ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡಲಾಚೆಗೂ ಸಿ.ಡಿ.ಯಲ್ಲಿ ಶಿಶು ಗೀತೆ, ಇದು ರಾಘವೇಂದ್ರರ ಯಶೋಗಾಥೆ

By Staff
|
Google Oneindia Kannada News

*ಎಂ.ಎನ್‌.ಪದ್ಮನಾಭರಾವ್‌, ಮಿಲ್ಪಿಟಾಸ್‌, ಕ್ಯಾಲಿಫೋರ್ನಿಯ

Raghavendra Rao, Bangaloreಕನ್ನಡ ನಾಡಿನಲ್ಲಿ ಮಕ್ಕಳ ಹಾಡಿಗೇನು ಕೊರತೆ ಇಲ್ಲ. ಆದರೆ ಈ ಮಕ್ಕಳ ಹಾಡುಗಳನ್ನು ಗಣಕ ಧ್ವನಿ ಸುಂಪುಟ (ಸಿ.ಡಿ.) ಗಳು ಮತ್ತು ಧ್ವನಿ ಸುರುಳಿಗಳ ಮಾಧ್ಯಮದಲ್ಲಿ ಕನ್ನಡಿಗರಿಗೆ ತಲುಪಿಸುವವರ ಕೊರತೆ ಖಂಡಿತ ಇದೆ. ಮೊನ್ನೆ ಕ್ಯಾಲಿಫೋರ್ನಿಯಾದ ಸನ್ನಿವೇಲ್‌ನಲ್ಲಿ ನಡೆದ ಕನ್ನಡ ಕೂಟದ ಸಮಾರಂಭದಲ್ಲಿ ಈ ಕೊರತೆಯ ನಿವಾರಣಾ ಪ್ರಯೋಗವನ್ನು ನೋಡಿದೆ. ಇದನ್ನು ನಿಮಗೆಲ್ಲ ತಿಳಿಯಬಯಸುವ ಪ್ರಯತ್ನ ನನ್ನದು.

ಬೆಂಗಳೂರಿನಲ್ಲಿರುವ ಎಂ.ಎನ್‌. ರಾಘವೇಂದ್ರರಾವ್‌ ಕನ್ನಡ ಪುಸ್ತಕ ಪ್ರಪಂಚ, ಕನ್ನಡ ಲೇಖಕರು ಹಾಗೂ ಕನ್ನಡ ಪರಿಚಾರಿಕೆಯ ಬಳಗಕ್ಕೆ ಪರಿಚಿತವಾಗಿರುವ ಹೆಸರು. ಇವರು ಪುಸ್ತಕ ಪ್ರಕಾಶನ ಕೆಲಸದ ಜೊತೆ ಜೊತೆಗೆ ಒಂದು ವಿಶಿಷ್ಠ ಸಂಸ್ಥೆಯ ಮಾಲಿಕರೂ ಹೌದು. ಇವರ ‘ಸುಪ್ರೀಂ ಟೆಕ್ನಾಲಜೀಸ್‌’, ಮಕ್ಕಳ ಮನೋವಿಕಾಸಕ್ಕೆ ಮತ್ತು ಕಲಿಕೆಯ ಉದ್ದೇಶಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ. ಮಾಹಿತಿ ತಂತ್ರಜ್ಞಾನ ದಾಪುಗಾಲು ಹಾಕುತ್ತಿರುವ ಈ ಯುಗದಲ್ಲಿ ಇವರ ಈ ಸಂಸ್ಥೆ ಕನ್ನಡ ನಾಡು, ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ ಇತ್ಯಾದಿಗಳ ಪ್ರಚಾರಕ್ಕಾಗಿ ಹಲವು ಹತ್ತು ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯರೂಪಕ್ಕೆ ತರಲು ಶತ ಪ್ರಯತ್ನ ಮಾಡುತ್ತಿದೆ. ಇವರ ಕೆಲವು ಪ್ರಯತ್ನಗಳ ವಿವರ ಇಲ್ಲಿದೆ.

ವಿಶೇಷವಾಗಿ ಮಕ್ಕಳಿಗೆ ಭಾಷಾ ಕಲಿಕೆ, ವ್ಯಾಕರಣ ಮತ್ತು ಜನಪ್ರಿಯ ಮಕ್ಕಳ ಹಾಡುಗಳನ್ನು ಧ್ವನಿಸುರುಳಿಗಳು, ಸಿ.ಡಿ.ಗಳು ಹಾಗೂ ಕಂಪ್ಯೂಟರ್‌ ಸಾಫ್ಟ್‌ವೇರ್‌ ಇತ್ಯಾದಿ ಮಾಧ್ಯಮಗಳ ಮೂಲಕ ಕನ್ನಡಿಗರ ಮನೆ- ಮನ ಮುಟ್ಟುವ ಅವರ ಈ ಆಲೋಚನೆ ಪ್ರಶಂಸನೀಯ.
ಪ್ರಾಂತೀಯ ಭಾಷೆಯಲ್ಲಿ ಇಂಥ ಯೋಜನೆಯನ್ನು ರೂಪಿಸಿ ಕಾರ್ಯಗತಗೊಳಿಸುತ್ತಿರುವ ಪ್ರಥಮ ಸಂಸ್ಥೆ ಮತ್ತು ಆಡಿಯೋ ಕ್ಯಾಸೆಟ್‌, ಆಡಿಯೋ ಸಿ.ಡಿ ಹಾಗೂ ಇಂಟರ್ಯಾಕ್ಟಿವ್‌ ಕಂಪ್ಯೂಟರ್‌ ಸಾಫ್ಟ್‌ವೇರ್‌ಗಳಿಗೆ ಮೊದಲ ಬಾರಿಗೆ ISBN (International standard book number)ಸಂಖ್ಯೆಯನ್ನು ಹೊಂದಿರುವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Govinahadu CD Inlay Card ಇಂಟರ್ಯಾಕ್ಟಿವ್‌ ಕಂಪ್ಯೂಟರ್‌ ಸಾಫ್ಟ್‌ವೇರ್‌ : ಕನ್ನಡ ಅಕ್ಷರ ಕಲಿಕೆ, ಇ-ಶಿಕ್ಷಣದಲ್ಲಿ -ಕನ್ನಡ ಬರದವರಿಗೆ ಮತ್ತು ಹೊರನಾಡ ಕನ್ನಡಿಗರಿಗೆ ಕನ್ನಡ ಭಾಷೆಯನ್ನು ಸುಲಭವಾಗಿ ಕಲಿಯಲು ಅನುಕೂಲವಾಗುವಂತೆ ಸಿ.ಡಿ. ಸಿದ್ಧಪಡಿಸಿದ್ದಾರೆ. ಇದರಲ್ಲಿ ಕನ್ನಡದ ಅಕ್ಷರಗಳು, ಕಾಗುಣಿತ, ಒತ್ತಕ್ಷರ ಮತ್ತು ಪದಗಳನ್ನು ಬರೆಯುವ ವಿಧಾನವನ್ನು ಇಂಗ್ಲಿಷ್‌ನೊಂದಿಗೆ ವಿಶೇಷ ರೀತಿಯಲ್ಲಿ ತೋರಿಸಲಾಗಿದೆ. ಸ್ವತಃ ಅಕ್ಷರವನ್ನು ಬರೆಯಲು ಅನುಕೂಲವಿದೆ. ಚಿತ್ರಸಹಿತ ಪದಗಳ ಬಳಕೆಯಿದೆ. ಅಕ್ಷರ ಮತ್ತು ಕಾಗುಣಿತವನ್ನು ಕಲಿತ ನಂತರ ಪದಗಳನ್ನು ಕಲಿಯಲು ಚಿತ್ರಸಹಿತ ಪದಗಳ ಆಟವನ್ನು ರೂಪಿಸಲಾಗಿದೆ. ಇದೆಲ್ಲಕ್ಕೂ ಸುಮಧುರವಾದ ಹಿನ್ನೆಲೆ ಸಂಗೀತ ಕೊಡಲಾಗಿದೆ.

ಇ-ಶಿಕ್ಷಣದಲ್ಲಿ ವ್ಯಾಕರಣ ಕಲಿಕೆ : ವ್ಯಾಕರಣವು ಆಸಕ್ತಿ ರಹಿತ ಕಲಿಕೆ ಎನ್ನುವ ಅಭಿಪ್ರಾಯ ಸಾಮಾನ್ಯ. ಅದನ್ನು ಕಲಿಯುವುದೆಂದರೆ ಭಾಷಾ ಶಿಸ್ತನ್ನು ರೂಢಿಸಿಕೊಳ್ಳುವುದೇ ಆಗಿದೆ. ವ್ಯಾಕರಣದ ಪರಿಚಯ ಸಾಹಿತ್ಯ ರಚನೆಗಾಗಲಿ ಅಥವಾ ಸಾಧಾರಣ ಬರವಣಿಗೆಗಾಗಲಿ ಅಗತ್ಯ ಎಂಬ ವಿಚಾರದೊಂದಿಗೆ ಜನಪ್ರಿಯ ಕಾದಂಬರಿಕಾರರಾದ ಎಂ.ವಿ. ನಾಗರಾಜರಾವ್‌ ಸಿದ್ಧಪಡಿಸಿರುವ ಸುಮಾರು 600ಪುಟಗಳ ‘ಕನ್ನಡ ವ್ಯಾಕರಣ’ ವನ್ನು ಕಂಪ್ಯೂಟರ್‌ ಮಾಧ್ಯಮಕ್ಕೆ ತಂದಿದ್ದಾರೆ. ಕಲಿಯಲು, ಅರ್ಥ ಮಾಡಿಕೊಳ್ಳಲು ಉದಾಹರಣೆ ಸಹಿತ ವಿವರಣೆ ಕೊಡಲಾಗಿದೆ. ಸಾವಿರಕ್ಕೂ ಹೆಚ್ಚು ತತ್ಸಮ-ತತ್ಭವ, ಮೂರು ಸಾವಿರ ಗಾದೆಗಳನ್ನು ವಿಶೇಷವಾಗಿ ಕೊಡಲಾಗಿದೆ.

Vyakarana Kalike CD Inlay Card ಆಡಿಯೋ ಸಿಡಿಗಳು : ಮಕ್ಕಳ ಸಂತೋಷಕ್ಕಾಗಿ ‘ಆನೆಬಂತೊಂದಾನೆ’, ‘ತಿರುಕನ ಕನಸು’ ಮೊದಲಾದ ಸಿ.ಡಿ. ಮತ್ತು ಧ್ವನಿಸುರುಳಿಗಳ ಹಾಡುಗಳನ್ನು ಮಕ್ಕಳಿಂದಲೇ ಹಾಡಿಸಲಾಗಿದೆ. ಆಚಾರ್ಯ ಬಿ.ಎಂ.ಶ್ರೀ ಸಂಪಾದಿಸಿರುವ ಅತ್ಯಂತ ಜನಪ್ರಿಯವಾಗಿರುವ ಜಾನಪದ ಕಥಾನಕ ‘ಗೋವಿನಹಾಡು’ - ಇದನ್ನು ಬ್ಯಾಲೆ ರೂಪದಲ್ಲಿ ಮಕ್ಕಳು ಆಡಲು ಅನುಕೂಲವಾಗುಂತೆ ಸಂಗೀತವನ್ನು ಹೊಂದಿಸಿ ಸಿದ್ಧಪಡಿಸಲಾಗಿದೆ. ತಿರುಕನ ಕನಸು, ನಾಗರಹಾವೆ ಹಾವೊಳು ಹೂವೆ, ಕೂಸುಮರಿ, ಹೂವನು ಮಾರುವ ಹೂವಾಡಗಿತ್ತಿ ಮತ್ತು ಮೊಲದ ಮರಿ ಇತ್ಯಾದಿ ಪದ್ಯಗಳು ಪ್ರಾಥಮಿಕ ಶಾಲೆಯ ಕನ್ನಡ ಪುಸ್ತಕಕ್ಕೇ ಮೀಸಲಾಗಬೇಕಿಲ್ಲ. ಇವನ್ನೆಲ್ಲಾ ಕನ್ನಡ ಆಡಿಯೋ ಸಿ.ಡಿ. ಮತ್ತು ಧ್ವನಿಸುರಳಿಗಳಲ್ಲಿ ಉತ್ತಮವಾಗಿ ಸುಮಧುರ ಸಂಗೀತದೊಂದಿಗೆ ತಂದಿದ್ದಾರೆ.

ಇಲ್ಲಿಯ ಹಾಡುಗಳನ್ನು ಮಕ್ಕಳೇ ಹಾಡಿದ್ದಾರೆ. ಎರಡು ಹಾಡುಗಳ ಮಧ್ಯೆ ಶಿಶು ಪ್ರಾಸಗಳಿವೆ. ಜಿ.ಪಿ. ರಾಜರತ್ನಂ, ಪಂಜೆ, ವಿ. ಸೀ ಮುಂತಾದ ಕನ್ನಡದ ಪ್ರಖ್ಯಾತ ಬರಹಗಾರರ ಮಕ್ಕಳ ಪದ್ಯಗಳನ್ನು ಖ್ಯಾತ ಹಿನ್ನೆಲೆ ಗಾಯಕರು ಹಾಡಿದ್ದಾರೆ. ಪ್ರಸಿದ್ಧ ಸಂಗೀತ ನಿರ್ದೇಶಕ ಪ್ರವೀಣ ಡಿ. ರಾವ್‌ ರಾಗ ಸಂಯೋಜನೆ ಮಾಡಿದ್ದಾರೆ. ತಿರುಕನ ಕನಸು ಮತ್ತು ಆನೆ ಬಂತೊಂದಾನೆ - ಈ ಎರಡು ಸಿ.ಡಿ.ಗಳಲ್ಲಿ ಮೊಲದ ಮರಿ, ಹೂವನು ಮಾರುತ ಹೂವಾಡಗಿತ್ತಿ, ಕೂಸುಮರಿ ಬೇಕೆ ಕೂಸು ಮರಿ, ಒಂದು ಎರಡು ಬಾಳೆಲೆ ಹರಡು, ಸುಗ್ಗಿ ಬರುತ್ತಿದೆ ಇತ್ಯಾದಿ ಜನಪ್ರಿಯ ಹಾಡುಗಳಿವೆ. ‘ಕರಾಓಕೆ’ (KARAOKE)ಎಂಬ ವಿಧಾನದಿಂದ ಸಿ.ಡಿ.ಯಾಂದಿಗೆ ಮಗು ತಾನೂ ಸಹ ಹಾಡನ್ನು ಗುನುಗುನಿಸಲು ಅವಕಾಶ ಕಲ್ಪಿಸಲಾಗಿದೆ.

ಇಂಥದೊಂದು ವಿಶಿಷ್ಟ ಯೋಜನೆಯನ್ನು ಕೈಗೊಂಡು ಮಕ್ಕಳ ಪದ್ಯಗಳನ್ನು ಕನ್ನಡಿಗರಿಗೆ ವಿಶೇಷವಾಗಿ ಪರಿಚಯಿಸುತ್ತಿರುವ ಈ ಸಂಸ್ಥೆ ಮತ್ತು ರಾಘವೇಂದ್ರರಾವ್‌ ಅವರು ಅಭಿನಂದನಾರ್ಹರು.

ಹೆಚ್ಚಿನ ಮಾಹಿತಿ, ಬೆಲೆ ಇತ್ಯಾದಿ ವಿವರಗಳಿಗೆ ಸಂಪರ್ಕಿಸಿ :
Supreme Technologies, # 388/22, 8th Main, 50 Road, Hanumantha Nagara, Bangalore- 560 019,

+91-80- 6727534.
ಇ-ಮೇಲ್‌ : [email protected] or [email protected].

ಅಮೆರಿಕಾದಲ್ಲಿ ನಿಮ್ಮ ಮನೆಗೆ ಸಹ ತಲುಪಿಸುವ ವ್ಯವಸ್ಥೆ ಇದೆ ಎಂಬುದು ಗಮನಾರ್ಹ. ಇವರ ಶ್ರಮಕ್ಕೆ ತಕ್ಕ ಫಲ ದೊರೆಯಲಿ. ಏನಂತೀರಿ?

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X