ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ. 9ರಂದು ಭೂಮಿಕಾದಲ್ಲಿ ಸತ್ಯ ಮತ್ತು ಸೌಂದರ್ಯದ ಅನ್ವೇಷಣೆ

By Staff
|
Google Oneindia Kannada News

*ಎಸ್ಕೆ. ಶಾಮಸುಂದರ

ನೀವು ಏನೇ ಹೇಳಿ, ಭೂಮಿಕಾ ಚಾವಡಿಯ ಜೀವಜಲ ಶ್ರೀಮತಿ ವಿಜಯ ಮನೋಹರ್‌ ಅವರ ಹುಮ್ಮಸ್ಸು ಮಿಶ್ರಿತ ಛಲವನ್ನು ಯಾರಾದರೂ ಮೆಚ್ಚಲೇ ಬೇಕು. ಯಾಕೆಂದರೆ ಅಲಾಸ್ಕ ಆಗಲೀ, ವಾಷಿಂಗ್‌ಟನ್‌ ಆಗಲೀ, ಕ್ಯಾಲಿಫೋರ್ನಿಯಾ ಆಗಲೀ ಅಥವಾ ಸೇಂಟ್‌ ಲೂಯಿಸ್‌ ನಗರವೇ ಆಗಿರಲಿ, ಕನ್ನಡಕ್ಕೆ ಸಂಭಂದಿಸಿದ ಕಾರ್ಯಕ್ರಮವನ್ನು ಚಾಚೂ ತಪ್ಪದೆ ನಡೆಸಿಕೊಂಡು ಬರುವುದು ಬಲೆ ಕಷ್ಟ. ಸಂಗೀತ, ನಾಟಕ , ಹಬ್ಬ ಹರಿದಿನಗಳಾದರೆ ಕನ್ನಡಿಗರು ಹಾಗೂಹೀಗೂ ನೆರೆಯುತ್ತಾರೆ. ಆದರೆ, ಕೆಲವರಿಗೆ ಮಾತ್ರ ಆಸಕ್ತಿ ಇರುವ ಸಾಹಿತ್ಯ ಸಂಭಂದಿ ಕಾರ್ಯಕ್ರಮಗಳಿಗೆ ಜನ ಅಷ್ಟು ದೂರದಿಂದ ಡ್ರೆೃವ್‌ ಮಾಡಿಕೊಂಡು ಬರುವುದು ಬಹಳ ಕಷ್ಟ.

ಉತ್ತರ ಅಮೆರಿಕಾದ ಅನೇಕ ನಗರಗಳಲ್ಲಿ ಕನ್ನಡಿಗರಿದ್ದಾರೆ ನಿಜ. ಆದರೆ ಅವರ ಆಸಕ್ತಿಗಳು ಬಹುಮುಖಿಯಾದದ್ದು. ಸಾಹಿತ್ಯವನ್ನು ತಮ್ಮ ಮೂಲಭೂತ ಆಸೆ-ಆಸಕ್ತಿಯನ್ನಾಗಿಸಿಕೊಂಡವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಹೀಗೆ, ಬೆರಳೆಣಿಕೆಯಷ್ಟು ಆಸಕ್ತ ರನ್ನು ಕಲೆಹಾಕಿ ಅವರಿಗೊಂದು ಕನ್ನಡ ಸಾಹಿತ್ಯ ಕಾರ್ಯಕ್ರಮವನ್ನು ನಿಯಮಿತವಾಗಿ ಕಟ್ಟಿಕೊಡುವವರ ಸಂಖ್ಯೆ ಇನ್ನೂ ವಿರಳ. ಅಂಥ ವಿರಳರಲ್ಲಿ ವಿರಳರು ನಮ್ಮ ವಿಜಯಮ್ಮ.

ಸರಿಸುಮಾರು ಎರಡು ವರ್ಷಗಳಾಯಿತು ಅಂತ ಕಾಣತ್ತೆ. ಲಾಗಾಯ್ತಿನಿಂದ ಪ್ರತಿತಿಂಗಳ ಎರಡನೇ ಭಾನುವಾರ ಭೂಮಿಕಾ ಆಶ್ರಯದಲ್ಲಿ ತಪ್ಪದೆ ಒಂದು ಕಾರ್ಯಕ್ರಮ ಏರ್ಪಾಟಾಗುತ್ತಾ ಬಂದಿದೆ. ವಾಷಿಂಗ್‌ಟನ್‌ ಡಿಸಿ ಪ್ರದೇಶದಲ್ಲಿ ಎಷ್ಟು ಮಂದಿಗೆ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಇದೆಯೋ..ಸರ್ವೆ ನಡೆದಿಲ್ಲ. ಪರಂತು, ಜನ ಎಷ್ಟಾದರೂ ಜಮಾಯಿಸಲಿ, ಒಂದು ಭಾಷಣವೋ, ಚರ್ಚೆಯೋ, ಚಿಂತನವೋ, ಮಂಥನವೋ ಅಂತೂ ಬಾವರ್‌ ಕಮ್ಯೂನಿಟಿ ಹಾಲ್‌ನಲ್ಲಿ ಎರಡನೇ ಭಾನುವಾರ ಕಾರ್ಯಕ್ರಮ ನಡದೇ ತೀರುತ್ತದೆ.

ನನಗೆ ತಿಳಿದ ಹಾಗೆ ಕಾರ್ಯಕ್ರಮ ನಡೆಸುವುದು ಅಂಥಾ ಘನಂದಾರೀ ಕೆಲಸವೇನೂ ಅಲ್ಲ. ಆದರೆ ನಿಗದಿತ ದಿನಾಂಕಕ್ಕೆ ಕನ್ನಡ ಸಾಹಿತ್ಯದ ಯಾವುದಾದರೊಂದು ಪ್ರಕಾರದಲ್ಲಿ ಪರಿಣಿತರಾದ ಭಾಷಣಕಾರರನ್ನು ಹುಡುಕಿ, ಭಾಷಣದ ವಿಷಯ-ವ್ಯಾಪ್ತಿಯ ನಿಷ್ಕರ್ಷೆ ಮಾಡಿ ಅವರಿಂದ ಉಪನ್ಯಾಸ ಉಣಬಡಿಸುವ ಕಷ್ಟಗಳು ಜವಾಬ್ದಾರಿ ಹೊತ್ತವರಿಗೆ ಮಾತ್ರ ಗೊತ್ತಾಗುವಂಥದು.

‘ಭಾಷಣಕಾರರನ್ನು ಗೊತ್ತು ಮಾಡುವ ವಿಜಯಮ್ಮನವರ ತಾಳ್ಮೆ ಮತ್ತು ಜಾಣ್ಮೆಯನ್ನು ನಾನಂತೂ ಮೆಚ್ಚುತ್ತೇನೆ. ಎಕ್ಸ್‌ಪರ್ಟ್ಸ್‌ ಎಲ್ಲಿದ್ದರೂ ಅವರನ್ನು ಪತ್ತೆಮಾಡಿ ಕರೆಸುತ್ತಾರೆ ರೀ.. ವಿಜಯಮ್ಮ ’ ಎಂದು ಮೊನ್ನೆ ಬೆಂಗಳೂರಿನಲ್ಲಿ ನನ್ನನ್ನು ಭೇಟಿಯಾಗಿದ್ದ ಕಾವೇರಿ ಕನ್ನಡ ಸಂಘದ ಅಧ್ಯಕ್ಷ ಸಂಜಯ್‌ ರಾವ್‌ ಹೆಮ್ಮೆಯಿಂದ ಹೇಳಿದ್ದರು. ಗುಣಕ್ಕೆ ಮತ್ಸರವೇ !

2003 ನೇ ಸಾಲಿನ ಭೂಮಿಕಾ ಸಾಹಿತ್ಯ ಕಾರ್ಯಕ್ರಮಗಳು ಅಂದುಕೊಂಡಂತೆ ಆರಂಭವಾಗಿ ಮುನ್ನಡೆಯುತ್ತಿವೆ. ನೀವು ಓದಿರಬಹುದು, ಜನವರಿ ಕಾರ್ಯಕ್ರಮದಲ್ಲಿ ಹೊಸನಗರದ ಸತೀಶ್‌ ಕುಮಾರ್‌ ಅವರು ಆಧುನಿಕ ಕನ್ನಡ ಸಾಹಿತ್ಯ ಮತ್ತು ನವ್ಯೋತ್ತರ ಕವಿತೆ ಕುರಿತು ಸಿಂಹಾವಲೋಕನ ಮಾಡಿದ್ದರು. ಅವರ ಭಾಷಣದ ತಿರುಳನ್ನು ದಟ್ಸಕನ್ನಡ ಓದುಗರಿಗಾಗಿ ವರದಿ ಮಾಡಿದವರು ಪುರುಷೋತ್ತಮ ಉಡುಪಿ.

ಫೆಬ್ರವರಿ ಬಂದಿದೆ. ಬರಲಿರುವ 9 ನೇ ತಾರೀಕು ಎರಡನೇ ಭಾನುವಾರ. ಯಥಾಪ್ರಕಾರ ಬಾವರ್‌ ಕಮ್ಯೂನಿಟಿ ಸಭಾಂಗಣದಲ್ಲಿ ಅಂದು ಮಧ್ಯಾನ್ಹ 2 ಗಂಟೆಗೆ ನಿಮಗಾಗಿ ಕಾರ್ಯಕ್ರಮ ಏರ್ಪಾಟಾಗಿದೆ. ನೆನಪಿರಲಿ : ಈ ಬಾರಿ ಉಪನ್ಯಾಸ ಕಾರ್ಯಕ್ರಮ ಇರುವುದಿಲ್ಲ. ಆಯ್ದ ಒಂದು ವಿಷಯದ ಬಗ್ಗೆ ಪ್ರಸ್ತಾಪ ಮತ್ತು ಸಭಿಕರ ಪಾಲ್ಗೊಳ್ಳುವಿಕೆಯಲ್ಲಿ ಮುಕ್ತ ಚರ್ಚೆ ನಡೆಯುತ್ತದೆ. ‘ ಸತ್ಯ ಮತ್ತು ಸೌಂದರ್ಯ’ ಎಂಬ ವಿಷಯವನ್ನು ಮಂಡಿಸುವವರು ಭೂಮಿಕಾ ಹಿತ್ತಲಿನ ಒಂದು ಗಿಡವೇ ಆಗಿರುವ ಡಾ. ಪ್ರಭಾಕರ. ವೃತ್ತಿಯಿಂದ ಅವರು ಅಣುವಿಜ್ಞಾನ ಕ್ಷೇತ್ರದಲ್ಲಿ ಇಂಜಿನಿಯರ್‌. ಬರುವ ಭಾನುವಾರ ಪ್ರಭಾಕರ್‌ ಅವರು ವೈಜ್ಞಾನಿಕ , ಮಾನವಿಕ ಮತ್ತು ಸಾಹಿತ್ಯಿಕ ದೃಷ್ಟಿಕೋನಗಳಿಂದ ನಿಮ್ಮನ್ನು ಸತ್ಯ ಮತ್ತು ಸೌಂದರ್ಯದ ವಾರಿಧಿಯ ತನಕ ಕರೆದೊಯ್ಯುತ್ತಾರೆ. ಚರ್ಚೆ, ಚಿಂತನೆ, ಅಗತ್ಯ ಬಿದ್ದರೆ ವಾದ-ವಾಗ್ವಾದದ ಮೂಲಕ ಚಿರಂತನವಾದ ಸತ್ಯಗಳನ್ನು, ಅನನ್ಯವಾದ ಸೌಂದರ್ಯವನ್ನು ಬೊಗಸೆಯಲ್ಲಿ ತುಂಬಿಕೊಳ್ಳುವ ಸಂತೋಷ ನಿಮ್ಮದಾಗಲಿ.

ಹೆಚ್ಚಿನ ವಿವರಗಳು ಇಚ್ಛಿಸುವವರು ಈ ಕೆಳಕಂಡವರಿಗೆ ಕರೆಯಬಹುದು.

Padmaja Prabhakara: 3019773296
Indira Prativadi: 3016701665
Jaya Nagendra: 3013529256
Bauer Drive Community center
Tel: 3014684015

ಭೂಮಿಕಾ ವೆಬ್‌ಸೈಟಿಗೆ ದಾರಿ : ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X