ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್‌ 30ರಂದು ಟೆಕ್ಸಾಸ್‌ನಲ್ಲಿಉಸ್ತಾದ್‌ ಅಮ್ಜದ್‌ ಅಲಿ ಖಾನ್‌ ಕಛೇರಿ

By Oneindia Staff
|
Google Oneindia Kannada News

Ustad Amjad Ali Khans concert in Texasಟೆಕ್ಸಾಸ್‌ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತದ ಭಾರೀ ಕಾರ್ಯಕ್ರಮ. ಉಸ್ತಾದ್‌ ಅಮ್ಜದ್‌ ಅಲಿ ಖಾನ್‌ ಹಾಗೂ ಇವರ ಮಕ್ಕಳಾದ ಅಮಾನ್‌ ಅಲಿ ಬಂಗಾಶ್‌ ಮತ್ತು ಅಯಾನ್‌ ಅಲಿ ಬಂಗಾಶ್‌ ಸರೋದ್‌ ವಾದನಕ್ಕೆ ಅಭಿಮಾನ್‌ ಕೌಶಲ್‌ರ ತಬಲಾ ಸಾಥ್‌.

ಮಾರ್ಚ್‌ 30ರ ಶನಿವಾರ ನಡೆಯಲಿರುವ ಈ ಅಪರೂಪದ ಸಂಗೀತ ಕಛೇರಿಯ ಹೆಸರು ‘ಆರೋಹಿ’. ಕಛೇರಿ ನಡೆಯುವ ಸ್ಥಳ- ಹೆಲ್ಮ್ಸ್‌ ಆಡಿಟೋರಿಯಂ, ಸೇಂಟ್‌ ಸ್ಟೀಫನ್‌ ಸ್ಕೂಲ್‌, ಆಸ್ಟಿನ್‌. ಇದು ಅಸೋಸಿಯೇಶನ್‌ ಫಾರ್‌ ಇಂಡಿಯಾಸ್‌ ಡೆವಲಪ್‌ಮೆಂಟ್‌ (ಏಯ್ಡ್‌) ನ ಕೊಡುಗೆ.

ಅಸೋಸಿಯೇಶನ್‌ ಫಾರ್‌ ಇಂಡಿಯಾಸ್‌ ಡೆವಲಪ್‌ಮೆಂಟ್‌ (ಏಯ್ಡ್‌) ಮಾಡೋದೇನು?
ಜಗತ್ತಿನ 30 ಜಾಗೆಗಳಲ್ಲಿ ತನ್ನ ಕೇಂದ್ರಗಳನ್ನು ಹೊಂದಿರುವ ಈ ಸಂಸ್ಥೆ ಭಾರತದ ಬಹುಮುಖ ಕ್ಷೇತ್ರಗಳ ಅಭಿವೃದ್ಧಿಗೆ ದೇಣಿಗೆ ಸಂಗ್ರಹಿಸುತ್ತಿದೆ. ಆರೋಗ್ಯ, ಶಿಕ್ಷಣ, ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಭಾರತೀಯ ಶಾಸ್ತ್ರೀಯ ಸಂಗೀತದ ಬಗ್ಗೆ ಜನ ಜಾಗೃತಿ ಮೂಡಿಸುವುದು ಈ ಸಂಸ್ಥೆಯ ವಿವಿಧೋದ್ದೇಶಗಳು.

ಈ ಕೆಲಸಗಳಿಗೆಂದು ಸಂಸ್ಥೆ ಈವರೆಗೆ 5 ಲಕ್ಷ ಡಾಲರ್‌ಗೂ ಹೆಚ್ಚು ದೇಣಿಗೆ ಸಂಗ್ರಹಿಸಿದೆ. ಇನ್ನಷ್ಟು ಹಣ ಸಂಗ್ರಹಿಸಿ, ಜನೋಪಕಾರಿ ಕೆಲಸಗಳಿಗಾಗಿ ವಿನಿಯೋಗಿಸುವ ಸಲುವಾಗಿ ಈ ಸಂಗೀತ ಕಾರ್ಯಕ್ರಮ. 400ಕ್ಕೂ ಹೆಚ್ಚು ಸಂಗೀತಾಭಿಮಾನಿಗಳು ಈ ಕಛೇರಿಗೆ ಬರುವ ನಿರೀಕ್ಷೆ ಸಂಸ್ಥೆಯದ್ದು.

ಅಮ್ಜದ್‌ ಅಲಿ ಖಾನ್‌ ಕಿರು ಪರಿಚಯ : ಸರೋದ್‌ ಮೋಡಿಗಾರ. ಇವತ್ತಿನ ಕೆಲವೇ ಪ್ರತಿಭಾನ್ವಿತ ಸಂಗೀತ ಪಂಡಿತರಲ್ಲಿ ಒಬ್ಬ. ಮಕ್ಕಳು ಅಯಾನ್‌ ಮತ್ತು ಅಮಾನ್‌- ಇಬ್ಬರನ್ನೂ ಸಂಗೀತದ ಹಾದಿಯಲ್ಲೇ ನಡೆಸಿದ ತಂದೆ. ಯುನೆಸ್ಕೋ ಹಾಗೂ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾದವರು. ಬಿಬಿಸಿಯ ಭಾರತೀಯ ಶಾಸ್ತ್ರೀಯ ಸಂಗೀತದ ಟಾಪ್‌ 50 ಆಲ್ಬಂಗಳ ಯಾದಿಯಲ್ಲಿ ಅಮ್ಜದ್‌ ಅಲಿ ಖಾನ್‌ರ ‘ಭೈರವ್‌’ ಕೂಡ ಒಂದು.

ಏಯ್ಡ್‌ ಒಂದು ಲಾಭ ಮಾಡದ ಸಂಸ್ಥೆ. 501.3 (ಸಿ) ನೋಂದಾವಣೆ ಪಡೆದಿದೆ. ಜನ ಕೊಡುವ ದೇಣಿಗೆಗೆ ಫಲವಾಗಿ ತೆರಿಗೆ ಕಡಿತವಾಗುತ್ತದೆ. ಮೇಲಾಗಿ ಕೊಡುವ ಹಣದ ಸದ್ವಿನಿಯೋಗದ ಖಾತ್ರಿ. ಭಾರತದ ಯೋಜನೆಗಳಿಗೆ ನೇರವಾಗಿ ಹಣ ಸಂದಾಯವಾಗುತ್ತದೆ. ಸಂಗೀತ ನೋಡಿ- ಕೇಳಿ. ದೊಡ್ಡ ಮನಸ್ಸು ಮಾಡಿ ದೇಣಿಗೆಯನ್ನೂ ಕೊಡಿ ಎಂಬುದು ಸಂಸ್ಥೆಯ ಮನವಿ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ಜಯಂತಿ ರಾಜಮಣಿ, ಫೋನು : 512-474-5897, ಇ- ಮೇಲ್‌ : [email protected]

ವೆಬ್‌ಸೈಟ್‌ : www.utexas.edu/students/aidaustin

(ಇನ್ಫೋ ವಾರ್ತೆ)

ಅಮ್ಜದ್‌ ಹಾಗೂ ಸರೋದ್‌....
ಸರೋದ್‌ ಅಮ್ಜದ್‌ರೊಳಗೊ ಅಮ್ಜದರೊಳಗೆ ಸರೋದೊ

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X