ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಸಿಎ: ನಾಟಕೋತ್ಸವ ಯಶಸ್ಸು , ಯುಗಾದಿ ಹುಮ್ಮಸ್ಸುಯುಗಾದಿ-ಸಂಗೀತೋತ್ಸವದೊಂದಿಗೆ ‘ಸಂಗಮ’ದ ಸಂಗಮ

By Staff
|
Google Oneindia Kannada News

ಮುಖಪುಟ -->ಸಾಹಿತ್ಯ ಸೊಗಡು -->ಎನ್‌ಆರ್‌ಐ ಕನ್ನಡ ಕಲರವ -->ಸಮಾಚಾರ

ಫೆಬ್ರವರಿ 13, 2003

ಕೆಸಿಎ: ನಾಟಕೋತ್ಸವ ಯಶಸ್ಸು , ಯುಗಾದಿ ಹುಮ್ಮಸ್ಸು
ಯುಗಾದಿ-ಸಂಗೀತೋತ್ಸವದೊಂದಿಗೆ ‘ಸಂಗಮ’ದ ಸಂಗಮ

KCA members performing the play Sangya Balya (2002)ಕಾವ್ಯೇಶು ನಾಟಕಂ ರಮ್ಯಂ !

ಭಾರತೀಯ ವಯ್ಯಾಕರಣಿಗಳ ಮಾತು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಫೆ.1 ರಂದು ಸಾಕ್ಷಾತ್ಕಾರವಾಗಿತ್ತು . ಅದು ನಾಟಕದ ಹಬ್ಬ . ದಕ್ಷಿಣ ಕ್ಯಾಲಿಫೋರ್ನಿಯಾ ಪ್ರಾಂತ್ಯದಲ್ಲಿ ಕನ್ನಡದ ಸಿರಿ-ಸೊಗಡು ಸಿಂಪರಿಸುತ್ತಿರುವ ಕರ್ನಾಟಕ ಸಾಂಸ್ಕೃತಿಕ ಸಂಘ ಏರ್ಪಡಿಸಿದ್ದ - ನಾಟಕದ ಉತ್ಸವ.

ಸುಮಾರು 350 ಕ್ಕೂ ಹೆಚ್ಚು ನಾಟಕ ಪ್ರಿಯರು ಪಾಲ್ಗೊಳ್ಳುವ ಮೂಲಕ ‘ನಾಟಕೋತ್ಸವ’ ಸ್ಮರಣೀಯ ಹಾಗೂ ಅಭೂತಪೂರ್ವ ಯಶಸ್ಸು ಗಳಿಸಿತು.

ವಾನರರ ನೆರವಿನಿಂದ ರಾಮ ಲಂಕೆಗೆ ಕಟ್ಟಿದ ಸೇತುವೆಗೆ ‘ಅಳಿಲು ಸೇವೆ’ ಸಲ್ಲಿಸಿದಂತೆ ನಾಟಕೋತ್ಸವದ ಯಶಸ್ಸಿನ ಪಾಲೂ ಒಬ್ಬಿಬ್ಬರದಲ್ಲ. ಯಶಸ್ಸಿನ ಹಿನ್ನೆಲೆಯಲ್ಲಿ ಮೊದಲಿಗೆ ನೆನೆಯಬೇಕಾದವರು- ನಾಟಕ ಸಂಘಟಕರಾದ ವಿಜಯ್‌ ಕೊಟ್ರಪ್ಪ ಹಾಗೂ ಅವರ ಟೀಂ.

ವೇದಿಕೆಯ ಮೇಲೆ ಒಮ್ಮೆಯೂ ಕಾಣಿಸಿಕೊಳ್ಳದ ರವೀಂದ್ರ ಗೌಡ ಅವರು ನಾಟಕೋತ್ಸದವ ಧ್ವನಿ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಉತ್ಸವದ ಯಶಸ್ಸಿಗೆ ನೇಪಥ್ಯದಲ್ಲೇ ನಿಂತು ತಮ್ಮ ಹವಿಸ್ಸು ಸಲ್ಲಿಸಿದರು. ರಂಗ ನಿರ್ವಹಣೆ, ತಿಂಡಿ-ಕುರುಕುಲು, ನೋಂದಣಿ, ಸ್ವಚ್ಛತೆ ಮುಂತಾಗಿ ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ ಸ್ವಯಂ ಸೇವಕರು ಉತ್ಸವದ ಮೆರುಗು ಹೆಚ್ಚಿಸಿದರು.

ಅಂದಹಾಗೆ, ನಾಟಕದ ವಿಡಿಯಾಗಳು ಲಭ್ಯವಿವೆ. ಸಾಂಕೇತಿಕ ಶುಲ್ಕ 10 ಡಾಲರ್‌ಗಳನ್ನು ಸಲ್ಲಿಸುವ ಮೂಲಕ ವಿಡಿಯಾ ಕೆಸೆಟ್‌ಗಳ ಪಡೆಯಬಹುದು. ಸಂಪರ್ಕಿಸಿ- [email protected]

ಯುಗಾದಿ ಮರಳಿ ಬರುತಿದೆ

ನಾಟಕೋತ್ಸವದ ಯಶಸ್ಸಿನ ನಂತರ ಕೆಸಿಎ ಯುಗಾದಿ ಆಚರಣೆಗೆ ಈಗಾಗಲೇ ಸಿದ್ಧತೆ ಆರಂಭಿಸಿದೆ. ಏಪ್ರಿಲ್‌ 19 ರ ಶನಿವಾರ ಯುಗಾದಿ/ ಸಂಗೀತೋತ್ಸವ ಕಾರ್ಯಕ್ರಮ ಮಧ್ಯಾಹ್ನ 2 ರಿಂದ ಸಂಜೆ 7ರವರೆಗೆ ಹಿಂದೂ ದೇಗುಲದಲ್ಲಿ ನಡೆಯಲಿದೆ. ವಿಳಾಸ : 1600 Las Virgenes Canyon Road, Calabasas, CA 91302; tel No (818) 8805583.

ಯುಗಾದಿ/ ಸಂಗೀತೋತ್ಸವ ಕಾರ್ಯಕ್ರಮ ನಿರ್ವಹಣೆಯ ಉಸ್ತುವಾರಿಯನ್ನು ಸೋಮಶೇಖರ್‌ ಹೊಸಕೆರೆ ವಹಿಸಿಕೊಂಡಿದ್ದಾರೆ. ಕಾರ್ಯಕ್ರಮದ ಬಗೆಗಿನ ಉಳಿದ ವಿವರಗಳನ್ನು ನಿರೀಕ್ಷಿಸಿ.

ಯುಗಾದಿ ಸಂಗಮ !

ಕೆಸಿಎ ಬಳಗದ ವಾರ್ಷಿಕ ಸಂಚಿಕೆ ‘ಸಂಗಮ’ ಯುಗಾದಿಯಂದೇ ಬಿಡುಗಡೆಗೊಳ್ಳುವುದು ಹಾಗೂ ಓದುಗರ ಕೈ ಸೇರುವುದು. ಲೇಖನಗಳನ್ನು ಕಳುಹಿಸಲು ನೀವು ಸಿದ್ಧವಾ ? ಜಾಹಿರಾತುಗಳಿಗೂ ಸ್ವಾಗತವಿದೆ. ಲೇಖನ ಅಥವಾ ಜಾಹಿರಾತು ಕಳುಹಿಸಲು ಕೊನೆಯ ದಿನ- ಮಾರ್ಚ್‌ 01.

ಹೆಚ್ಚಿನ ವಿವರಗಳಿಗೆ ಕೆಸಿಎ ಅಧ್ಯಕ್ಷ ಬಿ.ಎನ್‌.ನಾಗರಾಜ್‌ ಅವರನ್ನು ಸಂಪರ್ಕಿಸಿ. ಇ-ಮೇಲ್‌ : [email protected]
ಅಥವಾ
ಕೆಸಿಎ ವೆಬ್‌ಸೈಟ್‌ http://www.lakannada.com/ ಕ್ಲಿಕ್ಕಿಸಿ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X