ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತ್ಯಗೋಷ್ಠಿ ಕಾರ್ಯಕ್ರಮದಿ ಯೆಲಂಜಿ ಹನುಮಂತ ಶೆಟ್ಟಿ

By Staff
|
Google Oneindia Kannada News

ಉತ್ತರ ಕ್ಯಾಲಿಫೋರ್ನಿಯ ಪ್ರದೇಶದಲ್ಲಿ ಸಾಹಿತ್ಯಾಸಕ್ತರ ಕೊಂಡಿಯಾಗಿ ಕೆಲಸ ಮಾಡುವ ಆಶಯದ ‘ಸಾಹಿತ್ಯ ಗೋಷ್ಠಿ’ 2003 ರಲ್ಲೂ ತನ್ನ ಕನ್ನಡ ಡಿಂಡಿಮ ಮೊಳಗಿಸುವಿಕೆಯನ್ನು ಮುಂದುವರಿಸಿದೆ. ಇತ್ತೀಚೆಗಷ್ಟೇ ಮೊದಲ ಹುಟ್ಟುಹಬ್ಬ ಆಚರಿಸಿರುವ (ವಿಶ್ವನಾಥ್‌ ಹುಲಿಕಲ್‌ ಸಾರಥ್ಯದ ಗೋಷ್ಠಿಯ) ನೂತನ ವರ್ಷದ ಮೊದಲ ಕಾರ್ಯಕ್ರಮ ಜನವರಿ 12 ರ ಭಾನುವಾರ ನಡೆಯಲಿದೆ.

ಸಾಹಿತ್ಯಗೋಷ್ಠಿಯ ಈ ಬಾರಿಯ ವಿಶೇಷ- ಯೆಲಂಜಿ ಹನುಮಂತ ಶೆಟ್ಟಿ ಅವರ ವಿಶೇಷ ಉಪನ್ಯಾಸ. ‘ಜನಪದ ಸಾಹಿತ್ಯದಲ್ಲಿ ಕವಿ ಕಂಡ ಹೆಣ್ಣು’ ವಿಷಯದ ಕುರಿತು ಹನುಮಂತ ಶೆಟ್ಟಿ ಅವರು ಮಾತನಾಡುವರು.

ಸನ್ನಿವೇಲ್‌ನ ವೈಲ್ಡ್‌ವುಡ್‌ ಮ್ಯಾನರ್‌ ಅಪಾರ್ಟ್‌ಮೆಂಟ್ಸ್‌ನ ಪಾರ್ಟಿ ಹಾಲ್‌ನಲ್ಲಿ ಜ.12 ರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಉಪನ್ಯಾಸ ನಡೆಯಲಿದೆ. ಕಾರ್ಯಕ್ರಮ ನಡೆಯುವ ಸ್ಥಳದ ವಿಳಾಸ : Wildwood Manor Apartments Party Hall, 260 N Mathilda Avenue, Sunnyvale CA 94086.

ಗಣೇಶ ಕಡಬ ಅವರ ಪ್ರಾರ್ಥನೆಯಾಂದಿಗೆ ಕಾರ್ಯಕ್ರಮ ಆರಂಭವಾಗಿದೆ. ಯೋಗೇಶ್‌ ದೇವರಾಜ್‌ ಕಾರ್ಯಕ್ರಮವನ್ನು ನಿರೂಪಿಸುವರು. ವಿವರಗಳಿಗೆ (408) 343 -3900 ದೂರವಾಣಿ ಸಂಖ್ಯೆಯಲ್ಲಿ ವಿಶ್ವನಾಥ್‌ ಹುಲಿಕಲ್‌ ಅವರನ್ನು ಸಂಪರ್ಕಿಸಿ.

ಉಪನ್ಯಾಸಕರ ಕಿರು ಪರಿಚಯ : ಯೆಲಂಜಿ ಹನುಮಂತ ಶೆಟ್ಟಿ ಮೂಲತಃ ಹೊಸಪೇಟೆಗೆ ಸೇರಿದವರು. ಕನ್ನಡ ಸ್ನಾತಕೋತ್ತರ ಪದವೀಧರರಾದ ಹನುಮಂತ ಶೆಟ್ಟಿ ಅವರು, ಹಿಂದಿಯಲ್ಲೂ ಪಳಗಿದವರು. ಹಿಂದಿ ಭೂಷಣ ಪರೀಕ್ಷೆ ಪಾಸು ಮಾಡಿದ್ದಾರೆ. 40 ವರ್ಷ ಕಾಲ ಶಿಕ್ಷಕರಾಗಿ, ಪಿಯು ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅವರು- ಕವಿತೆ, ನಾಟಕ, ರೂಪಕ, ಪ್ರಬಂಧ, ಮಕ್ಕಳ ಕಥೆ, ವಿಮರ್ಶೆ, ಪ್ರವಾಸ ಸಾಹಿತ್ಯ, ಜೀವನ ಚರಿತ್ರೆ, ಆತ್ಮ ಚರಿತ್ರೆ, ಹೀಗೆ ಬಹುಕ್ಷೇತ್ರಗಳಲ್ಲಿ ಕೈಯಾಡಿಸಿದ್ದಾರೆ. ಪ್ರಸ್ತುತ ಅಮೆರಿಕದಲ್ಲಿನ ತಮ್ಮ ಅನುಭವಗಳನ್ನು ಹನುಮಂತ ಶೆಟ್ಟರು ಅಕ್ಷರ ರೂಪಕ್ಕಿಳಿಸುತ್ತಿದ್ದಾರೆ.

ಸಾಹಿತ್ಯವಷ್ಟೇ ಅಲ್ಲ ; ಸಂಗೀತ, ನೃತ್ಯ, ಪ್ರವಾಸ ಹಾಗೂ ಚದುರಂಗದಲ್ಲೂ ಹನುಮಂತ ಶೆಟ್ಟರಿಗೆ ತುಂಬು ಆಸಕ್ತಿ . ಇಂಥ ಬಹುಮುಖ ಪ್ರತಿಭೆಯ ಹಾಜರಿಯಿಂದ ಯಾವ ಕಾರ್ಯಕ್ರಮ ತಾನೇ ಸೊಗಸು ಹೆಚ್ಚಿಸಿಕೊಳ್ಳುವುದಿಲ್ಲ ?

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X