• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಹಲೋ’...ಕತೆ ಕೇಳ್ತೀರಾ?

By Staff
|
  • ಶೈಲಜಾ ವಲಕಟ್ಟೆ,

E-mail : shailajabhat@yahoo.com

Shailaja valakatteಹಲೋ...

ಇದೇನು ಕುಶಲೋಪರಿ ವಿಚಾರಿಸುತ್ತಿದ್ದೇನೆ ಅಂತ ಗ್ರಹಿಸಿದಿರಾ? ಅಥವಾ ‘ಹಲೋ’ ಕನ್ನಡ ಸಿನೆಮಾದ ಕತೆ ಹೇಳ್ತೇನೆ ಅಂದ್ಕೊಂಡ್ರಾ? ಎರಡೂ ಅಲ್ಲ ಬಿಡಿ...!

ಒಂದು ವಿಷಯ ಗೊತ್ತಾ ನಿಮಗೆ? ಏನು ವಿಷಯ ಅಂತಾನೆ ಹೇಳಿಲ್ಲ...ಹೇಗೆ ಗೊತ್ತಾಗುತ್ತೆ ಅಂತೀರಾ...!!..ಸರಿ...

ಟೆಲಿಫೋನ್‌ ‘ಟ್ರಿಣ್‌ ಟ್ರಿಣ್‌’ ರಿಂಗ್‌ ಆಗ್ತಾ ಇದೆ... ನೀವು ಫೋನ್‌ ಕೈಯಲ್ಲಿ ಹಿಡುದುಕೊಂಡು ಮೊದಲು ಏನು ಹೇಳ್ತೀರಾ?... ‘ಹಲೋ..’ ಅಲ್ವಾ?

ನಿಮಗೆ ತಿಳಿದಿದೆಯೇ ಈ ‘ಹಲೋ...’ ಅನ್ನೋ ಶಬ್ದವನ್ನು ಸಂಭಾಷಣೆಯ ಮೊದಲಿಗೆ ಉಪಯೋಗ ಮಾಡುವ ರೂಢಿ ಹೇಗೆ ಬಂತೂಂತ ?

ಒಂದೆರಡು ನಿಮಿಷ ಕಾಲ ಆಲೋಚಿಸಿ... ಟೆಲಿಫೋನೇ ಇಲ್ಲದಿದ್ದಲ್ಲಿ ಹೇಗಿರುತ್ತಿತ್ತು ಈ ಜಗತ್ತು? ಕಲ್ಪನಾ ಅಭಿನಯದ ‘ಬೆಳ್ಳಿಮೋಡವೇ ಎಲ್ಲಿ ಓಡುವೆ...’, ಕಾಳಿದಾಸನ ‘ಮೇಘಸಂದೇಶ’ ಕಾರ್ಯರೂಪಕ್ಕೆ ಬರುತ್ತಿದ್ದವೋ ಏನೊ! ಹಾಗೆಯೇ ಸೆಲ್‌ಫೋನ್‌ ಕಂಪೆನಿಗಳು ತಮ್ಮ ಬಿಸಿನೆಸ್‌ ಬದಲಾಯಿಸಿ ‘ಹಂಸ’ ಗಳನ್ನು ಮಾರಾಟ ಮಾಡಲು ತೊಡಗುತ್ತಿದ್ದವು ಅಲ್ವಾ?

ಟೆಲಿಫೋನನ್ನು ಕಂಡುಹಿಡಿದದ್ದು ಅಲೆಕ್ಸಾಂಡರ್‌ ಗ್ರಹಾಂಬೆಲ್‌ ಅಂತ ಎಲ್ಲರಿಗೂ ಗೊತ್ತಿರುವ ವಿಷಯವೇ... ಮೊತ್ತಮೊದಲಿಗೆ ಗ್ರಹಾಂಬೆಲ್‌ ತನ್ನ ಟೆಲಿಫೋನನ್ನು ಪ್ರದರ್ಶಿಸಿದ್ದು 1876ರ ಫಿಲಿಡೆಲ್ಫಿಯದ ಯುಎಸ್‌ಎ ರಿಪಬ್ಲಿಕ್‌ ಶತಮಾನೋತ್ಸವ ಮೇಳದಲ್ಲಿ. ಆ ದಿನದಿಂದ ಪ್ರಚಾರಕ್ಕೆ ಬಂದ ಟೆಲಿಫೋನ್‌ ದಿನ ದಿನಕ್ಕೂ ಹೆಸರುವಾಸಿಯಾಗಿ 1890ರ ವೇಳೆಗೆ 300,000 ಅಂದಾಜು, ಹಾಗೇ ಮೊದಲ ಮಹಾಯುದ್ಧದ ವೇಳೆಗೆ ಫೋನುಗಳ ಸಂಖ್ಯೆ 10.5 ಮಿಲಿಯನ್‌ಗೆ ತಲುಪಿತ್ತು!. ಹೊಸ ಸಾಧನದ ಉಪಯೋಗದ ಬಗ್ಗೆ ಕಲಿತರೂ, ಮಾತು ಹೇಗೆ ಆರಂಭಿಸುವುದು ಎನ್ನುವುದು ಅಮೇರಿಕನ್ನರಿಗೆ ಆಗಿನ ಸಮಸ್ಯೆಯಾಗಿತ್ತು. ಬೆಲ್‌ ಮೊತ್ತಮೊದಲಿಗೆ‘ಅಹೊಯ್‌(Ahoy)’ ಹೇಳಬಹುದೆಂದು ಪ್ರಸ್ತಾಪಿದ್ದಕ್ಕೆ, ‘ನೀವು ಇದ್ದೀರಾ (Are you there? )’ ಅಥವಾ ‘ಏನು ಬೇಕು What is wanted?) ಅನ್ನಬಾರದೇಕೆ ಹೀಗೆ ಜನರಿಂದ ನೂರೆಂಟು ರೀತಿಯ ಪ್ರತಿಕ್ರಿಯೆಗಳು ಬಂದವು.

ಕೊನೆಗೆ 1877ರಲ್ಲಿ ಥೋಮಸ್‌ ಆಲ್ವಾ ಎಡಿಸನ್‌ (ಮೊತ್ತಮೊದಲಿಗೆ ದೂರವಾಣಿ ಸಂದೇಶವಾಹಕವನ್ನು ಕಂಡುಹಿಡಿದ ವಿಜ್ಞಾನಿ) ‘ಹಲೋ’ವನ್ನು ಪ್ರಮಾಣೀಕರಿಸಿದ ಮೇಲೆ ಆವರೆಗೆ ಇದ್ದ ಎಲ್ಲ ವಿವಾದಗಳು ತೆರೆ ಕಂಡವು. 1880ರಲ್ಲಿ ‘ಹಲೋ’ವನ್ನು ಜಾಗತಿಕವಾಗಿ ಟೆಲಿಫೋನ್‌ ಸಂಭಾಷಣೆಯ ಆರಂಭಿಕ ಶಬ್ದವಾಗಿ ಒಪ್ಪಿಕೊಳ್ಳಲಾಯಿತು.

ಆದರೆ, ಭಾರತದಲ್ಲಿ ಈಗೀಗ ‘ಹಲೋ’ ಬದಲಾಗಿ ‘ಜೈ ಶ್ರೀಕೃಷ್ಣ’, ‘ಜೈ ಶ್ರೀರಾಮ’ ಹೇಳೊದನ್ನು ನೋಡಿದರೆ ‘ಹಲೋ’ ತರವೇ ‘ಜೈ...’ ಕೂಡಾ ಚರಿತ್ರೆಯ ಒಂದು ಭಾಗವಾಗುವ ದಿನ ಇನ್ನು ದೂರವಿಲ್ಲಾಂತ ಅನ್ನಿಸುತ್ತದೆ...

ನೀವು ಏನಂತೀರಿ ?

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more