ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.4ರಂದು ಕನ್ನಡ ಜಾನಪದ ಲೋಕದಲ್ಲಿ ಭೂಮಿಕಾ ವಿಹಾರ

By Staff
|
Google Oneindia Kannada News

ಆಗಸ್ಟ್‌ 4 ರ ಭಾನುವಾರ ಮಧ್ಯಾಹ್ನ 2 ಗಂಟೆಗೆ Bauer Community Center ನಲ್ಲಿ ಭೂಮಿಕಾ ತನ್ನ ತಿಂಗಳ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

‘ನಾಡಪದಗಳು’: ಕನ್ನಡ ಜಾನಪದ ಲೋಕದಲ್ಲಿ ವಿಹಾರ !
ಇದು ‘ಭೂಮಿಕಾ’ ಹಮ್ಮಿಕೊಂಡಿರುವ ತಿಂಗಳ ಕಾರ್ಯಕ್ರಮದ ವಿಷಯ. ‘ತುಂತುರು ತೇರು’ ಮಕ್ಕಳ ಪುಸ್ತಕದ ಮೂಲಕ ಹೆಸರು ಮಾಡಿದ ಲೇಖಕಿ ಹಾಗೂ ಹಾಡುಗಾರ್ತಿ ವಿಮಲಾ ರಾಜ್‌ಗೋಪಾಲ್‌ ಕಾರ್ಯಕ್ರಮದಲ್ಲಿ ಮಾತನಾಡುವರು.

ಕನ್ನಡ ಜಾನಪದ ಸಂಗೀತದಲ್ಲಿನ ತಮ್ಮ ಅನುಭವಗಳನ್ನು ವಿಮಲಾ ರಾಜ್‌ಗೋಪಾಲ್‌ ಕಾರ್ಯಕ್ರಮದಲ್ಲಿ ಸಹೃದಯರೊಂದಿಗೆ ಹಂಚಿಕೊಳ್ಳುವರು. ವಿಮಲಾ ಅವರಲ್ಲಿ ಅಪರೂಪದ ಹಾಗೂ ಅಷ್ಟೇ ಅಪೂರ್ವವಾದ ಜಾನಪದ ಭಂಡಾರವೇ ಇದೆ. ಹೆಚ್ಚಿನ ಹಾಡುಗಳನ್ನು ಗ್ರಾಮೀಣ ಜಾನಪದೀಯರಿಂದಲೇ ನೇರವಾಗಿ ಕಲಿತು, ಆ ಹಾಡುಗಳಲ್ಲಿನ ಪ್ರತಿ ಪದದ ಅಧಿಕೃತತೆ ಹಾಗೂ ಸಂಗೀತವನ್ನು ವಿಮಲಾ ಮನದಟ್ಟು ಮಾಡಿಕೊಂಡಿದ್ದಾರೆ.

ಜಾನಪದ ಗೀತೆಯ ಮೂಲ ಸ್ವರೂಪದ ಬಗೆಗೆ ಅವರಿಗೆ ಇನ್ನಿಲ್ಲದ ಮುತುವರ್ಜಿ. ತಮ್ಮ ಮಾತಿನಲ್ಲಿ ಜಾನಪದ ಸಂಗೀತ ಹಾಗೂ ಸುಗಮ ಸಂಗೀತಗಳ ನಡುವಣ ಭಿನ್ನತೆಯನ್ನು ತೋರಿಸಲು ಹಾಗೂ ಜಾನಪದ ಸಂಗೀತದ ಬಗೆಗಿನ ತಪ್ಪು ಗ್ರಹಿಕೆಗಳನ್ನು ಹೋಗಲಾಡಿಸಲು ವಿಮಲಾ ಪ್ರಯತ್ನಿಸುವರು.

ಇದು ಬರಿ ಮಾತಿಗಷ್ಟೇ ಸೀಮಿತವಾದ ಕಾರ್ಯಕ್ರಮವಲ್ಲ ; ಹಾಡೂ ಇದೆ. ವಿಮಲಾ ಅವರೊಂದಿಗೆ ಅವರ ಪುತ್ರಿಯರಾದ ಚೇತನ ನರಸಿಂಹ ಜೋಯಿಸ್‌ ಹಾಗೂ ಡಾ.ವಸಂತಿ ಕುಲೆಟನ್‌ ಅವರು ದನಿಗೂಡಿಸಿದರೆ, ಡಾ.ರಾಬರ್ಟ್‌ ಕುಲೆಟನ್‌ ಗಿಟಾರ್‌ ಸಹಯೋಗ ನೀಡುವರು.
ಅಪರೂಪದ ಕಾರ್ಯಕ್ರಮಕ್ಕೆ ನಿಮ್ಮ ಹಾಜರಿಯ ಸಾಕ್ಷಿ ಉಳಿಸುತ್ತೀರಿ ತಾನೇ !?

ಕಾರ್ಯಕ್ರಮದ ಬಗೆಗಿನ ಹೆಚ್ಚಿನ ವಿವರಗಳಿಗೆ ಭೂಮಿಕಾ ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X