• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡದ ಕೆಲಸಗಳಿಗೆ ನಾವು ಬದ್ಧ

By Staff
|

AKKA office bearers in Press Conference (Photo by K.M.Veeresh)ಇನ್ನೊಂದು ವಿಶ್ವ ಕನ್ನಡ ಸಮ್ಮೇಳನ ಬರುತ್ತಿದೆ. ಸಮ್ಮೇಳನಗಳ ನಗರ ಎಂದು ಪ್ರಸಿದ್ಧವಾಗಿರುವ ಫ್ಲಾರಿಡಾ ರಾಜ್ಯದ ಒರ್‌ಲ್ಯಾಂಡೋ ಪಟ್ಟಣದಲ್ಲಿ ಮೂರನೇ ವಿಶ್ವ ಕನ್ನಡ ಸಮ್ಮೇಳನ ಏರ್ಪಡಿಸಲಾಗಿದೆ ಎಂದು ಅಕ್ಕ ಸಂಸ್ಥೆಯ ಅಧ್ಯಕ್ಷ ಅಮರ್‌ನಾಥ್‌ ಗೌಡ ಹೇಳಿದ್ದಾರೆ.

ಫ್ಲಾರಿಡಾದ ಶ್ರೀಗಂಧ ಕನ್ನಡ ಸಂಘವು ಈ ಸಮ್ಮೇಳನದ ಆತಿಥೇಯ ವಹಿಸಲಿದೆ. ಅಮೆರಿಕಾದ ಅತಿ ದೊಡ್ಡ ನಗರಗಳಲ್ಲಿ ಒಂದಾಗಿರುವ ಆರ್ಲೆಂಡೋದಲ್ಲಿ ಸಮ್ಮೇಳನವನ್ನು ಅಚ್ಚುಕಟ್ಟಾಗಿ, ಅರ್ಥಪೂರ್ಣವಾಗಿ ಆಚರಿಸಲು ಅಮೆರಿಕಾ ಕನ್ನಡಿಗರ ವೇದಿಕೆ ‘ ಅಕ್ಕ’ ಕಂಕಣಬದ್ಧವಾಗಿದೆ ಎಂದು ಅವರು ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಅಕ್ಕ ಸಂಸ್ಥೆಯ ಆಶಯ ಮತ್ತು ಕನಸುಗಳು ಹಲವಾರು. ಅವುಗಳ ಈಡೇರಿಕೆಯ ನಿಟ್ಟಿನಲ್ಲಿ ಸಮ್ಮೇಳನಗಳು ಪ್ರಮುಖ ಪಾತ್ರ ವಹಿಸುತ್ತವೆ. ಕನ್ನಡಿಗರು ಮೂರು ದಶಕಗಳಿಂದ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಆದರೆ , ಅವರೆಲ್ಲ ಬೇರೆಬೇರೆ ನಗರಗಳಲ್ಲಿ ಹಂಚಿಹೋಗಿರುವುದರಿಂದ ಎಲ್ಲರೂ ಒಂದೆಡೆ ಕಲೆತು ಸಾಂಸ್ಕೃತಿಕ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುವ ಒಂದು ವೇದಿಕೆಯ ಅಗತ್ಯವಿತ್ತು . ಆ ಅಗತ್ಯವನ್ನು ಈಡೇರಿಸುವ ಉದ್ದೇಶದಿಂದ ಅಕ್ಕ ಜನ್ಮ ತಾಳಿತು ಎಂದು ಅಮರ್‌ನಾಥ್‌ ಗೌಡ ಹೇಳಿದರು.

ಮೊದಲ ಸಮ್ಮೇಳನ ಹ್ಯೂಸ್ಟನ್‌ ನಗರದಲ್ಲಿ ನಡೆಯಿತು. ಇತ್ತೀಚೆಗೆ ಡೆಟ್ರಾಯಿಟ್‌ ನಗರದಲ್ಲಿ ನಡೆದ ಎರಡನೇ ವಿಶ್ವ ಕನ್ನಡಿಗರ ಸಮ್ಮೇಳನ ಅಭೂತಪೂರ್ವ ಯಶಸ್ಸು ಕಂಡಿತು ಎಂದು ಹೇಳಿದ ಅವರು, ಆ ಯಶಸ್ಸಿಗೆ ಕಾರಣರಾದ ಎಲ್ಲ ಕನ್ನಡ ಕೂಟಗಳನ್ನು ಮತ್ತು ಸಮ್ಮೇಳನಕ್ಕೆ ಆಗಮಿಸಿ ಸಂಭ್ರಮ ತುಂಬಿಕೊಟ್ಟ ಎಲ್ಲ ಪ್ರತಿನಿಧಿಗಳಿಗೂ ಕೃತಜ್ಞತೆ ಸೂಚಿಸಿದರು.

ಅಕ್ಕ ಮುಂಬರುವ ವರ್ಷಗಳಲ್ಲಿ ಹಲವು ಹತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆವುಗಳಲ್ಲಿ ಮುಖ್ಯವಾದದ್ದು ಹೊರನಾಡ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುವಿಕೆ, ಕನ್ನಡ ನಾಡಿನ ಧಾರ್ಮಿಕ ಶೈಕ್ಷಣಿಕ ಮತ್ತಿತರ ಪ್ರೇಕ್ಷಣೀಯ ತಾಣಗಳ ಬಗ್ಗೆ ಮಾಹಿತಿ ಒದಗಿಸುವುದು, ಕರ್ನಾಟಕದ ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರತಿಭಾನ್ವಿತರಾದವರನ್ನು ಕರೆಸಿ ಅವರಿಂದ ಪ್ರದರ್ಶನಗಳನ್ನು ಏರ್ಪಡಿಸುವುದು. ಅಂತೆಯೇ ಹೊರನಾಡ ಕನ್ನಡಿಗರು ಹಾಗೂ ಅವರ ಮಕ್ಕಳ ಪ್ರತಿಭಾ ವಿಕಾಸ ಮತ್ತು ಪ್ರದರ್ಶನಕ್ಕಾಗಿ ಕರ್ನಾಟಕದಲ್ಲಿ ವೇದಿಕೆಯಾಂದನ್ನು ರೂಪಿಸುವುದು. ಇವೆಲ್ಲ ನಮ್ಮ ಆದ್ಯತೆಗಳ ಪಟ್ಟಿಯಲ್ಲಿ ಇದೆ ಎಂದು ಅವರು ವಿವರಿಸಿದರು. ಈ ಸಂಬಂಧದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಾಂದಿಗೆ ಅಕ್ಕ ಒಡಂಬಡಿಕೆ ಮಾಡಿಕೊಂಡಿದೆ.

ಸುದ್ದಿಗೋಷ್ಠಿಯಲ್ಲಿ ಅಕ್ಕ ಸಂಸ್ಥೆಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅವರೆಂದರೆ, ಕಾರ್ಯದರ್ಶಿ ಹೆಚ್‌. ಎನ್‌. ವಿಶ್ವಾಮಿತ್ರ, ಸಂಚಾಲಕ ಕೆ. ಎಸ್‌. ಮುರಳಿ, ಖಜಾಂಚಿ ಕೆ. ಕೃಷ್ಣಮೂರ್ತಿ, ರಮೇಶ್‌ ಗೌಡ, ಪಾಳೆಗಾರ್‌, ರಂಗ ತಿರುಮಲ, ಎಂ. ಕೃಷ್ಣಪ್ಪ ಮತ್ತು ಅಕ್ಕ ಸಂಸ್ಥೆಯ ಭಾರತ ಸಂಯೋಜನಾಧಿಕಾರಿ ಸಾಯಿ ಪ್ರಕಾಶ್‌. ಸಿಂಗಪುರ ಕನ್ನಡ ಸಂಘದ ವೀರಣ್ಣ ಗೌಡರು ಪತ್ರಿಕಾಗೋಷ್ಠಿಗೆ ಆಗಮಿಸಿದ್ದರು.

ಸುದ್ದಿಗೋಷ್ಠಿಯಲ್ಲಿ ಮೂಡಿಬಂದ ಪ್ರಶ್ನೋತ್ತರಗಳು :

ಪ್ರಶ್ನೆ : ಅಕ್ಕ ಆಡಳಿತ ಮಂಡಳಿಯ ಒಳಗಡೆ ಮತ್ತು ಹೊರಗೆ ವಿವಾದದ ಹೊಗೆ ಆಡುತ್ತಿದೆ. ಯಾಕೆ ಹೀಗೆ ?

  • ಅಮರ್‌ನಾಥ್‌ ಗೌಡ : ಕೆಲವರಿಗೆ ಮೊಸರಲ್ಲಿ ಕಲ್ಲು ಹುಡುಕುವುದೇ ಕೆಲಸ. ಆದ್ದರಿಂದ ಹೀಗಾಗಿದೆ.

ಪ್ರಶ್ನೆ : ಸಮ್ಮೇಳನದ ಆಹ್ವಾನ ಪತ್ರಿಕೆಗಳು ದುರುಪಯೋಗ ಆಗಿದೆ. ಯಾಕೆ ಹೀಗಾಯಿತು ?

  • ಅಮರ್‌ನಾಥ್‌ ಗೌಡ : ಆಗಿಲ ್ಲ , ನಾನು ನೇರವಾಗಿ ರವಾನಿಸಿದ ಆಹ್ವಾನ ಪತ್ರಿಕೆ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಿಗೆ ತಲುಪಿರಲಿಲ್ಲವಾದ ಕಾರಣ ಆಹ್ವಾನ ಪತ್ರವನ್ನು ಕನ್ನಡಿಗರೇ ಆದ ವೈ. ಕೆ. ಮುದ್ದು ಕೃಷ್ಣ ಅವರ ಮುಖಾಂತರ ಕಳುಹಿಸಲಾಯಿತು. ಇದನ್ನು ದುರುಪಯೋಗ ಎಂದು ಭಾವಿಸಬಾರದು.

ಪ್ರಶ್ನೆ : ನಿಮ್ಮ ಆಡಳಿತ ಮಂಡಳಿಯ ಸಹವರ್ತಿಗಳಲ್ಲಿ ಅನ್ಯೋನ್ಯತೆ ಇಲ್ಲ. ಹಲವಾರು ವಿರೋಧಾಭಾಸಗಳು ಕಂಡು ಬಂದಿವೆ. ನೀವೇನಂತೀರಿ?

  • ಅಮರ್‌ನಾಥ್‌ ಗೌಡ : ಕೆಲವರಿಗೆ ಇದು ಹವ್ಯಾಸ. ಅದಕ್ಕೆ ಇಂಥ ವಾತಾವರಣ ಉದ್ಭವವಾಯಿತು.

ಪ್ರಶ್ನೆ : ಸಮ್ಮೇಳನ ಪ್ರಚಾರ ಸಮಿತಿಯ ಅಧ್ಯಕ್ಷ ವಿ. ಎಂ. ಕುಮಾರಸ್ವಾಮಿಯ ಅವರನ್ನು ಆ ಸ್ಥಾನದಿಂದ ವಜಾ ಮಾಡಿದ ಅಧಿಕೃತ ಪ್ರಕಟಣೆ ಕೆಲವು ಕಡೆ ಮಾತ್ರ ಬೆಳಕು ಕಂಡಿತು. ಕರ್ನಾಟಕದ ಇತರ ಅನೇಕ ಮಾಧ್ಯಮಗಳಿಗೆ ಈ ಪ್ರಕಟಣೆ ಏಕೆ ಲಭ್ಯವಾಗಲಿಲ್ಲ?

  • ಅಮರ್‌ನಾಥ್‌ ಗೌಡ : ಆಗ ಸಮ್ಮೇಳನದ ಕೆಲಸ ಕಾರ್ಯಗಳು ಜಾಸ್ತಿ ಇದ್ದುದರಿಂದ ಈ ಕಡೆ ಹೆಚ್ಚು ಗಮನ ಕೊಡಲು ಸಾಧ್ಯವಾಗಲಿಲ್ಲ.

ಪ್ರಶ್ನೆ : ಕುಮಾರಸ್ವಾಮಿಗಳು ಈಗಲೂ ಪ್ರಚಾರ ಸಮಿತಿಯಲ್ಲಿದ್ದಾರೋ ಹೇಗೆ?

  • ಅಮರ್‌ನಾಥ್‌ ಗೌಡ : ಇಲ್ಲ. ಅವರು ಅಕ್ಕದ ನಿರ್ದೇಶಕರು ಮಾತ್ರ . ಸಂಸ್ಥೆಯ ಪ್ರಚಾರ ಸಮಿತಿಯಲ್ಲಿ ಅವರು ಮುಂದುವರೆಯುವುದಿಲ್ಲ. ಈ ಸಂಬಂಧ ಜುಲೈ ತಿಂಗಳಲ್ಲಿ ನಡೆದ ಅಕ್ಕ ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನವಾಗಿದೆ. 17 ಜನರ ಸಭೆಯಲ್ಲಿ ಅವರನ್ನು

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more