• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಸ್ತಾಪ- ತ್ರಿವೇಣಿ ಜಂಟಿ ಚಪ್ಪರದಲ್ಲಿ ನಿಸಾರ್‌ ಜೊತೆ ಸಂವಾದ

By Staff
|

Nisar Ahmedನಿಸಾರ್‌ ಅಹ್ಮದ್‌ರನ್ನು ನಿತ್ಯೋತ್ಸವದ ಕವಿ ಅಂತಲೇ ಕರೆಯುವ ಪರಿಪಾಠ ಎಷ್ಟು ಮಾಮೂಲಿಯಾಗಿಬಿಟ್ಟಿದೆಯೆಂದರೆ ಅವರ ಬಗ್ಗೆ ಏನೂ ಗೊತ್ತಿಲ್ಲದ ವ್ಯಕ್ತಿ - ನಿತ್ಯೋತ್ಸವ ನಿಮ್ಮ ಇನಿಷಿಯಲ್ಲಾ ಸಾ... ಅಂತ ಕೇಳಿದರೂ ಆಶ್ಚರ್ಯ ಇಲ್ಲ. ‘ಆ ಕವನ ನನಗೆ ಪ್ರಸಿದ್ಧಿ ತಂದದ್ದು ಹೌದು. ಆದರೆ ಅದಕ್ಕಿಂತ ಕಾಳಜಿಯಿಂದ ಆಸ್ಥೆಯಿಂದ ಬರೆದ ಬೇರೆ ಪದ್ಯಗಳನ್ನು ಓದುಗರು ಗಮನಿಸದಷ್ಟು ಪ್ರಸಿದ್ಧಿ ಬೆಳೆದಿದೆ...’ ಅಂತ ಒಮ್ಮೆ ನಿಸಾರರೇ ಸಂದರ್ಶನವೊಂದಲ್ಲಿ ತಮ್ಮ ಸಂಕಟ ತೋಡಿಕೊಂಡಿದ್ದರು.

ಉದಾಹರಣೆಗೆ :

ನಿಮಗೆ ಪಾಬ್ಲೋ ನೆರುಡಾ ಗೊತ್ತಾ... ಸ್ಪ್ಯಾನಿಷ್‌ ಅಮೆರಿಕನ್‌ ಕವಿ. 20ನೇ ಶತಮಾನದಲ್ಲಿ ಸದ್ದು ಮಾಡಿದವ. ನೊಬೆಲ್‌ ಪ್ರಶಸ್ತಿ ಗೆದ್ದವ. ದಕ್ಷಿಣ ಅಮೆರಿಕಾದ ಸಾಮಾಜಿಕ ಮತ್ತು ಚಾರಿತ್ರಿಕ ಆಗು ಹೋಗುಗಳ ಬಗ್ಗೆ ಪದ್ಯ ಬರೆದ. ಜೊತೆಗೆ ಹೆಣ್ಣು ಹೊನ್ನು ಮಣ್ಣಿನ ಬಗ್ಗೆಯೂ ತಲೆ ಕೆಡಿಸಿಕೊಂಡು ಪ್ರೇಮ ಗೀತೆಗಳನ್ನು ಬರೆದು ಪ್ರಸಿದ್ಧ ನಾದವನು. ನೆರುಡ ಬರೆದ ಚೆಂದ ಚೆಂದದ ಒಂದಷ್ಟು ಪದ್ಯಗಳನ್ನು ಕವಿ ನಿಸಾರ್‌ ಅಹ್ಮದ್‌ ಕನ್ನಡಕ್ಕೆ ಶ್ರದ್ಧೆ ಹಾಗೂ ಪ್ರೀತಿಯಿಂದ ಅನುವಾದ ಮಾಡಿದ್ದಾರೆ. ಆದರೆ ಅದೂ ಕೂಡ ನಿತ್ಯೋತ್ಸವದ ಕೀರ್ತಿಯಲ್ಲಿ ಕಳೆದು ಹೋಗಿದೆ.

ಕವಿ ನೆರುಡ ಮತ್ತು ನಿಸಾರ್‌ ಒಟ್ಟಿಗೆ ನೆನಪಿಗೆ ಬರಲಿಕ್ಕೆ ಕಾರಣ ನ್ಯೂಜೆರ್ಸಿಯಲ್ಲಿ ನಡೆಯಲಿರುವ ಕನ್ನಡ ಕಾರ್ಯಕ್ರಮ. ನಿಸಾರ್‌ ಅಹ್ಮದ್‌ ನ್ಯೂಜೆರ್ಸಿಯಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುವರು ಅಂತ ಅಲ್ಲಿನ ಪ್ರಸಿದ್ಧ ಕನ್ನಡ ಸಂಘ ‘ಪ್ರಸ್ತಾಪ’ದಿಂದ ಸುದ್ದಿ ಬಂದಿದೆ.

ಸಾಗರದಾಚೆ ‘ಪ್ರಸ್ತಾಪ’ ಎಂಬ ಕನ್ನಡ ಸೂತ್ರಆಧುನಿಕ ಯುಗದಲ್ಲಿಯೂ ದಿನಗಟ್ಟಲೆ ಪ್ರಯಾಣ ಮಾಡಿ ತವರು ಸೇರಲಾರದಷ್ಟು ದೂರ ಬಂದ ಕನ್ನಡಿಗರು ನ್ಯೂಜೆರ್ಸಿಯ ಕಾಲೊನಿಗಳಲ್ಲಿ ಮನೆ ಮಾಡಿಕೊಂಡಿದ್ದಾರೆ. ತಮ್ಮ ತಮ್ಮ ಕೆಲಸದಲ್ಲಿ ವ್ಯಸ್ತರಾಗಿದ್ದರೆ. ಪ್ರಸ್ತಾಪ ಎಂಬ ಈ ಕನ್ನಡ ಕೂಟ ಅಲ್ಲಿ ನ ಕನ್ನಡ ಮನಸ್ಸುಗಳನ್ನೆಲ್ಲ ನೇಯ್ದಿಡುವ ಕೆಲಸ ಮಾಡುತ್ತಿದೆ.

ಪ್ರಸ್ತುತ ನಿಸಾರ್‌ಅಹ್ಮದ್‌ರೊಂದಿಗೆ ಸಂವಾದ ಕಾರ್ಯಕ್ರಮವನ್ನು ಪ್ರಸ್ತಾಪ ಏರ್ಪಡಿಸಿದೆ. ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಪ್ರಾದೇಶಿಕ ಕನ್ನಡ ಕೂಟ ತ್ರಿವೇಣಿಯೂ ಕೈ ಜೋಡಿಸಿದೆ ಎಂಬುದು ಇನ್ನೊಂದು ವಿಶೇಷ.

ನಿಸಾರ್‌ ಎಂದರೆ ನಿತ್ಯೋತ್ಸವ ಅಷ್ಟೇ ಅಲ್ಲ ಎಂಬುದನ್ನು ಅರಿತುಕೊಳ್ಳಲು ಇಲ್ಲೊಂದು ವೇದಿಕೆ. ವೃತ್ತಿಯಲ್ಲಿ ಭೂಗರ್ಭ ಶಾಸ್ತ್ರದ ಉಪನ್ಯಾಸಕರಾಗಿದ್ದ ನಿಸಾರ್‌ ಅಹ್ಮದ್‌ 12 ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಶೇಕ್ಸ್‌ಪಿಯರ್‌ನ ಒಥೆಲೋ, ಮತ್ತು ಮಿಡ್‌ ಸಮ್ಮರ್‌ ನೈಟ್ಸ್‌ ಡ್ರೀಮ್‌ ನಾಟಕಗಳನ್ನು ಕನ್ನಡಕ್ಕೆ ಇಳಿಸಿದ್ದಾರೆ. ಆದರೂ ಅವರು ಮೂಲತಃ ಕವಿ. ತಮ್ಮ ಕವನಗಳ ಬಗ್ಗೆ ನಿಸಾರ್‌ ಅಹ್ಮದ್‌ ಒಂದಷ್ಟು ಹೊತ್ತು ಸಭಿಕರ ಜೊತೆಗೆ ಮಾತನಾಡುತ್ತಾರೆ. ಕೇಳುಗರ ಪುಟ್ಟ-ದೊಡ್ಡ ಕುತೂಹಲಗಳಿಗೆ ಉತ್ತರಿಸುತ್ತಾರೆ.

ಕಾರ್ಯಕ್ರಮ ಎಂದು....ಹೇಗೆ...?

ಅಕ್ಟೋಬರ್‌ 6ರ ಭಾನುವಾರದಂದು ಈ ಕಾರ್ಯಕ್ರಮ ಬರ್ಲಿನ್‌ ಹಿಂದೂ ದೇವಳ( Basement, 25 E.Tauton Avenue Berlin, NJ 08009, Tel: 8567683134 )ದಲ್ಲಿ ನಡೆಯುತ್ತದೆ. ಸಂಜೆ, ಶಾರ್ಪ್‌ 3 ಗಂಟೆಗೆ ಕಾರ್ಯಕ್ರಮ ಶುರುವಾಗುತ್ತದೆ. ಕಾರ್ಯಕ್ರಮದಲ್ಲಿ ತ್ರಿವೇಣಿ ಕನ್ನಡ ಕೂಟದವರು ನಿಸಾರ್‌ ಅಹ್ಮದ್‌ರನ್ನು ವಿಶೇಷವಾಗಿ ಸನ್ಮಾನಿಸಲಿದ್ದಾರೆ.

3 ಗಂಟೆಗೆ ಅತಿಥಿ ಅಭ್ಯಾಗತರಿಗೆ ಲಘು ತಿಂಡಿ - ಚಹಾ. 3.30ಕ್ಕೆ ಹಿರಿಯರಾದ ಎಚ್‌. ವೈ. ರಾಜಗೋಪಾಲ್‌ ಮುಖ್ಯಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸುತ್ತಾರೆ.

ನಿಸಾರರು ತಮ್ಮ ಕವನಗಳನ್ನು ಓದಿ, ಅವುಗಳ ಬಗ್ಗೆ ಮಾತನಾಡುವರು. ಚರ್ಚೆ ಮುಗಿದ ಮೇಲೆ ನಿಸಾರ್‌ಗೆ ಸನ್ಮಾನ. 6.45ಕ್ಕೆ ರಾತ್ರಿ ಭೋಜನ.ನಿಮ್ಮ ಬರುವಿಕೆಯ ಬಗ್ಗೆ ಮುಂಚಿತವಾಗಿ ತಿಳಿಸಬೇಕು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : ಉಷಾ ವಸ್ತಾರೆ : 856-751-8018, ಹೇಮಾ ರಾಮಮೂರ್ತಿ : 215-2951-980, ಎಚ್‌. ವೈ ರಾಜಗೋಪಾಲ್‌: 610-566-7820.

ಕಾರ್ಯಕ್ರಮ ಆಯೋಜಿಸಲು ಧನ ಸಹಾಯ ನೀಡಿದರೆ ಕನ್ನಡ ಕೂಟಕ್ಕೆ ನೆರವಾದಂತಾಗುತ್ತದೆ. ಅಭಿಮಾನಿಗಳ ನೆರವನ್ನು ಕನ್ನಡ ಸಂಘ ಸ್ವಾಗತಿಸುತ್ತದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಅನುಕೂಲಕ್ಕೆ ಬರ್ಲಿನ್‌ ದೇವಸ್ಥಾನಕ್ಕೆ ಮಾರ್ಗದರ್ಶನ ಇಲ್ಲಿದೆ :

Directions

1. From Central and North New Jersey: Take New Jersey Turn Pike South. Get off at Exit 4. Take Rt. 73 South. Pass Marlton Circle (intersection with Rt. 70, OLGAs Diner on right side). Continue on Rt. 73 South another 3 to 5 miles. Go round Berlin Circle. At the first Traffic Light on Rt. 73 South after Berlin Circle turn right to E. Tauton Avenue. Cross Rail Road Tracks. Go another 1000 feet or so. The Berlin Hindu Temple is on your right side. Park behind the Temple or on side roads. Do not park in front of the Temple and do not block the driveways on the side roads.

2. From Pennsylvania

a. From Tacony Palmyra Bridge: You will be driving on Rt. 73 South. Continue on Rt. 73 South. Pass Marlton Circle. Follow the directions as in 1.

b. From Benjamin Franklin Bridge: Take Rt. 70 East. At the Marlton Circle take Rt. 73 South. Follow the direction as in 1.

c. From Walt Whitman Bridge: Follow directions to NJ Turnpike. Take 295 North. Take Exit Rt. 70 East and Marlton. Continue on Rt. 70 East. At Marlton Circle take Rt. 73 South. Follow the direction as in 1.

3. From 295 South: Take Exit to Rt. 73 South (Berlin) and follow directions as in 1.

Temple Tel # 8567683134.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X