• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕದಲ್ಲಿ ಮೊಳಗಿದ ವಿಶ್ವ ಮಾನವ ಸಂದೇಶ

By Staff
|
  • ಮನು ಬಳಿಗಾರ್‌, ಸಿಕಾಕಸ್‌, ನ್ಯೂಜೆರ್ಸಿ

ನ್ಯೂಜೆರ್ಸಿಯ ಸುಂದರ ಹಸಿರು ಹುಲ್ಲುಗಾವಲು ಹಾಗೂ ಸೊಂಪಾದ ಅರಣ್ಯ ಮತ್ತು ಅಟ್ಲಾಂಟಿಕ್‌ ಸಮುದ್ರದ ಹಿನ್ನೀರಿನಿಂದಾಗಿ ಈ ಪಟ್ಟಣಕ್ಕೆ ಒಂದು ವಿಶೇಷ ಸೌಂದರ್ಯ ಬಂದಿದೆ.

ಗುರುವಾರದಿಂದ ಶನಿವಾರದ (ಜು.3- 5) ತನಕ ಇಲ್ಲಿ ನಡೆದ ಉತ್ತರ ಅಮೆರಿಕದ ವೀರಶೈವರ ರಾಷ್ಟ್ರೀಯ ಸಮ್ಮೇಳನ ಈ ನಗರದಲ್ಲಿ ವಸ್ತುಶಃ ಕನ್ನಡದ ಕಲರವ ಮೂಡಿಸಿತ್ತು. ಸುಮಾರು ಸಾವಿರ ಪ್ರತಿನಿಧಿಗಳು ಅಮೆರಿಕದ ಮೂಲೆಮೂಲೆಗಳಿಂದ ಬಂದು ಹರ್ಷದಿಂದ ಭಾಗವಹಿಸಿದ್ದರು.

ಬೆಳಗ್ಗಿನಿಂದಲೇ ಯೋಗ, ಧ್ಯಾನ, ಪ್ರಾರ್ಥನೆ, ಪೂಜಾವಿಧಿ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಚಿತ್ರದುರ್ಗ ಬೃಹನ್ಮಠದ ಸ್ವಾಮಿಗಳು ಲಿಂಗಪೂಜಾ ವಿಧಾನ ಹೇಳಿಕೊಟ್ಟರು.

ಶ್ರೀಗಳ ಸಾನ್ನಿಧ್ಯದಲ್ಲಿ ನಡೆದ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಶಿವರಾಜ್‌ ಪಾಟೀಲ್‌ ಭಾಗವಹಿಸಿದ್ದರು. ಅವರೊಂದಿಗೆ ಅತಿಥಿ ಭಾಷಣಕಾರನಾಗಿ ಪಾಲ್ಗೊಳ್ಳುವ ಯೋಗ ನನಗೊದಗಿತ್ತು. ಯುವ ಭಾಷಣಕಾರರಾಗಿ ಶಿಲ್ಪಾ ಜಗದೀಶ್‌, ಆಕಾಶ್‌ ದಂಡಪ್ಪನವರ್‌ ಮಾತನಾಡಿದರು.

ಶಿವರಾಜ್‌ ಪಾಟೀಲ್‌ ಅವರು ಮಾತನಾಡಿ, ಬಸವಣ್ಣನವರ ‘ವಿಶ್ವಮಾನವ ಸಂದೇಶ’ವನ್ನು ಜಗತ್ತಿಗೆ ಮುಟ್ಟಿಸುವ ಕೆಲಸ ಇಂತಹ ಸಮ್ಮೇಳನಗಳಿಂದ ಸಾಧ್ಯ. ಈಗಿನ ರಾಷ್ಟ್ರೀಯ ಸಮ್ಮೇಳನ ‘ವಿಶ್ವ ಸಮ್ಮೇಳನ’ ಆಗಿ ಮುಂದಿನ ದಿನಗಳಲ್ಲಿ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳಲೆಂದು ಹಾರೈಸಿದರು.

ಬಸವಣ್ಣನನ್ನು ಕೇವಲ ವೀರಶೈವ ಧರ್ಮಕ್ಕೆ ಸೀಮಿತಗೊಳಿಸದೇ ಇಡೀ ವಿಶ್ವಕ್ಕೆ ಅವರ ತತ್ತ್ವಗಳಾದ ಸಮಾನತೆ, ಕಾಯಕ, ದಾಸೋಹಗಳನ್ನು ಎಲ್ಲೆಡೆ ಪಸರಿಸುವುದು ಅಗತ್ಯ ಎಂದು ಪ್ರತಿಪಾದಿಸಿದರು.

ಎಲ್ಲ ಧರ್ಮಗಳ ಸಾರ ಒಂದೇ ಆಗಿದ್ದು, ಧರ್ಮಕ್ಕೆ ಅಪಾರ್ಥ ಕಲ್ಪಿಸಿ ಹಿಂಸೆ, ಯುದ್ಧಗಳಲ್ಲಿ ತೊಡಗುವುದು ಸರಿಯಲ್ಲ. ಇಂದಿನ ಜಗಕ್ಕೆ ಶಾಂತಿ, ಸಮಾಧಾನ ಸಿಗಲು ಶರಣ ತತ್ತ್ವಗಳು ಅತ್ಯಂತ ಪ್ರಸ್ತುತ. ಏಡ್ಸ್‌ನಂತಹ ರೋಗಗಳ ತಡೆಗೆ ಈ ತತ್ತ್ವಾನುಸರಣೆ ಹೇಗೆ ಅವಶ್ಯ? ಯುದ್ಧಗಳ ನಿವಾರಣೆ ಹೇಗೆ ಎನ್ನುವುದು ‘ಧರ್ಮಗಳ ಮುಂದಿರುವ ಸವಾಲುಗಳು’ ಎಂಬ ಪ್ರಬಂಧದಲ್ಲಿ ನಾನು ಮಂಡಿಸಿದ ವಿಷಯವಾಗಿತ್ತು.

ಸಮಾರಂಭದಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸಿದ ಶಾಮನೂರು ಶಿವಶಂಕರಪ್ಪ ಹಾಗೂ ಪ್ರಭಾಕರ ಕೋರೆ ಅವರನ್ನು ಸನ್ಮಾನಿಸಲಾಯಿತು. ಇದಲ್ಲದೇ ಅಮೆರಿಕದಲ್ಲಿ ಉತ್ತಮ ಸೇವಾಕಾರ್ಯದಿಂದ ಖ್ಯಾತನಾಮರಾದ ಮನವಳ್ಳಿ, ಡಾ. ಮಲ್ಲಿಕಾರ್ಜುನ ಉದೋಷಿ, ಎಂ. ನಲವಡಿ, ಶಾರದಾ ಹುಲಬನಿ ಮುಂತಾದವರನ್ನು ಗೌರವಿಸಲಾಯಿತು.

ಸಂಘದ ಅಧ್ಯಕ್ಷರಾದ ಭೂಪಲಾಪೂರ, ಕಾರ್ಯಾಧ್ಯಕ್ಷ ಡಾ.ಕುಂಬಾರ, ಡಾ. ಬಸವರಾಜ್‌, ಡಾ.ಹಿರೇಮಠ, ಮುರುಘರಾಜೇಂದ್ರ ಶರಣರು ವೇದಿಕೆ ಮೇಲೆ ಹಾಜರಿದ್ದು, ಮಾರ್ಗದರ್ಶನ ನೀಡಿದರು.

ಪ್ರತಿದಿನ ಸಂಜೆ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆದವು. ಮೂರು ದಿನಗಳ ಮಹಾ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ಕೊನೆಗೊಂಡಿತು.(ಸ್ನೇಹಸೇತು- ವಿಜಯ ಕರ್ನಾಟಕ)

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more