಿತ್ರರು ಬಂದು ಭೇಟಿ ಮಾಡಿ ಅವರಿಗೆ ಶುಭ ಹಾರೈಸುತ್ತಿದ್ದರು; ಹಲವರು ಅವರ ಜೊತೆ ಜ್ಞಾಪಕಾರ್ಥವಾಗಿ ಫೊಟೋಗಳನ್ನು ತೆಗೆಸಿಕೊಂಡರು. ‘ಆ ಕನ್ನಡ ಜನಸಮೂಹದ ವಿಶ್ವಾಸ, ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ’ ಎಂದು ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌ ತಮ್ಮ ಕೃತಜ್ಞತಾ ಪತ್ರದಲ್ಲಿ ತಿಳಿಸಿದ್ದಾರೆ. ಕೆಲವು ತಾಯಿ ತಂದೆಗಳು, ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌ ರವರ ಎದುರಿನಲ್ಲಿ ಹೆಮ್ಮೆಯಿಂದ ತಮ್ಮ ಪುಟ್ಟ ಮಕ್ಕಳ ಬಾಯಿಂದ ‘ನಿತ್ಯೋತ್ಸವ’, ‘ಬೆಣ್ಣೆಕದ್ದ ಕೃಷ್ಣ’ ಗೀತೆಗಳನ್ನು ಹಾಡಿಸಿ ಆನಂದಪಟ್ಟರು. ಕವಿಗೆ ಇದಕ್ಕಿಂತ ಹೆಚ್ಚಿನ ಸನ್ಮಾನ ಬೇಕೆ ?

    ಬಿಡುವಿಲ್ಲದ 102 ದಿನಗಳ ಕಾರ್ಯಕ್ರಮದಲ್ಲಿ ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌ರವರು, ಅರವತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ಅವರ ಸಹೋದ್ಯೋಗಿಗಳಾಗಿದ್ದ ಡಾ. ವೈ.ಆರ್‌.ಮೋಹನ್‌ ಅವರನ್ನು ಅಲಬಾಮಾ ರಾಜ್ಯದ ಟಸ್ಕಲೂಸದಲ್ಲಿ ಭೇಟಿ ಮಾಡಿ ಹಳೆಯ ದಿನಗಳನ್ನು ನೆನಪಿಸಿಕೊಂಡರು. ಇದು ಅವರಿಬ್ಬರಿಗೂ ಅತ್ಯಂತ ತೃಪ್ತಿಯನ್ನು ಕೊಟ್ಟಿತು. ಡಾ.ಮೋಹನ್‌ರ ‘ನೆನಪುಗಳು’ ಪುಸ್ತಕಕ್ಕೆ ಕನ್ನಡ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ದೊರಕಿದೆ. ಈಗ ಡಾ.ಮೋಹನ್‌ ರವರು ‘ಪಾರ್ಕಿನ್ಸನ್‌’ ಕಾಯಿಲೆಯಿಂದ ನರಳುತ್ತಿದ್ದಾರೆ. ‘ಪಾರ್ಕಿನ್ಸನ್‌ ಕಾಯಿಲೆಯಿಂದ ನಾನು ಕಲಿತಿದ್ದೇನು?’ ಎಂಬ ಇವರ ಪುಸ್ತಕ ಒಂದು ಹೊಸ ದೃಷ್ಟಿಕೋನವನ್ನು ಕೊಡುತ್ತದೆ. ಇತ್ತೀಚೆಗೆ ಮೋಹನ್‌ರು ಬರೆದ ‘ಅಮೆರಿಕಾಯಣ’ ಪುಸ್ತಕ ಒಂದು ಮೇರುಕೃತಿ.

    ನಿಸಾರ್‌ ಅಹಮದ್‌ರ ಜೊತೆ ಕಳೆದ ಕೆಲವು ಅಮೂಲ್ಯ ದಿನಗಳನ್ನು ನಾನು ಪದೇಪದೇ ಮೆಲುಕು ಹಾಕುತ್ತಿರುತ್ತೇನೆ. ಆಗಾಗ್ಗೆ ಫೋನಿನಲ್ಲಿ ಮಾತನಾಡಿ ಸಂತೃಪ್ತನಾಗುತ್ತೇನೆ. ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌ರವರಿಗೆ ಈಶ್ವರ+ಅಲ್ಲಾ ರವರು ಆಯುರಾರೋಗ್ಯ ನೀಡಿ ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ. ನಿಸಾರ್‌ ಆವರಿಂದ ಶ್ರೀಘ್ರದಲ್ಲೇ ಅವರ ಅಮೆರಿಕ ಪ್ರವಾಸದ ಲೇಖನ ಮಾಲೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇನೆ.

    ಪೂರಕ ಓದಿಗೆ-

    ಕೆ.ಎಸ್‌.ನಿಸಾರ್‌ಅಹಮದ್‌ : ಗಾಂಧಿ ಬಜಾರಿನಿಂದ ಡೆಟ್ರಾಯಿಟ್‌ಗೆ..

    ಮುಖಪುಟ / ಎನ್‌ಆರ್‌ಐ

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more