ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹ್ಯೂಸ್ಟನ್‌ ಕನ್ನಡ ವೃಂದದ ನೂತನ ಜಾಲತಾಣ

By ದ. ರಂ. ಚಿದಾನಂದ
|
Google Oneindia Kannada News

ಹ್ಯೂಸ್ಟನ್‌ ಕನ್ನಡ ವೃಂದದ ನೂತನ ಜಾಲತಾಣಕ್ಕೆ ಎಲ್ಲರಿಗೂ ಸುಸ್ವಾಗತ.
ಎರಡನೇ ಸಹಸ್ರಮಾನ ಸಂವತ್ಸರದಲ್ಲಿ (2000ದ ಇಸವಿಯಲ್ಲಿ) ವಿಶ್ವ ಕನ್ನಡ ಸಮ್ಮೇಳನವನ್ನು ಅದ್ದೂರಿ ಹಾಗೂ ತುಂಬು ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆಸಿದ ಕೀರ್ತಿಯ ಅಗ್ರಪಾಲು ಹ್ಯೂಸ್ಟನ್‌ ಕನ್ನಡ ವೃಂದಕ್ಕೆ ಸಲ್ಲಬೇಕು. ಸಂಘಟನೆ ಹಾಗೂ ಕನ್ನಡ ಪ್ರೀತಿಗೆ ಹ್ಯೂಸ್ಟನ್‌ ಕನ್ನಡ ಸಂಘ ಹೆಸರುವಾಸಿಯಾದರೂ- ಕಾರಣಾಂತರಗಳಿಂದ ತನ್ನದೇ ಆದ ಜಾಲತಾಣವನ್ನು ಇಷ್ಟು ದಿನಗಳವರೆಗೂ ಕಾಯಬೇಕಾಯಿತು. ಈ 2003ನೇ ಹೊಸ ವರ್ಷದ ಆರಂಭದಲ್ಲಿ ಹ್ಯೂಸ್ಟನ್‌ ಕನ್ನಡ ವೃಂದ ತನ್ನದೇ ಆದ ಅಂತರ್ಜಾಲ ತಾಣ ಹೊಂದುವ ಮೂಲಕ, ಸಂಘದ ಚಟುವಟಿಕೆಗಳಿಗೆ ಹೈಟೆಕ್‌ ರೂಪು ನೀಡಿತು.

ಹ್ಯೂಸ್ಟನ್‌ ನಗರದ ಮತ್ತು ಅದರ ಆಸುಪಾಸಿನಲ್ಲಿರುವ ಕನ್ನಡಿಗರಿಗೆ ಕನ್ನಡ ವೃಂದದ ಯೋಜನೆಗಳು ಮತ್ತು ಮುಂಬರುವ ಕಾರ್ಯಕ್ರಮಗಳ ಬಗ್ಗೆ ಆಯಾಯ ಕ್ಷಣಕ್ಕೇ ತಿಳಿಸುವುದು ನೂತನ ಜಾಲತಾಣದ ಉದ್ದೇಶ. ಇದಲ್ಲದೇ ಕನ್ನಡ ವೃಂದದ ಕಾರ್ಯಕರ್ತರ ಜೊತೆಗೆ ಸಂಪರ್ಕ ಸಾಧನೆ ಹಾಗೂ ವೃಂದದ ಸದಸ್ಯತ್ವದ ಬಗ್ಗೆ ಮಾಹಿತಿಗಳನ್ನು ವಿವರಿಸುವುದು ಜಾಲತಾಣದ ಇನ್ನೊಂದು ಉದ್ದೇಶ.

ಹ್ಯೂಸ್ಟನ್‌ ನಗರದಲ್ಲಿರುವ ಬೇರೆ ಬೇರೆ ಸಮುದಾಯಗಳೊಂದಿಗೆ ಬೆರೆತು, ಹೆಗಲಿಗೆ ಹೆಗಲು ಕೊಟ್ಟು ಸಂಗೀತ, ಕಲೆ ಮುಂತಾದ ಕಾರ್ಯಕ್ರಮಗಳನ್ನು ನಿಯೋಜಿಸಿ ಯಶಸ್ವಿಗೊಳಿಸುವ ಹ್ಯೂಸ್ಟನ್‌ ಕನ್ನಡ ಸಂಘದ ಉದ್ದೇಶಕ್ಕೆ ನೂತನ ಜಾಲತಾಣ ಸಹಕಾರಿಯಾಗಲಿದೆ. ಈ ದೆಸೆಯಿಂದ ಬೇರೆ ಸಮುದಾಯದವರಿಗೂ ಕೂಡ ಈ ಜಾಲತಾಣವು ಬಹಳ ಉಪಯೋಗಕಾರಿಯಾಗುವುದು ಖಂಡಿತ.

ಜಾಲತಾಣದಲ್ಲಿ ಏನೇನಿದೆ ?

ಹ್ಯೂಸ್ಟನ್‌ ಕನ್ನಡ ವೃಂದವು ಹುಟ್ಟಿ ಬೆಳೆದು ಬಂದ ಬಗೆ, ಕಳೆದ ಹಲವಾರು ವರ್ಷಗಳಿಂದ ವೃಂದದ ವತಿಯಿಂದ ನಡೆದುಕೊಂಡು ಬರುತ್ತಿರುವ ಉಗಾದಿ, ಗಣೇಶ ಚತುರ್ಥಿ, ಪುರಂದರದಾಸ ಆರಾಧನೆ, ಕರ್ನಾಟಕ ರಾಜ್ಯೋತ್ಸವ ಹಾಗೂ ಇತರೆ ಕಾರ್ಯಕ್ರಮಗಳನ್ನು ನೆನಪಿಸುವ ಚಿತ್ರ ದೃಶ್ಯಗಳು ಹ್ಯೂಸ್ಟನ್‌ ಕನ್ನಡ ಸಂಘದ ವೆಬ್‌ಸೈಟ್‌ನಲ್ಲಿವೆ. ಇತ್ತೀಚೆಗೆ ನಡೆದ ರಾಜ್ಯೋತ್ಸವ

ಕಾರ್ಯಕ್ರಮದ ಬಗ್ಗೆ ಕನ್ನಡದಲ್ಲಿ ಒಂದು ವರದಿಯೂ ಇದೆ.

2000 ಇಸವಿಯಲ್ಲಿ , ಹ್ಯೂಸ್ಟನ್‌ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಒಂದು ಲೇಖನದ ಜೊತೆಗೆ ಮರೆಯಲಾಗದ ಅನೇಕ ಚಿತ್ರದೃಶ್ಯಗಳೂ ನೂತನ ಜಾಲತಾಣದಲ್ಲಿ ಅಡಕವಾಗಿವೆ. ವಿಶ್ವದಾದ್ಯಂತ ಎಲ್ಲಾ ಕನ್ನಡಿಗರೂ ಈ ಜಾಲತಾಣವನ್ನು ಭೇಟಿ ಮಾಡಿ, ಚಿತ್ರಗಳನ್ನು ವೀಕ್ಷಿಸಬೇಕೆಂಬುದು ಸಂಘದ ಪ್ರೀತಿಪೂರ್ವಕ ಆಗ್ರಹ.

ಇನ್ನೇಕೆ ತಡ-

English summary
NRI kannadigas : Houston kannada koota launches new Website
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X