ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಟ್ಸ್‌ಬರ್ಗ್‌ನ ವೆಂಕಟೇಶ್ವರ ದೇವಾಲಯದಲ್ಲಿ ರಜತ ಉತ್ಸವದ ಸಂಭ್ರಮ

By Staff
|
Google Oneindia Kannada News

ಉಡುಪಿ : ಪಿಟ್ಸ್‌ಬರ್ಗ್‌ನ ಶ್ರೀ ವೆಂಕಟೇಶ್ವರ ದೇವಸ್ಥಾನದ ರಜತ ಮಹೋತ್ಸವವು ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿವರ ನೇತೃತ್ವದಲ್ಲಿ ಶುಕ್ರವಾರ ಆರಂಭವಾಗಿದೆ.

ಪೆನ್‌ಹಿಲ್ಸ್‌ನ ಮೇಲ್ಭಾಗದಲ್ಲಿರುವ ಈ ದೇವಸ್ಥಾನ ಅಮೆರಿಕಾದ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿದೆ. ಅಮೆರಿಕಾದಲ್ಲಿರುವ ಹಿಂದೂಗಳಿಗೆ ಈ ದೇವಸ್ಥಾನವು ಪವಿತ್ರ ಯಾತ್ರಾಸ್ಥಳವೆನಿಸಿಕೊಂಡಿದ್ದು ರಜತ ಮಹೋತ್ಸವದ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಸುಗುಣೇಂದ್ರ ತೀರ್ಥ ಸ್ವಾಮೀಜಿ ಸ್ಥಾಪಿಸಿದ ವಿಶ್ವಮಾಧ್ವ ಸಂಘದ ವತಿಯಿಂದ ರಜತೋತ್ಸವದ ಸಲುವಾಗಿನ ವಿಶೇಷ ಕಾರ್ಯಕ್ರಮವಾಗಿ ಮೆಟ್ಟಿಲು ಉತ್ಸವವನ್ನು ಆಯೋಜಿಸಲಾಗಿದೆ.

ರಜತೋತ್ಸವದ ಅಂಗವಾಗಿ ಸುಗುಣೇಂದ್ರ ತೀರ್ಥ ಸ್ವಾಮೀಜಿಯ ವಿದ್ಯಾಗುರು ಕೀರ್ತಿ ಶೇಷ ವಿದ್ಯಾಮಾನ್ಯ ತೀರ್ಥರ ಆರಾಧನಾ ಕಾರ್ಯಕ್ರಮ, ವಿದ್ವದ್‌ ಗೋಷ್ಠಿ, ಮಾದ್ವ ಸಮಾವೇಶ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪುತ್ತಿಗೆ ಮಠದ ಪ್ರಕಟಣೆ ತಿಳಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X