• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅರಿಜೋನಾ ಕನ್ನಡ ಸಂಘದಲ್ಲಿ ‘ಮರೆಯಬಾರದ’ ಯುಗಾದಿ

By Staff
|

(ಮಾಹಿತಿ : ಎಸ್‌.ಕೆ.ಹರಿಹರೇಶ್ವರ, ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯಾ)

A Scene from Dashavatharaವಿಷ್ಣುವಿನ ದಶಾವತಾರಗಳಲ್ಲಿ ಹೆಂಗಸರು, ಬರೀ ಹೆಂಗಸರು. ಇದು ಅರಿಜೋನಾ ಕನ್ನಡ ಸಂಘದ ಯುಗಾದಿ ವಿಶೇಷ!

ಏಪ್ರಿಲ್‌ 20ರ ಶನಿವಾರ ಸಂಜೆ 6.30ಕ್ಕೆ ಅರಿಜೋನಾದ ಟೆಂಪೆಯಲ್ಲಿ ಇನ್ನೂರೈವತ್ತಕ್ಕೂ ಹೆಚ್ಚು ಜನ. ಕೌಡ್ಲೆ ಪ್ರಸಾದ್‌ ಈ ಕಾರ್ಯಕ್ರಮದ ರೂವಾರಿ. ವಿದ್ಯಾ ಗದಕ್‌ಕರ್‌ ಪರಿಚಯ ಮಾಡಿಕೊಡುವುದರ ಮೂಲಕ ಕಾರ್ಯಕ್ರಮ ಶುರು.

ಮನರಂಜನೆಯ ಮೊಗೆದುಕೊಳ್ಳುವ ತವಕ ಎಲ್ಲರಲ್ಲಿ. ಅಮೆರಿಕ ಹಾಗೂ ಭಾರತೀಯ ರಾಷ್ಟ್ರಗೀತೆಗಳನ್ನು ಹಾಡುವ ಮೂಲಕ ಯುಗಾದಿ ಸಂಭ್ರಮದ ಪರದೆ ಸರಿಯಿತು. ಶರಧಿ ಗದಗ್‌ಕರ್‌ ಅಮೆರಿಕ ರಾಷ್ಟ್ರಗೀತೆಯನ್ನು ಹಾಡಿದರೆ, ಕೆ. ಸಂಜಯ್‌, ಅಪೇಕ್ಷ ಎಲ್‌, ಅಂಕುಶ್‌ ಎಲ್‌, ಅನಿಲ್‌ ಆರ್‌, ಲೀನಾ ಆರ್‌ ಹಾಗೂ ಶಿಲ್ಪ ಎಸ್‌ ಭಾರತದ ರಾಷ್ಟ್ರಗೀತೆ ಹಾಡಿದರು. ನಂತರ ಚಿಣ್ಣ ಪ್ರದ್ಯುಮ್ನ ಕೆ. ಪವನ್‌ ಮಾಡಿದ ಪ್ರಾರ್ಥನೆ ಸೊಗಸಾಗಿತ್ತು.

ಆಮೇಲೆ ಹಾಡು ಹೊಳೆಯಾಯಿತು. ಶಾಮಲ ಚಿಕ್ಕಮೇನಹಳ್ಳಿ, ಬೃಂದಾ ಕರಿಗಿರಿ, ಲೀಲಾ ನಟರಾಜ್‌, ಮಮತಾ ಪ್ರಸಾದ್‌, ಸುಷ್ಮಾ ಸದಾನಂದ, ಗೌರಿ ಶೆಟ್ಟಿ ಹಾಗೂ ಉಮಾ ಉಮೇಶ್‌ ವಸಂತನನ್ನು ಸುಶ್ರಾವ್ಯ ಹಾಡಿನ ಮೂಲಕ ಕರೆದರು. ಎನ್‌.ಎಸ್‌.ಲಕ್ಷ್ಮೀನಾರಾಯಣ ಭಟ್ಟರ ‘ವಸಂತಾಗಮನ’ ಕವನದ ಸಾಲುಗಳಿಗೆ ರಾಗ ಕಟ್ಟಿದ್ದು ವಿದ್ಯಾ ಗದಗ್‌ಕರ್‌. ರಬಿನಂದನ್‌ ಗೌರವಾರ್ಜನಂ ಹಾಡಿನ ತಬಲಾ ಸಾಥಿಯಾಗಿದ್ದರು.

ಹಾಡಾಯಿತು. ಇನ್ನು ನೃತ್ಯ. ಅದೂ ಸಮೂಹ ನೃತ್ಯ. ಸರಸ್ವತಿ ಆನಂದ್‌, ಶುಭ ಕೃಷ್ಣಸ್ವಾಮಿ, ನೀತಾ ಮುದ್ದರಾಜ್‌, ಅಂಜಲಿ ಮೂರ್ತಿ, ಅನಘ ಪ್ರಸಾದ್‌, ನಿಶಾ ಪ್ರಸಾದ್‌, ರಾಧಿಕ ಸೇನ್‌ ಹಾಗೂ ಅನಿತಾ ಶೆಟ್ಟಿ ತಾಳ ತಪ್ಪದೆ ಮಾಡಿದ ನೃತ್ಯ ಕಣ್ಣಿಗೆ ಕಟ್ಟಿದಂತಿತ್ತು. ಈ ನೃತ್ಯ ಸಂಯೋಜನೆ ಮಾಡಿದ ಆಶಾ ಗೋಪಾಲ್‌ ಅವರಿಗೆ ಅಭಿನಂದನೆಗಳು.

‘ಚಿತ್ರಭಾನು’ ಪ್ರಕಟಣೆ ‘ಚಿತ್ರ-ಕಾವ್ಯ-ಸಂಗೀತ’ವನ್ನು ಜಗದೀಶ್‌ ಸಾಗರ್‌ ಬಿಡುಗಡೆ ಮಾಡಿದರು. ಇದಾದ ನಂತರ ಚಿಣ್ಣರ ಸಮಯ. ‘ಅಂಬಿಗರ ಹಾಡಿ’ಗೆ ಪುಟ್ಟ ಪುಟ್ಟ ಮಕ್ಕಳ ನೃತ್ಯ. ಶರಧಿ ಗದಗ್‌ಕರ್‌, ಸಂಜಯ್‌ ಕೃಷ್ಣಮೂರ್ತಿ, ಅಪೇಕ್ಷಾ ಲಕ್ಷ್ಮೇಶ್ವರ್‌, ಅನಿಲ್‌ ರಾಜ್‌, ಲೀನ ರಾಜ್‌, ಶಿಲ್ಪ ಶಿರಾಲಗಿ ಹಾಗೂ ಮಾಲಾ ಏಕಾಂತ್‌ ಹೆಜ್ಜೆ ಅಂಬಿಗರ ಹಾಡಿಗೆ ಹೆಜ್ಜೆ ಹಾಕಿದ ಚಿಣ್ಣರು. ಜಗದೀಶ್‌ ಸಾಗರ್‌, ಕ್ರಿಷ್‌ ಕೃಷ್ಣಮೂರ್ತಿ, ನಟರಾಜ್‌ ರಟ್ಟೆಹಳ್ಳಿ ಹಾಗೂ ಸುಧೀಂದ್ರ ಗದಗ್‌ಕರ್‌ ಅಂಬಿಗರ ಹಾಡನ್ನು ಹಾಡಿದವರು. ಇಷ್ಟೆಲ್ಲಾ ಮಕ್ಕಳನ್ನು ಸೇರಿಸಿ, ಬರೀ ಗಂಡಸರ ಕೈಲಿ ಹಾಡಿಸಿ, ನೃತ್ಯ ಕಾರ್ಯಕ್ರಮವನ್ನು ಬಣ್ಣಬಣ್ಣವಾಗಿಸಿದ್ದು ಪದ್ಮಾ ಶಿವಸ್ವಾಮಿ. ವೀಣೆ ನುಡಿಸಿದ್ದು ರೇಖಾ ನರಸಿಂಹನ್‌, ಕೀಬೋರ್ಡ್‌ಗೆ ಜೀವತುಂಬಿದ್ದು ವಿದ್ಯಾ ಗದಕ್‌ಕರ್‌. ರಬಿನಂದನ್‌ ಗೌರವಾರ್ಜನಂ ಹಾಗೂ ಕುಮಾರ್‌ ಶಿರಾಲಗಿ ಸಂಗೀತ ವಾದ್ಯಗಳ ಸಾಥಿಗಳಾಗಿದ್ದರು.

ಸಂಘದ ವಾರ್ಷಿಕ ವರದಿಯನ್ನು ತಿರು ಮಂಡ್ಯಂ ಓದಿದಾಗ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಣ್ಣ ಬ್ರೇಕ್‌. ವರದಿ ಮಂಡನೆಯ ನಂತರ ಮನರಂಜನೆಯ ಮುಂದುವರಿಕೆ. ಮತ್ತೊಂದು ಸಮೂಹ ನೃತ್ಯ. ನೈನಾ ದಿನೇಶ್‌, ಶರಧಿ ಗದಗ್‌ಕರ್‌, ಮೇಘನಾ ಗೊರೂರ್‌, ರೂಪಾ ಕೃಷ್ಣಸ್ವಾಮಿ, ಅನಿತಾ ನಾಥ್‌, ಅಖಿಲ ಪ್ರಸಾದ್‌, ಶಿಲ್ಪ ಶಿರಾಲಗಿ, ಶೀತಲ್‌ ಸಿಂಗ್‌, ಕವಿತಾ ಸುಬ್ರಮಣಿಯನ್‌ ಹಾಗೂ ನಿಶಾ ತಾಲಂಕಿ, ಆಶಾ ಗೋಪಾಲ್‌ ಹೇಳಿಕೊಟ್ಟಂತೆ ಹೆಜ್ಜೆ ಹಾಕಿದರು. ಇದು ಆಶಾ ಗೋಪಾಲ್‌ ಅವರ ದಿನದ ಎರಡನೇ ನೃತ್ಯ ಸಂಯೋಜನೆ.

Uma Ramachandra as Narada in Dashavataraಮತ್ತೆ ಮನರಂಜನೆಗೆ ಬ್ರೇಕ್‌. ಈಗ ಅಧ್ಯಕ್ಷ ಭಾಷಣದ ಸರದಿ. ಅರಿಜೋನಾ ಕನ್ನಡ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ತಮ್ಮ ಭಾಷಣ ಮಂಡಿಸಿದರು. ಇದಾದ ನಂತರ ಜನಪದದ ಸಮಯ. ಜಾನಪದ ಗೀತೆಗಳ ಅಭಿವ್ಯಕ್ತಿಗೂ ಅರಿಜೋನ್‌ನ ಯುಗಾದಿ ವೇದಿಕೆಯಾಯಿತು. ಅಖಿಲ ಮತ್ತು ಅನಘ ಪ್ರಸಾದ್‌ ಜಾನಪದ ಗೀತೆಗಳನ್ನು ಹಾಡಿದರು. ವಾಣಿ ಅರವಿಂದ್‌ ನಿರ್ದೇಶನದಲ್ಲಿ ಮೂಡಿಬಂದ ಈ ಹಾಡುಗಳಿಗೆ ಕುಮಾರ್‌ ಸಿರಾಲಗಿ ತಬಲಾ ಸಾಥಿಯಾದರು. ಸಂಘದಲ್ಲಿ ಸಾಧನೆ ಮಾಡಿರುವವರಿಗೆ ಕೊಡಮಾಡುವ ಪ್ರಶಸ್ತಿಗೆ ಈ ಬಾರಿ ಭಾಜನರಾದವರು ವಿದ್ಯಾ ವಿ, ಶಾಮಲಾ ಸಿ ಮತ್ತು ವಿದ್ಯಾ ಜಿ.

ಈಗ ಯುಗಾದಿಯ ಪ್ರಮುಖ ಆಕರ್ಷಣೆಯ ಸರದಿ-ದಶಾವತಾರ ನೃತ್ಯ. ಎಲ್ಲಾ ಅವತಾರಗಳಲ್ಲೂ ಹೆಂಗಸರೇ ಕಾಣಿಸಿಕೊಂಡದ್ದು ಈ ಕಾರ್ಯಕ್ರಮದ ವಿಶೇಷ. ನಿರ್ದೇಶನ, ನೃತ್ಯ, ರಂಗ ಸಜ್ಜಿಕೆ, ನಾಟಕದ ಕತೆ ಎಲ್ಲವುಗಳ ಹೊಣೆ ಹೊತ್ತಿದ್ದು ಉಮಾ ರಾಮಚಂದ್ರ. ‘ತ್ರಿವೇಣಿ’ ಹಾಗೂ ಅರಿಜೋನಾ ಕನ್ನಡ ಸಂಘದ ಅಧ್ಯಕ್ಷ ಗಾದಿಯಲ್ಲಿ ಸೇವೆ ಸಲ್ಲಿಸಿರುವ ಉಮಾ ರಾಮಚಂದ್ರ, ಈವರೆಗೆ ಸಭೆಯ ವೇದಿಕೆಯನ್ನೇ ಹತ್ತದವರನ್ನೂ ವೇದಿಕೆಗೆ ತಂದದ್ದು ದಶಾವತಾರದ ಮೂಲಕ. ಇದು ಅವರ ಪ್ರತಿಭೆಗೆ ಹಿಡಿದ ಕನ್ನಡಿ.

ಕ್ಯಾಲಿಫೋರ್ನಿಯಾದ ಸಂಧ್ಯಾ ರವೀಂದ್ರನಾಥ್‌ ಹೊರ ತಂದಿರುವ ‘ಸಂಧಾ’್ಯ ಕೆಸೆಟ್ಟಿನ ದಾಶರಥಿ ಹಾಡನ್ನು ಉಮಾ ಅವರು ‘ದಶಾವತಾರ’ದಲ್ಲಿ ಯಶಸ್ವಿಯಾಗಿ ಮೂಡಿಸಿದ್ದು ನಾಟಕ ನೃತ್ಯ ನಾಟಕವಾಗಲು ಕಾರಣವಾಯಿತು. ಈ ಹಾಡಿಗೆ ಸಂಗೀತ ಸಂಯೋಜಿಸಿದವರು ರವಿ ರವೀಂದ್ರನಾಥ್‌.

ಸುಜಾತ ಸಂಜಯ್‌ ನಿರೂಪಿಸಿದ ಈ ನಾಟಕವನ್ನು ಸುಂದರವಾಗಿಸುವಲ್ಲಿ ತೊಡಗಿದವರ ದೊಡ್ಡ ಪಟ್ಟಿಯೇ ಇದೆ. ಅವರೆಲ್ಲರನ್ನೂ ಹೆಸರಿಸಲೇ ಬೇಕು...

ಶೃಂಗಾರ : ಸೌಮ್ಯ ಪ್ರಸಾದ್‌ ಮತ್ತು ರಶ್ಮಿ ಕುಮಾರ್‌
ಧ್ವನಿ ವ್ಯವಸ್ಥೆ : ಗೀತಾ ಸಾಗರ್‌
ವಸ್ತ್ರ : ಶಬರಿ, ಬುದ್ಧ ಮತ್ತು ಮತ್ಸ್ಯ ಪಾತ್ರಗಳಿಗೆ ವಸ್ತ್ರ ವಿನ್ಯಾಸ ಮಾಡಿದ್ದು ಖುದ್ದು ಉಮಾ ರಾಮಚಂದ್ರ. ಇತರೆ ವಸ್ತ್ರಗಳ ಕೊಡುಗೆ- ಆರತಿ ಸ್ಕೂಲ್‌ ಆಫ್‌ ಡ್ಯಾನ್ಸ್‌.

ಪಾತ್ರಧಾರಿಗಳು :

ನಾರಾಯಣ- ಅನಿತಾ ರಂಗಸ್ವಾಮಿ
ಲಕ್ಷ್ಮಿ- ಪ್ರತಿಭಾ ಗೊರೂರ್‌
ನಾರದ- ಉಮಾ ರಾಮಚಂದ್ರ

ಮತ್ಸ್ಯಾವತಾರದಲ್ಲಿ
ಮತ್ಸ್ಯ- ನಂದಿನಿ ಪ್ರಸಾದ್‌
ಬ್ರಹ್ಮ- ಉಲ್ಲಾಸ್‌ ವಿಜಯಸಿಂಹ
ಹಯಗ್ರೀವ- ಪದ್ಮ ಕುಲಕರ್ಣಿ


ಕೂರ್ಮಾವತಾರದಲ್ಲಿ
ಕೂರ್ಮ- ಸಿಂಧು ರಾವ್‌
ದೇವತೆಗಳು- ಶಾರದಾ ರಾವ್‌, ಮಮತಾ ವಿಜಯಸಾರಥಿ ಮತ್ತು ಆಶಾ ಅರವಿಂದ್‌
ರಾಕ್ಷಸರು- ವಿಜಯಾ ಮಂಡ್ಯಂ, ಪದ್ಮ ಕುಲಕರ್ಣಿ ಮತ್ತು ವಿದ್ಯಾ ಪ್ರಮೋದ್‌


ವರಾಹಾವತಾರದಲ್ಲಿ
ವರಾಹ- ಸುಮ ಚಂದ್ರಶೇಖರ್‌
ಹಿರಣ್ಯಾಕ್ಷ- ಜ್ಯೋತ್ಸ್ನಾ ಮುದಗಲ್‌
ಭೂದೇವಿ- ಕವಿತಾ ಕುಲಕರ್ಣಿ


ನರಸಿಂಹಾವತಾರದಲ್ಲಿ
ನರಸಿಂಹ- ಆಶಾ ಗೋಪಾಲ್‌
ಹಿರಣ್ಯ ಕಶಿಪು- ವಿಜಯಾ ಮಂಡ್ಯಂ
ಪ್ರಹ್ಲಾದ- ಶೃತಿ ಮಂಡ್ಯಂ


ವಾಮನಾವತಾರದಲ್ಲಿ
ವಾಮನ- ಉಮಾ ಗುಣ
ಬಲಿ ಚಕ್ರವರ್ತಿ- ವಿದ್ಯಾ ಪ್ರಮೋದ್‌

ಪರಶುರಾಮಾವತಾರ
ಪರಶುರಾಮ- ಆಶಾ ಅರವಿಂದ್‌
ರಾಜಮಾತಾ- ಮಮತಾ ವಿಜಯಸಾರಥಿ

ರಾಮಾವತಾರ
ವಾನಪ್ರಸ್ಥದಲ್ಲಿ ರಾಮ- ಗಾಯತ್ರಿ ಶಂಕರ್‌
ಲಕ್ಷ್ಮಣ- ಜಯಂತಿ ಕೃಷ್ಣನ್‌
ಶಬರಿ- ಉಮಾ ರಾಮಚಂದ್ರ
ಶ್ರೀರಾಮ- ಕವಿತಾ ಕುಲಕರ್ಣಿ
ಲಕ್ಷ್ಮಣ- ಮೀರಾ ರಾಮಕೃಷ್ಣ
ಸೀತಾ- ಶಾರದಾ ರಾವ್‌
ಆಂಜನೇಯ- ಶೃತಿ ಮಂಡ್ಯಂ


ಕೃಷ್ಣಾವತಾರ
ಕೃಷ್ಣ- ಶುಭ ರಾಜಾರಾವ್‌
ರಾಧ- ಪ್ರತಿಭಾ ಗೊರೂರ್‌
ಅರ್ಜುನ- ಕಲ್ಪನಾ ಶಿರಾಲಗಿ
ಗೋಪಿಕಾ- ಸುಮ ಚಂದ್ರಶೇಖರ್‌
ಕನ್ಯೆಯರು- ಅನಘ ಪ್ರಸಾದ್‌ ಮತ್ತು ಅನಿತಾ ಶೆಟ್ಟಿ
ಬುದ್ಧಾವತಾರ
ಬುದ್ಧ- ವೀಣಾ ಮಹೇಶ್‌
ಶಿಷ್ಯರು- ಗಾಯತ್ರಿ ಶಂಕರ್‌ ಮತ್ತು ಜಯಂತಿ ಕೃಷ್ಣ

ಕಲ್ಕಿ ಅವತಾರ
ಕಲ್ಕಿ- ಜ್ಯೋತ್ಸ್ನಾ ಮುದುಗಲ್‌.

ಸುಮಾರು ನಾಲ್ಕು ತಾಸುಗಳ ಅಪರೂಪದ ಮನರಂಜನೆಯ ಬುತ್ತಿ ಕಟ್ಟಿಕೊಂಡ ಜನರಿಗೆ ಧನ್ಯವಾದ ಹೇಳಿದ್ದು ರಾಮಕೃಷ್ಣ . ಕಾರ್ಯಕ್ರಮದ ನೆನಪುಗಳ ಬುತ್ತಿ ಕಟ್ಟಿಕೊಳ್ಳುತ್ತಲೇ ಎಲ್ಲರೂ ಒಟ್ಟಾಗಿ ಹಬ್ಬದೂಟ ಉಂಡು, ಚಿತ್ರಭಾನುವನ್ನು ಬರಮಾಡಿಕೊಂಡರು.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more