• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹ್ಯೂಸ್ಟನ್‌ನಲ್ಲಿ ಭಾರತೀಯ ಸಂಸ್ಕೃತಿಯ ರಸದೌತಣ

By Staff
|

*ವತ್ಸ ಕುಮಾರ್‌

Mrs. Kusum Tayal inaugurating the programಹ್ಯೂಸ್ಟನ್‌ನಲ್ಲಿರುವ ಭಾರತದ ಕನ್ಸಲ್‌ ಜನರಲ್‌ ಪತ್ನಿ ಕುಸುಮ್‌ ತಯಾಳ್‌ ಜ್ಯೋತಿ ಬೆಳಗುವ ಮೂಲಕ ಬಹು ನಿರೀಕ್ಷಿತ ಹಾಗೂ ಸಾಕಷ್ಟು ಪ್ರಚಾರ ಪಡೆದಿದ್ದ Sights and Sounds from South India ಕಾರ್ಯಕ್ರಮ ಏಪ್ರಿಲ್‌ 26ನೇ ತಾರೀಕು ಶನಿವಾರ ಪ್ರಾರಂಭವಾಯಿತು.

ಮಿಲ್ಲರ್‌ನ ತೆರೆದ ಥಿಯೇಟರಿನಲ್ಲಿ ಖಚಾಖಚಿ ಜನ. ಜನರ ತಲೆ ನೇವರಿಸಲು ಹಿತವಾದ ತಣ್ಣನೆಯ ಹವೆ. ಇದಿರಲ್ಲಿ ಚೆಂದದ ವೇದಿಕೆ ಮೇಲೆ ಸುಮಧುರ ಸುಂದರ ಕಾರ್ಯಕ್ರಮಗಳು. ಮುದ ಕೊಟ್ಟ ವೀಣಾ ವಾದನದಿಂದ ಶುರುವಾದ ಸಾಂಸ್ಕೃತಿಕ ಕಾರ್ಯಕ್ರಮ ‘ಗಾಡ್‌ ಬ್ಲೆಸ್‌ ಅಮೆರಿಕ’ ಎಂಬ ಹಾಡಿನೊಂದಿಗೆ ಕೊನೆಯಾಯಿತು. ಈ ನಡುವಿನ ಮೂರು ತಾಸಲ್ಲಿ ವೇದಿಕೆ ಮೇಲೆ ಅರಳಿದ ಪ್ರತಿಭೆಗಳ ಸಂಖ್ಯೆ ಬರೋಬ್ಬರಿ 230 !

Silambatam by Bharathi Kalai Manramಹರ್ಮನ್‌ ಪಾರ್ಕ್‌ನಲ್ಲಿ ಆವತ್ತು ಪಿಕ್‌ನಿಕ್‌ ಮೂಡಲ್ಲಿ ಬಂದಿದ್ದ ಮಂದಿಗೆ ನಿರೀಕ್ಷೆಗೂ ಮೀರಿ ಕಣ್ಮನ ತುಂಬಿತು. ಬೆಟ್ಟದ ಮೇಲೆ ಕೂತು ಮುಂದಣ ವೇದಿಕೆಯ ರಂಗುರಂಗಿನ ಕಾರ್ಯಕ್ರಮವನ್ನು ಕಣ್ತುಂಬಿಕೊಂಡ ಸಹೃದಯರು ಬಂಧು- ಮಿತ್ರರ ಜೊತೆ ಹೊಡೆದ ಹರಟೆಯಲ್ಲೂ ಕಾರ್ಯಕ್ರಮದ್ದೇ ಮಾತು.

ಹ್ಯೂಸ್ಟನ್‌ ಕನ್ನಡ ವೃಂದ ಇಂಥಾ ಬೃಹತ್‌ ಹಾಗೂ ಮಹತ್‌ ಕಾರ್ಯಕ್ರಮವನ್ನು ಯೋಜಿಸಿ, ಹಸನಾಗಿ ಆಯೋಜಿಸಿತ್ತು. ದಕ್ಷಿಣ ಭಾರತದ ಇನ್ನೂ ನಾಲ್ಕು ಸಂಘ ಸಂಸ್ಥೆಗಳು ಕಾರ್ಯಕ್ರಮಕ್ಕೆ ಬೆಂಬಲ ಕೊಟ್ಟಿದ್ದವು. ಭಾರತೀಯ ಕಲೆ ಮತ್ತು ಸಂಸ್ಕೃತಿಯ ಸಂವಾದ ಸಹಿತ ಪ್ರದರ್ಶನ, ಸರಸ್ವತಿ ವೀಣೆಯನ್ನು ಕಂಡು ಅದರ ತಂತಿಗಳಿಂದ ಹೊಮ್ಮುವ ನಾದ ಕಿವಿತುಂಬಿಕೊಳ್ಳುವ ಅಪರೂಪದ ಅವಕಾಶ ಇದ್ದ ಈ ಕಾರ್ಯಕ್ರಮದಲ್ಲಿ ಬಾಯಲ್ಲಿ ನೀರೂರಿಸುವ ಭಾರತೀಯ ಖಾದ್ಯ ಕೂಡ ಇತ್ತು.

Drummers from Greater Houston Malayalee associationಭಾರತೀಯ ಸಂಸ್ಕೃತಿಯ ಬಗ್ಗೆ ಕುತೂಹಲ ಇಟ್ಟುಕೊಂಡು ಬಂದಿದ್ದ ಅನೇಕರಲ್ಲಿ ಕಾರ್ಯಕ್ರಮದ ನಂತರ ತೃಪ್ತ ಭಾವನೆ ಮನೆ ಮಾಡಿತ್ತು. ಭಾರತದ ಬಗ್ಗೆ ಒಂದಿಷ್ಟು ತಿಳಿದ ಧನ್ಯತಾ ಭಾವ ಅವರಲ್ಲಿತ್ತು.

ಮಿಲ್ಲರ್‌ ಥಿಯೇಟರ್‌ ಅಡ್ವೆ ೖಸರಿ ಬೋರ್ಡ್‌ ಮೂಲಕ ಹ್ಯೂಸ್ಟನ್‌ ನಗರಿ ಈ ಬೃಹತ್‌ ಕಾರ್ಯಕ್ರಮಕ್ಕೆ ಹಣ ಕೊಟ್ಟಿತ್ತು. ಕಾರ್ಯಕ್ರಮದ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾಗಿದ್ದಲ್ಲಿ ನನಗೆ ಫೋನ್‌ ಅಥವಾ ಇ- ಮೇಲ್‌ ಮಾಡಿ. ಫೋನ್‌ ನಂಬರ್‌ : (979) 244- 4193. ಇ- ಮೇಲ್‌ : kumar@wcnet.net

http://www.kannadavrinda.org/

Click here to go to topಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more