• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಹಿತ್ಯ ಸಮ್ಮೇಳನವೆಂದರೆ ಪುಳಕ, ಬೆನ್ನಲ್ಲೇ ನಡುಕ

By Staff
|
  • ಮವಾಸು

vshastry@yahoo.com

ಅಮೆರಿಕದಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಸಿದ್ಧತೆ ನಡೆದಿದೆ ಎನ್ನುವ ವಿಷಯ ಕೇಳಿ ಸಂತೋಷವೂ ಆಯಿತು ಮತ್ತು ದುಃಖವೂ ಆಯಿತು. ಸಾಹಿತ್ಯಕ್ಕೆ ಮೀಸಲಾದ ಸಮ್ಮೇಳನ ನಡೆಯಲು ಹೊರಟಿದೆ ಎನ್ನುವುದು ಸಂತೋಷಕ್ಕೆ ಕಾರಣ. ಸಮ್ಮೇಳನದ ಉದ್ದೇಶ ದುಃಖಕ್ಕೆ ಕಾರಣ.

ಕೆಂಡ ಸಂಪಿಗೆಯಲ್ಲಿನ ಸಮ್ಮೇಳನದ ಬಗೆಗಿನ ಲೇಖನವನ್ನು ಓದಿದ ನಂತರ ನಮ್ಮ ತಲೆಯಲ್ಲೂ ಸಮ್ಮೇಳನದ ಬಗ್ಗೆ ಅನೇಕ ವಿಚಾರಗಳು ಸುಳಿದಾಡುತ್ತಿವೆ. ಸಂಪಾದಕೀಯ ಲೇಖನದ ನಿಲುವನ್ನು ಒಪ್ಪಿಕೊಳ್ಳುವ ಅಥವಾ ವಿರೋಧಿಸುವುದಕ್ಕೆ ಮೊದಲು ನನ್ನ ತಲೆಯಲ್ಲಿ ಹುಳುವಿನಂತೆ ಕೊರೆಯುತ್ತಿರುವ ವಿಚಾರಗಳನ್ನು ಬಿಡಿಸೋಣ. ಅಮೇರಿಕೆಯಲ್ಲಿನ ಈಶಾನ್ಯ ಅಮೇರಿಕ ಕನ್ನಡ ಸಮ್ಮೇಳನ, ಹ್ಯೂಸ್ಟನ್‌ ವಿಶ್ವ ಕನ್ನಡ ಸಮ್ಮೇಳನ ಮತ್ತು ಡೆಟ್ರಾಯಿಟ್‌ ಕನ್ನಡ ಸಮ್ಮೇಳನಗಳಲ್ಲಿ ಹಾಗೂ ಕರ್ನಾಟಕದಲ್ಲಿ ನಡೆದ ಕೆಲವು ಸಾಹಿತ್ಯ ಸಮ್ಮೇಳನಗಳಲ್ಲಿ , ಇತ್ತೀಚೆಗೆ ನಡೆದ ಸುಗಮ ಸಂಗೀತದ ಸಮ್ಮೇಳನದಲ್ಲಿ ಭಾಗವಹಿಸಿರುವ ನಾನು ನನ್ನ ಅನುಭವವನ್ನು ಹೇಳ ಬಯಸುತ್ತೇನೆ.

ಮೊದ ಮೊದಲು ಸಮ್ಮೇಳನದಲ್ಲಿ ಭಾಗವಹಿಸಿದಾಗ ನನ್ನ ಅನುಭವಕ್ಕೆ ಬಂದಿದ್ದು ಅಲ್ಲಿನ ಹಬ್ಬದ ವಾತಾವರಣ. ಆದರೆ ನಂತರದ ಸಮ್ಮೇಳನಗಳಲ್ಲಿ ಹುಡುಕಿ ನೋಡಿದಾಗ ಸಮ್ಮೇಳನ ನಿಜವಾಗಲೂ ಆಯಾಯ ಕ್ಷೇತ್ರಗಳಲ್ಲಿ ಒಂದು ರೂಪನ್ನು ಕೊಡಲು ಯತ್ನಿಸುತ್ತಿದೆ ಅನ್ನಿಸಿತು. ಉದಾಹರಣೆಗೆ ಈಶಾನ್ಯ ಅಮೇರಿಕಾದ ಕನ್ನಡ ಕನ್ನಡ ಸಮ್ಮೇಳನ ನಡೆದಾಗ ಹಲವಾರು ಸ್ಥಳೀಯ ಕಲಾವಿದರ ಪ್ರತಿಭೆ ಪ್ರದರ್ಶಿಸಲು ಒಂದು ವೇದಿಕೆ ಸಿಕ್ಕಂತಾಯಿತು. ನನಗೂ ಅನೇತಕ ಸ್ಥಳೀಯ ಕಲಾವಿದರ, ಸಾಹಿತಿಗಳ, ಕನ್ನಡಕ್ಕಾಗಿ ದುಡಿಯುವ ಮುಖಂಡರ ಪರಿಚಯವಾಯ್ತು. ಸಮ್ಮೇಳನ ನಡೆಯದಿದ್ದಲ್ಲಿ ಇವರೆಲ್ಲರ ಪರಿಚಯ ಆಗಬೇಕಿದ್ದರೆ ನನಗೆ ಇನ್ನೆಷ್ಟು ವರ್ಷಗಳೇ ಬೇಕಿತ್ತೋ ಏನೋ?

ಇನ್ನೊಂದು ಉದಾಹರಣೆ- ಹ್ಯೂಸ್ಟನ್‌ನಲ್ಲಿ ನಡೆದ ಸಮ್ಮೇಳನದಲ್ಲಿ ನಾನು ಆಡಿದ ನಾಟಕ ನೋಡಿ ಕೆಲವು ನಾಟಕ ಸಂಘಗಳು ನನಗೆ ಆಹ್ವಾನವಿತ್ತು ಬರಮಾಡಿಕೊಂಡವು. ಇದು ಒಂದು ರೀತಿಯ ಸೌಹಾರ್ದತೆಯನ್ನು ಬೆಳೆಸಿತು. ಇತ್ತೀಚಿಗೆ ಮಂಡ್ಯದಲ್ಲಿ ನಡೆದ ಸುಗಮ ಸಂಗೀತದ ಸಮ್ಮೇಳನದಲ್ಲಿ ಒಂದೇ ವೇದಿಕೆಯ ಮೇಲೆ ಕನ್ನಡದ ಎಲ್ಲಾ ಸುಗಮ ಸಂಗೀತದ ಕಲಾವಿದರನ್ನು ನೋಡುವ, ಅವರ ಹಾಡುಗಳನ್ನು ಕೇಳುವ ಮತ್ತು ಅವರನ್ನು ಪರಿಚಯಿಸಿಕೊಳ್ಳುವ ಅವಕಾಶ ನನಗೆ ಸಿಕ್ಕಿತು. ಸಮ್ಮೇಳನದಲ್ಲಿ ನಡೆದ ಕವಿಗೋಷ್ಠಿಗಳು, ಸಂಗೀತ ನಿರ್ದೇಶಕರ ಗೋಷ್ಠಿಯಂತೂ ಸಮ್ಮೇಳನದಿಂದ ಮಾತ್ರ ಸಾಧ್ಯವಾಯಿತು.

ಹೌದು, ಮೊದ ಮೊದಲ ಸಮ್ಮೇಳನಗಳಲ್ಲಿ ಗೊತ್ತು ಗುರಿಯಿಲ್ಲದೆ ಮನರಂಜನೆಗಾಗಿ ಕೆಲವು ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ನನ್ನ ಅನಿಸಿಕೆ ಪ್ರಕಾರ, ಸಮ್ಮೇಳನಗಳು ನಡೆಯುತ್ತಾ ಬಂದಂತೆ ಸ್ಪಷ್ಟ ಆಕಾರಗಳನ್ನು ಪಡೆದುಕೊಂಡು ಸಂಬಂಧಿಸಿದ ಕ್ಷೇತ್ರಗಳಲ್ಲಿ ತನ್ನ ಸದಸ್ಯರನ್ನು ಒಂದುಗೂಡಿಸುತ್ತವೆ. ಈಗ AKKA ಬೆಳೆದ ಬಗೆ ನೋಡಿ. 1998 ರಲ್ಲಿ ಫೀನಿಕ್ಸ್‌ನಲ್ಲಿ ನಡೆದ ಕನ್ನಡ ಸಮ್ಮೇಳನದಲ್ಲಿ ಸೇರಿದ ಅಮೇರಿಕನ್ನಡ ಧುರೀಣರು ಒಂದು ಸಂಘ ಕಟ್ಟಬೇಕು ಎಂದು ಹೊರಟದ್ದು , ಆ ಸಂಘ ಈಗ ಯಾವ ರೂಪ ತಾಳಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ದಟ್ಸ್‌ಕನ್ನಡದಂಥ ಅವಿರತ ಕನ್ನಡ ಸೇವೆ ಮಾಡುವ ಸಂಸ್ಥೆ-ವ್ಯಕ್ತಿಗಳಿಗೆ ನಿಮ್ಮ ಹುಮ್ಮಸ್ಸನ್ನು ಬಡಿದೆಬ್ಬಿಸಲಿಕ್ಕೆ ಯಾವ ಸಮ್ಮೇಳನದ ಅಗತ್ಯವಿಲ್ಲ, ಆದರೂ ಅಂತಹ ಸಮ್ಮೇಳನಗಳಾದರೆ ಮಾಧ್ಯಮಗಳಿಗೆಲ್ಲ ಸುದ್ದಿ.

ಏನೇ ಆದರೂ ಯಾವುದೇ ಸಮ್ಮೇಳನ ಅಥವಾ ಸಂಘ ತನ್ನ ಉದ್ದೇಶ ಸಾಧಿಸುತ್ತಿದೆ ಅಂದರೆ ಅದರಲ್ಲಿ ಯಾರದೋ ಒಬ್ಬ ಮುಂದಾಳುವಿನ ಅವಿರತ ಸೇವೆ ಇರಲೇ ಬೇಕು. (Behind the success of any organization or the company at least one person’s sacrifice is a must). ಯಾವ ರಾಜಕೀಯ ಬಣ್ಣವೂ ಇಲ್ಲದೇ, ಯಾವುದೇ ಸ್ವಉದ್ದೇಶವಿಲ್ಲದೇ, ಪ್ರಾಮಾಣಿಕವಾಗಿ ಸಮ್ಮೇಳನ ನಡೆಸಿದರೆ ಸಮ್ಮೇಳನ ತನ್ನ ಕಾರ್ಯ ಸಾಧಿಸುವುದರಲ್ಲಿ ಸಂಶಯವೇ ಇಲ್ಲ. ಅಮೇರಿಕೆಯಲ್ಲಿ ನಡೆಯಲು ಹೊರಟಿರುವ ಸಾಹಿತ್ಯ ಸಮ್ಮೇಳನ ಯಾವ ಉದ್ದೇಶದಿಂದ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ . ಒಂದು ಸುದ್ದಿ ಓದಿದೆ- ಸಮ್ಮೇಳನಕ್ಕೆ ಮುಖ್ಯಮಂತ್ರಿಯವರನ್ನು ಕರೆಸಲಾಗುತ್ತದೆ ಎಂದು. ಇದರಿಂದಾಗಿ ಯಾವ ಉದ್ದೇಶದಿಂದ ಸಮ್ಮೇಳನ ಮಾಡುತ್ತಿದ್ದಾರೆ ಎನ್ನುವ ಸಂಶಯ ಬರುತ್ತದೆ. ಅದೇ ದುಃಖ.

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more