• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫೆ.8 ರಂದು ಸನ್ನಿವೇಲ್‌ನಲ್ಲಿ ‘ಪುರಂದರ ದಾಸರ ಆರಾಧನೆ’

By Staff
|

Sangeetha Pitamaha Sri Purandara Daasa‘ಲೋಟಸ್‌’ ಸಂಸ್ಥೆ ಫೆಬ್ರವರಿ 8ರ ಶನಿವಾರ ‘ಸಂಗೀತ ಪಿತಾಮಹ ಪುರಂದರ ದಾಸರ ಆರಾಧನೆ’ಯನ್ನು ಹಮ್ಮಿಕೊಂಡಿದೆ. ಸನ್ನಿವೇಲ್‌ನ ಹಿಂದೂ ಮಂದಿರ ಪುರಂದರ ದಾಸರ ದಿನದ ಆತಿಥ್ಯವನ್ನು ವಹಿಸಲಿದೆ.

ಸನ್ನಿವೇಲ್‌ ದೇಗುಲದಲ್ಲಿ ಫೆ.8 ರ ಶನಿವಾರ ಬೆಳಗ್ಗೆ 9 ರಿಂದ ರಾತ್ರಿ 8 ರವರೆಗೂ ಪುರಂದರ ಆರಾಧನೆಯನ್ನು ನಡೆಸಲು ಉದ್ದೇಶಿಸಲಾಗಿದೆ. ಆಸಕ್ತ ಸಂಗೀತ ಕಲಾವಿದರು ಹಾಗೂ ವಾದ್ಯ ಪರಿಣತರು ದಾಸರ ಆರಾಧನೆ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಪದ್ಮಜಾ ಕಿಶೋರ್‌ ಅವರನ್ನು ಸಂಪರ್ಕಿಸಬಹುದು. ಪದ್ಮಜಾ ಅವರ ಇ-ಮೇಲ್‌ ವಿಳಾಸ : padmaja_kishore@yahoo.com

ಪುರಂದರ ದಾಸರ ಆರಾಧನಾ ದಿನದ ಕಾರ್ಯಕ್ರಮಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲು ಹಾಗೂ ಸಭಿಕರಿಗೆ ಉತ್ತಮ ಕಾರ್ಯಕ್ರಮಗಳನ್ನು ನೀಡುವ ಉದ್ದೇಶದಿಂದ ಪ್ರದರ್ಶನ ತಂಡಗಳನ್ನು ವಯಸ್ಕರು ಹಾಗೂ ಮಕ್ಕಳು ಗುಂಪುಗಳಾಗಿ ವಿಂಗಡಿಸಲಾಗುವುದು. ಬೇ ಏರಿಯಾದ ವಿವಿಧ ಸಂಗೀತ ಶಾಲೆಗಳ ತಂಡಗಳು ಕಾರ್ಯಕ್ರಮ ನೀಡಲಿವೆ. ಪ್ರತಿಯಾಂದು ತಂಡವೂ ಕನಿಷ್ಠ 5 ಕಲಾವಿದರನ್ನು ಹೊಂದಿರಬೇಕು. ತಂಡಗಳ ನಾಯಕರು ಪದ್ಮಜಾ ಕಿಶೋರ್‌ ಅವರನ್ನು ಸಂಪರ್ಕಿಸಿ.

ಪ್ರದರ್ಶನ ನೀಡಲು ಬಯಸುವವರು ಕೆಳಗಿನ ಅಂಶಗಳನ್ನು ಗಮನಿಸಿ :

  • ಪ್ರಸ್ತುತಿಪಡಿಸುವ ಕೀರ್ತನೆಗಳು ಪುರಂದರ/ ಕನಕ/ಜಗನ್ನಾಥ ದಾಸರಿಗೆ ಸಂಬಂಧಿಸಿರಬೇಕು. ಅಥವಾ, ಕನ್ನಡ ದಾಸರ ಯಾವುದೇ ಕೃತಿಯಾದರೂ ಪರವಾಗಿಲ್ಲ . ಆಲಾಪನೆಗಳಿಗೆ ಹಾಗೂ ಸ್ವರ ಪ್ರಸ್ತಾರಗಳಿಗೆ ಅವಕಾಶವಿಲ್ಲ .
  • ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಪ್ರದರ್ಶನ ನೀಡುವ ತಂಡಗಳನ್ನು ಆಯ್ಕೆ ಮಾಡಲಾಗುವುದು.
  • 1,2.5 4.5, 5 ಮತ್ತು 5.5 ಶೃತಿಗಳಿಗೆ ಪಕ್ಕವಾದ್ಯಗಳ (ವಯಲಿನ್‌, ಮೃದಂಗ) ವ್ಯವಸ್ಥೆ ಮಾಡಿಕೊಡಲು ಯೋಜಿಸಲಾಗಿದೆ. ಪಕ್ಕವಾದ್ಯಗಳನ್ನು ಬಯಸುವ ಕಲಾವಿದರು ಮೇಲಿನ ಶೃತಿಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ತಬಲಾ ಪಕ್ಕವಾದ್ಯವೂ ಲಭ್ಯವಿದೆ.
  • ಬೇರೆಯ ಪಿಚ್‌ಗಳ ಪಕ್ಕವಾದ್ಯ ಮನವಿಗಳನ್ನು ಸ್ವೀಕರಿಸುವುದಿಲ್ಲ.
  • ಇದೊಂದು ಉಚಿತ ಕಾರ್ಯಕ್ರಮವಾಗಿದ್ದು , ಎಲ್ಲರಿಗೂ ಸ್ವಾಗತ.

ವಿವರಗಳಿಗೆ ಪದ್ಮಜಾ ಕಿಶೋರ್‌- padmajakishore@yahoo.com, ವಾದಿರಾಜ್‌ ಭಟ್‌- vadi@sybase.com, ಪಂಡಿತ್‌ ಗಜಾನನ ಜೋಷಿ- (408) 7344554 ಅವರನ್ನು ಸಂಪರ್ಕಿಸಬಹುದು. ವೆಬ್‌ಸೈಟ್‌ ವಿಳಾಸ : http://www.svlotus.com

(ಇನ್ಫೋ ವಾರ್ತೆ)

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more