ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಕರು ಬೇಕಾಗಿದ್ದಾರೆ

By Staff
|
Google Oneindia Kannada News

ಪ್ರಸಿದ್ಧ ಕಥೆಗಾರ ಜಯಂತ ಕಾಯ್ಕಿಣಿ ಅವರ ಆಯ್ದ ಕಥೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಬಲ್ಲ ಸಮರ್ಥ ಅನುವಾದಕರನ್ನು ಉತ್ತರ ಕ್ಯಾಲಿಫೋರ್ನಿಯಾದ ‘ಸಾಹಿತ್ಯಗೋಷ್ಠಿ’ ನಿರೀಕ್ಷಿಸುತ್ತಿದೆ.

ಕನ್ನಡದ ಶ್ರೇಷ್ಠ ಲೇಖಕರನ್ನು ವಿಶ್ವಕ್ಕೆ ಪರಿಚಯಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹಮ್ಮಿಕೊಂಡಿರುವ ‘ಸಾಹಿತ್ಯಗೋಷ್ಠಿ’, ಪ್ರಸಿದ್ಧ ಕಥೆಗಾರ ಜಯಂತ ಕಾಯ್ಕಿಣಿ ಅವರ ಆಯ್ದ ಕಥೆಗಳನ್ನು ತನ್ನ ಯೋಜನೆಯ ಪ್ರಾಥಮಿಕ ಹಂತವಾಗಿ ಇಂಗ್ಲಿಷ್‌ಗೆ ಅನುವಾದಿಸಿ ಪ್ರಕಟಿಸಲು ನಿರ್ಧರಿಸಿದೆ.

ಅನುವಾದ-ಪ್ರಕಟಣೆಯ ಯೋಜನೆಗಾಗಿ ಸಂಪಾದಕೀಯ ಬಳಗವನ್ನು ರಚಿಸಲಾಗಿದೆ ಎಂದು ಬಳಗದ ಪ್ರಧಾನ ಸಂಪಾದಕ ವಿಶ್ವನಾಥ್‌ ಹುಲಿಕಲ್‌ ದಟ್ಸ್‌ಕನ್ನಡ.ಕಾಂಗೆ ತಿಳಿಸಿದ್ದಾರೆ. ಎಂ.ವಿ.ನಾಗರಾಜರಾವ್‌, ಪ್ರಕಾಶ್‌ ನಾಯಕ್‌, ಅನ್ನಪೂರ್ಣ ವಿಶ್ವನಾಥ್‌, ಎಂ.ಎನ್‌.ಪದ್ಮನಾಭರಾವ್‌, ಗಣೇಶ ಕಡಬ, ಯೋಗೇಶ್‌ ದೇವರಾಜ್‌ ಹಾಗೂ ಡಾ.ಕೆ.ಆರ್‌.ಎಸ್‌.ಮೂರ್ತಿ ಸಂಪಾದಕೀಯ ಮಂಡಲಿಯ ಸದಸ್ಯರು.

ಯು.ಆರ್‌.ಅನಂತಮೂರ್ತಿ, ಯಶವಂತ ಚಿತ್ತಾಲ, ಶಾಂತಿನಾಥ ದೇಸಾಯಿ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಕಥೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಲು ‘ಸಾಹಿತ್ಯಗೋಷ್ಠಿ’ ಉದ್ದೇಶಿಸಿದ್ದರೂ, ಜಾಗತಿಕ ಪರಿಸರಕ್ಕೆ ಸಮೀಪವೆಂಬ ದೃಷ್ಟಿಯಿಂದ ಜಯಂತ ಕಾಯ್ಕಿಣಿ ಅವರ ಕಥೆಗಳನ್ನು ಇಂಗ್ಲಿಷ್‌ ಅನುವಾದಕ್ಕಾಗಿ ಆಯ್ದುಕೊಳ್ಳಲಾಗಿದೆ ಎಂದು ವಿಶ್ವನಾಥ್‌ ಹುಲಿಕಲ್‌ ತಿಳಿಸಿದ್ದಾರೆ.

ಕಾಯ್ಕಿಣಿ ಅವರ ಕಥೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಲು ಬಯಸುವ ಆಸಕ್ತರು ಹುಲಿಕಲ್‌ ಅವರನ್ನು ಸಂಪರ್ಕಿಸಬಹುದು. ಅನುವಾದದ ಅನುಭವ ಇದ್ದರೆ ಒಳ್ಳೆಯದು. ಆದರೆ ಅನುಭವ ಕಡ್ಡಾಯವಲ್ಲ.

ಆಸಕ್ತರು ಸಂಪರ್ಕಿಸಬೇಕಾದ ವಿಳಾಸ : Vishvanath Hulikal, 1177 Gardenside Lane, Cupertino, CA 95014, U.S.A.
ದೂರವಾಣಿ : (408) 343-3900.
ಇ-ಮೇಲ್‌ : [email protected]

(ಇನ್ಫೋ ವಾರ್ತೆ)

ವಿಶ್ವನಾಥ್‌ ಹುಲಿಕಲ್‌ ಸಂದರ್ಶನ

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X