ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವರಾತ್ರಿಯಂದು ಬಾಲ್ಟಿಮೋರ್‌ನಲ್ಲಿ ಭರತನಾಟ್ಯ

By Staff
|
Google Oneindia Kannada News

Baltimore Templeಮಾರ್ಚ್‌ 1ನೇ ತಾರೀಕು ಶನಿವಾರ ಸಂಜೆ 4ರಿಂದ 6 ಗಂಟೆವರೆಗೆ ಪೂಜಾ ಕುಮಾರ್‌, ಶಿಲ್ಪ ಸೇತುರಾಂ ಹಾಗೂ ಯೋಶಿತಾ ಪಟೇಲ್‌- ಇವರೆಲ್ಲರಿಂದ ಶಿವರಾತ್ರಿ ಪ್ರಯುಕ್ತ ಭರತನಾಟ್ಯ ನೃತ್ಯ ಹಬ್ಬ; ಗ್ರೇಟರ್‌ ಬಾಲ್ಟಿಮೋರ್‌ ದೇಗುಲದ ಸಮುದಾಯ ಹಾಲ್‌ನಲ್ಲಿ . ಸಾಗರದಾಚೆ ಬೆಳೆದರೂ ಸಂಪ್ರದಾಯದ ಬೇರುಗಳ ಬನಿ ಉಳಿಸಿಕೊಂಡು, ವರ್ಷಗಳ ಕಾಲ ಶಾಸ್ತ್ರೀಯ ನೃತ್ಯದ ತಾಲೀಮು ನಡೆಸಿರುವ ಈ ಪ್ರತಿಭಾವಂತ ಹೆಣ್ಣು ಮಕ್ಕಳ ಸಂಕ್ಷಿಪ್ತ ಪರಿಚಯ ಮಾಡಿಕೊಳ್ಳೋಣ...

ಪೂಜಾ ಕುಮಾರ್‌
ಕ್ಲೀವ್‌ಲ್ಯಾಂಡ್‌ನಲ್ಲಿ ವಾಸಿಸುತ್ತಿರುವ ಹದಿನಾಲ್ಕು ವಯಸ್ಸಿನ ಪೂಜಾ, ಸುಜಾತಾ ಶ್ರೀನಿವಾಸನ್‌ ಅವರ ಶಿಷ್ಯೆ. ಆರನೇ ವಯಸ್ಸಿನವಳಾಗಿದ್ದಾಗಿನಿಂದಲೂ ಭರತ ನಾಟ್ಯ ಅಭ್ಯಾಸ ಮಾಡುತ್ತಿದ್ದಾಳೆ. ತನ್ನ 10ನೇ ವಯಸ್ಸಿನಲ್ಲಿ ನಾಟ್ಯ ರಂಗ ಪ್ರವೇಶ ಮಾಡಿದ ಈ ಪುಟ್ಟ ಪ್ರತಿಭೆ ಅಮೆರಿಕ, ಭಾರತ (ಚೆನ್ನೈ) ಮತ್ತು ಕೆನಡಾದ ಹಲವು ನಗರಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾಳೆ. ನಾಟ್ಯ ವಿಮರ್ಶಕರು ಹಾಗೂ ಸಹೃದಯರಿಂದ ಭೇಷ್‌ ಎನಿಸಿಕೊಂಡಿರುವ ಈ ಬಾಲೆ ಲುಂಬಿಣಿ ಆರ್ಟ್ಸ್‌ ಭರತನಾಟ್ಯಂ ನೃತ್ಯ ಸ್ಪರ್ಧೆಯಲ್ಲಿ ಬಹುಮಾನ ಗಿಟ್ಟಿಸಿದ ಅತಿ ಕಿರಿಯವಳೆಂಬ ಅಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಈಕೆ ಯೂರೋಪ್‌ನಲ್ಲಿ ಪ್ರದರ್ಶನ ಕೊಡಲೂ ಆಯ್ಕೆಯಾಗಿದ್ದಳು. ಕ್ಲೀವ್‌ಲ್ಯಾಂಡ್‌ನ ಶಿವ ವಿಷ್ಣು ದೇವಸ್ಥಾನದಲ್ಲಿ ದೇಣಿಗೆ ಸಂಗ್ರಹಣೆಯ ಸಲುವಾಗಿ ಇತ್ತೀಚೆಗೆ ಪೂಜಾ ನೃತ್ಯ ಪ್ರದರ್ಶಿಸಿದ್ದಳು.

ಶಿಲ್ಪ ಸೇತುರಾಮನ್‌
ತನ್ನ ಅಮ್ಮ ಮಧುಶ್ರೀ ಸೇತುರಾಮನ್‌ ಅವರಿಂದಲೇ ನೃತ್ಯ ಕಲಿತ ಹತ್ತು ವರ್ಷ ವಯಸ್ಸಿನ ಶಿಲ್ಪ ಡಲ್ಲಾಸ್‌ ನಿವಾಸಿ. ಅಮೆರಿಕ, ಯೂರೋಪ್‌, ಆಸ್ಟ್ರೇಲಿಯಾದ ಕೆಲವು ನಗರಗಳು ಮತ್ತು ಭಾರತದ ಚೆನ್ನೈನಲ್ಲಿ ನೃತ್ಯ ಪ್ರದರ್ಶನ ನೀಡಿರುವ ಶಿಲ್ಪಳನ್ನು ‘ನ್ಯೂಸ್‌ ಟುಡೇ’ ತಯಾರಾಗುತ್ತಿರುವ ಯುವ ಕಮಲ ಎಂದು ಬಣ್ಣಿಸಿದೆ. ಸೆಪ್ಟೆಂಬರ್‌ 2001ರಲ್ಲಿ ಶಿಕಾಗೋದಲ್ಲಿ ನಡೆದ ವಿಶ್ವ ಭರತನಾಟ್ಯ ಸಮ್ಮೇಳನಕ್ಕೆ ಆಯ್ಕೆಯಾಗಿದ್ದ ಅತಿ ಕಿರಿಯವಳು ಈಕೆ.

ಯೋಶಿತಾ ಪಟೇಲ್‌
ಕಳೆದ 9 ವರ್ಷಗಳಿಂದ ಪದ್ಮ ರಾಜಗೋಪಾಲ್‌ ಅವರಲ್ಲಿ ನೃತ್ಯಾಭ್ಯಾಸ ಮಾಡುತ್ತಿರುವ ಯೋಶಿತಾ ಕ್ಲೀವ್‌ಲ್ಯಾಂಡ್‌ನ ಯುವತಿ. 2000ನೇ ಇಸವಿಯಲ್ಲಿ ನಾಟ್ಯ ರಂಗ ಪ್ರವೇಶಿಸಿದ ಈಕೆ 2001 ಹಾಗೂ 2002ರಲ್ಲಿ ಕ್ಲೀವ್‌ಲ್ಯಾಂಡ್‌ ದೇವಳದಲ್ಲಿ ದೇಣಿಗೆ ಸಂಗ್ರಹಣೆಗಾಗಿ ನಾಟ್ಯ ಪ್ರದರ್ಶನ ನೀಡಿದರು. ಊಣಎಅಘಅ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ ಅನುಭವ ಇದೆ. 2000ನೇ ಇಸವಿಯಲ್ಲಿ ಡಿಸ್ನಿ ವರ್ಲ್ಡ್‌ನ ಮಿಲೆನಿಯಮ್‌ ಪ್ರದರ್ಶನದ ನಿಮಿತ್ತ ಎಪ್ಕಾಟ್‌ ಸೆಂಟರ್‌ನಲ್ಲಿ ನಾಟ್ಯ ಪ್ರದರ್ಶಿಸಿದ್ದಾರೆ. ಪ್ರಸ್ತುತ ಕೇಸ್‌ ವೆಸ್ಟರ್ನ್‌ ರಿಸರ್ವ್‌ ವಿಶ್ವವಿದ್ಯಾಲಯದಲ್ಲಿ ಮೆಡಿಕಲ್‌ ಆಂಥ್ರೋಪಾಲಜಿ ಅಂಡ್‌ ಇಕನಾಮಿಕ್ಸ್‌ ಪದವಿಯ ಪ್ರಥಮ ವರ್ಷದ ವಿದ್ಯಾರ್ಥಿನಿ.

ಈ ಮೂವರೂ ಪ್ರತಿಭಾವಂತರನ್ನು ಒಂದೇ ವೇದಿಕೆ ಮೇಲೆ ನೋಡುವ ಅವಕಾಶ ಸಹೃದಯರದ್ದು. ನಾಟ್ಯ ನೋಡಲು ಪ್ರವೇಶ ಉಚಿತ.

ನಾಟ್ಯ ಪ್ರದರ್ಶನ ನಡೆಯುವ ಸ್ಥಳದ ವಿಳಾಸ : Shivarathri Dance Festival At the Greater Baltimore Temple, Community Hall 2909 Bloom Rd, Finsksburg, MD.

ಹೆಚ್ಚಿನ ಮಾಹಿತಿಗೆ ಇವರನ್ನು ಸಂಪರ್ಕಿಸಿ-
ಕೀರ್ತನ ಸ್ಕೂಲ್‌ ಆಫ್‌ ಇಂಡಿಯನ್‌ ಮ್ಯೂಸಿಕ್‌ ಅಂಡ್‌ ಫೈನ್‌ ಆರ್ಟ್ಸ್‌ನ ಬಾಬು ಪರಮೇಶ್ವರನ್‌ (ಕಾರ್ಯಕ್ರಮ ಸಂಯೋಜಕ) : 410-719-1569, ಉಮ ರಾಜ್‌ಪುರ : (410)-840-8408 ಅಥವಾ ಜಿತೇಶ್‌ ಪಾರೇಖ್‌ : (410) 876-0365.

ದೇವಾಲಯಕ್ಕೆ ಹೋಗುವ ಮಾರ್ಗಸೂಚಿ-
From the south, take 195 north to 1695 north towards Towson. Then follow directions from I695.
From the north, take 195 south to 1695 towards Towson. Then follow directions from I695.
From 1695: Take exit 19 to I 795 north. Go to exit 9B and take Rte. 140 west towards Westminster.
Go about 3.8 miles and take Rte. 91 south (Gamber Road). Turn right on Bloom Road, the first road on the right. The Temple will be the property on your left.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X